ಕಾಡಂಚಿನ ಗ್ರಾಮಕ್ಕೆ ಬಂದ ತಾಯಿಯಿಂದ ಬೇರ್ಪಟ್ಟ ಮರಿಆನೆ; ಗ್ರಾಮಸ್ಥರಿಂದ ಆರೈಕೆ

ಜಿಲ್ಲೆಯ ಹುಣಸೂರಿನ ನಾಗರಹೊಳೆ ಅರಣ್ಯದಂಚಿನ ಭರತವಾಡಿ ಗ್ರಾಮದಲ್ಲಿ ಒಂದು ತಿಂಗಳ ಗಂಡು ಆನೆಮರಿಯೊಂದು ಪ್ರತ್ಯಕ್ಷವಾಗಿದೆ. ಗ್ರಾಮಕ್ಕೆ ಬಂದು ಮರಿ ಘೀಳುಡುತ್ತಿದ್ದು, ಇದನ್ನು ಕಂಡು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದರು. 

ಮರಿ ಆನೆ

ಮರಿ ಆನೆ

  • Share this:
ಮೈಸೂರು (ಫೆ.6): ತಾಯಿಯಿಂದ ಬೇರ್ಪಟ್ಟ ಆನೆಮರಿಯೊಂದು ಕಂಗಲಾಗಿ ಕಾಡಂಚಿನ ಗ್ರಾಮಕ್ಕೆ ಬಂದಿದ್ದು, ಅದನ್ನು ಗ್ರಾಮಸ್ಥರು ಆರೈಕೆ ಮಾಡಿದ್ದಾರೆ. 

ಜಿಲ್ಲೆಯ ಹುಣಸೂರಿನ ನಾಗರಹೊಳೆ ಅರಣ್ಯದಂಚಿನ ಭರತವಾಡಿ ಗ್ರಾಮದಲ್ಲಿ ಒಂದು ತಿಂಗಳ ಗಂಡು ಆನೆಮರಿಯೊಂದು ಪ್ರತ್ಯಕ್ಷವಾಗಿದೆ. ಗ್ರಾಮಕ್ಕೆ ಬಂದು ಮರಿ ಘೀಳುಡುತ್ತಿದ್ದು, ಇದನ್ನು ಕಂಡು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದರು.

ಒಂದೇ ಸಮನೆ ಆನೆ ಘೀಳುತ್ತಿದ್ದ ಹಿನ್ನಲೆ, ತಾಯಿಗೆ ಅರಸಿ ಮರಿ ಬಂದಿದೆ ಎಂದ ತಿಳಿದ ಗ್ರಾಮಸ್ಥರು ಅದಕ್ಕೆ ಆಹಾರ ನೀಡಲು ಮುಂದಾದರು. ಅಲ್ಲದೇ ಈ ಕುರಿತು ಅರಣ್ಯ ಸಿಬ್ಬಂದಿಗೂ ಮಾಹಿತಿ ನೀಡಿದರು.ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಗಳು ಆನೆಮರಿಯ ತಾಯಿಯನ್ನು ಹುಡುಕುವ ಪ್ರಯತ್ನ ನಡೆಸಿದರು. ಅರಣ್ಯದ ಸುತ್ತಲೂ ತಾಯಿ ಆನೆಗೆ ಹುಡುಕಿದ ಅವರು, ಬಳಿಕ ಮರಿಯನ್ನು ವೀರನಹೊಸಹಳ್ಳಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದರು.

ಇದನ್ನು ಓದಿ: ಮದುವೆಗೆ ಮುನ್ನ ಹಾಸನದಲ್ಲಿ ವರ ನಾಪತ್ತೆ; ಚಾಮರಾಜನಗರದಲ್ಲಿ ವಧು ಕಣ್ಮರೆ

ತಾತ್ಕಲಿಕವಾಗಿ ಮರಿಯನ್ನು ಅರಣ್ಯದಲ್ಲಿ ಬಿಡಲಾಗಿದ್ದು, ಮರಿಯ ತಾಯಿಯನ್ನು ಹುಡುಕಿ ಅದರ ಮಡಿಲು ಸೇರಿಸುವ ಯತ್ನ ಮಾಡಲಾಗುವುದು ಎಂದು ತಿಳಿಸಿದರು.
First published: