ತೆಲಂಗಾಣದ ಜಲತಜ್ಞ ಪ್ರಕಾಶ್ ರಾವ್ ವೀರಮಲ್ಲಗೆ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ

ರೈತ ಹಕ್ಕುಗಳ ಹೋರಾಟಗಾರ ತೆಲಂಗಾಣ ರಾಜ್ಯದ ಜಲಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶ್ ರಾವ್ ವೀರಮಲ್ಲ ಅವರು ತೆಲಂಗಾಣ ರಾಜ್ಯದಲ್ಲಿ ನೀರಾವರಿ ಕ್ರಾಂತಿ ಯನ್ನೇ ಮಾಡಿದ್ದಾರೆ. ವಿ ಪ್ರಕಾಶ್ ರಾವ್ ರಾಮಪ್ಪ ಕಾಲುವೆ ದುರಸ್ತಿ ಮೂಲಕ ಮತ್ತು ರೈತ ಹಕ್ಕುಗಳಿಗಾಗಿ ಅನೇಕ ರೈತ ಸಂಘಗಳನ್ನು ಸ್ಥಾಪಿಸಿದ್ದಾರೆ

G Hareeshkumar | news18-kannada
Updated:January 15, 2020, 9:02 AM IST
ತೆಲಂಗಾಣದ ಜಲತಜ್ಞ ಪ್ರಕಾಶ್ ರಾವ್ ವೀರಮಲ್ಲಗೆ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ
ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ತೆಲಂಗಾಣದ ಕಾಶ್ ರಾವ್ ವೀರಮಲ್ಲ
  • Share this:
ಬಾಗಲಕೋಟೆ(ಜ.14) : ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದಿಂದ 10ನೇ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಯನ್ನು ತೆಲಂಗಾಣದ ರೈತ ಹೋರಾಟಗಾರ ಪ್ರಕಾಶ್ ರಾವ್ ವೀರಮಲ್ಲ ಅವರಿಗೆ ನೀಡಿ ಗೌರವಿಸಲಾಯಿತು. ಕೂಡಲಸಂಗಮದ ಬಸವ ವೇದಿಕೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ  ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಕಾಶ್ ರಾವ್ ವೀರಮಲ್ಲ ಯಾರು?

ವಿಶ್ವದ ಅತಿ ದೊಡ್ಡ ಕಾಲೇಶ್ವರ ಏತನೀರಾವರಿ ಯೋಜನೆ ಹರಿಕಾರ, ಮಿಷನ್ ಭಗೀರಥ ಕುಡಿಯೋ ನೀರಿನ ರೂವಾರಿ, ರೈತ ಹಕ್ಕುಗಳ ಹೋರಾಟಗಾರ ತೆಲಂಗಾಣ ರಾಜ್ಯದ ಜಲಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶ್ ರಾವ್ ವೀರಮಲ್ಲ ಅವರು ತೆಲಂಗಾಣ ರಾಜ್ಯದಲ್ಲಿ ನೀರಾವರಿ ಕ್ರಾಂತಿಯನ್ನೇ ಮಾಡಿದ್ದಾರೆ. ವಿ ಪ್ರಕಾಶ್ ರಾವ್ ರಾಮಪ್ಪ ಕಾಲುವೆ ದುರಸ್ತಿ ಮೂಲಕ ಮತ್ತು ರೈತ ಹಕ್ಕುಗಳಿಗಾಗಿ ಅನೇಕ ರೈತ ಸಂಘಗಳನ್ನು ಸ್ಥಾಪಿಸಿದ್ದಾರೆ. ತೆಲಂಗಾಣದಲ್ಲಿ 1995ರಿಂದ 2014ವರೆಗೆ 35000ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶದ ರಾಜ್ಯದಿಂದ ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟಕ್ಕಾಗಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರೊಂದಿಗೆ ಸಾಥ್ ನೀಡಿದ್ದರು. ಪ್ರತ್ಯೇಕ ರಾಜ್ಯ ಚಳುವಳಿ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು.

ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಗೆ ಭಾಜನ

ನೀರಾವರಿ, ಕೃಷಿ ಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸಿ ಕಳೆದ ಹತ್ತು ವರ್ಷಗಳಿಂದ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾ ಪೀಠ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ನೀಡುತ್ತಾ ಬಂದಿದೆ .2020ನೇ ಸಾಲಿನ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಯನ್ನು ತೆಲಂಗಾಣದ ರೈತ ಹಕ್ಕುಗಳ ಹೋರಾಟಗಾರ ಪ್ರಕಾಶ್ ರಾವ್ ವೀರಮಲ್ಲರಿಗೆ ನೀಡಿ ಗೌರವಿಸಿದೆ. 1 ಲಕ್ಷ ನಗದು, ಬಸವಣ್ಣನವರ ಮೂರ್ತಿ ಸ್ಮರಣಿಕೆ, ತಾಮ್ರಪ್ರತಿಯುಳ್ಳ ಪ್ರಶಸ್ತಿ ಪತ್ರ , ನೇಗಿಲು ನೀಡಿ ಪ್ರಕಾಶ್ ರಾವ್ ವೀರಮಲ್ಲ ದಂಪತಿಗೆ ಸನ್ಮಾನಿಸಲಾಯಿತು.

ಇದನ್ನೂ ಓದಿ : ಟ್ರ್ಯಾಕ್​​​​ ಬಿಟ್ಟು ಮೈದಾನಕ್ಕೆ ಬಂದ ಚುಕುಬುಕು ರೈಲು; ಬೋಗಿಯೇ ವಿದ್ಯಾರ್ಥಿಗಳಿಗೆ ಕೊಠಡಿ..!

2012ರಲ್ಲಿ ಜಗತ್ತಿಗೆ ಅನ್ನ ನೀಡುವ ಕೃಷಿ,ಕೃಷಿಕರನ್ನು ರಕ್ಷಿಸುವ ಪ್ರೇರೇಪಿಸುವ ಹಾಗೂ ಪ್ರೋತ್ಸಾಹಿಸುವ ದೃಷ್ಟಿಯಿಂದ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಸಲಹೆ ಮೇರೆಗೆ ಡಾ,ಬಸವಜಯಮೃತ್ಯುಂಜಯ ಸ್ವಾಮೀಜಿ ಸ್ಥಾಪಿಸಿದ್ದಾರೆ. 2012ರಲ್ಲಿ ಜಲ ತಜ್ಞ ಡಾ, ರಾಜೇಂದ್ರ ಸಿಂಗ್, 2013ರಲ್ಲಿ ಅಣ್ಣಾ ಹಜಾರೆ, 2014ರಲ್ಲಿ ಮೇಧಾ ಪಾಟ್ಕರ್, 2015ರಲ್ಲಿ ಡಾ,ಬಾಬಾ ಅಡಾವೆ, 2016-17ರಲ್ಲಿ ಮಾಣಿಕ್ ಸರ್ಕಾರ್, 2018ರಲ್ಲಿ ಡಾ, ಸ್ವಾಮಿನಾಥನ್ ಅವರಿಗೆ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಸ್ಮರಿಸಬಹುದು.ಒಂದೇ ಸಮುದಾಯ ಎರಡು ಪ್ರತ್ಯೇಕ ಪೀಠದಿಂದ ಒಂದೇ ದಿನ ಕಾರ್ಯಕ್ರಮ
ಲಿಂಗಾಯತ ಸಮುದಾಯದ ಎರಡು ಪೀಠಗಳಾದ ಹರಿಹರ ವೀರಶೈವ ಲಿಂಗಾಯತ ಪೀಠ, ಹಾಗೂ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠಗಳು ಇವತ್ತೊಂದು ದಿನ ಪ್ರತ್ಯೇಕ ಕಾರ್ಯಕ್ರಮ ಆಯೋಜಿಸಿದ್ದವು. ಹರಿಹರ ಪೀಠದಿಂದ ಹರಿಹರದಲ್ಲಿ ಜಾತ್ರೆ ಆಯೋಜಿಸಿದ್ರೆ , ಇತ್ತ ಕೂಡಲಸಂಗಮದಲ್ಲಿ ಲಿಂಗಾಯತ ಪಂಚಮಸಾಲಿ ಪೀಠ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿತ್ತು.

ವರದಿ : ರಾಚಪ್ಪ ಬನ್ನಿದಿನ್ನಿ
Published by: G Hareeshkumar
First published: January 14, 2020, 10:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading