ಬಾಗಲಕೋಟೆ ಕಲಾವಿದನ ಕೈಚಳಕ: ಬಲ್ಬ್ ನಲ್ಲಿ ಅರಳಿದ ಕಲೆ

ವಿಧಾನ ಸೌಧ, ವಿಕಾಸ ಸೌಧ ಸೇರಿದಂತೆ ಜಗತ್ತಿನ ಪ್ರಸಿದ್ದ ಕಟ್ಟಡಗಳ ಆಕೃತಿಯ ಸುಮಾರು ಆರು ನೂರಕ್ಕೂ ಅಧಿಕ ಕಲಾಕೃತಿ ತಯಾರಿಸಿ ಒಟ್ಟು 6 ಬಾರಿ ಲಿಮ್ಕಾ ದಾಖಲೆ ಮಾಡಿದ್ದಾರೆ.

 ಬಲ್ಬ್ ನಲ್ಲಿ ಅರಳಿದ ಕಲೆ

ಬಲ್ಬ್ ನಲ್ಲಿ ಅರಳಿದ ಕಲೆ

 • Share this:
  ಬಾಗಲಕೋಟೆ (ಸೆ. 16): ಈಗಷ್ಟೇ ದೇಶದೆಲ್ಲೆಡೆ ಗಣಪತಿ ಹಬ್ಬದ ಸಂಭ್ರಮ ಮುಗಿದಿದೆ. ತಿಂಗಳು ಕಾಲವೂ ಇರಲಿರುವ ಈ ಸಂಭ್ರಮಕ್ಕೆ  ಬಾಗಲಕೋಟೆ ಯುವಕ ಹೊಸ ರೂಪ ನೀಡಿದ್ದಾರೆ. ಈ ಕಲಾವಿದ  ಬಲ್ಬ್  ನಲ್ಲಿ ಗಣಪತಿ ಕೂರಿಸಿ  ಕೈ ಚಳಕ ತೋರಿದ್ದಾನೆ.  ಸುಟ್ಟ ಬಲ್ಬ್ ಗಳಲ್ಲಿ ವಿಶೇಷವಾಗಿ ಕಲಾಕೃತಿಗಳನ್ನ ನಿರ್ಮಿಸುವ ಕಲಾವಿದ. ಈ ಬಾರಿ ಸುಟ್ಟ ಬಲ್ಬ್ ನಲ್ಲಿ ಗಣಪತಿ ಕಲಾಕೃತಿಗಳನ್ನ ನಿರ್ಮಿಸಿ ಗಮನ ಸೆಳೆದಿದ್ದಾನೆ.

  ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ಯುವಕನೊಬ್ಬ ಬಲ್ಬ್‌ ನೊಳಗೆ ವಿಭಿನ್ನವಾಗಿ ಗಣೇಶನ ಮೂರ್ತಿಗಳ  ಕಲಾಕೃತಿಗಳನ್ನ ನಿರ್ಮಿಸುವ ಮೂಲಕ ತನ್ನ ಕಲೆಯನ್ನ ಪ್ರದರ್ಶಿಸಿ ಗಮನ ಸೆಳೆದಿದ್ದಾನೆ. ಹುನ್ನೂರು ಗ್ರಾಮದ ಯುವಕ ವಿಜಯ್ ಪವಾರ್ ಎಂಬುವವನೇ ಬಲ್ಬ್ ನಲ್ಲಿ ಕಲಾಕೃತಿಗಳನ್ನ ರಚಿಸುವ ಕಲಾವಿದ.  ಕಲಾವಿದ ವಿಜಯ್ ಪವಾರ್,  ಕಳೆದ 10 ವರ್ಷಗಳಿಂದ ಬಲ್ಬ್ ಗಳಲ್ಲಿ ‌ ಐತಿಹಾಸಿಕ ಸ್ಥಳಗಳ ಆಕೃತಿ ಸೇರಿದಂತೆ ವಿವಿಧ ರೀತಿಯ ವಿಭಿನ್ನ ರೀತಿಯ ಕಲಾಕೃತಿಗಳನ್ನ ತಯಾರಿಸಿದ್ದಾರೆ  ದೀಪದ ಕಡ್ಡಿ ಮತ್ತು ಕಾಗದ ಹಾಳೆಗಳಿಂದ ಗೋಲ ಗುಮ್ಮಟ, ಚಾರಮಿನಾರ್, ದೆಹಲಿಯ ಕೆಂಪುಕೋಟೆ, ವಿಧಾನ ಸೌಧ, ವಿಕಾಸ ಸೌಧ ಸೇರಿದಂತೆ ಜಗತ್ತಿನ ಪ್ರಸಿದ್ದ ಕಟ್ಟಡಗಳ ಆಕೃತಿಯ ಸುಮಾರು ಆರು ನೂರಕ್ಕೂ ಅಧಿಕ ಕಲಾಕೃತಿ ತಯಾರಿಸಿ ಒಟ್ಟು 6 ಬಾರಿ ಲಿಮ್ಕಾ ದಾಖಲೆ ಮಾಡಿದ್ದಾರೆ.

  ಇದನ್ನು ಓದಿ: ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

  ಇನ್ನು ಈ ಬಾರಿ  ಬಲ್ಬ್​ ಕಲಾವಿದ ವಿಜಯ್ ಪವಾರ್ ಗಣೇಶ ಚತುರ್ಥಿಯ ಪ್ರಯುಕ್ತ ಇನ್ನೂರು  ವ್ಯಾಟ್‌ ನ ನಾಲ್ಕು  ಬಲ್ಬ್‌ ಗಳಲ್ಲಿ ಮತ್ತು ಅರವತ್ತು ವ್ಯಾಟ್ ‌ನ ಬಲ್ಬ ನಲ್ಲಿ  ವಿಶೇಷ ಗಣೇಶನ ಮೂರ್ತಿಗಳನ್ನ ತಯಾರಿಸಿ ಗಮನ ಸೆಳೆದಿದ್ದಾನೆ. ವಿಜಯ್‌  ಕಲೆಯ ಕೈಚಳಕಕ್ಕೆ ಇದೀಗ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಷ್ಟೇ ಅಲ್ಲದೆ ವಿಶೇಷ ಸಂದರ್ಭಗಳಲ್ಲಿ ವಸ್ತು ಸ್ಥಿತಿಗೆ ತಕ್ಕಂತೆ ಬಲ್ಬ್‌ ನಲ್ಲಿ ವಿಶೇಷ ಕಲಾಕೃತಿ ರಚಿಸುವ ಮೂಲಕ ಮುಂದಿನ ದಿನಗಳಲ್ಲಿ ಏನಾದರು ಸಾಧನೆ ಮಾಡಬೇಕು ಎನ್ನುವ ಹಂಬಲ ಹೊಂದಿದ್ದಾರೆ.  ಈಗಾಗಲೇ ಇವರ ಕಲೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅನೇಕರು ಪ್ರೋತ್ಸಾಹಿಸಿದ್ದಾರೆ. ಇನ್ನು ಇದರಲ್ಲಿ ವಿಶೇಷ ಸಾಧನೆ ಮಾಡುಬೇಕು ಎಂಬುದು ನನ್ನ ಗುರಿ ಎನ್ನುತ್ತಾರೆ ವಿಜಯ್​ ಪವಾರ್​. ಕಲೆಗಾರನಿಗೆ ಯಾವುದೇ ಕಲೆ ಅಸಾಧ್ಯವಲ್ಲ ಎಂಬುದಕ್ಕೆ ಸಾಕ್ಷಿ ಎನ್ನುವಂತಿದ್ದಾರೆ ಇವರು, ಛಲವಿದ್ದ ಕೈಗಳಲ್ಲಿ ಕಸವು ರಸವಾಗುತ್ತೆ ಅನ್ನೋ ಮಾತು ಈ ಬಲ್ಬ ಕಲಾವಿದನ ಾಧನೆಗೆ ಸಾಕ್ಷಿಯಾಗಿದೆ. ಯುವಕರು ಕಾಲ ಹರಣ ಮಾಡದೆ ಸಮಾಜದಲ್ಲಿ ಗುರುತಿಸಿಕೊಳ್ಳುವ ಮತ್ತು ಸಮಾಜಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಮುನ್ನಡೆ ಯುವಂತಾಗಲಿ ಅನ್ನೋದು ನಮ್ಮ ಆಶಯ

  ವರದಿ: ಮಂಜುನಾಥ್ ತಳವಾರ
  Published by:Seema R
  First published: