Protest Arrest: ಸಿಎಂ ಭೇಟಿಗೆ ಅವಕಾಶ ನೀಡದ ಹಿನ್ನೆಲೆ ಆಕ್ರೋಶ; ದಲಿತ ಮುಖಂಡರ ಬಂಧನ

ಬಾಗಲಕೋಟೆಯಲ್ಲಿ ಸಿಎಂ ಭೇಟಿಗೆ ಅವಕಾಶ ನೀಡದಿದ್ದಕ್ಕೆ ದಲಿತ ಸಂಘಟನೆಗಳ ಮುಖಂಡರು ಆಕ್ರೋಶ ಹೊರಹಾಕಿದ್ರು. ವಾಗ್ವಾದ ತಾರಕ್ಕೇರಿದ ಪರಿಣಾಮ ಮನವಿ ಕೊಡಲು ಬಂದವರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಾಗಲಕೋಟೆ (ಏ.22): ಜಿಲ್ಲೆಯಲ್ಲಿ ಕೆರೂರ ಏತ ನೀರಾವರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಗುದ್ದಲಿ ಪೂಜೆ. 558 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಗೆ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.  ಇದೇ ವೇಳೆ  ಸಿಎಂ ಭೇಟಿಗೆ ಬಂದ ದಲಿತ ಸಂಘಟನೆಗಳಿಗೆ ಪೊಲೀಸರು ಅಡ್ಡಿ ಮಾಡಿದ್ದಾರೆ. ಈ ವೇಳೆ ಪೊಲೀಸರು, ದಲಿತ ಸಂಘಟನೆಗಳ ಮಧ್ಯೆ ವಾಗ್ವಾದ ನಡೆಯಿತು. ಸಿಎಂ ಭೇಟಿಗೆ ಅವಕಾಶ ನೀಡದಿದ್ದಕ್ಕೆ ದಲಿತ ಸಂಘನೆಗಳ ಆಕ್ರೋಶ ಹೊರ ಹಾಕಿದ್ರು. ವಾಗ್ವಾದ ತಾರಕ್ಕೇರಿದ ಪರಿಣಾಮ ಮನವಿ ಕೊಡಲು ಬಂದವರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ.

ವಾಲ್ಮೀಕಿ ಸಮುದಾಯದ ಮುಖಂಡರ ಬಂಧನ

ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಪ್ರತಿಭಟನೆಗೆ ಯತ್ನಿಸಿದ ಹಿನ್ನೆಲೆ ವಾಲ್ಮೀಕಿ ಸಮುದಾಯದ ಮುಖಂಡರ ಬಂಧನ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ನಡೆದ ಕಾರ್ಯಕ್ರಮ ವಾಲ್ಮೀಕಿ ಮಹಾ ಸಭಾದ ಜಿಲ್ಲಾ ಮುಖಂಡರನ್ನು ಬಂಧನ ಮಾಡಲಾಗಿದೆ ಪ್ರತಿಭಟನೆಗೆ ಮುಂದಾಗಿದ್ದವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಾಲ್ಮೀಕಿ ಸಮುದಾಯದ 7.5 ಮೀಸಲಾತಿ ನೀಡದ ಹಿನ್ನೆಲೆ ಬಿಜೆಪಿ ಸರ್ಕಾರ ಹಾಗೂ ಸಿಎಂ ಬೊಮ್ಮಾಯಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರ ಆಕ್ರೋಶ ಹೊರಹಾಕಿದ್ರು.  ಈ ವೇಳೆ ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ಭಾಷಣ

ಬನಶಂಕರಿ, ಮಲಪ್ರಭಾ, ಘಟಪ್ರಭಾಗೆ ನಮಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಭಾಷಣ ಆರಂಭಿಸಿದ್ರು. ಬಂಗಾರ ಬೆಳೆಗೆ ನೀರಿನ ಜೊತೆಗೆ ರೈತರ ಬೆವರು ಹರಿಸಬೇಕಾಗುತ್ತೆ. ಅಂತಹ ಒಂದು ಕೆಲಸಕ್ಕೆ ಇವತ್ತು ಅಡಿಗಲ್ಲು ಹಾಕಲಾಗಿದೆ. ಯಾವುದೇ ನೀರಾವರಿ ಯೋಜನೆ ಆಗಬೇಕಾದ್ರೆ ಬಹಳ ಜನರ ಸಹಕಾರ ಬೇಕು, ನೀರಾವರಿ ಮಾಡಬೇಕಾದ್ರೆ ದೂರದೃಷ್ಠಿ, ಬದ್ಧತೆ ಬೇಕು ಒಮ್ಮೊಮ್ಮೆ ಯೋಚನೆ ಮಾಡಿದ್ರೆ ಇದು ಒಂದು ರೀತಿಯ ಯೋಗ ಅನಿಸುತ್ತೆ ಎಂದ್ರು.

ಇದನ್ನೂ ಓದಿ:  Warrant to DK Shivakumar: ಕೊರೊನಾ ನಿಯಮ ಉಲ್ಲಂಘಿಸಿ ಪ್ರತಿಭಟನೆ; ಡಿಕೆ ಶಿವಕುಮಾರ್​ಗೆ ವಾರೆಂಟ್

ಸಿದ್ದರಾಮಯ್ಯ  ಹೆಸರೇಳ್ತಿದ್ದಂತೆ ಶಿಳ್ಳೆ, ಚಪ್ಪಾಳೆ

ಸಿದ್ದರಾಮಯ್ಯ ಹೆಸರು ಹೇಳುತ್ತಿದ್ದಂತೆ ನೆರೆದಿದ್ದ ಜನರಿಂದ ಶಿಳ್ಳೆ, ಚಪ್ಪಾಳೆ ಹೊಡೆದ್ರು. ಹಾ, ತಡೀರಿ ನಾನಿನ್ನೂ ಏನು ಹೇಳಿಲ್ಲ, ಹೇಳಿದ‌ ಮೇಲೆ ಇನ್ನೂ ಹೆಚ್ಚು ಹೊಡಿತಿರಿ ಎಂದು ನೆರೆದಿದ್ದ ಜನರಿಗೆ ಬೊಮ್ಮಾಯಿ ಹೇಳಿದ್ರು.

ಸಿದ್ದರಾಮಯ್ಯ ಹಾಗೂ ರೈತರಿಗಾಗಿ ಈ ಯೋಜನೆ

ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಸವಣೂರು ಕ್ಷೇತ್ರದ ನೀರಾವರಿ ಶಂಕು ಸ್ಥಾಪನೆ ಮಾಡಿದ್ರು, ಆಗ  ನಾನು ಕನಸು ಮನಸಿನಲ್ಲೂ ಅದನ್ನೂ ನೆನೆಸಿರಲಿಲ್ಲ . ಈಗ  ನಾನು ಅವರ ಬಾದಾಮಿ ಕ್ಷೇತ್ರದ ನೀರಾವರಿಗೆ ಶಂಕು ಸ್ಥಾಪನೆ ಮಾಡಿದ್ದೇನೆ. ಇದನ್ನೇ ಯೋಗ ಯೋಗ ಅನ್ನೋದು. ಸಿದ್ದರಾಮಯ್ಯರು ಅಷ್ಟೇ ಅಲ್ಲದೇ ಈ ಭಾಗದ ರೈತರ‌ ಮುಖ ನೋಡಿ ಯೊಜನೆ ನೀಡಲಾಗಿದೆ.

ಎಲ್ಲೆಲ್ಲೂ ಹಸಿರು ಕಾಣಬೇಕು 

ರೈತರು ಯಾವುದೇ ಪಕ್ಷಕ್ಕೆ ಸೀಮಿತ ಇರೋದಿಲ್ಲ. ನಿಗದಿತ ಸಮಯದಲ್ಲಿ ಕೆಲಸ ಆಗಬೇಕು. ಇದರ ಎರಡನೇ ಹಂತ ಆದಷ್ಟು ಬೇಗ ಅನುಮೋದನೆ ಕೊಟ್ಟು. ಎಲ್ಲ ಭೂಮಿಗೆ ನೀರು ಹರಿದು, ಈ ಭಾಗದ 16 ಸಾವಿರ ಹೆಕ್ಟೇರ್ ಭೂಮಿ ಹಸಿರು ಸೀರೆ ಉಡಬೇಕು . ಆ ಕನಸು ಈಡೇರುವ ವರೆಗೂ ನಾವು ವಿರಮಿಸುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು

ಇದನ್ನೂ ಓದಿ: Second PU Exam: ಪರೀಕ್ಷಾ ಕೇಂದ್ರದಿಂದ ಹೊರ ನಡೆದ ಹಿಜಾಬ್ ತೆಗೆಯಲು ಒಪ್ಪದ ಇಬ್ಬರು ವಿದ್ಯಾರ್ಥಿನಿಯರು

ಹಾಸ್ಯ ಚಟಾಕಿ ಹಾರಿಸಿದ ಬೊಮ್ಮಾಯಿ

ಯುಕೆಪಿ 3 ಹಂತದ ಯೋಜನೆಯ ಮೂಲಭೂತ ಸೌಕರ್ಯಕ್ಕೆಬೇಕಾದ ಎಲ್ಲವನ್ನೂ ಮಾಡಲಾಗಿದೆ. ಟ್ರಿಬಿನಲ್ ಆದೇಶ ಬಂದಿದ್ದು, ನೋಟಿಫಿಕೇಷನ್​ ಪಡೆದು ಈ ಭಾಗದ 12 ಲಕ್ಷ ಭೂಮಿ ನೀರಾವರಿ ಆಗುತ್ತೆ ಎಂದ್ರು. ಇನ್ನು ಇದೇ ವೇಳೆ, ಬಿ.ಎಸ್ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಸ್ನೇಹ ನೆನೆದು ಸಿಎಂ ನಾನು ಗುದ್ದಾಡುತ್ತಲೇ ಇರ್ತೀವಿ ಅವ್ರು ಚೆನ್ನಾಗಿಯೇ ಇರ್ತಾರೆ ಎಂದು ಬೊಮ್ಮಾಯಿ ಹಾಸ್ಯ ಚಟಾಕಿ ಹಾರಿಸಿದ್ರು. ಬಿ.ಎಸ್​ ಯಡಿಯೂರಪ್ಪ ಅವರೇ ಈ ಯೋಜನೆಗೆ ಆಡಳಿತಾತತ್ಮ ಅನುಮೋದನೆ ಕೊಟ್ರು. ಈ ನೀರು ಭೂಮಿಗೆ ಹರಿದಾಗ ನಮಗೆ ಸಂತೋಷ ಆಗುತ್ತೆ. ಇನ್ನೂ ಸಿಎಂ ಬಸವರಾಜ ಬೊಮ್ಮಾಯಿಗೆ ಗ್ರಾಮಸ್ಥರು ಬೆಳ್ಳಿ ಗದೆ ನೀಡಿ ಸನ್ಮಾನಿಸಿದ್ರು.
Published by:Pavana HS
First published: