• Home
  • »
  • News
  • »
  • state
  • »
  • Siddaramaiah: ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಷೇತ್ರದ ಜನರಿಂದ ಬಿಗ್ ಆಫರ್

Siddaramaiah: ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಷೇತ್ರದ ಜನರಿಂದ ಬಿಗ್ ಆಫರ್

ಸಿದ್ದರಾಮಯ್ಯ

ಸಿದ್ದರಾಮಯ್ಯ

ಈಗಲೂ ನಮ್ಮ ಮಾತುಗಳಿಗೆ ನಾವು ಬದ್ಧವಾಗಿದ್ದೇವೆ. ಹೆಲಿಕಾಪ್ಟರ್​ನಲ್ಲಿ ಬಂದು ಬಾದಾಮಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಿ ಎಂದು ಮುಚಖಂಡಯ್ಯ ಮನವಿ ಮಾಡಿಕೊಂಡರು.

  • Share this:

ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaih) ಈ ಬಾರಿ ಮತ್ತೆ ವಿಧಾನಸಭಾ ಕ್ಷೇತ್ರ (Assembly Constituency) ಬದಲಿಸಲು ಮುಂದಾಗಿದ್ದಾರೆ. ಬಾದಾಮಿ (Badama MLA) ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವ ಸಿದ್ದರಾಮಯ್ಯ ಕೋಲಾರ (Kolar) ಮತ್ತು ವರುಣಾದತ್ತ  (Varuna) ಮುಖ ಮಾಡಿದ್ದಾರೆ. ಜನವರಿ 11ರಿಂದ ಆರಂಭವಾಗುವ ಬಸ್ ಯಾತ್ರೆಗೂ (Congress Bus Yatre) ಮುನ್ನವೇ ತಮ್ಮ ಕ್ಷೇತ್ರ ಯಾವುದು ಎಂಬುದನ್ನು ಸಿದ್ದರಾಮಯ್ಯ ಘೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಬಾದಾಮಿ ತೊರೆಯದಂತೆ ಅಲ್ಲಿನ ಜನರು ಬೆಂಗಳೂರಿಗೆ ಬಂದು ಸಿದ್ದರಾಮಯ್ಯರ ಬಳಿ ಮನವಿ ಮಾಡಿಕೊಂಡಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಅಭಿಮಾನಿಗಳು ನಾವು ನಿಮಗೆ ಹೆಲಿಕಾಪ್ಟರ್ (Helicopter) ಕೊಡಿಸುತ್ತೇವೆ. ಇದರಿಂದ  ಬೆಂಗಳೂರು ಮತ್ತು ಬಾದಾಮಿ (Bengaluru To Badami) ನಡುವಿನ ಪ್ರಯಾಣದ ಅವಧಿ ತಗ್ಗಲಿದೆ. ಆದ್ದರಿಂದ ಕ್ಷೇತ್ರ ಬದಲಿಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾತಾಡಿದ ಸಿದ್ದರಾಮಯ್ಯ, ಹೆಲಿಕಾಪ್ಟರ್ ಕೊಡಿಸುವ ವಿಚಾರ ನಂಗೆ ಗೊತ್ತಿಲ್ಲಪ್ಪ ಎಂದು ಹೇಳಿದರು.


ಈ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ ಆಪ್ತ ಬಾದಾಮಿ ಕ್ಷೇತ್ರದ ಮುಖಂಡ ಮುಚಖಂಡಯ್ಯ, ನಿಮ್ಮ ಕಾಲದಲ್ಲಿ ಬಾದಾಮಿ ಅಭಿವೃದ್ಧಿ ಆಗುತ್ತಿದೆ. ಈ ಅಭಿವೃದ್ಧಿ ಕಾರ್ಯಗಳು ಮುಂದುವರಿಯಬೇಕಾದ್ರೆ ಮತ್ತೆ ನೀವು ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು. ನಿಮ್ಮನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ವಿಶ್ವಾಸ ನಮಗಿದೆ ಎಂದು ಹೇಳಿದರು.


ಸಾವಿರಾರು ಕಾರ್ಯಕರ್ತರೊಂದಿಗೆ ಬರುತ್ತೇವೆ


ನಾವು ಕೇಳಿದಾಗೆಲ್ಲಾ ಬಾದಾಮಿ ತುಂಬಾ ದೂರ ಆಗುತ್ತೆ ಅಂತ ಹೇಳುತ್ತಿದ್ದೀರಿ. ಹಾಗಾಗಿ ನಿಮಗಾಗಿ ಹೆಲಿಕಾಪ್ಟರ್ ಕೊಡಿಸಲು ಬದ್ಧರಾಗಿದ್ದೇವೆ. ಅಧಿವೇಶನ ಮುಗಿದ ಬಳಿಕ ಸಾವಿರಾರು ಕಾರ್ಯಕರ್ತರೊಂದಿಗೆ ಬೆಂಗಳೂರಿಗೆ ಆಗಮಿಸುತ್ತೇವೆ. ಮತ್ತೆ ನಮ್ಮ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯಿಸುತ್ತೇವೆ ಎಂದು ಮುಚಖಂಡಯ್ಯ ಹೇಳಿದ್ದಾರೆ.


ಮುಚಖಂಡಯ್ಯ, ಸಿದ್ದರಾಮಯ್ಯ ಆಪ್ತ


ಈ ಹಿಂದೆಯೂ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಬಂದಾಗಲೂ ಹೆಲಿಕಾಪ್ಟರ್ ಕೊಡಿಸುತ್ತೇವೆ  ಎಂದು ಹೇಳಿದ್ದೀವಿ. ಈಗಲೂ ನಮ್ಮ ಮಾತುಗಳಿಗೆ ನಾವು ಬದ್ಧವಾಗಿದ್ದೇವೆ. ಹೆಲಿಕಾಪ್ಟರ್​ನಲ್ಲಿ ಬಂದು ಬಾದಾಮಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಿ ಎಂದು ಮುಚಖಂಡಯ್ಯ ಮನವಿ ಮಾಡಿಕೊಂಡರು.


ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧೆ


ಹೆಲಿಕಾಪ್ಟರ್​ ಆಫರ್ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೋಲಾರ, ವರುಣಾ ಮತ್ತು ಬಾದಾಮಿ ಜನರು ತಮ್ಮ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಹೇಳುತ್ತಿದ್ದಾರೆ. ಹಾಗಾಗಿ ನನ್ನ ಸ್ಪರ್ಧೆಯ ನಿರ್ಧಾರವನ್ನು ಹೈಕಮಾಂಡ್​ಗೆ ಬಿಟ್ಟಿದ್ದೇನೆ. ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು.


‘ಕೆಂಪಣ್ಣ ಕೊಲೆ ಮಾಡಿದ್ರಾ’?


ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Karnataka contractor association president Kempanna )ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಜೇವರ್ಗಿ ಪಟ್ಟಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಶನಿವಾರ ರಾತ್ರಿ ಕೆಂಪಣ್ಣ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ರಾತ್ರಿಯೇ ಎಲ್ಲರಿಗೂ ಜಾಮೀನು ಸಿಕ್ಕಿತ್ತು.


ಇದನ್ನೂ ಓದಿ: Siddaramaiah: ಅಮಾನತಾಗಿದ್ದ IAS ಅಧಿಕಾರಿಗಳಿಗೆ ಮತ್ತೆ ಹುದ್ದೆ; ಸಿಎಂಗೆ ಜವಾಬ್ದಾರಿ ಇಲ್ವಾ ಅಂತ ಸಿದ್ದರಾಮಯ್ಯ ಕೆಂಡ


ಸಾಮಾನ್ಯವಾಗಿ ಅರೆಸ್ಟ್ ಮಾಡುವ ಕೇಸ್ ಅಲ್ಲಾ ಅದು? ಅವರೇನು ಕೊಲೆ ಮಾಡಿದ್ರಾ? ದರೋಡೆ ಮಾಡಿದ್ರಾ? ಅವರ ಮೇಲೆ ಮಾನನಷ್ಟ ಕೇಸ್ ಹಾಕಿದ್ರು. ಅವರು ಬರಲಿಲ್ಲಾ ಅಂತ ವಿಚಾರಣೆಗೆ ಹಾಜರಾಗಿರಲಿಲ್ಲಾ ಎಂದು ಬೇಕು ಅಂತಲೇ ಕೇಸ್ ಹಾಕಿ ಅರೆಸ್ಟ್ ಮಾಡಿಸಿದ್ದಾರೆ ಅಂತ ಆರೋಪಿಸಿದರು.


badami people gave big offer to siddaramaiah mrq
ಸಿದ್ದರಾಮಯ್ಯ, ಮಾಜಿ ಸಿಎಂ


ಇನ್ನು ಜನಾರ್ದನ ರೆಡ್ಡಿ ಅವರ ನೂತನ ಪಕ್ಷ  ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಬಗ್ಗೆ ಮಾತನಾಡಲ್ಲ ಎಂದು ಹೇಳಿದರು.

Published by:Mahmadrafik K
First published: