ಮೊಲದ ಜೊತೆ ಟಿಕ್​ಟಾಕ್ ವಿಡಿಯೋ ಮಾಡಿ ಜೈಲುಪಾಲಾದ ಬಾಗಲಕೋಟೆಯ ಯುವಕ

ಕಾಡಿನ ಮೊಲಕ್ಕೆ ಹಿಂಸೆ ನೀಡಿ ಟಿಕ್​ಟಾಕ್ ವಿಡಿಯೋ ಮಾಡಿದ್ದ ಅರ್ಜುನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಯುವಕ ಯಲ್ಲಪ್ಪ ಪರಾರಿಯಾಗಿದ್ದಾನೆ.

news18-kannada
Updated:May 19, 2020, 3:23 PM IST
ಮೊಲದ ಜೊತೆ ಟಿಕ್​ಟಾಕ್ ವಿಡಿಯೋ ಮಾಡಿ ಜೈಲುಪಾಲಾದ ಬಾಗಲಕೋಟೆಯ ಯುವಕ
ಸಾಂದರ್ಭಿಕ ಚಿತ್ರ
  • Share this:
ಬಾಗಲಕೋಟೆ (ಮೇ 19): ವನ್ಯಜೀವಿಗಳೊಂದಿಗೆ ಟಿಕ್​ಟಾಕ್​ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಇಬ್ಬರು ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆಯಲ್ಲಿ ಈ ಘಟನೆ ನಡೆದಿದ್ದು, ಮೊಲದ ಜೊತೆ ಟಿಕ್​ಟಾಕ್ ಮಾಡಿದ ಯುವಕ ಜೈಲು ಪಾಲಾಗಿದ್ದಾನೆ.

ಬಾಗಲಕೋಟೆಯ ಬದಾಮಿ ತಾಲೂಕಿನ ಕಬ್ಬಲಗೇರಿ ಗ್ರಾಮದ ಗುಡ್ಡದಲ್ಲಿ ಮೊಲದೊಂದಿಗೆ ಟಿಕ್​ಟಾಕ್​ ಮಾಡಿ, ವಿಡಿಯೋವನ್ನು ಅಪ್​ಲೋಡ್ ಮಾಡಿದ್ದ ಅರ್ಜುನ್ ಮುರಾರಿ ಮತ್ತು ಯಲ್ಲಪ್ಪ ಇಬ್ಬರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ಒಬ್ಬನನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಒಂದೇ ದಿನ ಕೊರೋನಾಗೆ 3 ಬಲಿ, 127 ಕೇಸ್​​ ಪತ್ತೆ; ಸೋಂಕಿತರ ಸಂಖ್ಯೆ 1,373ಕ್ಕೆ ಏರಿಕೆ

ಕಾಡಿನ ಮೊಲಕ್ಕೆ ಹಿಂಸೆ ನೀಡಿ ಟಿಕ್​ಟಾಕ್ ವಿಡಿಯೋ ಮಾಡಿದ್ದ ಅರ್ಜುನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಯುವಕ ಯಲ್ಲಪ್ಪ ಪರಾರಿಯಾಗಿದ್ದಾನೆ. ಪರಾರಿಯಾದ ಯಲ್ಲಪ್ಪನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇವರಿಬ್ಬರ ವಿರುದ್ಧ ವನ್ಯ ಜೀವಿಗಳ ಸಂರಕ್ಷಣಾ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ನಿನ್ನೆ ಸಂಜೆ ಟಿಕ್​ಟಾಕ್ ವಿಡಿಯೋ ಮಾಡಿದ್ದ ಯುವಕರು ಅದನ್ನು ಅಪ್​ಲೋಡ್ ಮಾಡಿದ್ದರು. ಈ ವಿಡಿಯೋ ಬೆಂಗಳೂರಿನ ಅರಣ್ಯ ಇಲಾಖೆ ಅಪರಾಧ ವಿಭಾಗದ ಗಮನಕ್ಕೆ ಬಂದಿತ್ತು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಆ ಯುವಕರಿಬ್ಬರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.

(ವರದಿ: ರಾಚಪ್ಪ ಬನ್ನಿದಿನ್ನಿ)
First published: May 19, 2020, 3:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading