ಕುಮಾರಸ್ವಾಮಿ ನಾಳೆಯೇ ವಿಶ್ವಾಸಮತ ಯಾಚಿಸಲಿ, ಇಲ್ಲದಿದ್ದರೆ ರಾಜೀನಾಮೆ ನೀಡಲಿ; ಬಿ.ಎಸ್. ಯಡಿಯೂರಪ್ಪ

ನಾಳೆ ಅಧಿವೇನ ಕಲಾಪದ ಎರಡನೇಯ ದಿನ. ಹೀಗಾಗಿ ನಾಳೆಯೇ ವಿಶ್ವಾಸಮತ ಯಾಚಿಸಲು ಸಮಯ ಕೊಡುವಂತೆ ನಾವು ಒಟ್ಟಾಗಿ ಸ್ಪೀಕರ್ ಅವರನ್ನು ಒತ್ತಾಯಿಸುತ್ತೇವೆ. ಹೀಗಾಗಿ ಕುಮಾರಸ್ವಾಮಿ ಸೋಮವಾರವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಇಲ್ಲದಿದ್ದರೆ ವಿಶ್ವಾಸಮತ ಯಾಚಿಸಲಿ ಎಂದು ಬಿ.ಎಸ್​. ಯಡಿಯೂರಪ್ಪ ಸವಾಲುಹಾಕಿದ್ದಾರೆ.

MAshok Kumar | news18
Updated:July 14, 2019, 1:28 PM IST
ಕುಮಾರಸ್ವಾಮಿ ನಾಳೆಯೇ ವಿಶ್ವಾಸಮತ ಯಾಚಿಸಲಿ, ಇಲ್ಲದಿದ್ದರೆ ರಾಜೀನಾಮೆ ನೀಡಲಿ; ಬಿ.ಎಸ್. ಯಡಿಯೂರಪ್ಪ
ಬಿಎಸ್​ ಯಡಿಯೂರಪ್ಪ
  • News18
  • Last Updated: July 14, 2019, 1:28 PM IST
  • Share this:
ಬೆಂಗಳೂರು (ಜುಲೈ.14); ಮುಖ್ಯಮಂತ್ರಿ ಕುಮಾರಸ್ವಾಮಿ ನಾಳೆಯೇ ವಿಶ್ವಾಸಮತ ಯಾಚಿಸಲಿ, ಇಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಸಿಎಂ ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ಬೆಂಗಳೂರಿನ ಯಲಹಂಕ ಸಮೀಪದ ಹೋಟೆಲ್ ರಮಡದಲ್ಲಿ ತಮ್ಮ ಶಾಸಕರನ್ನು ಭೇಟಿಯಾದ ಬಳಿಕ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, “ಹದಿನೈದು ಶಾಸಕರು ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನೂ ಎಂಟಿಬಿ ನಾಗರಾಜು ಮತ್ತು ಸುಧಾಕರ್ ಮನವೊಲಿಕೆಗೆ ಕುಮಾರಸ್ವಾಮಿ ವಿಶ್ವ ಪ್ರಯತ್ನ ಮಾಡಿದ್ರು. ಆದ್ರೂ ಅವರಿಬ್ರೂ ನಿಮ್ ಜೊತೆಗೆ ಇರಲ್ಲ ಅಂತ ಹೋದ್ರು. ಹೀಗಾಗಿ ಕುಮಾರಸ್ವಾಮಿ ಸಂಪೂರ್ಣವಾಗಿ ಬಹುಮತ ಕಳೆದುಕೊಂಡಿದ್ದಾರೆ” ಎಂದು ಕಿಡಿಕಾರಿದರು.

“ನಾಳೆ ಅಧಿವೇನ ಕಲಾಪದ ಎರಡನೇಯ ದಿನ. ಹೀಗಾಗಿ ನಾಳೆಯೇ ವಿಶ್ವಾಸಮತ ಯಾಚಿಸಲು ಸಮಯ ಕೊಡುವಂತೆ ನಾವು ಒಟ್ಟಾಗಿ ಸ್ಪೀಕರ್ ಅವರನ್ನು ಒತ್ತಾಯಿಸುತ್ತೇವೆ. ಹೀಗಾಗಿ ಕುಮಾರಸ್ವಾಮಿ ಸೋಮವಾರವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಇಲ್ಲದಿದ್ದರೆ ವಿಶ್ವಾಸಮತ ಯಾಚಿಸಲಿ” ಎಂದು ಬಿ.ಎಸ್​. ಯಡಿಯೂರಪ್ಪ ಸವಾಲುಹಾಕಿದ್ದಾರೆ.

ಇದನ್ನೂ ಓದಿ : ಸಿದ್ದು ಸಂಧಾನ ವಿಫಲ; ಆರ್​. ಅಶೋಕ್ ಆಪರೇಷನ್ ಕಮಲಕ್ಕೆ ಬಿದ್ದ ಎಂಟಿಬಿ ನಾಗರಾಜ್; ಮುಂಬೈ ಅತೃಪ್ತರ ಬಳಗಕ್ಕೆ ಇಂದು ಸೇರ್ಪಡೆ!

First published: July 14, 2019, 1:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading