ರೈತ ವಿರೋಧಿ ಕಾಯ್ದೆ ಹಿಂಪಡೆಯದಿದ್ದರೆ ಚಳವಳಿ ಆರಂಭ: ಬಾಬಾಗೌಡ ಪಾಟೀಲ್​​ ಎಚ್ಚರಿಕೆ

ಚಳವಳಿಯಿಂದ ರೈತರು ಹಿಂದೆ ಸರಿಯುವ ಮಾತೇ ಇಲ್ಲ. ಕೇಂದ್ರ ಸರ್ಕಾರ ಸರ್ವಾಧಿಕಾರಿ ದೋರಣೆ ಪ್ರದರ್ಶಿಸುತ್ತಿದೆ. ರೈತರು ಏಕೆ ಮಾತುಕತೆಗೆ ಹೋಗಬೇಕು. ಇದು ಖಂಡನೀಯ.

ಬಾಬಾಗೌಡ ಪಾಟೀಲ್​​

ಬಾಬಾಗೌಡ ಪಾಟೀಲ್​​

  • Share this:
ಧಾರವಾಡ(ಡಿಸೆಂಬರ್​. 01): ದೆಹಲಿಯಲ್ಲಿ ರೈತರು ಚಳವಳಿ ನಡೆಸುತ್ತಿದ್ದರೂ, ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ. ರೈತ ವಿರೋಧಿ ಕಾನೂನು ವಾಪಸ್‌ಗೆ ಕೇಂದ್ರಕ್ಕೆ ಡಿಸೆಂಬರ್​ 3 ರವರಗೆ ಗಡುವು ನೀಡಲಾಗಿದೆ. ಡಿ.4 ರಿಂದಲೇ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಸಮಿತಿ ನೇತೃತ್ವದಲ್ಲಿ ಚಳುವಳಿ ನಡೆಸಲಿದೆ ಎಂದು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಎಚ್ಚರಿಸಿದರು. ಧಾರವಾಡದಲ್ಲಿ  ಮಾತನಾಡಿದ ಅವರು, ಚಳವಳಿಯಿಂದ ರೈತರು ಹಿಂದೆ ಸರಿಯುವ ಮಾತೇ ಇಲ್ಲ. ಕೇಂದ್ರ ಸರ್ಕಾರ ಸರ್ವಾಧಿಕಾರಿ ದೋರಣೆ ಪ್ರದರ್ಶಿಸುತ್ತಿದೆ. ರೈತರು ಏಕೆ ಮಾತುಕತೆಗೆ ಹೋಗಬೇಕು. ಇದು ಖಂಡನೀಯ. ಇಷ್ಟೆಲ್ಲ ಬೆಳವಣಿಗೆ ನಡೆದರೂ, ಕಂಡು ಕಾಣದಂತಿರುವ ಪ್ರಧಾನಿ ನರೇಂದ್ರ ಮೋದಿಯವರ ನಡೆಯು ನಾಚೀಗೇಡು ಎಂದರು. ಎಪಿಎಂಸಿ ಕಾಯ್ದೆ ತಂದಿದ್ದಾರೆ. ಇದರಲ್ಲಿ ಕೆಲವು ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ. ಪ್ರಧಾನ ಮಂತ್ರಿಗಳಿಗೆ ಕೃಷಿ ಮಾಡಿದ ಅನುಭವವೇ ಇಲ್ಲ. ರೈತರನ್ನು ಕಂಪನಿಗಳ ಕಾಲ ಕೆಳಗೆ ಹಾಕುವಂತೆ ಮಾಡಿದೆ. ಇದು ಈಸ್ಟ್ ಇಂಡಿಯಾ ಕಂಪನಿಗಳ ಹುನ್ನಾರವೆಂದು ಕೇಂದ್ರಕ್ಕೆ ತರಾಟೆ ತೆಗೆದುಕೊಂಡರು.

ಕೇಂದ್ರ ಸರ್ಕಾರ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಚಳವಳಿ ಮಾಡುವ ರೈತರಿಗೂ ಉಗ್ರರ ಪಟ್ಟ ಕಟ್ಟುವುದು ದುರಂತ. ರೈತರ ಬಗ್ಗೆ ಮಾತನಾಡುವಾಗ ಸರ್ಕಾರಗಳು ಬಹಳ ಎಚ್ಚರಿಕೆ ವಹಿಸಲಿ. ಅಧಿಕಾರ ಹಾಗೂ ಹಣದ ರಾಜಕೀಯಕ್ಕೆ ಕಾರ್ಪೊರೇಟ್ ಕಂಪೆನಿಗಳಿಗೆ ಮಣೆ ಹಾಕಿ, ರೈತರನ್ನು ಬೀದಿಗೆ ತಳ್ಳುತ್ತಿದೆ ಎಂದು ದೂರಿದರು.

ಕೇಂದ್ರ ಸರ್ಕಾರದಿಂದ ರೈತ ಚಳುವಳಿ ಹತ್ತಿಕ್ಕುವ ಹುನ್ನಾರ ನಡೆದಿದೆ. ಸರ್ಕಾರಕ್ಕೆ ಧೈರ್ಯ ಇದ್ದರೆ, ರೈತರನ್ನು ಜೈಲಿಗಟ್ಟಲಿ ನೋಡೋಣ ಎಂದು ಸವಾಲ ಹಾಕಿದ ಬಾಬಾಗೌಡ ಪಾಟೀಲ್​ ಅವರು, ಭಾರತದ ಎಲ್ಲ ವೆಸ್ಟ್ ಲ್ಯಾಂಡ್ ಖಾಸಗಿ ಕಂಪನಿಗಳಿಗೆ ಕೇಂದ್ರ ಸರ್ಕಾರ ಕೊಟ್ಟಿದೆ. ಐಟಿಸಿ ಕಂಪನಿಗೂ ಜಮೀನು ನೀಡಿದ್ದಾರೆ. ಇದು ಕಾರ್ಪೊರೇಟ್ ಕಂಪನಿ ಎಂದರು.

ದೇಶದ ಜನರ ಧಾರ್ಮಿಕ ಭಾವನೆಗಳನ್ನು ಶೋಷಿಸಿ, ಮೋದಿ ಪ್ರಯೋಗವೆಂದು ಬಿಂಬಿಸಲಾಗುತ್ತಿದೆ. ದೇವರ ಹೆಸರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ರಾಮನ ಪೂಜೆ ಮಾಡಬೇಡಿ ಎಂದಿಲ್ಲ. ಕೇವಲ ಸಂಸ್ಕೃತ ದೇವರಿಗೆ ಮನ್ನಣೆ ನೀಡುತ್ತಿರುವ ಕೇಂದ್ರಕ್ಕೆ ಬಸವಣ್ಣನ ಕಾಯಕದಿಂದ ಬದುಕು ರೈತರು ಕಾಣುತ್ತಿಲ್ಲವೇ ಪ್ರಶ್ನಿಸಿದರು.

ಇದನ್ನೂ ಓದಿ : ಗ್ರಾಮ ಪಂಚಾಯಿತಿಗಳಿಗೆ ವರ್ಷಕ್ಕೆ 1.5 ಕೋಟಿ ರೂ ನೇರ ಅನುದಾನ : ಡಿಸಿಎಂ ಅಶ್ವತ್ಹನಾರಾಯಣ

ದೇವರನ್ನು ಸಂಸತ್ತಿನಲ್ಲಿ ತರಬೇಡಿ. ಅವು ದೇವಸ್ಥಾನದಲ್ಲಿರಲಿ. ರೈತರನ್ನು ಹಾಗೂ ಗ್ರಾಹಕರನ್ನ ಸುಲಿಗೆ ಮಾಡಲಾಗುತಿದೆ. ದೆಹಲಿಯಲ್ಲಿ ರೈತರು ಸಾವನ್ನದ್ದರೆ. ಪ್ರಧಾನಮಂತ್ರಿ ಕಾಶಿಗೆ ಹೋಗಿ ಸಾಂಸ್ಕೃತಿಕ ಕಾರ್ಯಕ್ರಮ ನೋಡುತಿದ್ದಾರೆ. ಅವರಿಗೆ ಕಾರ್ಯಕ್ರಮ ನೋಡಲಿ. ಬೇಡ ಎನ್ನುವುದಿಲ್ಲ. ರೈತರ ಬಗ್ಗೆ ಯೋಚಿಸುವಂತೆ ಮನವಿ ಮಾಡಿದರು.

ಎಲ್ಲ ಮುಖ್ಯಮಂತ್ರಿಗಳ ಸಭೆ ಮಾಡಬೇಕಿತ್ತು. ರಾಜ್ಯಗಳನ್ನು ನಿರ್ಲಕ್ಷ್ಯ  ಮಾಡಿ ಕಾಯ್ದೆ ಜಾರಿಗೆ ತರಲಾಗಿದೆ. ಕರ್ನಾಟಕ ಅಶಕ್ತ ಸರ್ಕಾರ.  ಕೇಂದ್ರ ಸಚಿವ ಅಮಿತ್​ ಷಾ ಅವರಂತೆ ನಡೆವ ಸರ್ಕಾರ. ಡಿ. 3 ರೊಳಗೆ ರೈತ ವಿರೋಧಿ ಕಾಯ್ದೆ ಹಿಂಪಡೆಯದ್ದರೆ, ಕರ್ನಾಟಕದ ರೈತರು ದೆಹಲಿಯಲ್ಲಿ ನಡೆದ ಚಳುವಳಿಗೆ ಬೆಂಬಲಿಸಿ ಧಾರವಾಡದಲ್ಲಿ ಡಿ.4 ರಿಂದ ಚಳವಳಿ ಆರಂಭಿಸಲಿದೆ ಎಂದು ಎಚ್ಚರಿಸಿದರು.
Published by:G Hareeshkumar
First published: