HOME » NEWS » State » B SRIRAMULU AGREED TO CONTINUE AS SOCIAL WELFARE MINISTER AFTER MEETING CM BS YEDIYURAPPA SCT

ಖಾತೆ ಬದಲಾವಣೆಗೆ ಅಸಮಾಧಾನಗೊಂಡಿದ್ದ ಶ್ರೀರಾಮುಲು ಮನವೊಲಿಕೆ ಯಶಸ್ವಿ

ಸಚಿವ ಡಾ. ಕೆ. ಸುಧಾಕರ್ ಉಪಸ್ಥಿತಿಯಲ್ಲೇ ಶ್ರೀರಾಮುಲು ಅವರಿಗೆ ಖಾತೆ ಬದಲಾವಣೆಯ ಕಾರಣ ವಿವರಿಸಿದ ಸಿಎಂ ಯಡಿಯೂರಪ್ಪ ಇಬ್ಬರ ನಡುವೆ ಸಂಧಾನ ಸಭೆ ನಡೆಸಿದರು.

news18-kannada
Updated:October 13, 2020, 11:02 AM IST
ಖಾತೆ ಬದಲಾವಣೆಗೆ ಅಸಮಾಧಾನಗೊಂಡಿದ್ದ ಶ್ರೀರಾಮುಲು ಮನವೊಲಿಕೆ ಯಶಸ್ವಿ
ಸಚಿವ ಶ್ರೀರಾಮುಲು, ಸಿಎಂ ಯಡಿಯೂರಪ್ಪ, ಸಚಿವ ಕೆ. ಸುಧಾಕರ್
  • Share this:
ಬೆಂಗಳೂರು (ಅ. 13): ಸಚಿವ ಬಿ. ಶ್ರೀರಾಮುಲು ಅವರ ಬಳಿಯಿದ್ದ ಆರೋಗ್ಯ ಸಚಿವ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರಿಗೆ ನೀಡಲಾಗಿತ್ತು. ಸಚಿವ ಶ್ರೀರಾಮುಲು ಅವರ ಬಳಿ ಇದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಖಾತೆಯನ್ನೂ ವಾಪಾಸ್ ಪಡೆದಿದ್ದ ಸಿಎಂ ಯಡಿಯೂರಪ್ಪ ಎರಡು ಖಾತೆಗಳ ಬದಲಾಗಿ ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ನೀಡಿದ್ದರು. ಇದರಿಂದ ಸಚಿವ ಶ್ರೀರಾಮುಲು ಅವರಿಗೆ ಭಾರೀ ನಿರಾಸೆಯಾಗಿತ್ತು. ನಿನ್ನೆ ಖಾತೆ ಹಂಚಿಕೆ ಪಟ್ಟಿ ಹೊರಬೀಳುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದ ಶ್ರೀರಾಮುಲು ತಮ್ಮ ಅಸಮಾಧಾನ ಹೊರಹಾಕಿದ್ದರು. ಇಂದು ಮತ್ತೆ ತಮ್ಮ ಖಾಸಗಿ ಕಾರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದ ಬಿ. ಶ್ರೀರಾಮುಲು ಅವರ ಮನವೊಲಿಸುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾಗಿದ್ದ ಬಿ. ಶ್ರೀರಾಮುಲು ಅವರು ಆ ಖಾತೆಗಳ ಬದಲಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಮುಂದುವರೆಯಲು ಒಪ್ಪಿಗೆ ನೀಡಿದ್ದಾರೆ. ಸಚಿವ ಡಾ. ಕೆ. ಸುಧಾಕರ್ ಉಪಸ್ಥಿತಿಯಲ್ಲೇ ಶ್ರೀರಾಮುಲು ಅವರಿಗೆ ಖಾತೆ ಬದಲಾವಣೆಯ ಕಾರಣ ವಿವರಿಸಿದ ಸಿಎಂ ಯಡಿಯೂರಪ್ಪ ಇಬ್ಬರ ನಡುವೆ ಸಂಧಾನ ಸಭೆ ನಡೆಸಿದರು. ಆರೋಗ್ಯ ಇಲಾಖೆ ಖಾತೆ ಜೊತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯನ್ನು ಕೂಡ ವಾಪಾಸ್ ಪಡೆದಿದ್ದಕ್ಕೆ ಶ್ರೀರಾಮುಲು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಸಿಎಂ ಮಾತಿಗೆ ಒಪ್ಪಿದ ಶ್ರೀರಾಮುಲು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಲು ಸಮ್ಮತಿ ನೀಡಿದರು.

ಇದನ್ನೂ ಓದಿ: ಖಾತೆ ಬದಲಾವಣೆಗೆ ರಾಜ್ಯಪಾಲರ ಅಂಕಿತ; ಡಾ. ಸುಧಾಕರ್​ಗೆ ಬೋನಸ್, ಶ್ರೀರಾಮುಲುಗೆ ಮೈನಸ್!

ಸಿಎಂ ಯಡಿಯೂರಪ್ಪನವರನ್ನು ಭೇಟಿಯಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಬಿ. ಶ್ರೀರಾಮುಲು, ರಾಜ್ಯದ ಜನರಿಗೆ ಒಳ್ಳೆಯದು ಮಾಡಬೇಕೆಂದು ಯಡಿಯೂರಪ್ಪನವರು ಹೇಳಿದ್ದಾರೆ. ಅಧಿಕಾರಕ್ಕೆ ಬಂದಾಗ ನಾನೇ ಸಮಾಜ ಕಲ್ಯಾಣ ಇಲಾಖೆ ಖಾತೆ ಕೇಳಿದ್ದೆ. ಆದರೆ, 2008-9ಲ್ಲಿ ಉತ್ತಮ ಕೆಲಸ ಮಾಡಿದ್ದೀರಿ ಎಂದು ಯಡಿಯೂರಪ್ಪನವರೇ ನನಗೆ ಆರೋಗ್ಯ ಖಾತೆ ನೀಡಿದ್ದರು. ನಾನೀಗ ಬಹಳ ಸಂತೋಷದಿಂದ ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ಒಪ್ಪಿದ್ದೇನೆ ಎಂದು ತಿಳಿಸಿದ್ದಾರೆ.

ಕೆ. ಸುಧಾಕರ್ ವೈದ್ಯರಿದ್ದಾರೆ. ಹಾಗಾಗಿ ಆರೋಗ್ಯ ಇಲಾಖೆ ಮೆಡಿಕಲ್ ಎಜುಕೇಶನ್ ಜವಾಬ್ದಾರಿ ವಹಿಸಿದ್ದಾರೆ. ಕೊರೊನಾ ವಿಚಾರದಲ್ಲಿ ಡಾ. ಸುಧಾಕರ್ ನೋಡಿಕೊಳ್ಳುತ್ತಿದ್ದರು. ಕೊರೋನಾ ನಿಯಂತ್ರಣಕ್ಕೆ ತರೋಕೆ ನಾವೆಲ್ಲ ಪ್ರಯತ್ನ ಮಾಡಿದ್ದೇವೆ , ಶಕ್ತಿಮೀರಿ ಕೆಲಸ ಮಾಡಿದ್ದೇವೆ. ತಾಂತ್ರಿಕ ಕಾರಣಕ್ಕೆ ಡಾ. ಸುಧಾಕರ್ ಗೆ ಖಾತೆ ಕೊಡಲಾಗಿದೆ. ಒಬ್ಬರೇ ಇರಲಿ ಎಂದು ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ದಾರೆಯೇ ಹೊರತು ಖಾತೆ ನಿರ್ವಹಣೆಯಲ್ಲಿ ಅಸಮರ್ಥನಾಗಿದ್ದೇನೆ ಎಂದು ಅಲ್ಲ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
Published by: Sushma Chakre
First published: October 13, 2020, 10:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories