ರಾಜಕೀಯ ಪಕ್ಷಗಳಿಗೆ ದೇಶದ ಬಗ್ಗೆ ಚಿಂತೆಯಿಲ್ಲ; ಯೋಗಗುರು ಬಾಬಾ ರಾಮ್​ದೇವ್​ ಬೇಸರ

ದೇಶದಲ್ಲಿ ಈಗ ರಾಜಕೀಯವಾಗಿ ಅನಿಶ್ಚಿತ ಭಾವನೆಯಿದೆ. ದೇಶಕ್ಕೆ ಈಗ ರಾಜಕೀಯ ಶಿಕ್ಷಣದ ಮೂಲಕ ಅರಿವು ಮೂಡಿಸುವುದು ಅಗತ್ಯವಾಗಿದೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಮಸ್ಯೆಗಳ ಮಧ್ಯೆಯೇ 2040ರೊಳಗೆ ಭಾರತವನ್ನು ಸದೃಢಗೊಳಿಸಬೇಕಿದೆ. ಜಾತಿ, ಧರ್ಮ, ರಾಜಕೀಯ ಅಸಹಿಷ್ಣುತೆಯಿಂದ ದೇಶದಲ್ಲಿ ಅಸ್ಥಿರತೆ ಎದುರಾಗಿದೆ. ಈ ಹಿನ್ನೆಲೆ ರಾಜಕೀಯ ಪಕ್ಷಗಳಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿಲ್ಲ-ಬಾಬಾ ರಾಮ್​ದೇವ್​

Latha CG | news18india
Updated:December 30, 2018, 2:18 PM IST
ರಾಜಕೀಯ ಪಕ್ಷಗಳಿಗೆ ದೇಶದ ಬಗ್ಗೆ ಚಿಂತೆಯಿಲ್ಲ; ಯೋಗಗುರು ಬಾಬಾ ರಾಮ್​ದೇವ್​ ಬೇಸರ
ಬಾಬಾ ರಾಮ್​ದೇವ್​​
Latha CG | news18india
Updated: December 30, 2018, 2:18 PM IST
ಮಹೇಶ ವಿ.ಶೆಟಗಾರ

ವಿಜಯಪುರ, (ಡಿ.30): ರಾಜಕೀಯ ಪಕ್ಷಗಳಿಗೆ ಅವರದೇ ಆದ ಹಿತಾಸಕ್ತಿಗಳಿವೆ. ಅವರಿಗೆ ದೇಶದ ಬಗ್ಗೆ ಚಿಂತೆಯಿಲ್ಲ. ಕೇವಲ‌ ಭಾರತ ಮಾತಾ ಘೋಷಣೆಯಿಂದ ಭಾರತ ವಿಶ್ವಗುರುವಾಗಲು ಸಾಧ್ಯವಿಲ್ಲ. ಜಾತಿಮುಕ್ತ ಭಾರತ ಅಗತ್ಯವಾಗಿದೆ. ಆದರೆ ರಾಜಕೀಯ ಪಕ್ಷಗಳಿಗೆ ಜಾತಿಮುಕ್ತ ಭಾರತ ಮಾಡುವ ಉದ್ದೇಶವಿಲ್ಲ ಎಂದು ಯೋಗಗುರು ಬಾಬಾ ರಾಮದೇವ್​ ಬೇಸರ ವ್ಯಕ್ತಪಡಿಸಿದರು.

ವಿಜಯಪುರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಈಗ ರಾಜಕೀಯವಾಗಿ ಅನಿಶ್ಚಿತ ಭಾವನೆಯಿದೆ. ದೇಶಕ್ಕೆ ಈಗ ರಾಜಕೀಯ ಶಿಕ್ಷಣದ ಮೂಲಕ ಅರಿವು ಮೂಡಿಸುವುದು ಅಗತ್ಯವಾಗಿದೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಮಸ್ಯೆಗಳ ಮಧ್ಯೆಯೇ 2040ರೊಳಗೆ ಭಾರತವನ್ನು ಸದೃಢಗೊಳಿಸಬೇಕಿದೆ. ಜಾತಿ, ಧರ್ಮ, ರಾಜಕೀಯ ಅಸಹಿಷ್ಣುತೆಯಿಂದ ದೇಶದಲ್ಲಿ ಅಸ್ಥಿರತೆ ಎದುರಾಗಿದೆ. ಈ ಹಿನ್ನೆಲೆ ರಾಜಕೀಯ ಪಕ್ಷಗಳಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದರು.

ದೇಶದ್ರೋಹಿ ಕೆಲಸ ಮಾಡಬಾರದು:

ಗೋಹತ್ಯೆ ನಡೆಯಬಾರದು, ಅದರ ಹೆಸರಿನಲ್ಲಿ ಮನುಷ್ಯರ ಹತ್ಯೆಯೂ ಆಗಬಾರದು. ಇಂಥ ಒಂದೆರಡು ಘಟನೆಗಳನ್ನು ವೈಭವೀಕರಿಸಿ ಇಡೀ ದೇಶದ ಹೆಸರಿಗೆ ಕಳಂಕ ತರಬಾರದು. ಇದು ದೇಶದ್ರೋಹಿ‌‌ ಕೆಲಸ. ಕಪ್ಪು ಹಣ ವಿಚಾರ, ಮೋದಿ ಪ್ರಧಾನಿಯಾದ ಬಳಿ ಈ ವಿಷಯ ಪ್ರಸ್ತಾಪಿಸಿದ್ದೆವು. ಇದನ್ನು ಮೋದಿಗೆ ಬಿಟ್ಟಿದ್ದೇವೆ, ಕಪ್ಪು ಕಪ್ಪು ಮನಸ್ಸುಗಳನ್ನು ಸರಿಪಡಿಸುವ ಕೆಲಸ ಆಗಬೇಕು. ವಿದೇಶದಿಂದ ನಿರೀಕ್ಷಿತ ಮಟ್ಟದಲ್ಲಿ ಕಪ್ಪು ಹಣ ವಾಪಸ್ ಬಂದಿಲ್ಲ. ಶೇ.99 ರಷ್ಟು ಹಿಂದೂ-ಮುಸ್ಲಿಮರ ಪೂರ್ವಜರು ಒಬ್ಬರೇ ಆಗಿದ್ದಾರೆ, ದೇವರು, ದೇಶ ಒಬ್ಬರೇ. ಆದರೆ ರಾಜಕೀಯ ಮುಖಂಡರು ಮಂದಿರ-ಮಸೀದಿ ಹೆಸರಿನಲ್ಲಿ ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತೆ ಏರು-ಪೇರು; ಶ್ವಾಸಕೋಶದಲ್ಲಿ ಸೋಂಕು ಪತ್ತೆ

ಪ್ರತಿ ಗ್ರಾಮದಲ್ಲಿ ಯೋಗ ತರಬೇತಿ:
Loading...

ಕಾಯಕವೇ ಕೈಲಾಸ ಎಂಬಂತೆ ಪತಾಂಜಲಿ ಯೋಗಪೀಠ ಆಡಳಿತ ಮತ್ತು ಪ್ರತಿಪಕ್ಷಗಳಂತೆ ಕೆಲಸ ಮಾಡಲಿದೆ. ದೇಶದಲ್ಲಿ ಸಾಮಾಜಿಕ ಕಾರ್ಯ, ಸಂಶೋಧನೆಗಾಗಿ ಪತಾಂಜಲಿ ವತಿಯಿಂದ ರೂ.11000 ಕೋ. ಖರ್ಚು‌ ಮಾಡಲಾಗಿದೆ. ಕ್ರೀಡೆ, ವಿಜ್ಞಾನ ಕ್ಷೇತ್ರಗಳಿಗೆ ಅನುಕೂಲವಾಗಲು ಪತಂಜಲಿ ವಿಶ್ವವಿದ್ಯಾಲಯ ಆರಂಭಿಸಲಾಗುವುದು. ವಿಶ್ವದ ಅತ್ಯುನ್ನತ ವಿಶ್ವವಿದ್ಯಾಲಯವನ್ನಾಗಿ ಮಾಡಲಾಗುವುದು. ತಕ್ಷಶಿಲೆ ಮತ್ತು ನಳಂದಾ ವಿವಿ‌ ಮಾದರಿ ವಿಶ್ವವಿದ್ಯಾಲಯವನ್ನಾಗಿ ಮಾಡಲಾಗುವುದು. ದೇಶದ ಪ್ರತಿಯೊಂದು ಗ್ರಾಮದಲ್ಲಿ ಯೋಗ ತರಬೇತಿ ನೀಡುವ ಉದ್ದೇಶವಿದೆ. ದೇಶದ 11 ಲಕ್ಷ ಗ್ರಾಮಗಳಲ್ಲಿ ಯೋಗ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಭಗವಾನ್​ ಹೇಳಿಕೆಗೆ ಆಕ್ರೋಶ:

ನಮ್ಮ ಪೂರ್ವಜರನ್ನು ಜಾತಿಗೆ ಹೋಲಿಸುವ ಕೆಲಸವನ್ನು ರಾಜಕೀಯ ಮುಖಂಡರು ಮಾಡುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ, ನಾಚಿಕೆಗೇಡು ವಿಚಾರ. ಸಾಹಿತಿ ಭಗವಾನ್​​ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ. ರಾಮ‌ ಮಂದಿರ ನಿರ್ಮಾಣ ವಿಚಾರದ ಬದಲಾಗಿ, ರಾಮ-ಸೀತೆಯಂತೆ, ಕೃಷ್ಣರಂತ ವ್ಯಕ್ತಿತ್ವ ಬೆಳೆಸುವತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಹೊಸ ಚಾನೆಲ್​ ಆರಂಭ:

ಸಾಧು, ಸಂತರು ಹೇಗೆ ಇರಬೇಕೆಂಬುದಕ್ಕೆ ವಿಜಯಪುರದ ಶ್ರಿ ಸಿದ್ಧೇಶ್ವರ ಸ್ವಾಮೀಜಿ ಮಾದರಿಯಾಗಿದ್ದಾರೆ. ಪ್ರಾಚೀನ ಜ್ಞಾನ ವೈಭವ ಕುರಿತ ಆಸ್ಥಾ ಕನ್ನಡ ಚಾನೆಲ್ ನಾಳೆಯಿಂದ ಲೋಕಾರ್ಪಣೆಯಾಗಲಿದೆ. ಇದರಲ್ಲಿ ಮೂಢ ನಂಬಿಕೆಗಳಿಗೆ ಯಾವುದೇ ಅವಕಾಶವಿರುವುದಿಲ್ಲ. ವೈಜ್ಞಾನಿಕ ಅಂಶಗಳನ್ನು, ಸರ್ವಧರ್ಮ ಸಾಪೇಕ್ಷತೆ ಹೊಂದಿದ ಚಾನೆಲ್​ ಆಗಿದೆ ಎಂದರು.
First published:December 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...