ಬಾಗಲಕೋಟೆ: ನಕಲಿ ದಾಖಲೆ ಸೃಷ್ಟಿ, ಫೋರ್ಜರಿ ಮಾಡಿ ಸಿಕ್ಕಿಬಿದ್ದರೂ ಬಿಲ್ ಕಲೆಕ್ಟರ್​ನ ಆಟಾಟೋಪಕ್ಕಿಲ್ಲ ಬ್ರೇಕ್..!

ಫಕೀರಬೂದಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ ಕಲೆಕ್ಟರ್ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ಅನುದಾನ ಎತ್ತುವಳಿ ಮಾಡಿರೋದು ತನಿಖಾ ವರದಿಯಲ್ಲಿ ಬಯಲಾಗಿದೆ. ಆದರೂ ಬಿಲ್ ಕಲೆಕ್ಟರ್ ವಿರುದ್ಧ ಮೇಲಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎನ್ನೋ ಆರೋಪ ಕೇಳಿಬಂದಿದೆ.


Updated:September 14, 2018, 6:41 PM IST
ಬಾಗಲಕೋಟೆ: ನಕಲಿ ದಾಖಲೆ ಸೃಷ್ಟಿ, ಫೋರ್ಜರಿ ಮಾಡಿ ಸಿಕ್ಕಿಬಿದ್ದರೂ ಬಿಲ್ ಕಲೆಕ್ಟರ್​ನ ಆಟಾಟೋಪಕ್ಕಿಲ್ಲ ಬ್ರೇಕ್..!
ಫಕೀರಬೂದಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ ಕಲೆಕ್ಟರ್ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ಅನುದಾನ ಎತ್ತುವಳಿ ಮಾಡಿರೋದು ತನಿಖಾ ವರದಿಯಲ್ಲಿ ಬಯಲಾಗಿದೆ. ಆದರೂ ಬಿಲ್ ಕಲೆಕ್ಟರ್ ವಿರುದ್ಧ ಮೇಲಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎನ್ನೋ ಆರೋಪ ಕೇಳಿಬಂದಿದೆ.

Updated: September 14, 2018, 6:41 PM IST
- ರಾಚಪ್ಪ ಬನ್ನಿದಿನ್ನಿ, ನ್ಯೂಸ್18 ಕನ್ನಡ

ಬಾಗಲಕೋಟೆ(ಸೆ. 14): ಬಾದಾಮಿ ತಾಲೂಕಿನ ಫಕೀರ ಬೂದಿಹಾಳ ಗ್ರಾಮಪಂಚಾಯತ್​ನಲ್ಲಿ ಬಿಲ್ ಕಲೆಕ್ಟರ್ ಆಗಿರೋ ಈರಪ್ಪ ಮೇಟಿ ವಿರುದ್ಧ ತನಿಖಾ ವರದಿ ಸಲ್ಲಿಸಿ ಎರಡು ತಿಂಗಳು ಕಳೆಯುತ್ತಾ ಬಂದರೂ ಯಾವ ಕ್ರಮಕೈಗೊಳ್ಳುತ್ತಿಲ್ಲವೆಂದು ಗ್ರಾಮಪಂಚಾಯತ್ ಅಧ್ಯಕ್ಷೆ ಹಾಗೂ ಹೋರಾಟಗಾರರು ಆರೋಪಿಸುತ್ತಿದ್ದಾರೆ. ಬಿಲ್ ಕಲೆಕ್ಟರ್ ಈರಪ್ಪ ಮೇಟಿ ಅವರು ಸತ್ತವರ, ಹಾಗೂ ವಿದ್ಯಾರ್ಥಿಗಳ ಹೆಸರಲ್ಲಿ ಶೌಚಾಲಯ ಬಿಲ್ ಎತ್ತುವಳಿ ಮಾಡಿದ್ದಾರೆನ್ನಲಾಗಿದೆ.

ಪಿಡಿಒ ಗೈರಾದಾಗ ಪಿಡಿಒ ಸೀಲ್ ಬಳಸಿ ಬಿಲ್ ಕಲೆಕ್ಟರ್ ಸಿಗ್ನೆಚರ್ ಮಾಡಿ ಅನುದಾನ ಎತ್ತುವಳಿ ಮಾಡಿರೋದು ಬೆಳಕಿಗೆ ಬಂದಿದೆ. ಇನ್ನು ವಸತಿ ಯೋಜನೆ ಯಡಿ ಆಶ್ರಯ ಮನೆ ಅರ್ಹರಿಗೆ ವಿತರಸದೇ ಹಣ ಕೊಟ್ಟವರಿಗೆ ಆಶ್ರಯ ಮನೆಗಳನ್ನು ನೀಡಿದ್ದಾನಂತೆ. ಈರಪ್ಪ ಮೇಟಿಯೇ ತಮ್ಮ ಮನೆಗೆ ಶೌಚಾಲಯ ಕ್ಕೆ ಎರಡೆರಡು ಬಿಲ್ ಎತ್ತುವಳಿ ಮಾಡಿದ್ದಾರಂತೆ. ಇನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಲ್ಲವ್ವ ಚೂರಿ ಅವರ ಫೋರ್ಜರಿ ಸಹಿ ಮಾಡಿ ಆಶ್ರಯ ಮನೆಗಳ ಮಂಜೂರಾತಿಗಾಗಿ ತಾಲೂಕು ಪಂಚಾಯಿತಿಗೆ ಕಳುಹಿಸಿದ್ದಾನೆ. ಇದರ ಬಗ್ಗೆ ಕೇಳಿದ ಅಧ್ಯಕ್ಷೆಗೇ ಬಿಲ್ ಕಲೆಕ್ಟರ್ ಧಮ್ಕಿ ಹಾಕ್ತಿದ್ದಾನಂತೆ.

ಬಿಲ್ ಕಲೆಕ್ಟರ್ ಅವ್ಯವಹಾರ ಕುರಿತು ಹೋರಾಟಗಾರ ಎಂಆರ್ ಹುಣಸಿಕಟ್ಟಿ ನೀಡಿದ ದೂರಿನನ್ವಯ 2013-14ನೇ ಸಾಲಿನಿಂದ 2017-18 ವರೆಗೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಿಎಸ್ ಶಿರೂರ ನೇತೃತ್ವದಲ್ಲಿ ತನಿಖೆ ನಡೆಸಿ ಜುಲೈ 2018ರಲ್ಲಿ ಸಿಇಓ ಅವರಿಗೆ ಸೂಕ್ತ ಕ್ರಮಕ್ಕಾಗಿ ತನಿಖಾ ವರದಿ ಸಲ್ಲಿಸಿದ್ದಾರೆ.

ಈ ಹಿಂದೆ 2016ರಲ್ಲಿ ಈರಪ್ಪ ಮೇಟಿ ಅವರು ಪಂಚಾಯಿತಿಯಲ್ಲಿ ಗೋಲ್ಮಾಲ್ ಮಾಡಿದ್ದರು. ಆಗ ಜಿ.ಪಂ. ಸಿಇಓ ಅವರು ಬಿಲ್ ಕಲೆಕ್ಟರ್​ನನ್ನು ಸೇವೆಯಿಂದ ವಜಾಮಾಡಿದ್ದರು. ಇದನ್ನು ಪ್ರಶ್ನಿಸಿ ಬಿಲ್ ಕಲೆಕ್ಟರ್ ಹೈಕೋರ್ಟ್ ಮೊರೆಹೋಗಿದ್ರು. ಬಿಲ್ ಕಲೆಕ್ಟರ್ ನೇಮಕಾತಿ ಹಾಗೂ ವಜಾಗೊಳಿಸೋ ಅಧಿಕಾರ ಸಿಇಓ ಅವರಿಗಿಲ್ಲ. ಗ್ರಾಮಪಂಚಾಯತ್ ಕಮಿಟಿಗೆ ಬಿಲ್ ಕಲೆಕ್ಟರ್​ನನ್ನು ಸೇವೆಯಿಂದ ವಜಾ ಮಾಡುವ ಅಧಿಕಾರ ಇದೆ ಎಂದು ಆದೇಶಿಸಿತ್ತು. ಆದ್ರೆ ಗ್ರಾಮಪಂಚಾಯತ್ ಕಮಿಟಿಯವರು ಬಿಲ್ ಕಲೆಕ್ಟರ್​ನನ್ನು ಸೇವೆಯಿಂದ ತೆಗೆದುಹಾಕಿಲ್ಲ. ಬಳಿಕ ಸಿಇಓ ಅವರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಅವ್ಯವಹಾರದ ತನಿಖೆಗೆ 2018ರಲ್ಲಿ ಆದೇಶಿಸಿದ್ರು. ಇದೀಗ ಅವ್ಯವಹಾರವಾಗಿರುವುದು ನಿಜವೆಂದು ತನಿಖಾ ವರದಿ ಸಲ್ಲಿಕೆಯಾಗಿದೆ.

ಇದೇ ವೇಳೆ, ಪಂಚಾಯ್ತಿಯಲ್ಲಿ ಬಿಲ್ ಕಲೆಕ್ಟರ್ ಆಡಿದ್ದೇ ಆಟವಾಗಿದೆಯಂತೆ. ಬೀಳಗಿ ಶಾಸಕ ಮುರುಗೇಶ್ ನಿರಾಣಿ ಹೆಸರು ಹೇಳಿ ಬಿಲ್ ಕಲೆಕ್ಟರ್ ಈರಪ್ಪ ಮೇಟಿ ರಾಜಾರೋಷವಾಗಿ ನಡೆದುಕೊಳ್ತಿದ್ದಾನೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಗ್ರಾಮಪಂಚಾಯ್ತಿ ಪಿಡಿಒಗಳು ಕೂಡಾ ಈತನ ಅನತಿಯಂತೆ ನಡೆಯಬೇಕು. ಕೂಡಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ತನಿಖಾ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೋರಾಟಗಾರರು ಆಗ್ರಹಿಸ್ತಿದ್ದಾರೆ.
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ