ರಾಹುಲ್ ಬಗ್ಗೆ ಮಾತನಾಡುವ ನೈತಿಕತೆ ಯಡಿಯೂರಪ್ಪಗೆ ಇಲ್ಲ - ಬಿ.ಕೆ.ಹರಿಪ್ರಸಾದ್

ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಅತೃಪ್ತ ಶಾಸಕರಿಲ್ಲ ಬಿಜೆಪಿಯಲ್ಲೂ ಸಹ ಅತೃಪ್ತ ಶಾಸಕರಿದ್ದಾರೆ. ಈಗಾಗಲೇ ಕೆಲ ಸಂಸದರು ಬಿಜೆಪಿ ತೊರೆಯುತ್ತಿದ್ದಾರೆ. ಮುಂದೆ ಶಾಸಕರು ಕೂಡ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ

G Hareeshkumar | news18
Updated:December 31, 2018, 5:46 PM IST
ರಾಹುಲ್ ಬಗ್ಗೆ ಮಾತನಾಡುವ ನೈತಿಕತೆ ಯಡಿಯೂರಪ್ಪಗೆ ಇಲ್ಲ - ಬಿ.ಕೆ.ಹರಿಪ್ರಸಾದ್
ಬಿ ಕೆ ಹರಿಪ್ರಸಾದ್
G Hareeshkumar | news18
Updated: December 31, 2018, 5:46 PM IST
 -ಧರಣೀಶ್ ಬೂಕನಕೆರೆ 

ನವದೆಜಹಲಿ (ಡಿ.31) :  'ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಮಾತನಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ನವರಿಗೆ ನೈತಿಕತೆ ಇಲ್ಲ. ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರಿಂದ ಕಾಂಗ್ರೆಸ್ ಕಲಿಯಬೇಕಾಗಿಲ್ಲ' ಎಂದು ರಾಜ್ಯ ಸಭಾ ಸದಸ್ಯ ಬಿ ಕೆ.ಹರಿಪ್ರಸಾದ್ ಹೇಳಿದ್ದಾರೆ.

ಯಾವ ಕಾರಣಕ್ಕಾದರೂ ಸರ್ಕಾರ ಬೀಳಬಹುದೆಂಬ ಬಿಎಸ್ ವೈ ಹೇಳಿಕೆ ಹಿನ್ನೆಲೆಯಲ್ಲಿ ಮಾತನಾಡಿದ ಅವರು, 'ಯುಪಿಎ ಸರ್ಕಾರ ಇದ್ದಾಗ ಅಗಸ್ಟ್ ವೆಸ್ಟ್ ಲ್ಯಾಂಡ್ ಒಪ್ಪಂದವನ್ಜು ರದ್ದುಪಡಿಸಿತ್ತು ಆದರೆ ಎನ್ ಡಿಎ ಸರ್ಕಾರ  ಬಂದ ಮೇಲೆ  ಅಗಸ್ಟ ವೆಸ್ಟಲ್ಯಾಂಡ್ ಒಪ್ಪಂದಕ್ಕೆ ಮರುಜೀವ ನೀಡಿತು. ಬಿಜೆಪಿ ನಾಯಕರದ್ದು ಬರಿ ಸುಳ್ಳಿನ ‌ಕಾರ್ಖಾನೆಯಾಗಿದ್ದು, ವದಂತಿ ಹಬ್ಬಿಸಿ ನಿಜ ಮಾಡಲು ಪ್ರಯತ್ನಿಸುತ್ತಿದ್ದಾರೆ' ಎಂದರು.

ಇದನ್ನೂ ಓದಿ :  ರಮೇಶ್​ ಕಾಂಗ್ರೆಸ್​ನಲ್ಲೇ ಇರಬೇಕು, ಹೈಕಮಾಂಡ್​ ನಾಯಕರು​​ ಮನವೊಲಿಸಲಿ; ಲಖನ್​ ಜಾರಕಿಹೊಳಿ

'ಮೂರು ರಾಜ್ಯಗಳಲ್ಲಿ ಬಿಜೆಪಿ ಸುಳ್ಳುಗಳಿಗೆ ಸೋಲಾಗಿದ್ದು, ಮುಂದೂ ಸಹ ಬಿಜೆಪಿ‌ ಸುಳ್ಳಿಗೆ ಜನ ತಕ್ಕ ಉತ್ತರ ನೀಡಿಲಿದ್ದಾರೆ. ಕುತಂತ್ರದಿಂದ ಸರ್ಕಾರ ಕೆಡವಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ಅವರದು ತಿರುಕನ ಕನಸಾಗಿದ್ದು, ಯಡಿಯೂರಪ್ಪ ಕನಸು ನನಸಾಗುವುದಿಲ್ಲ' ಎಂದು ತಿಳಿಸಿದರು.

'ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಸರ್ಕಾರ ಮಾಡಲು ಬಿಟ್ಟರಿರಲಿಲ್ಲ. ಜನಾದೇಶದಂತೆ ನಾವು ಸಮ್ಮಿಶ್ರ ಸರ್ಕಾರ ಮಾಡಿದ್ದೇವೆ. ಈ‌ ಸರ್ಕಾರ ಕೆಡವಲು ಯಾರಿಂದಲೂ ಸಾಧ್ಯವಿಲ್ಲ' ಎಂದರು.
Loading...

ಬಿಜೆಪಿಯಲ್ಲೂ ಅತೃಪ್ತ ಶಾಸಕರಿದ್ದಾರೆ

'ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಅತೃಪ್ತ ಶಾಸಕರಿಲ್ಲ. ಬಿಜೆಪಿಯಲ್ಲೂ ಸಹ ಅತೃಪ್ತ ಶಾಸಕರಿದ್ದಾರೆ. ಈಗಾಗಲೇ ಕೆಲ ಸಂಸದರು ಬಿಜೆಪಿ ತೊರೆಯುತ್ತಿದ್ದಾರೆ. ಮುಂದೆ ಶಾಸಕರು ಕೂಡ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ' ಎಂದು ಬಿ ಕೆ ಹರಿಪ್ರಸಾದ್ ತಿಳಿಸಿದರು.

ಇದನ್ನೂ ಓದಿ :  ಮುಂದುವರಿದ ಟ್ವೀಟ್​​ವಾರ್​​: ಮೋದಿ, ಸದಾನಂದ ಗೌಡರ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ..!

First published:December 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...