ಅದೆಷ್ಟು ಬಾರಿ ರಾಜೀನಾಮೆ ನೀಡಿದ್ದಾರೆ ಶ್ರೀರಾಮುಲು? ಬಳ್ಳಾರಿಯಲ್ಲಿ ಎಷ್ಟು ಉಪ ಚುನಾವಣೆ ನಡೆದಿದೆ ಗೊತ್ತಾ?

G Hareeshkumar | news18
Updated:October 12, 2018, 3:35 PM IST
ಅದೆಷ್ಟು ಬಾರಿ ರಾಜೀನಾಮೆ ನೀಡಿದ್ದಾರೆ ಶ್ರೀರಾಮುಲು? ಬಳ್ಳಾರಿಯಲ್ಲಿ ಎಷ್ಟು ಉಪ ಚುನಾವಣೆ ನಡೆದಿದೆ ಗೊತ್ತಾ?
ಶಾಸಕ ಬಿ ಶ್ರೀರಾಮುಲು
  • News18
  • Last Updated: October 12, 2018, 3:35 PM IST
  • Share this:
- ಶರಣು ಹಂಪಿ, ನ್ಯೂಸ್ 18

ಬಳ್ಳಾರಿ (ಅ.12)  :  ಗಣಿನಾಡು ಬಳ್ಳಾರಿ ಜಿಲ್ಲೆ ಉಪ ಚುನಾವಣೆಗಾಗಿಯೇ ಹೆಸರುವಾಸಿ! ರಿಪಬ್ಲಿಕ್ ಆಫ್ ಬಳ್ಳಾರಿಯ ಅಪಖ್ಯಾತಿಗೆ ಒಳಗಾದ ರೆಡ್ಡಿ-ರಾಮುಲು ಕಾರಣದಿಂದಾಗಿಯೇ ಈಗಾಗಲೇ ಎರಡು ಬಾರಿ ವಿಧಾನಸಭಾ ಉಪ ಚುನಾವಣೆ ನಡೆದಿದೆ. ಇದೀಗ ಎರಡನೇ ಬಾರಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಕೇವಲ ಇಷ್ಟು ಮಾತ್ರವಲ್ಲ ಚುನಾವಣಾ ಇತಿಹಾಸದಲ್ಲಿಯೇ ಲೋಕಸಭಾ ಚುನಾವಣೆ ಮರುಎಣಿಕೆ ಆಗಿದ್ದು ಇದೇ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿಯೇ! ಈ ಕುರಿತು ವಿಶೇಷ ವರದಿ ಇಲ್ಲಿದೇ ಓದಿ..

ಹಾಲಿ ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ಶ್ರೀರಾಮುಲು ಅವರ ರಾಜಕೀಯ ಆಟಕ್ಕೆ ಮತ್ತೊಂದು ಮರು ಚುನಾವಣೆ ಎದುರಾಗಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹೊಸ್ತಿನಲ್ಲಿರುವಾಗಲೇ ಚುನಾವಣಾ ಆಯೋಗ ಮರು ಚುನಾವಣೆ ಘೋಷಿಸಿ ರಾಷ್ಟ್ರೀಯ ಪಕ್ಷಗಳ ರಾಜಕೀಯ ಲೆಕ್ಕಾಚಾರವನ್ನೇ ಬದಲು ಮಾಡಿದೆ. ಎಲ್ಲರೂ ಈ ಬಾರಿಯ ಲೋಕಸಭಾ ಉಪ ಚುನಾವಣೆ ನಡೆಯುವುದಿಲ್ಲವೆಂದೇ ಲೆಕ್ಕಹಾಕಿಕೊಂಡಿದ್ದರು. ಆದರೆ ಆಗಿದ್ದೇ ಬೇರೆ. ಅದರಲ್ಲೂ ಬಳ್ಳಾರಿಯಲ್ಲಿ ಪದೇ ಪದೇ ಮರು ಚುನಾವಣೆ ನಡೆಯಲು ಬಿ ಶ್ರೀರಾಮುಲು ಕಾರಣಕರ್ತರಾಗಿದ್ದಾರೆ.

ತಮ್ಮ ಹಾಗೂ ಪಕ್ಷದ ರಾಜಕೀಯ ಹಿತಾಸಕ್ತಿಗೆ ಜನರು ಪದೇ ಪದೇ ವಿಧಾನಸಭೆ ಹಾಗು ಲೋಕಸಭಾ ಮರು ಚುನಾವಣೆ ಎದುರಿಸಿದ್ದಾರೆ. ಈ ಹಿಂದೆ 1999ರಲ್ಲಿ ಅಮೇಥಿ ಹಾಗೂ ಬಳ್ಳಾರಿಯಿಂದಲೂ ಸ್ಪರ್ಧಿಸಿದ್ದ ಕಾಂಗ್ರೆಸ್ ನೇತಾರೆ ಸೋನಿಯಾಗಾಂಧಿ ಬಳ್ಳಾರಿ ಕ್ಷೇತ್ರ ಗೆದ್ದು, ಬಿಟ್ಟುಕೊಟ್ಟಿದ್ದರಿಂದ 2000ನೇ ಇಸವಿಯಲ್ಲಿ ಲೋಕಸಭಾ ಮರು ಚುನಾವಣೆ ನಡೆಯಲು ಕಾರಣವಾಗುತ್ತದೆ. ಇದಕ್ಕೆ ಬಳ್ಳಾರಿಯ ಲೋಕಸಭಾ ಮರು ಚುನಾವಣೆ ಮತ್ತೊಂದು ಸೇರ್ಪಡೆಗೊಂಡಿದೆ.

ಕಳೆದ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಶ್ರೀರಾಮುಲು ಬಳ್ಳಾರಿಯ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಹಾಗೂ ಬಾಗಲಕೋಟೆಯ ಬದಾಮಿ ಕ್ಷೇತ್ರದಿಂದ ಕಣಕ್ಕಿಳಿದರು. ಬದಾಮಿಯಲ್ಲಿ ಸೋತರೆ, ಮೊಳಕಾಲ್ಮೂರಿನಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾದರು. ತೆರವಾದ ಬಳ್ಳಾರಿ ಲೋಕಸಭಾ ಸ್ಥಾನಕ್ಕೆ ಚುನಾವಣಾ ಆಯೋಗ ವರುಷದೊಳಗೆ ಚುನಾವಣೆ ನಡೆಸಲು ಇದೀಗ ದಿನಾಂಕ ಘೋಷಣೆ ಮಾಡಿ ಮರು ಚುನಾವಣೆ ತಯಾರಿ ನಡೆಸುತ್ತಿದೆ. ಹಲವು ಬಾರಿ ಉಪ ಚುನಾವಣೆ ನಡೆಯಲು ಪಕ್ಷದ ನಿರ್ಧಾರ ಹಾಗೂ ರಾಜಕೀಯ ಸನ್ನಿವೇಶ ಕಾರಣವೆನ್ನುತ್ತಾರೆ ಶ್ರೀರಾಮುಲು.

ಅಂದಹಾಗೆ ಶ್ರೀರಾಮುಲು ಇತ್ತೀಚೆಗೆ ಲೋಕಸಭಾ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿಲ್ಲ. ಈ ಹಿಂದೆ ಎರಡು ಬಾರಿ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆ ನಡೆಯಲು ಕಾರಣರಾಗಿದ್ದಾರೆ. 2011ರಲ್ಲಿ ಶ್ರೀರಾಮುಲು ಆಪ್ತ ಮಾಜಿ ಸಚಿವ ಜನಾರ್ದನ ರೆಡ್ಡಿ ಸಿಬಿಐ ಬಂಧನ ನಂತರ ನಡೆದ ಬೆಳವಣಿಗೆಯಿಂದಾಗಿ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆಯೆಂದು ತಮ್ಮ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದ ತೆರವಾದ ಸ್ಥಾನಕ್ಕೆ ತಾವೇ ಸ್ಥಾಪಿಸಿದ್ದ ಬಿ ಎಸ್ ಆರ್ ಕಾಂಗ್ರೆಸ್ ಪಕ್ಷ ಸ್ಪರ್ಧಿಸಿ ಗೆಲುವು ಸಾಧಿಸಿದರು.

2014ರ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಬಿ ಎಸ್ ಆರ್ ಪಕ್ಷದಿಂದ ಗೆಲುವು ಸಾಧಿಸಿದ್ದ ಶ್ರೀರಾಮುಲು ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ಮತ್ತೊಮ್ಮೆ ರಾಜೀನಾಮೆ ನೀಡುತ್ತಾರೆ. ಇದರಿಂದ ತೆರವಾದ ಸ್ಥಾನಕ್ಕೆ 2014ರ ಅದೇ ವರುಷದಲ್ಲಿ ಜರುಗಿದ ವಿಧಾನಸಭಾ ಜರುಗಿದ ಉಪ ಚುನಾವಣೆಯಲ್ಲಿ ಶ್ರೀರಾಮುಲು ಆಪ್ತ ಓಬಳೇಶ್ ಸೋಲು ಅನುಭವಿಸುತ್ತಾರೆ. ಕಾಂಗ್ರೆಸ್ ಎನ್ ವೈ ಗೋಪಾಲಕೃಷ್ಣ ಗೆಲುವು ಸಾಧಿಸುತ್ತಾರೆ. ಹೀಗೆ ಬಳ್ಳಾರಿ ಜಿಲ್ಲೆಯಲ್ಲಿ ಪದೇ ಪದೇ ಉಪ ಚುನಾವಣೆ ನಡೆಯುತ್ತಿರುವ ಬಗ್ಗೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಾರೆ.ಬಳ್ಳಾರಿ ಜಿಲ್ಲೆಯಲ್ಲಿ 2011ರಿಂದ ಇಲ್ಲಿಯವರೆಗೆ ಶ್ರೀರಾಮುಲು ಮೂರು ಬಾರಿ ರಾಜೀನಾಮೆ ನೀಡಿದ್ದರಿಂದ ಎರಡು ಬಾರಿ ವಿಧಾನಸಭಾ ಹಾಗೂ ಈಗ ಲೋಕಸಭಾ ಉಪ ಚುನಾವಣೆ ನಡೆಯಲು ಕಾರಣರಾಗಿದ್ದಾರೆ. ಇನ್ನು 2009ರಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಶ್ರೀರಾಮುಲು ಸಹೋದರಿ ಜೆ ಶಾಂತ ನ್ಯಾಯವಾದಿ ಕಾಂಗ್ರೆಸ್ ಎನ್ ವೈ ಹನುಮಂತಪ್ಪ ಗೆಲುವು ಸಾಧಿಸುತ್ತಾರೆ. ಆದರೆ ಇದರ ಮರು ಎಣಿಕೆ 2012ರಲ್ಲಿ ಮತ ಎಣಿಕೆಯಾಗಿ ಬಿಜೆಪಿ ಗೆಲುವು ಸಾಬೀತು ಪಡಿಸುತ್ತದೆ. ಒಟ್ಟಿನಲ್ಲಿ ತಮ್ಮ ರಾಜಕೀಯ ಹಿತಾಸಕ್ತಿಗೆ ಪದೇ ಪದೇ ಮರು ಚುನಾವಣೆ ನಡೆಸುವ ಮೂಲಕ ಜನರ ದುಡ್ಡು ಪೋಲಾಗಲು ಕಾರಣೀಭೂತರಾಗಿರುವುದು ದುರ್ದೈವದ ಸಂಗತಿ.

ಬಳ್ಳಾರಿ ಎಂಪಿ ಬಿಜೆಪಿ ಟಿಕೆಟ್ ಯಾರಿಗೆ? ತಮ್ಮವರಿಗೇ ಟಿಕೆಟ್ ಕೊಡ್ತಾರಾ ಶ್ರೀರಾಮುಲು? 

 
First published: October 12, 2018, 3:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading