ವಿಶ್ವನಾಥ್ ತ್ಯಾಗದಿಂದ ಸಿಎಂ ಆದ ಸಿದ್ದರಾಮಯ್ಯ, ಅವರನ್ನೇ ತುಳಿಯಲು ಯತ್ನಿಸಿದರು; ಶ್ರೀರಾಮುಲು ವಾಗ್ದಾಳಿ

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಸುಲಭವಲ್ಲ. ತಮಗೆ ಆದ ಅನ್ಯಾಯಕ್ಕಾಗಿ ವಿಶ್ವನಾಥ್​​ ರಾಜೀನಾಮೆ ಕೊಟ್ಟಿದ್ದಾರೆ. ಅವರನ್ನು ಹುಣಸೂರು ಜನ ಕೈ ಬಿಡಬಾರದು. ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಬೇಕು

Seema.R | news18-kannada
Updated:November 18, 2019, 1:23 PM IST
ವಿಶ್ವನಾಥ್ ತ್ಯಾಗದಿಂದ ಸಿಎಂ ಆದ ಸಿದ್ದರಾಮಯ್ಯ, ಅವರನ್ನೇ ತುಳಿಯಲು ಯತ್ನಿಸಿದರು; ಶ್ರೀರಾಮುಲು ವಾಗ್ದಾಳಿ
ಶ್ರೀರಾಮುಲು, ಸಿದ್ದರಾಮಯ್ಯ
  • Share this:
ಮೈಸೂರು (ನ.18): ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅನರ್ಹ ಶಾಸಕ ಎಚ್​ ವಿಶ್ವಾನಾಥ್​ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ಬೃಹತ್​ ಸಮಾವೇಶದಲ್ಲಿ ಭಾಗಿಯಾಗಲಿರುವ ಅವರು ಶಕ್ತಿ ಪ್ರದರ್ಶನ ನಡೆಸಿದರು. ಈ ವೇಳೆ ಸಚಿವ ಶ್ರೀರಾಮುಲು, ಸಂಸದ ಪ್ರತಾಪ್​ ಸಿಂಹ, ಮಾಜಿ ಸಚಿವ ವಿಜಯ ಶಂಕರ್​, ರಾಜ್ಯ ಕಾರ್ಯದರ್ಶಿ ರಾಜೇಂದ್ರ ಭಾಗಿಯಾದರು. 

ಇಲ್ಲಿನ ಮುನೇಶ್ವರ ಕಾವಲ್ ಮೈದಾನದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ವಿಶ್ವನಾಥ್ ತುಳಿಯಲು ಸಿದ್ದರಾಮಯ್ಯ ಯತ್ನಿಸಿದರು. ವಿಶ್ವನಾಥ್ ತ್ಯಾಗದಿಂದ ಸಿದ್ದರಾಮಯ್ಯ ಸಿಎಂ ಆಗಿದ್ದು ಎಂಬುದನ್ನು ಮರೆತು ಅವರನ್ನು ತುಳಿಯಲು ಸಿದ್ದರಾಮಯ್ಯ ಯತ್ನಿಸಿದರು. ಈಗ ಪಕ್ಷಾಂತರ ಮಾಡಿದವರ ವಿರುದ್ಧ ವಾಗ್ದಾಳಿ ನಡೆಸುವ ಸಿದ್ದರಾಮಯ್ಯ ಪಕ್ಷಾಂತರ ಮಾಡಲಿಲ್ಲವಾ ಎಂದು ಪ್ರಶ್ನಿಸಿದರು.

ಮೈತ್ರಿ ಸರಕಾರ ಕೆಡವಲು ಸಿದ್ದರಾಮಯ್ಯ ಕಾರಣ. ಮೈತ್ರಿ ಸರಕಾರದಲ್ಲಿ ದುರಾಡಳಿತ ಹೆಚ್ಚಿತ್ತು. ಅದಕ್ಕೆ ಶಾಸಕರು ರಾಜೀನಾಮೆ ಕೊಟ್ಟರು. ಶಾಸಕರ ತ್ಯಾಗದಿಂದ ಈ ಸರಕಾರ ಬಂದಿದೆ ಎಂದರು

ಬಾದಾಮಿಯ ಶಾಸಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ನಾನೇ ಅವರ ಎದುರಿಗೆ ಚುನಾವಣೆಗೆ ನಿಲುತ್ತೇನೆ. ಇದು ಕಾಂಗ್ರೆಸ್ ಗೆ ನಾನು ಹಾಕುತ್ತಿರುವ ಸವಾಲು ಎಂದು ಅಬ್ಬರಿಸಿದರು

 

ಹುಣಸೂರಿನಲ್ಲಿ ಕಾಂಗ್ರೆಸ್​ ಧೂಳೀಪಟವಾಗಲಿದೆ. ವಿಶ್ವನಾಥ್ ಗೆದ್ದ ಮರು ದಿನವೇ ಮಂತ್ರಿ ಆಗುತ್ತಾರೆ.  ಎಚ್. ವಿಶ್ವನಾಥ್ ಅಗ್ನಿಪರೀಕ್ಷೆಗೆ ಇಳಿದಿದ್ದಾರೆ. ಚುನಾವಣೆ ಎದುರಿಸುತ್ತಿರುವ 15 ಜನರು ಮಂತ್ರಿಗಳಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ: ನಾಮಪತ್ರ ಸಲ್ಲಿಕೆ ಭರಾಟೆ: ರಂಗೇರಿದ ಉಪಚುನಾವಣಾ ಕಣಗಳುಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಸುಲಭವಲ್ಲ. ತಮಗೆ ಆದ ಅನ್ಯಾಯಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ. ಅವರನ್ನು ಹುಣಸೂರು ಜನ ಕೈ ಬಿಡಬಾರದು. ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
First published: November 18, 2019, 1:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading