HOME » NEWS » State » B CAMP AND FEST WILL COME TO STATE WHICH AS GROWS RESEARCH MENTALITY IN CHILDREN KGV LG

ರಾಜ್ಯಕ್ಕೆ ಬರಲಿದೆ ಮಕ್ಕಳಲ್ಲಿ ಆವಿಷ್ಕಾರ ಮನೋಭಾವ ಬೆಳೆಸುವ ಬಿ-ಕ್ಯಾಂಪ್‌ ಆ್ಯಂಡ್ ಫೆಸ್ಟ್‌

ಜಾಗತಿಕವಾಗಿ ಶೈಕ್ಷಣಿಕ ರಂಗದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಬಿ-ಕ್ಯಾಂಪ್‌ ಆ್ಯಂಡ್​​​ ಫೆಸ್ಟ್‌ನ್ನು ರೂಪಿಸಲಾಗಿದ್ದು, ಅಪರಿಮಿತವಾಗಿ ಕಲಿಯಲು ಅವಕಾಶವಿದೆ.

news18-kannada
Updated:April 5, 2021, 7:21 AM IST
ರಾಜ್ಯಕ್ಕೆ ಬರಲಿದೆ ಮಕ್ಕಳಲ್ಲಿ ಆವಿಷ್ಕಾರ ಮನೋಭಾವ ಬೆಳೆಸುವ ಬಿ-ಕ್ಯಾಂಪ್‌ ಆ್ಯಂಡ್ ಫೆಸ್ಟ್‌
ಡಾ. ಅಶ್ವಥ್ ನಾರಾಯಣ
  • Share this:
ಬೆಂಗಳೂರು(ಏ.05): ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಿ ಅವರಲ್ಲಿ ಆವಿಷ್ಕಾರ ಮನೋಭಾವವನ್ನು ಮೂಡಿಸುವ ಬಿ-ಕ್ಯಾಂಪ್‌ ಆ್ಯಂಡ್​​ ಫೆಸ್ಟ್‌ ಇದೀಗ ಕರ್ನಾಟಕಕ್ಕೂ ಕಾಲಿಡಲಿದ್ದು, ಅದರ ವಿವರಗಳನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರಿಗೆ ಟ್ರಾವಂಕೂರು ರಾಜಮನೆತನದ ಮಹಾರಾಣಿ ಪೋಯಂ ತಿರುನಾಳ್‌ ಗೌರಿಪಾರ್ವತಿ ಭಾಯಿ ಅವರು ಹಸ್ತಾಂತರ ಮಾಡಿದ್ದಾರೆ.

ತಿರುವನಂತಪುರದಲ್ಲಿ ಭಾನುವಾರ ಕೌಡಿಯಾರ್‌ನಲ್ಲಿರುವ ಅರಮನೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಈಗಾಗಲೇ ಕೇರಳದಲ್ಲಿ ಬಿ-ಕ್ಯಾಂಪ್‌ ಆ್ಯಂಡ್​​ ಫೆಸ್ಟ್‌ ಬಹಳ ಹೆಸರುವಾಸಿಯಾಗಿದ್ದು, ಇದನ್ನು ಕೇರಳದ ಬ್ಲೂಮ್‌ಬ್ಲೂಮ್‌ ಎಂಬ ಸ್ಟಾರ್‌ಟಪ್‌ ಅಭಿವೃದ್ಧಿಪಡಿಸಿದೆ.

Belagavi By Election: ಬೆಳಗಾವಿ ಲೋಕಸಭಾ ಉಪ ಚುನಾವಣೆ; ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಂದ ಮತಬೇಟೆ!

ಜಾಗತಿಕವಾಗಿ ಶೈಕ್ಷಣಿಕ ರಂಗದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಬಿ-ಕ್ಯಾಂಪ್‌ ಆ್ಯಂಡ್​​​ ಫೆಸ್ಟ್‌ನ್ನು ರೂಪಿಸಲಾಗಿದ್ದು, ಅಪರಿಮಿತವಾಗಿ ಕಲಿಯಲು ಅವಕಾಶವಿದೆ. 5 ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ನಾವೀನ್ಯತೆಯನ್ನು ಬೆಳೆಸುವ ಉದ್ದೇಶ ಇದರದ್ದು. ಕೇರಳದಲ್ಲಿ 500ಕ್ಕೂ ಹೆಚ್ಚು ಶಿಕ್ಷಣತಜ್ಞರ ಮಾರ್ಗದರ್ಶನದಲ್ಲಿ 6,000ಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನವನ್ನು ಪಡೆದಿದ್ದಾರೆ ಎಂದು ಬ್ಲೂಮ್‌ಬ್ಲೂಮ್‌ ಪ್ರತಿನಿಧಿಗಳು ಡಿಸಿಎಂ ಅವರಿಗೆ ಮಾಹಿತಿ ನೀಡಿದರು.
Youtube Video

ಆನ್‌ಲೈನ್‌ ಮೂಲಕವೂ ತಮ್ಮ ಆಯ್ಕೆಯ ವಿಷಯಗಳನ್ನು ಮಕ್ಕಳು ಪರಿಣಾಮಕಾರಿಯಾಗಿ ಕಲಿಯಬಹುದಾಗಿದೆ.
Published by: Latha CG
First published: April 5, 2021, 7:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories