Yadgir: ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವು: ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪ

ತಾಯಿ ಹೊಟ್ಟೆಯಲ್ಲಿ ಮಗು ಮೃತ ಪಟ್ಟಿದ್ದರೂ ವೈದ್ಯರು ಹೊಟ್ಟೆಯಲ್ಲಿರುವ ಮಗುವನ್ನು ತೆಗೆಯದೇ ನಿಷ್ಕಾಳಜಿ ತೋರಿದ್ದಾರೆ. ಸಂಗೀತಾ ನರಳಾಡಿದರು ಹೊಟ್ಟೆಯಿಂದ ಮಗುವನ್ನು ತೆಗೆಯುವ ಕೆಲಸ ಮಾಡಿಲ್ಲ.

ಯಾದಗಿರಿ ಜಿಲ್ಲಾಸ್ಪತ್ರೆ

ಯಾದಗಿರಿ ಜಿಲ್ಲಾಸ್ಪತ್ರೆ

  • Share this:
ಯಾದಗಿರಿ: ರೋಗಿಗಳ (Patients) ಪಾಲಿಗೆ ದೇವರಾಗುವ ವೈದ್ಯರೇ (Doctors) ಇಲ್ಲಿ ನಿರ್ಲಕ್ಷ್ಯ ತೋರಿರುವ  ಆರೋಪ ಕೇಳಿ ಬರುತ್ತಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ (Doctors Negligence) ಗರ್ಭದಲ್ಲಿಯೇ ಮಗು (Baby Died in Mother Womb) ಮೃತಪಟ್ಟಿದೆ. ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ವೈದ್ಯರು ಸರಿಯಾಗಿ ಗರ್ಭಿಣಿ ಚಿಕಿತ್ಸೆ ನೀಡಿ ಸಿಜೆರಿನ್ ಮೂಲಕ ಹೆರಿಗೆ ಮಾಡಿಸುವ ಕಾರ್ಯ ಮಾಡದೆ ನಿಷ್ಕಾಳಜಿ ತೋರಿದ ಹಿನ್ನೆಲೆ ಹೊಟ್ಟೆಯಲ್ಲಿಯೇ ಮಗು ಮೃತಪಟ್ಟಿದೆ. ಯಾದಗಿರಿ ತಾಲೂಕಿನ ಹೊಸಹಳ್ಳಿ ( ಆರ್) ತಾಂಡಾದ ಗರ್ಭಿಣಿ ಸಂಗೀತಾಗೆ ಹೆರಿಗೆ ಮಾಡಿಸಲು ನಾಲ್ಕು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಗರ್ಭಿಣಿಗೆ ಸರಿಯಾಗಿ ವೈದ್ಯಕೀಯ ತಪಾಸಣೆ ಮಾಡಿ ಸಿಜೆರಿನ್ ಮೂಲಕ ಹೆರಿಗೆ ಮಾಡಿಸಬೇಕಾದ  ವೈದ್ಯರು ಹೆರಿಗೆ ಮಾಡದೇ ನಿಷ್ಕಾಳಜಿ  ತೋರಿರುವ ಆರೋಪ ಕೇಳಿ ಬಂದಿದೆ. 

ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವು ಆರೋಪ 

ಬಡವರು ಸರಕಾರಿ ಆಸ್ಪತ್ರೆ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ವೈದ್ಯರ ನಿರ್ಲಕ್ಷ್ಯತನಕ್ಕೆ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.ಸಂಗೀತಾ ಜಿಲ್ಲಾಸ್ಪತ್ರೆಗೆ ಗೆ ದಾಖಲಾಗಿ ಎರಡು ದಿನಗಳ ನಂತರ ನಿನ್ನೆ ಸಿಜೆರಿನ್ ಮಾಡಲು ವೈದ್ಯರು ಮುಂದಾಗಿದರು. ಈ ವೇಳೆ ಮಗು ಹೊಟ್ಟೆಯಲ್ಲಿ ಮೃತಪಟ್ಟಿದ್ದು ಗೊತ್ತಾಗಿದೆ. ವೈದ್ಯರು ಸಂಗೀತಾರ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ತಾಯಿ ಹೊಟ್ಟೆಯಲ್ಲಿ ಮಗು ಮೃತ ಪಟ್ಟಿದ್ದರೂ ವೈದ್ಯರು ಹೊಟ್ಟೆಯಲ್ಲಿರುವ ಮಗುವನ್ನು ತೆಗೆಯದೇ ನಿಷ್ಕಾಳಜಿ ತೋರಿದ್ದಾರೆ. ಸಂಗೀತಾ ನರಳಾಡಿದರು ಹೊಟ್ಟೆಯಿಂದ ಮಗುವನ್ನು ತೆಗೆಯುವ ಕೆಲಸ ಮಾಡಿಲ್ಲ.ಆಸ್ಪತ್ರೆಯಲ್ಲಿ ಗರ್ಭಿಣಿ ನರಳಾಡಿದರು ವೈದ್ಯರು ಮಾತ್ರ ಬೇಗ ಮಗುವನ್ನು ತೆಗೆದಿಲ್ಲ.ಇದರಿಂದ ಪೋಷಕರು ವೈದ್ಯರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ .ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಮೃತಪಟ್ಟಿದ್ದೆ ಎಂದು ಸಂಗೀತಾ ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ: Bengaluru: ಕರೆಂಟ್ ಶಾಕ್​​ಗೆ ತುತ್ತಾದ ಅಪ್ಪನ ಬಳಿ ಓಡಿ ಬಂದ ಬಾಲಕ.. ವಿಧಿಯಾಟಕ್ಕೆ ಇಬ್ಬರೂ ಬಲಿ!

ಈ ಬಗ್ಗೆ ಸಂಗೀತಾ ಸಂಬಂಧಿ ಮೋಹನ್ ಮಾತನಾಡಿ, ಸಂಗೀತಾಗೆ ದವಖಾನೆಗೆ ದಾಖಲಿಸಿ ನಾಲ್ಕು ದಿನಾವಾದರು ವೈದ್ಯರು ಸರಿಯಾಗಿ ನೋಡಿಲ್ಲ‌.ಹೊಟ್ಟೆಯಲ್ಲಿ ಮಗು ಸತ್ತಾಗ ನೋಡಿದ್ದಾರೆ.ಹೊಟ್ಟೆಯಲ್ಲಿ ಮೃತಪಟ್ಟ ಮಗು ಬೇಗ ತೆಗೆಯಬೇಕಾಗಿತ್ತು ಆದರೆ, ಸಂಗೀತಾ ನರಳಾಡಿದರು ವೈದ್ಯರು ನೋಡಿಲ್ಲ.ನಮ್ಮಲ್ಲಿ ರೊಕ್ಕಾ ಇಲ್ಲಾ ನಾವು ಬಡವರು ಬಡವರು ಆಸ್ಪತ್ರೆಗೆ ಬಂದ್ರೆ ನಮಗೆ ಯಾಕೆ ಇಂತಹ ನಿರ್ಲಕ್ಷ್ಯತನ ಮಾಡುತ್ತಾರೆಂದು ಮೋಹನ್ ಕಣ್ಣೀರು ಹಾಕಿದನು.

ಆಸ್ಪತ್ರೆ ಮುಂದೆ ಪೋಷಕರ ಅಕ್ರೋಶ...!

ವೈದ್ಯರ ನಿರ್ಲಕ್ಷ್ಯತನದಿಂದ ಮಗು ಸತ್ತ ಹಿನ್ನೆಲೆ ಸಂಗೀತಾ ಪೋಷಕರು ಆಸ್ಪತ್ರೆ ಮುಂದೆ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಬಡವರಿಗೆ ಯಾಕೆ ಸರಕಾರಿ ವೈದ್ಯರು ಸರಿಯಾಗಿ ನೋಡಲ್ಲ.ನಮ್ಮ ಹತ್ತಿರ ಹಣ ಇದ್ದರೆ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದೆವು ಆದರೆ, ಬಡವರಿಗೆ ಆಸ್ಪತ್ರೆಯಲ್ಲಿ ಸರಿಯಾಗಿ ನೋಡಬೇಕು.ತಪ್ಪು ಮಾಡಿದ ವೈದ್ಯರ ಮೇಲೆ ಕ್ರಮಕೈಗೊಳ್ಳಬೇಕೆಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಜಿಲ್ಲಾಶಸ್ತ್ರ ಚಿಕಿತ್ಸಿಕ ಡಾ.ಸಂಜೀವ್ ಕುಮಾರ ರಾಯಚೂರುಕರ್ ಅವರನ್ನು ಕೇಳಿದರೆ ಸಂಗೀತಾ ರೋಗಿಯ ಸಂಬಂಧಪಟ್ಟಂತೆಆಸ್ಪತ್ರೆಯಲ್ಲಿ  ವೈದ್ಯರು ನಿರ್ಲಕ್ಷ್ಯ ಮಾಡಿಲ್ಲ.ಆದ್ರು.ಈ ಬಗ್ಗೆ ನಾನು ವಿಚಾರಣೆ ಮಾಡಿ ಕ್ರಮವಹಿಸಲಾಗುತ್ತದೆ ಎಂದಿದ್ದಾರೆ.

ಬೆಳಗಾವಿಯಲ್ಲಿ ಲಸಿಕೆ ಪಡೆದ ಮೂವರು ಪುಟ್ಟ ಕಂದಮ್ಮಗಳು ನಿಗೂಢವಾಗಿ ಸಾವನ್ನಪ್ಪಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿಯ ಪ್ರಮಾದವೇ ಮಕ್ಕಳ ಸಾವಿಗೆ ಕಾರಣ ಅಂತಾ ಗ್ರಾಮಸ್ಥರು ಆರೋಪಿಸಿದ್ದು, ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಹೆತ್ತವರ ಅಕ್ರಂದನ ಮುಗಿಲು ಮುಟ್ಟಿತು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ ಪವಿತ್ರಾ ಹುಲಗೂರ್ 13 ತಿಂಗಳು, ಮಧು ಉಮೇಶ್ ಕುರಗುಂದಿ 14 ತಿಂಗಳ ಮಗು ಹಾಗೂ ರಾಮದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಒಂದೂವರೆ ವರ್ಷದ ಚೇತನ ಸಾವಿಗೀಡಾದ ಮಕ್ಕಳಾಗಿದ್ದಾರೆ.
Published by:Kavya V
First published: