ಎಸ್​​ಟಿ ಪಟ್ಟಿಗೆ ಕೋಳಿ ಸಮಾಜ; ಉಮೇಶ್ ಜಾಧವ್ ಕೇಂದ್ರ ಮಂತ್ರಿ: ಚಿಂಚನಸೂರ ಭವಿಷ್ಯ

ಕಾಂಗ್ರೆಸ್ ಪಕ್ಷ ಏಳು ದಶಕಗಳಿಂದ ಕೋಳಿ ಸಮಾಜವನ್ನು ನಿರ್ಲಕ್ಷಿಸಿಕೊಂಡು ಬಂದಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮೂರೇ ತಿಂಗಳಲ್ಲಿ ಕೋಳಿ ಸಮುದಾಯವನ್ನು ಎಸ್​ಟಿ ಪಟ್ಟಿಗೆ ಸೇರಿಸುತ್ತೇನೆ ಎಂದು ಚಿಂಚನಸೂರ ಹೇಳಿದ್ದಾರೆ.

news18
Updated:May 17, 2019, 10:10 PM IST
ಎಸ್​​ಟಿ ಪಟ್ಟಿಗೆ ಕೋಳಿ ಸಮಾಜ; ಉಮೇಶ್ ಜಾಧವ್ ಕೇಂದ್ರ ಮಂತ್ರಿ: ಚಿಂಚನಸೂರ ಭವಿಷ್ಯ
ಬಾಬುರಾವ ಚಿಂಚನಸೂರ
  • News18
  • Last Updated: May 17, 2019, 10:10 PM IST
  • Share this:
ಕಲಬುರ್ಗಿ(ಮೇ 17): ಕೋಳಿ ಸಮಾಜವನ್ನು ಎಸ್​ಟಿ ಪಟ್ಟಿಗೆ ಸೇರಿಸಲು ತಾನು ಭೀಷ್ಮ ಪ್ರತಿಜ್ಞೆ ಮಾಡಿರುವುದಾಗಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿದ್ದಾರೆ. ಕೋಳಿ ಸಮುದಾಯವನ್ನು ಎಸ್​ಟಿ ಪಟ್ಟಿಗೆ ಸೇರಿಸುವ ಏಕೈಕ ಬೇಡಿಕೆ ಮುಂದಿಟ್ಟುಕೊಂಡೇ ತಾನು ಬಿಜೆಪಿ ಸೇರಿದ್ದಾಗಿ ಹೇಳಿರುವ ಬಿಜೆಪಿ ನಾಯಕ ಚಿಂಚನಸೂರ, ತಮ್ಮ ಕೊನೆಯ ಉಸಿರು ಇರುವವರೆಗೂ ಕೋಳಿ ಸಮಾಜದ ಏಳಿಗಾಗಿ ದುಡಿಯುತ್ತೇನೆ ಎಂದು ಪಣತೊಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷ ಕಳೆದ 70 ವರ್ಷಗಳಿಂದ ಕೋಳಿ ಸಮುದಾಯವನ್ನು ನಿರ್ಲಕ್ಷಿಸಿದೆ. ಮಲ್ಲಿಕಾರ್ಜುನ ಖರ್ಗೆ 50 ವರ್ಷ ಅಧಿಕಾರದಲ್ಲಿದ್ದರೂ ಕೋಳಿ ಸಮಾಜವನ್ನು ಬೆಳೆಸಲಿಲ್ಲ. ನಮ್ಮ ಸಮಾಜಕ್ಕೆ ಎಸ್​ಟಿ ಸ್ಥಾನಮಾನ ತಪ್ಪಲು ಖರ್ಗೆಯೇ ಕಾರಣ. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆದ ಬಳಿಕ ಮೂರು ತಿಂಗಳಲ್ಲಿ ಕೋಳಿ ಸಮಾಜಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ಸಿಗಲಿದೆ. ಆ ಬಳಿಕ ನಮ್ಮ ಸಮಾಜದವರು ಪ್ರತೀ ದಿನ ದೀಪಾವಳಿ ಆಚರಿಸುವಂತಾಗುತ್ತದೆ ಎಂದು ಮಾಜಿ ಕಾಂಗ್ರೆಸ್ ಮುಖಂಡರೂ ಆದ ಬಾಬುರಾವ ಚಿಂಚನಸೂರ ಆಶ್ವಾಸನೆ ನೀಡಿದ್ದಾರೆ.

ಇದನ್ನೂ ಓದಿ: ಬಾಯಿ ಚಪಲಕ್ಕೆ ಮಾತನಾಡಬಾರದು: ಅನಂತಕುಮಾರ್ ಹೆಗಡೆ, ಖರ್ಗೆ, ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಕಿಡಿ

ಚಿಂಚೋಳಿಯಲ್ಲಿ ಕೋಳಿ ಮತಸ್ಥರು ಕಾಂಗ್ರೆಸ್ಸಿಗೆ ಒಂದೂ ಮತ ಹಾಕುವುದಿಲ್ಲ. ಅವರೆಲ್ಲರ ಮತಗಳು ಬಿಜೆಪಿಗೆ ಬರಲಿವೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು, ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಡಾ| ಉಮೇಶ್ ಜಾಧವ್ ಅವರು ಗೆದ್ದು ಮುಂದೆ ಕೇಂದ್ರ ಸಚಿವರಾಗಲಿದ್ದಾರೆ ಎಂದು ಚಿಂಚನಸೂರ ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ, ತನಗೆ ವಯಸ್ಸಾಗಿದ್ದು ಚಿಕಿತ್ಸೆಗೆ ವೈದ್ಯರ ಅಗತ್ಯವಿದೆ. ಹೀಗಾಗಿ ತಾನು ಡಾ| ಅವಿನಾಶ್ ಜಾಧವ್ ಅವರನ್ನು ದತ್ತು ಪಡೆದಿದ್ದೇನೆ ಎಂದು ಉಮೇಶ್ ಜಾಧವ್ ಮಗ ಹಾಗೂ ಚಿಂಚೋಳಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಗ್ಗೆ ಚಿಂಚನಸೂರ ತಮಾಷೆ ಮಾಡಿದ್ದಾರೆ.

(ವರದಿ: ಮಹೇಶ್ ವಿ. ಶಟಗಾರ)

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading