• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಕಬ್ಬಿಣದ ಪೈಪ್​ನೊಳಗೆ ಸಿಲುಕಿದ ಮಗುವಿನ ಕೈ; ಇತ್ತ ಕೊಂಡಕ್ಕೆ ಬಿದ್ದು ಅರ್ಚಕನಿಗೆ ಗಾಯ

Bengaluru: ಕಬ್ಬಿಣದ ಪೈಪ್​ನೊಳಗೆ ಸಿಲುಕಿದ ಮಗುವಿನ ಕೈ; ಇತ್ತ ಕೊಂಡಕ್ಕೆ ಬಿದ್ದು ಅರ್ಚಕನಿಗೆ ಗಾಯ

ಕಬ್ಬಿಣದ ಪೈಪ್​ನೊಳಗೆ ಸಿಲುಕಿದ ಮಗುವಿನ ಕೈ (ಸಾಂದರ್ಭಿಕ ಚಿತ್ರ)

ಕಬ್ಬಿಣದ ಪೈಪ್​ನೊಳಗೆ ಸಿಲುಕಿದ ಮಗುವಿನ ಕೈ (ಸಾಂದರ್ಭಿಕ ಚಿತ್ರ)

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಬ್ಬಿಣದ ಪೈಪ್​ ಕತ್ತರಿಸಿ ಮಗುವಿನ ಕೈ ಹೊರ ತೆಗೆದಿದ್ದಾರೆ.  ಸುಮಾರು ಎರೆಡು ಗಂಟೆಗಳ ಕಾಲ ಹರಸಾಹಸ ಪಟ್ಟು ಕೈ ಹೊರಗೆ ತೆಗೆಯಲಾಗಿದೆ.

  • News18 Kannada
  • 2-MIN READ
  • Last Updated :
  • Bangalore, India
  • Share this:

ಬೆಂಗಳೂರು: ನಗರದ ಡೈರಿ ಕಾಲೋನಿಯ (Dairy Colony) ಶಿವನ ದೇವಸ್ಥಾನದಲ್ಲಿ (Shiva Temple) ಆಟವಾಡುವಾಗ ಕಬ್ಬಿಣದ ಪೈಪ್​​ನಲ್ಲಿ ಮಗುವಿನ (Baby) ಕೈ ಸಿಲುಕಿಕೊಂಡಿತ್ತು. ಆಡುಗೋಡಿ ನಿವಾಸಿ ಲೋಕೇಶ್ ಎಂಬುವರ ಒಂದೂವರೆ ವರ್ಷದ ಮಗು ಜೊತೆ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ದೇವಾಲಯದ ಆವರಣದಲ್ಲಿ ಮಗುವನ್ನು ಆಟವಾಡಲು ಬಿಡಲಾಗಿತ್ತು. ಮಗು ಸಚ್ಚು ಆಟವಾಡುತ್ತಾ ಕಬ್ಬಿಣದ ಪೈಪ್​ನೊಳಗೆ (Iron Pipe) ಕೈ ಇಟ್ಟಿದೆ. ಆಗ ಮಗುವಿನ ಕೈಯಲ್ಲಿ ಬೆಳ್ಳಿ ಕಡಗ ಇದ್ದಿದ್ದರಿಂದ ಪೈಪ್​ಗೆ ಸಿಲುಕಿಕೊಂಡಿದೆ. ಪೈಪ್​ನಿಂದ ಕೈ ಹೊರಗೆ ಬಾರದಿದ್ದಾಗ ಮಗು ಜೋರಾಗಿ ಅಳಲು ಆರಂಭಿಸಿದೆ. ಕೂಡಲೇ ಈ ವೇಳೆ ಸ್ಥಳದಲ್ಲಿದ್ದ ಟ್ರಾಫಿಕ್ ಕಾನ್ಸ್​​ಟೇಬಲ್ ಹನುಮಂತ್ ಅಗ್ನಿಶಾಮಕ ದಳಕ್ಕೆ (fire fighters) ಕರೆ ಮಾಡಿದ್ದಾರೆ.


ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಬ್ಬಿಣದ ಪೈಪ್​ ಕತ್ತರಿಸಿ ಮಗುವಿನ ಕೈ ಹೊರ ತೆಗೆದಿದ್ದಾರೆ.  ಸುಮಾರು ಎರೆಡು ಗಂಟೆಗಳ ಕಾಲ ಹರಸಾಹಸ ಪಟ್ಟು ಕೈ ಹೊರಗೆ ತೆಗೆಯಲಾಗಿದೆ.


ಕೊಂಡಕ್ಕೆ ಬಿದ್ದು ಅರ್ಚಕನಿಗೆ ಗಾಯ


ಕೊಂಡ ಹಾಯುವಾಗ ಬಿದ್ದು ಅರ್ಚಕನಿಗೆ ಗಾಯವಾಗಿರೋ ಘಟನೆ ಚನ್ನಪಟ್ಟಣದ ಸೋಗಾಲ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಾಳಮ್ಮ ದೇವಿಯ ಕೊಂಡ ಹಾಯುವಾಗ ಈ ಘಟನೆ ನಡೆದಿದೆ. ಶ್ರೇಯಸ್ ಕೊಂಡಕ್ಕೆ ಬಿದ್ದು ಗಾಯಗೊಂಡ ಅರ್ಚಕ. ಗಾಯಾಳು  ಅರ್ಚಕನಿಗೆ  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.




ಕರ್ನಾಟಕದಲ್ಲಿದ್ದಾನಾ ಗುಡ್ಡು ಮುಸ್ಲಿಂ?


ಉತ್ತರಪ್ರದೇಶದಲ್ಲಿ ಉಮೇಶ್​ಪಾಲ್​ ಹತ್ಯೆ ಪ್ರಕರಣದ ಕೊಲೆ ಆರೋಪಿಗಳು ಕರ್ನಾಟಕದಲ್ಲಿರುವ ಶಂಕೆ ವ್ಯಕ್ತವಾಗಿದೆ. ಗ್ಯಾಂಗ್‌ಸ್ಟರ್ ಅತೀಕ್ ಗ್ಯಾಂಗ್‌ನವರಿಂದ ಉಮೇಶ್‌ ಪಾಲ್‌ ಹತ್ಯೆ ನಡೆದಿತ್ತು. ಪಾಲ್​ಹತ್ಯೆ ಆರೋಪಿ ಪೈಕಿ ಗುಡ್ಡು ಮುಸ್ಲಿಂ ಲೊಕೇಶನ್ ರಾಜ್ಯದಲ್ಲಿ ಪತ್ತೆಯಾಗಿದೆ.


ಇದನ್ನೂ ಓದಿ:  Jagadish Shettar: ನನ್ನನ್ನು ಒತ್ತಾಯದಿಂದ ಹೊರಗೆ ಹಾಕಲಾಯ್ತು; ಕಾಂಗ್ರೆಸ್ ಸೇರಿದ ಬಳಿಕ ಫಸ್ಟ್ ರಿಯಾಕ್ಷನ್

top videos


    ಉಮೇಶ್ ಪಾಲ್ ಕೊಂದಿದ್ದ 10 ಆರೋಪಿಗಳಲ್ಲಿ ಗುಡ್ಡು ಮುಸ್ಲಿಂ ಒಬ್ಬನಾಗಿದ್ದಾನೆ. ಗುಡ್ಡು ಮುಸ್ಲಿಂಗಾಗಿ ಯುಪಿ ಪೊಲೀಸರು ತೀವ್ರ ಹುಡುಕಾಟ ನಡೆಸ್ತಿದ್ದಾರೆ. ಗುಡ್ಡು ಮುಸ್ಲಿಂಗಾಗಿ  ಬೆಂಗಳೂರು ಸೇರಿ ಹಲವಡೆ ಶೋಧ ಮುಂದುವರಿಸಲಾಗಿದೆ.

    First published: