Chitradurga: ಕಾಂಗ್ರೆಸ್​​​ನವರಿಗೂ ನೋವು ಗೊತ್ತಾಗಲಿ! ಪ್ರತಿಭಟನೆಗೆ ರಾಮುಲು ಟಾಂಗ್

ಕಾಂಗ್ರೆಸ್​ನವರು ಬಹಳಷ್ಟು ವರ್ಷಗಳಿಂದ ಪ್ರತಿಭಟನೆ ಮಾಡುತ್ತಾ ಬಂದಿದ್ದಾರೆ, ಅವರಿಗೆ ನೋವು ಅನ್ನೋದು ಗೊತ್ತಾಬೇಕು ಮಾಡಲಿ, ಹಿಂದಿನಿಂದ ಅವರು ಇದನ್ನೇ ಮಾಡುತ್ತಾ ಬಂದಿದ್ದಾರೆ ಎಂದು ಸಚಿವ ರಾಮುಲು ಹೇಳಿದ್ದಾರೆ.

ಬಿ. ಶ್ರೀರಾಮುಲು

ಬಿ. ಶ್ರೀರಾಮುಲು

  • Share this:
ಚಿತ್ರದುರ್ಗ(ಜೂ.15): ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ (Siddaramaia) ಇತಿಹಾಸ ಮರೆತು ಹೋಗಿದ್ದಾರೆ. ಈಗ ಇಡಿ (ED), ಐಟಿಯನ್ನು BJPಗೆ ಸೇರಿಸಿ ಎಂದು ಹೇಳುತ್ತಾರೆ. ಕೇವಲ ರಾಜಕೀಯ ಲಾಭಕ್ಕಾಗಿ (Political Profit) ಸಿದ್ಧರಾಮಯ್ಯ ಹೀಗೆ ಮಾತನಾಡುತ್ತಿದ್ದಾರೆ. ಆದರೇ ಸತ್ಯ ಮುಚ್ಚಿಡಲು ಯಾರಿಂದಲೂ ಆಗದು, ಉಪ್ಪು ತಿಂದವರು ನೀರು ಕುಡಿಯಬೇಕು. ಕಾಂಗ್ರೆಸ್ (Congress) ಪ್ರತಿಭಟನೆ (Protest) ಮಾಡಲಿ, ಹಿಂದಿನಿಂದ ಅವರು ಇದನ್ನೇ ಮಾಡ್ತಿದ್ದಾರೆ.ಬೇರೆಯವರ ಮೇಲೆ ಬ್ರಹ್ಮಾಸ್ತ್ರ ಉಪಯೋಗಿಸುತ್ತಿದ್ದರು. ಈಗ ಅವರಿಗೆ ಅದರ ನೋವು ತಿಳಿಯುತ್ತಿದೆ. ಕಾಲಚಕ್ರದಲ್ಲಿ ಕೆಳಗೆ ಬೀಳಲೇಬೇಕು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು (B Sriramulu) ಚಿತ್ರದುರ್ಗದಲ್ಲಿ(Chitradurga) ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ಸಿದ್ಧರಾಮಯ್ಯ ಟ್ವೀಟ್​ಗೆ ಪ್ರತಿಕ್ರಿಯೆ

ಚಿತ್ರದುರ್ಗ ನಗರದಲ್ಲಿ , ಇಡಿ ಅಧಿಕಾರಿಗಳಿಂದ ಕೈ ನಾಯಕ ರಾಹುಲ್ (Rahul Gandhi) ಗಾಂಧಿ ವಿಚಾರಣೆ ಹಿನ್ನೆಲೆ, ಐಟಿ, ಇಡಿಯನ್ನು ಬಿಜೆಪಿ ಜತೆ ಸೇರಿಸಿ ಎಂದು ಸಿದ್ಧರಾಮಯ್ಯ ಟ್ವೀಟ್ ಮಾಡಿದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಸಿದ್ದರಾಮಯ್ಯ ಅವರಿಗೆ ಒಳಿತಾಗುವ ಟೈಮಲ್ಲಿ ಏನು ಬೇಕಾದ್ರೂ ಮಾತಾಡಿದ್ದಾರೆ.

ಉಪ್ಪು ತಿಂದವರು ನೀರು ಕುಡಿಯಲೇಬೇಕು

ಈಗ ಇಡಿ, ಐಟಿಯನ್ನು ಬಿಜೆಪಿಗೆ ಸೇರಿಸಿ ಎಂದು ಹೇಳುತ್ತಿದ್ದಾರೆ. ಅದು ಕೇವಲ ರಾಜಕೀಯ ಲಾಭಕ್ಕಾಗಿ ಮಾತನಾಡುತ್ತಿದ್ದಾರೆ. ಆದರೇ ಸತ್ಯ ಮುಚ್ಚಿಡಲು ಯಾರಿಂದಲೂ ಆಗಲ್ಲ, ಯಾರೇ ಆಗಿರಲಿ, ಉಪ್ಪು ತಿಂದಂತವರು ನೀರು ಕುಡಿಯಲೇಬೇಕು ಎಂದು ಟಾಂಗ್ ನೀಡಿದ್ದಾರೆ. ಇನ್ನೂ ಇಡಿ, ಐಟಿ ವಿಚಾರಣೆಯಲ್ಲಿ ಸಹಜ ಪ್ರಕ್ರಿಯೆ ನಡೆದಿದೆ. ಸಹಕಾರ ನೀಡುವ ಕೆಲಸ ಆಗಬೇಕು ಎಂದಿದ್ದಾರೆ.

ಕಾಂಗ್ರೆಸ್​ನವರಿಗೆ ನೋವು ಗೊತ್ತಾಗಬೇಕು, ಪ್ರತಿಭಟನೆ ಮಾಡಲಿ

ಇನ್ನೂ ಕಾಂಗ್ರೆಸ್​ನವರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ಬಿ. ಶ್ರೀರಾಮುಲು, ಕಾಂಗ್ರೆಸ್​ನವರು ಬಹಳಷ್ಟು ವರ್ಷಗಳಿಂದ ಪ್ರತಿಭಟನೆ ಮಾಡುತ್ತಾ ಬಂದಿದ್ದಾರೆ, ಅವರಿಗೆ ನೋವು ಅನ್ನೋದು ಗೊತ್ತಾಬೇಕು ಮಾಡಲಿ, ಹಿಂದಿನಿಂದ ಅವರು ಇದನ್ನೇ ಮಾಡುತ್ತಾ ಬಂದಿದ್ದಾರೆ.

ಇದನ್ನೂ ಓದಿ: Chikkamagaluru: ಮುಸ್ಲಿಂ ಸಮುದಾಯದ ಹಸಿರು ಬಾವುಟಗಳಿದ್ದ ಅರಳಿ ಮರಕ್ಕೆ ಬೆಂಕಿ

ಬ್ರಹ್ಮಾಸ್ತ್ರ ಉಪಯೋಗಿಸಿ ಜನರಿಗೆ ಕಾಟ

ಬೇರೆಯವರ ಮೇಲೆ ಬ್ರಹ್ಮಾಸ್ತ್ರ ಉಪಯೋಗಿಸಿ ಜನರಿಗೆ ಕಾಟ ಕೊಡುತ್ತಾ ಬರುತ್ತಿದ್ದರು. ಈಗ ಅವರಿಗೆ ಅದರ ನೋವು ಏನಾಗಿದೆ ಎಂದು ಗೊತ್ತಾಗಿರಬೇಕು, ಅವರು ಮಾಡಿದ್ದೆಲ್ಲವೂ ಹೀಗೆ, ಈಗ ಅವರ ಪಾಲಿಗೆ ಬಂದಿದೆ. ಕಾಲಚಕ್ರದಲ್ಲಿ ಒಬ್ಬರು ಮೇಲೋದ್ರೆ, ಇನ್ನೊಬ್ಬರು ಕೆಳಗೆ ಬೀಳಲೇಬೇಕು ಬಿಜೆಪಿಗೆ ಈವತ್ತು ಮೇಲುಗೈ ಆಗಿದೆ, ಅವರಿಗೆ ಕೆಟ್ಟ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.

ದ್ವೇಷ ರಾಜಕಾರಣ ಅಲ್ಲ, ಹಳೇ ಹಗರಣವಿದು

ಇನ್ನೂ ಚುನಾವಣೆ ಸಮಯದಲ್ಲಿ ಬಿಜೆಪಿ ದ್ವೇಶದ ರಾಜಕಾರಣ ಮಾಡುತ್ತಿದೆ ಎಂಬ ಕೈ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಇದು ದ್ವೇಷ ರಾಜಕಾರಣ ಅಲ್ಲ, ಹಳೇ ಹಗರಣವಿದು. ಇಲ್ಲಿ ಅವರು ಮಾಡಿದ್ದಕ್ಕಾಗಿ ಇವರು ಮಾಡುತ್ತಾರೆ. ಇವರು ಮಾಡಿದ್ದಕ್ಕೆ ಅವರು ಮಾಡುತ್ತಾರೆ ಅನ್ನೋ ಪ್ರಶ್ನೆಯೇ ಉದ್ಬವ ಆಗೋದಿಲ್ಲ.

ಇದನ್ನೂ ಓದಿ: Mother Statue: ಇಲ್ಲಿ ತಾಯಿಯೇ ದೇವರು, ಪ್ರತಿನಿತ್ಯ ಈ ಮನೆಯಲ್ಲಿ ನಡೆಯುತ್ತೆ ಮಾತೃ ಪೂಜೆ!

ಕಾನೂನಿಗೆ ಎಲ್ಲರೂ ಸಮಾನರು, ಇದರಲ್ಲಿ ಸಣ್ಣವರು, ದೊಡ್ಡವರು ಅನ್ನೋ ಪ್ರಶ್ನೆಯೇ ಬರೋದಿಲ್ಲ, ಕಾನೂನು ಕ್ರಮ ಗೌರವಿಸಬೇಕು, ಇಡಿ ಐಟಿ ಬಗ್ಗೆ ಗೊತ್ತಲ್ಲದವರು ಇತಿಹಾಸ ಮರೆತಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
Published by:Divya D
First published: