ಪೊಲೀಸರಿಂದ ಠಾಣೆಯಲ್ಲಿಯೇ ಮಹಿಳಾ ಪೇದೆಗೆ ಸೀಮಂತ

news18
Updated:July 10, 2018, 4:25 PM IST
ಪೊಲೀಸರಿಂದ ಠಾಣೆಯಲ್ಲಿಯೇ ಮಹಿಳಾ ಪೇದೆಗೆ ಸೀಮಂತ
news18
Updated: July 10, 2018, 4:25 PM IST
- ಪುಟ್ಟಪ್ಪ, ನ್ಯೂಸ್ 18ಕನ್ನಡ

 ಮೈಸೂರು ( ಜುಲೈ 10) : ನಿತ್ಯವೂ ಖಾಕಿ ಹಾಕಿಕೊಂಡು ಪೊಲೀಸ್ ಠಾಣೆಯಲ್ಲಿ ಬಿಜಿಯಾಗಿ  ಟೆನ್ಷನ್ನಲ್ಲಿರುವ ಪೊಲೀಸರು ಇವತ್ತು ಫುಲ್ ಖುಷ್ ಆಗಿದ್ರು. ತಮ್ಮ ಠಾಣೆಯಲ್ಲಿ ಸಂಪ್ರದಾಯಬದ್ಧವಾಗಿ ಮಹಿಳಾ ಪೇದೆಗೆ ಸೀಮಂತ ಮಾಡುವ ಮೂಲಕ ಔದಾರ್ಯ ಮೆರೆದಿದ್ದಾರೆ.

ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಮಹಿಳಾ ಪೇದೆ ರಕ್ಷಿತಾಗೆ ಸೀಮಂತ ಕಾರ್ಯ ಮಾಡಿ ಔದಾರ್ಯತೆ ಮೆರೆದಿದ್ದಾರೆ. 8 ತಿಂಗಳ ಗರ್ಭಿಣಿಯಾಗಿರುವ ರಕ್ಷಿತಾಗೆ ಪತಿ ತ್ರಿಮೂತರ್ಿ ಸೀಮಂತ ಕಾರ್ಯ ಮಾಡಿದ್ದಾರೆ. ಈ ವೇಳೆ ಪೊಲೀಸ್ ಠಾಣೆಯ ಸಿಬ್ಬಂದಿಗಳೆಲ್ಲ ಒಟ್ಟುಗೂಡಿದ್ದು ವಿಶೇಷ ಇದ್ರಿಂದ, ರಕ್ಷಿತಾ ಕೂಡ ಸಖತ್ ಖುಷಿಪಟ್ಟಿದ್ದಾರೆ.

ಇನ್ನೂ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಗಳು ಸಂಪ್ರದಾಯಬದ್ಧವಾಗಿ ಸೀರೆಯುಟ್ಟು, ಯಾವುದೇ ರೀತಿಯಲ್ಲಿ ಠಾಣೆಯಲ್ಲಿ ಇದು ಮಾಡುತ್ತಿರುವುದು ಎಂದು ತಿಳಿಯಬಾರದೆಂದು ವಿಧಿವಿಧಾನದ ಮೂಲಕ ಸೀಮಂತ ಕಾರ್ಯ ಮಾಡಿದ್ದಾರೆ. ಅಲ್ಲದೆ, ಠಾಣೆಯಲ್ಲಿರುವ ಪ್ರತಿಯೊಬ್ಬರು ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರಂತೆ ಒಂದೇ ಕುಟುಂಬದ ರೀತಿ ಸೀಮಂತ ಮಾಡಿದ್ದೇವೆ ಅಂತಾರೆ ಇಂದ್ರಮ್ಮ.

ಒಟ್ಟಾರೆ, ಇಷ್ಟು ದಿನ ಕೊಲೆ, ಕಳ್ಳತನ, ದರೋಡೆ ಅಂತ ತಲೆಕೆಡಿಸಿಕೊಂಡಿದ್ದ ಪೊಲೀಸರಿಗೆ ನಿನ್ನೆ ಇಳಿ ಸಂಜೆ ಮನೆಯಲ್ಲಿ ಶುಭಾಕಾರ್ಯದ ರೀತಿಯಲ್ಲಿ ಪೊಲೀಸ್ ಠಾಣೆ ಫೀಲ್ ಆಗಿತ್ತು. ಆ ಮೂಲಕ ಸಹದ್ಯೋಗಿಗೂ ಕೂಡ ಸಂಪ್ರದಾಯಬದ್ದವಾಗಿ ಸೀಮಂತ ಮಾಡಿ ಸಂಭ್ರಮಿಸಿದ್ದಾರೆ.

First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ