• Home
  • »
  • News
  • »
  • state
  • »
  • Elephant: ಚಿಕಿತ್ಸೆ ಪಡೆಯುತ್ತಿದ್ದಆನೆ ಮರಿ ತಾಯಿ ಜೊತೆ ನಾಪತ್ತೆ

Elephant: ಚಿಕಿತ್ಸೆ ಪಡೆಯುತ್ತಿದ್ದಆನೆ ಮರಿ ತಾಯಿ ಜೊತೆ ನಾಪತ್ತೆ

ಆನೆ

ಆನೆ

ಮರಿಯಾನೆಯ ಸೊಂಡಿಲು ಮತ್ತು ಬಾಲದ ಭಾಗದಲ್ಲಿನ ಗಾಯ ಉಂಟಾಗಿತ್ತು. ನಾಗರಹೊಳೆ ವನ್ಯಜೀವಿ ವಿಭಾಗದ ಪಶು ವೈದ್ಯರು ನೀಡುತ್ತಿದ್ದ ಆನೆ ಮರಿ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿತ್ತು.

  • News18 Kannada
  • Last Updated :
  • Karnataka, India
  • Share this:

ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ (Nagarhole National Park) ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಗಾಯಗೊಂಡಿದ್ದ ಆನೆಮರಿ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಪತ್ರ ಬರೆದಿದ್ದರು. ರಾಹುಲ್ ಗಾಂಧಿ ಅವರ ಪತ್ರಕ್ಕೆ ಸ್ಪಂದಿಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿ, ಆನೆ ಮರಿಗೆ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸಿಎಂ ಸೂಚನೆ ಮೇರೆಗೆ ಅಧಿಕಾರಿಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿದ್ದ ತಾಯಿ ಜೊತೆಯಲ್ಲಿದ್ದ ಆನೆ ಮರಿಯನ್ನು ಪತ್ತೆ ಮಾಡಿದ್ದರು. ಅಕ್ಟೋಬರ್​ 6ರಿಂದ ಗಾಯಗೊಂಡಿದ್ದ ಆನೆ ಮರಿಗೆ ಚಿಕಿತ್ಸೆ (Treatment) ನೀಡಲಾಗುತ್ತಿತ್ತು. ಮರಿಯಾನೆಯ ಸೊಂಡಿಲು ಮತ್ತು ಬಾಲದ ಭಾಗದಲ್ಲಿ ಗಾಯ ಉಂಟಾಗಿತ್ತು. ನಾಗರಹೊಳೆ ವನ್ಯಜೀವಿ ವಿಭಾಗದ ಪಶು ವೈದ್ಯರು ನೀಡುತ್ತಿದ್ದ ಆನೆ ಮರಿ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿತ್ತು.


ಸಿಬ್ಬಂದಿ ಸಹ ಆನೆ ಮತ್ತು ಮರಿ ಮೇಲೆ ಕಣ್ಗಾವಲು ಇರಿಸಿದ್ರು. ಆದ್ರೆ ಕಳೆದ ಎರಡು ದಿನಗಳಿಂದ ತಾಯಿ ಮತ್ತು ಮರಿ ಆನೆ ಕಾಣುತ್ತಿಲ್ಲ. ಮರಿಯಾನೆ ತಾಯಿ ಜೊತೆ ಮತ್ತೆ ಅರಣ್ಯದೊಳಗೆ ಹೋಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.


ರಾಹುಲ್ ಗಾಂಧಿ ಬರೆದ ಪತ್ರದಲ್ಲೇನಿತ್ತು?


ರಾಹುಲ್​ ಗಾಂಧಿ ಸಫಾರಿಗೆ ತೆರಳಿದ್ದ ವೇಳೆ ತಾಯಿಯ ಜತೆಗಿದ್ದ ಆನೆ ಮರಿಯೊಂದು ತೀವ್ರವಾಗಿ ಗಾಯಗೊಂಡಿರುವುದನ್ನು ಕಂಡಿದ್ದರು. ಆನೆ ಗಾಯಗೊಂಡು ನರಳಾಡುತ್ತಿತ್ತು. ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದು ಮಾಹಿತಿ ನೀಡಿದ್ದರು.


ಆನೆ ಮರಿಗೆ ಚಿಕಿತ್ಸೆ ನೀಡಿ, ಅದನ್ನು ರಕ್ಷಿಸುವ ವಿಚಾರದಲ್ಲಿ ರಾಜಕೀಯ ಗಡಿಗಳನ್ನು ಮೀರಿ ನಾನು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಸರಿಯಾದ ಚಿಕಿತ್ಸೆ ಲಭಿಸಿದರೆ ಆ ಮರಿಯು ಜೀವಂತವಾಗಿ ಉಳಿಯುತ್ತದೆ ಎನ್ನುವ ವಿಶ್ವಾಸವಿದೆ. ಈ ಆನೆ ಮರಿಯ ಜೀವ ಉಳಿಸಲು ನೀವು ಸಕಾಲಕ್ಕೆ ನೆರವು ನೀಡುತ್ತೀರಿ ಎಂಬ ಭರವಸೆ ಇದೆ ಎಂದು ರಾಹುಲ್‌ ಪತ್ರದಲ್ಲಿ ಉಲ್ಲೇಖಿಸಿದ್ದರು.


bharat jodo yatra reaches bellary karnataka mrq
ರಾಹುಲ್ ಗಾಂಧಿ


ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ


ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು ಎಂಬ ಕೂಗು ಜೋರಾಗಿದೆ ಕೇಳಿ ಬರ್ತಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿ ನಿನ್ನೆ ಮಾತನಾಡಿದ್ದು, ಮೀಸಲಾತಿ ಕೇಳೋದ್ರಲ್ಲಿ ತಪ್ಪಿಲ್ಲ, ಸುಪ್ರೀಂಕೋರ್ಟ್​ನಿಂದ ಬೇರೆ ಬೇರೆ ತೀರ್ಪುಗಳಿವೆ. ಆಯೋಗಗಳ ವರದಿ ಆಧರಿಸಿ ಮೀಸಲಾತಿ ನೀಡಬೇಕಿದೆ ಅಂತ ಹೇಳಿದ್ದಾರೆ.


ಇನ್ನು ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸುವುದು ನಮ್ಮ ಹೊಣೆಯಾಗಿದೆ. ಸಮಯ ಬಂದರೆ ನ್ಯಾಯದ ತಕ್ಕಡಿ ಹಿಡಿದು ಹೋಗುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಹೇಳಿದ್ದಾರೆ.


ಇದನ್ನೂ ಓದಿ: Honour Killing: ಇಬ್ಬರನ್ನ ಒಂದು ಮಾಡ್ತೀವಿ ಬನ್ನಿ ಅಂತ ಕರೆಸಿ ಕೊಲೆ; ಬಾಗಲಕೋಟೆಯಲ್ಲಿ ಮರ್ಯಾದಾ ಹತ್ಯೆ

 ಅ.21ಕ್ಕೆ ಮತ್ತೆ ಜೋಡೋ ಮರು ಪ್ರವೇಶ


ಅಕ್ಟೋಬರ್​ 21 ರಂದು ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಭಾರತ್​ ಜೋಡೋ ಯಾತ್ರೆ ಆಗಮಿಸಲಿದೆ. ಆಂಧ್ರಪ್ರದೇಶದ ಮಂತ್ರಾಲಯದ ಮೂಲಕ ರಾಯಚೂರಿಗೆ ಆಗಮಿಸಲಿದ್ದು, ಬೆಳಗ್ಗೆ 7.30 ತುಂಗಭದ್ರಾ ಬ್ರಿಡ್ಜ್‌ ಬಳಿ ರಾಹುಲ್ ಗಾಂಧಿಗೆ ಸ್ವಾಗತ ಕೋರಲು ತಯಾರಿ ಮಾಡಿಕೊಳ್ಳಲಾಗಿದೆ.
Bharat Jodo yatra 17 day in karnataka mrq
ಭಾರತ್ ಜೋಡೋ ಯಾತ್ರೆ
ಬ್ರಿಡ್ಜ್​​ನಿಂದ ಗಿಲ್ಲೆಸಗೂರುವರೆಗೂ ರಾಹುಲ್ ಗಾಂಧಿ ಪಾದಯಾತ್ರೆ ನಡೆಯಲಿದೆ. ಗಿಲ್ಲೆಸಗೂರಿನಲ್ಲಿ 4 ಗಂಟೆಗೆವರೆಗೂ ರೈತರು, ಕಾರ್ಮಿಕರು ಜೊತೆ ಸಂವಾದ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಮತ್ತೆ ಶುರುವಾಗಲಿರುವ ಪಾದಯಾತ್ರೆ ಯರಗೇರಾ ತಲುಪಲಿದ್ದು, ವಾಲ್ಮೀಕಿ ವೃತ್ತದಲ್ಲಿ ಜನರನ್ನು ಉದ್ದೇಶಿಸಿ ರಾಹುಲ್ ಭಾಷಣ ಮಾಡಲಿದ್ದಾರೆ.


‘ಮೀಸಲಾತಿ ಸುಗ್ರೀವಾಜ್ಞೆ’ಗೆ ಸತ್ಯಾಗ್ರಹ


SC, ST ಮೀಸಲಾತಿಯನ್ನು ಹೆಚ್ಚಳ ಮಾಡ್ತೇವೆ ಅಂತಾ ರಾಜ್ಯ ಸರ್ಕಾರ ಹೇಳಿದೆ. ಆದರೆ ಸುಗ್ರೀವಾಜ್ಞೆ ಹೊರಡಿಸಿ ಮೀಸಲಾತಿ ಕೊಡಬೇಕು ಅಂತಾ ಆಗ್ರಹಿಸಿ ಧರಣಿ ಸತ್ಯಾಗ್ರಹ ಮುಂದುವರಿಸಿದ್ದಾರೆ ಸ್ವಾಮೀಜಿ.


ಇದನ್ನೂ ಓದಿ:  Raju Gowda: ರಾಹುಲ್ ಗಾಂಧಿ ಫ್ಲಾಪ್ ಲೀಡರ್! ನಾನು ಸಚಿವ ಸ್ಥಾನ ಆಕಾಂಕ್ಷಿಯಲ್ಲ ಎಂದ್ರು ರಾಜುಗೌಡ

 =ನ್ಯೂಸ್ 18 ಕನ್ನಡದ ಜೊತೆಗೆ ಮಾತನಾಡಿರುವ ಪ್ರಸನ್ನಾನಂದಪುರಿ ಸ್ವಾಮೀಜಿ, ಸರ್ಕಾರ ಕೊಟ್ಟಿರುವ ಭರವಸೆ ಈಡೇರಿಸುತ್ತದೆ. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.

Published by:Mahmadrafik K
First published: