ಅರ್ಧ ಎಕರೆ ಜಮೀನಿಗಾಗಿ ನಡೆಯಿತು ಮಾರಣ ಹೋಮ; ಒಂದೇ ಕುಟುಂಬದ ನಾಲ್ವರ ಹತ್ಯೆ

ಈ ಅರ್ಧ ಎಕರೆ ಜಾಗಕ್ಕಾಗಿ ಎರಡು ಕುಟುಂಬದ ನಡುವೆ  ಆಗಾಗ ಗಲಾಟೆ ನಡೆಯುತ್ತಿತ್ತು.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಬಾಗಲಕೋಟೆ ( ಆ. 29): ಅರ್ಧ ಎಕರೆ ಜಮೀನು ವಿವಾದದಲ್ಲಿ (Land issue) ಒಂದೇ ಕುಟುಂಬದ ನಾಲ್ವರ ಹತ್ಯೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಮಧುರಖಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮುದರೆಡ್ಡಿ ಕುಟುಂಬಕ್ಕೆ ಸೇರಿದ ಹನಮಂತ, ಮಲ್ಲಪ್ಪ, ಬಸವರಾಜ್, ಈಶ್ವರ ಬಭ೯ರ ಹತ್ಯೆಯಾಗಿದೆ ಗ್ರಾಮದ ಮುದರೆಡ್ಡಿ ಮತ್ತು ಪುಠಾಣಿ ಕುಟುಂಬಸ್ಥರ ಮಧ್ಯೆ ಮೂರುವರೆ ಎಕರೆ ಜಮೀನಿಗೆ ಸಂಬಂಧ ಪಟ್ಟಂತೆ ವಿವಾದವೊಂದು ಇತ್ತು. ಕಳೆದ ಏಳೆಂಟು ವರ್ಷಗಳಿಂದ ವಿವಾದ ಇದ್ದರೂ ಪೋಲಿಸ ಠಾಣೆ ಮೆಟ್ಟಿಲೇರಿ 2014ರಲ್ಲಿಯೇ ಎರಡು ಕುಟುಂಬಗಳ ಮಧ್ಯೆ ರಾಜಿಯಾಗಿ ಇತ್ಯರ್ಥವಾಗಿತ್ತು, ಉಳಿದಂತೆ 24 ಗುಂಡೆ ಜಾಗೆ ಮಾತ್ರ ತಕರಾರಿನಲ್ಲಿತ್ತು. ಈ ಅರ್ಧ ಎಕರೆ ಜಾಗಕ್ಕಾಗಿ ಎರಡು ಕುಟುಂಬದ ನಡುವೆ  ಆಗಾಗ ಗಲಾಟೆ ನಡೆಯುತ್ತಿತ್ತು.

  ಇದೇ ರೀತಿ ನಿನ್ನೆ ಸಂಜೆ ಕೂಡ ಗಲಾಟೆ ನಡೆದು ವಿಕೋಪಕ್ಕೆ ತೆರಳಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಮುದರೆಡ್ಡಿ ಕುಟುಂಬದ ನಾಲ್ವರ ಪೈಕಿ ಇಬ್ಬರು ಸಹೋದರರಾದ ಹನಮಂತ ಮತ್ತು ಬಸವರಾಜ್ ಇಬ್ವರು ವಿವಾದಿತ ಹೊಲದ ಬಳಿ ಹೋದಾಗ ಪುಠಾಣಿ ಕುಟುಂಬಸ್ಥರು ಜಗಳ ತೆಗೆದು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳದಲ್ಲೇ ಇದ್ದ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಇತ್ತ ಇನ್ನಿಬ್ಬರು ಸಹೋದರರಾದ ಮಲ್ಲಪ್ಪ ಮತ್ತು ಈಶ್ವರ ಇಬ್ಬರು ಬಂದಾಗ ಅವರ ಮೇಲೂ ಹಲ್ಲೆ ಮಾಡಿ ಅವರನ್ನು ಹೊಡೆದು ಕೊಲೆ ಮಾಡಿದ್ದಾರೆ. ಇತ್ತ ಘಟನಾ ಸ್ಥಳಕ್ಕೆ ಬಂದ ಮಲ್ಲಪ್ಪನ ಪತ್ನಿ ಭಾರತಿ ಮತ್ತು ಮಕ್ಕಳ ಮೇಲೂ ದಾ ಮಾಡಿದ್ದಾರೆ. ಈ ವೇಳೇ ಭಾರತಿ  ಮಕ್ಕಳ ಸಮೇತ  ತಪ್ಪಿಸಿಕೊಂಡು ಬಂದಿದ್ದಾರೆ.

  ಇನ್ನು ಘಟನೆ ನಡೆದ ಬೆನ್ನಲ್ಲೆ ಸ್ಥಳಕ್ಕೆ ಬಾಗಲಕೋಟೆ ಎಸ್.ಪಿ.ಲೋಕೇಶ್ ಭೇಟಿ ನೀಡಿದ್ದರು. ಇತ್ತ ಸ್ಥಳ ಪರಿಶೀಲನೆ ಬೆನ್ನಲ್ಲೆ ಮೃತದೇಹಗಳನ್ನ ಜಮಖಂಡಿ ತಾಲೂಕು ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.  ಘಟನೆಯಲ್ಲಿ ಗಾಯಗೊಂಡ 7 ಜನರಿಗೆ ಆಸ್ಪತ್ರೆಯಲ್ಲಿ ಪೋಲಿಸ ಭದ್ರತೆ ನಡುವೆ ಚಿಕಿತ್ಸೆ ನೀಡಲಾಗುತ್ತಿದ್ದು. ಇನ್ನು ಮನೆಯಲ್ಲಿ ನಾಲ್ವರು ಸದಸ್ಯರನ್ನ ಕಳೆದುಕೊಂಡ ದು:ಖದಿಂದ ಅವರ ತಾಯಿ ಮತ್ತು ಪತ್ನಿಯರು, ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು.

  ಇದನ್ನು ಓದಿ: ಐಷಾರಾಮಿ ಕಾರಿನಲ್ಲಿ ಬಂದು ಗೋ ಕಳ್ಳತನ; ಆರೋಪಿಗಳ ಬಂಧಿಸುವಲ್ಲಿ ಪೊಲೀಸರು ಯಶಸ್ವಿ

  ಮರಣೋತ್ತರ ಪರೀಕ್ಷೆ ಬಳಿಕ ನಾಲ್ವರು ಸಹೋದರರ ಮೃತದೇಹಗಳನ್ನು ಊರಿಗೆ ತಂದು ಗ್ರಾಮದ ಹೊರ ವಲಯದ ಸ್ಮಶಾನದಲ್ಲಿ ಒಂದೇ ಕಿಚ್ಚಿನಲ್ಲಿ ಹಾಕಿ ಅಂತ್ಯಕ್ರಿಯೆ ನಡೆಸಲಾಯಿತು. ಇತ್ತ ಘಟನೆ ಸಂಬಂಧ 12 ಜನರ ಮೇಲೆ ದೂರು ದಾಖಲಾಗಿದ್ದು, 9ಜನರನ್ನ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆಂದು ಬಾಗಲಕೋಟೆ ಎಸ್.ಪಿ.ಲೋಕೇಶ್ ಜಗಲಾಸರ್ ಹೇಳಿದ್ದಾರೆ.

  ಒಟ್ಟಿನಲ್ಲಿ ಜಮೀನು ವಿವಾದವೊಂದು ಗಲಾಟೆಯ ಮೂಲಕ ಆರಂಭವಾಗಿ ಒಂದೇ ಕುಟುಂಬದ ನಾಲ್ವರು ಸಹೋದರರ ಕೊಲೆಯಲ್ಲಿ ಅಂತ್ಯವಾಗಿದ್ದು ನಿಜಕ್ಕೂ ದುರದೃಷ್ಟಕರ ಸಂಗತಿಯೇ ಸರಿ.

  (ವರದಿ: ಮಂಜುನಾಥ್​​ ತಳವಾರ)

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: