Pramoda Devi Wadiyar: ಬೇಬಿ ಬೆಟ್ಟ ವಿವಾದ, ಸರ್ಕಾರದ ವಿರುದ್ಧ 'ರಾಜಮಾತೆ' ಗರಂ; ಯಾಕಿಷ್ಟು ಹಿಂಸೆ ಕೊಡುತ್ತಿದ್ದೀರಾ?

ಕೆಆರ್ ಎಸ್ ಜಲಾಶಯದ ದೃಷ್ಟಿಯಿಂದ ಅಲ್ಲಿ ಗಣಿಗಾರಿಕೆಗೂ ಅವಕಾಶ ಕೊಡಬಾರದು.  ಅಲ್ಲಿ ಟ್ರಯಲ್ ಬ್ಲಾಸ್ಟ್ ಮಾಡೋದು ಕೂಡ ಸರಿಯಲ್ಲ. ಯಾಕಿಷ್ಟು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದು ರಾಜಮಾತೆ ಪ್ರಮೋದದೇವಿ ಒಡೆಯರ್ ಅಳಲು ತೊಡಿಕೊಂಡಿದ್ದಾರೆ.

ಪ್ರಮೋದಾದೇವಿ ಒಡೆಯರ್

ಪ್ರಮೋದಾದೇವಿ ಒಡೆಯರ್

  • Share this:
ಮೈಸೂರು (ಜು.26): ಮಂಡ್ಯದ ಬೇಬಿ ಬೆಟ್ಟದ ವಿವಾದಕ್ಕೆ ಸಂಬಂಧಿಸಿದಂತೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ (Pramoda Devi Wadiyar) ಪ್ರತಿಕ್ರಿಯಿಸಿದ್ದಾರೆ. 1950 ರ ಕಾಲದಿಂದ ಆ ಬೆಟ್ಟದ 1,650 ಎಕರೆ ಜಾಗ ನಮ್ಮದು, ಭಾರತ ಸರಕಾರದ ಜೊತೆ ಮೈಸೂರು ಸಂಸ್ಥಾನ ಮಾಡಿಕೊಂಡ ಆಸ್ತಿ ಹಂಚಿಕೆಯ ಪತ್ರದಲ್ಲಿ ಬೇಬಿ ಬೆಟ್ಟ (Babi Betta) ಇದೆ. ಇದು ಖಾಸಗಿ ಆಸ್ತಿ. ಇದರಲ್ಲಿ ಟ್ರಯಲ್ ಬ್ಲಾಸ್ಟ್ (Trail Blast) ಮಾಡೋದು ಸರಿಯಲ್ಲ. ಟ್ರಯಲ್ ಬ್ಲಾಸ್ಟ್​ಗೆ ತಜ್ಞರು ಸರಕಾರಿ ಜಾಗ (Government Space) ಗುರುತಿಸಿಕೊಳ್ಳಬೇಕು. ಬೇಬಿ ಬೆಟ್ಟದ ಜಾಗವನ್ನು ಉದ್ದೇಶ ಪೂರ್ವಕವಾಗಿ ಬಿ ಖರಬ್ ಪಟ್ಟಿಗೆ ಸೇರಿಸಲಾಗಿತ್ತು. ಹೀಗಾಗಿ ನಾನು ಆ ಜಾಗದ ವಿಚಾರದಲ್ಲಿ ನಾನು ಕೋರ್ಟ್​ಗೆ  ಹೋಗಿರಲಿಲ್ಲ. ಮೈಸೂರಿನ ಕುರುಬಾರಹಳ್ಳಿ ಬಿ ಖರಾಬ್ ಜಾಗದ ವಿವಾದ ಸುಪ್ರೀಂಕೋರ್ಟ್​ನಲ್ಲಿ ಅರಮನೆಗೆ ಜಯವಾಗಿದೆ.

ಇದು ನಮಗೆ ಸರಕಾರಗಳು ಕೊಡುತ್ತಿರುವ ಕಿರುಕುಳ

ಆ ತೀರ್ಪು ಈ ಬೆಟ್ಟದ ಜಾಗಕ್ಕೂ ಅನ್ವಯ. ಆ ಜಾಗ ನಮ್ಮ ವ್ಯಾಪ್ತಿಗೆ ಬಂದರೆ ನಾನು ಅಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲ್ಲ. ಸರಕಾರಗಳು ರಾಜ ಮನೆತನಗಳನ್ನು ಸರಿಯಾಗಿ ನಡೆಸಿ ಕೊಳ್ಳುತ್ತಿಲ್ಲ. ನಾವೇನೂ ಯಾರೋದು ಆಸ್ತಿ ಕಬಳಿಸಲು ಹೊರಟ್ಟಿದ್ದೇವೇ ಎಂಬ ರೀತಿ ಸರಕಾರಗಳು ಯೋಚಿಸುತ್ತಿವೆ. ಇದು ನಮಗೆ ಸರಕಾರಗಳು ಕೊಡುತ್ತಿರುವ ಕಿರುಕುಳ. ದೇಶದ ಬೇರೆ ಯಾವ ರಾಜಮನೆತನಗಳಿಗೂ ಆಸ್ತಿಯ ವಿಚಾರದಲ್ಲಿ ಅಲ್ಲಿನ ಸರಕಾರಗಳು ಇಷ್ಟು ತೊಂದರೆ ಕೊಟ್ಟಿಲ್ಲ. 10 ರೂಪಾಯಿ ಬೆಲೆ ಬಾಳುವುದನ್ನು 10 ಪೈಸೆಗೆ ತೆಗೆದು ಕೊಳ್ಳುವ ಮನಃಸ್ಥಿತಿ ಸರಕಾರ ಪ್ರದರ್ಶಿಸುತ್ತಿದೆ.

ಯಾಕಿಷ್ಟು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ

ಸರಕಾರಕ್ಕೆ ನಾನು ಧನ್ಯವಾದ ಹೇಳ್ತಿದ್ದಿ‌ನಿ. ಇವರಿಂದ ನನ್ನ ಕಾನೂನು ಜ್ಞಾನ ಹೆಚ್ಚಾಗಿದೆ. ಬೇಬಿ ಬೆಟ್ಟದ ವಿಚಾರದಲ್ಲಿ ಈಗ ಕಾನೂನು ತಜ್ಞರ ಜೊತೆ ಚರ್ಚಿಸಿ ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ. ನಾನು ಪ್ರತಿಭಟನೆ ಸ್ಥಳಕ್ಕೆ ಹೋಗುವುದಿಲ್ಲ.ಕೆಆರ್ ಎಸ್ ಜಲಾಶಯದ ದೃಷ್ಟಿಯಿಂದ ಅಲ್ಲಿ ಗಣಿಗಾರಿಕೆಗೂ ಅವಕಾಶ ಕೊಡಬಾರದು.  ಅಲ್ಲಿ ಟ್ರಯಲ್ ಬ್ಲಾಸ್ಟ್ ಮಾಡೋದು ಕೂಡ ಸರಿಯಲ್ಲ. ಯಾಕಿಷ್ಟು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದು ರಾಜಮಾತೆ ಪ್ರಮೋದದೇವಿ ಒಡೆಯರ್ ಅಳಲು ತೊಡಿಕೊಂಡಿದ್ದಾರೆ.

ಸರ್ಕಾರ ಮತ್ತು ರಾಜವಂಶದ ನಡುವೆ ಒಪ್ಪಂದ

ರಾಜ್ಯ ವಿಲೀನ ಸಂದರ್ಭದಲ್ಲಿ ಭಾರತ ಸರ್ಕಾರ ಮತ್ತು ರಾಜವಂಶದ ನಡುವೆ ಒಪ್ಪಂದ ಏರ್ಪಟ್ಟಿತ್ತು. ರಾಜ ಮನೆತನಕ್ಕೆ  ಒಂದಷ್ಟು ಖಾಸಗಿ ಆಸ್ತಿಯನ್ನು ಪಟ್ಟಿ ಮಾಡಿ ಇನ್ನುಳಿದ ಎಲ್ಲಾ ಆಸ್ತಿಗಳನ್ನು ದೇಶದೊಂದಿಗೆ ವಿಲೀನ ಮಾಡಿದರು. ಈ ಸಂಬಂಧ 1950ರಲ್ಲಿ ಕೇಂದ್ರ ಸರ್ಕಾರ ಮತ್ತು ರಾಜವಂಶಸ್ಥರ ನಡುವೆ ಒಪ್ಪಂದ ಏರ್ಪಟ್ಟಿದೆ. ಇದರ ಮುಂದುವರಿದ ಭಾಗವಾಗಿ 1951ರಲ್ಲಿ ಖಾಸಗಿ ಆಸ್ತಿಗಳ ಪಟ್ಟಿಯನ್ನು ಸರ್ಕಾರಿ ಆದೇಶದ ಮೂಲಕ ಖಚಿತ ಪಡಿಸಲಾಗಿದೆ.

ನಮ್ಮ ಅನುಮತಿ ಪಡೆಯದೆ ನಿರ್ಧಾರ 

ಯಾವುದು ನಮ್ಮ ಖಾಸಗಿ ಆಸ್ತಿ, ಯಾವುದು ಸರ್ಕಾರಿ ಆಸ್ತಿ ಎಂಬುದು ಅಧಿಕಾರ ನಡೆಸುವ ಎಲ್ಲರಿಗೂ ಗೊತ್ತಿದೆ. ಬೇಬಿ ಬೆಟ್ಟ ಸುತ್ತಲಿನ  1623ಎಕರೆ ನಮ್ಮ ಖಾಸಗಿ ಆಸ್ತಿ. ಅಧಿಕಾರಿಗಳು ಅದನ್ನ ಬಿ ಕರಾಬು ಎಂದು ಘೋಷಿಸಿದರು. ಅದರ ಪರಿಣಾಮವಾಗಿ ಗಾಣಿಗರಿಕೆ ಚಟುವಟಿಕೆ ಪ್ರಾರಂಭವಾಯಿತು. ಈಗ ಟ್ರಯಲ್ ಬ್ಲಾಸ್ಟ್ ಮಾಡಲು ಹೊರಟಿದ್ದಾರೆ. ನಮ್ಮ ಜಾಗದಲ್ಲಿ ಟ್ರಯಲ್ ಮಾಡುವಾಗ ಕನಿಷ್ಠ ನಮ್ಮ ಅನುಮತಿ ಪಡೆಯಬೇಕಿತ್ತು. ಎಲ್ಲಾ ಗೊತ್ತಿದ್ದು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಮೈಸೂರಿನ ಅರಮನೆಯಲ್ಲಿ ರಾಜಮಾತೆ ಪ್ರಮೋದ ದೇವಿ ಒಡೆಯರ್ ಹೇಳಿಕೆ.
Published by:Pavana HS
First published: