Freedom Fighters: ಸ್ವತಂತ್ರ ಹೋರಾಟಗಾರ ಹುಡುಕಾಟದಲ್ಲಿ ಕರ್ನಾಟಕ ಸರ್ಕಾರ

ರಾಜ್ಯದ ಯಾವುದೇ ಭಾಗದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರನ್ನ ಜಿಲ್ಲಾಡಳಿತ ಹುಡಕಬೇಕು. ಅವರನ್ನು ಭೇಟಿಯಾಗಿ ಸನ್ಮಾನಿಸಬೇಕು ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ರಾಷ್ಟ್ರಧ್ವಜ

ರಾಷ್ಟ್ರಧ್ವಜ

  • Share this:
ದೇಶವು 75ನೇ ಸ್ವಾತಂತ್ರ್ಯದ ದಿನಾಚರಣೆ (75th Independence Day) ಆಚರಣೆಗೆ ಸಿದ್ಧತೆ ನಡೆಸಿಕೊಂಡಿದೆ. ಅಜಾದಿ ಕಾ ಅಮೃತ ಮಹೋತ್ಸವ (Azadi Ka Amrit Mahotsav) ಆಚರಣೆ ಹಿನ್ನೆಲೆ ಸ್ವಾತಂತ್ರ್ಯ ಹೋರಾಟಗಾರರಿಗೆ (Freedom Fighters) ಗೌರವ ಸಲ್ಲಿಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thawar Chand Gehlot) ಶುಕ್ರವಾರ ರಾಜ್ಯ ಸರ್ಕಾರಕ್ಕೆ (Karnataka Government) ಆದೇಶಿಸಿದ್ದಾರೆ.  ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು ವಯಸ್ಸಾಗಿದೆ. ಹಾಗಾಗಿ ಅವರ ವಿಳಾಸಕ್ಕೆ ಗೌರವ ಸಲ್ಲಿಸಲು ರಾಜ್ಯಪಾಲರು ಆದೇಶ ನೀಡಿದ್ದಾರೆ.  ಈಗ ಸ್ವತಂತ್ರ್ಯ ಹೋರಾಟಗಾರರನ್ನು ಹುಡುಕೋದು ಜಿಲ್ಲಾಡಳಿತಗಳಿಗೆ )District Administration) ಕಷ್ಟವಾಗಿದೆ. ಸಹಜವಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕೋದು ಕಷ್ಟ. ಆದರೂ ನಾವು ಶತಾಯುಷಿಗಳಾದ ಇಬ್ಬರು ಸ್ವತಂತ್ರ್ಯ ಹೋರಾಟಗಾರರನ್ನು ಹುಡುಕಿದ್ದೇವೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ (Bengaluru DC K Srinivas) ಹೇಳುತ್ತಾರೆ.

ಕೊರೊನಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿವೆ. ಈ ಸಮಯದಲ್ಲಿ ಹೋರಾಟಗಾರನ್ನು ಆಹ್ವಾನಿಸಿ ಗೌರವಿಸೋದು ಕಷ್ಟಕರ. ಈ ಹಿನ್ನೆಲೆ ನಾವೇ ಅವರ ಮನೆಗಳಿಗೆ ತೆರಳಿ ಗೌರವ ಸಲ್ಲಿಸುತ್ತೇವೆ ಎಂದು ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ಮನೆಗೆ ತೆರಳಿ ಗೌರವ ಸಲ್ಲಿಸಿ

ರಾಜ್ಯದಲ್ಲಿ ಸ್ವತಂತ್ರ್ಯ ಹೋರಾಟಗಾರರ ಸಂಖ್ಯೆ ವಿರಳವಾಗಿದೆ. ಇನ್ನು ಅವರ ಮಾಹಿತಿಯೂ ಜಿಲ್ಲಾಡಳಿಗಳ ಬಳಿ ಇಲ್ಲ. ತಮ್ಮ ಮನೆಗಳಲ್ಲಿರುವ ಸ್ವಾತಂತ್ರ್ಯ ಹೋರಾಟಗಾರನ್ನು ಹುಡುಕೋದು ಸ್ವಲ್ಪ ಕಷ್ಟವಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

azadi ka amrit mahotsav Karnataka Government Struggles to find freedom fighters mrq
ರಾಷ್ಟ್ರಧ್ವಜ


ಇದನ್ನೂ ಓದಿ:  Har Ghar Tiranga: ಬೆಂಗೇರಿ ಖಾದಿ ರಾಷ್ಟ್ರ ಧ್ವಜಕ್ಕೆ ಎಲ್ಲಿಲ್ಲದ ಬೇಡಿಕೆ; 1.80 ಕೋಟಿ ಮೌಲ್ಯದ ತಿರಂಗಕ್ಕೆ ಆರ್ಡರ್

ಬೆಂಗಳೂರಿನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ರಾಜ್ಯಪಾಲರಿಂದ ಗೌರವ

ಹಲಸೂರಿನಲ್ಲಿ ವಾಸವಾಗಿರುವ ಸ್ವಾತಂತ್ರ್ಯ ಹೋರಾಟಗಾರ ನಾರಾಯಣಪ್ಪ ಅವರಿಗೆ 100 ವರ್ಷ, ಮಲ್ಲೇಶ್ವರಂ ನಿವಾಸಿಯಾಗಿರುವ ವಿ ನಾಗಭೂಷಣ ರಾವ್ ಅವರಿಗೆ 102 ವರ್ಷ. ರಾಜ್ಯಪಾಲರು ಆಗಸ್ಟ್ 9 ರಂದು ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಲಿದ್ದಾರೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ .

ಈ ಕುರಿತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್, ರಾಜ್ಯದ ಯಾವುದೇ ಭಾಗದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರನ್ನ ಜಿಲ್ಲಾಡಳಿತ ಹುಡಕಬೇಕು. ಅವರನ್ನು ಭೇಟಿಯಾಗಿ ಸನ್ಮಾನಿಸಬೇಕು ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ವಿಳಾಸ ಪತ್ತೆ ಮಾಡೋದು ಸವಾಲಿನ ಕೆಲಸ

ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕುವುದು ತುಂಬಾ ಕಷ್ಟ. ಈ ಬಗ್ಗೆ ಯಾರೂ ಡೇಟಾಬೇಸ್ ನಿರ್ವಹಿಸಿರಲ್ಲ. ಯಾವುದೇ ಕಾರ್ಯಕ್ರಮವನ್ನು ಆಯೋಜಿಸುವಾಗ ಮತ್ತು ಅವರಿಗೆ ಆಹ್ವಾನ ಕಳುಹಿಸುವಾಗ ಹೋರಾಟಗಾರ ವಿಳಾಸ ಪತ್ತೆ ಮಾಡೋದು ನಮಗೆ ಸವಾಲಿನ ಕೆಲಸ ಆಗಿರುತ್ತದೆ ಎಂದು ಕುಮಾರಪಾರ್ಕ್‌ನ ಗಾಂಧಿ ಭವನದ ಗೌರವ ಕಾರ್ಯದರ್ಶಿ ಇಂದಿರಾ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಅನಾರೋಗ್ಯ, ವಯೋಸಹಜ ಕಾಯಿಲೆಗಳು

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ನಾವು ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಕಳೆದುಕೊಂಡಿದ್ದೇವೆ. ಕೆಲವರು ಅನಾರೋಗ್ಯ ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಮನೆಯಿಂದ ಹೊರಗೆ ಬರಲಾದ ಸ್ಥಿತಿಯಲ್ಲಿದ್ದು, ವಿಶ್ರಾಂತಿಯಲ್ಲಿರುತ್ತಾರೆ. ಹಾಗಾಗಿ ಬಹಿರಂಗ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸ್ಥಿತಿಯಲ್ಲಿರಲ್ಲ ಎಂದು ಇಂದಿರಾ ಹೇಳುತ್ತಾರೆ.

azadi ka amrit mahotsav Karnataka Government Struggles to find freedom fighters mrq
ರಾಷ್ಟ್ರಧ್ವಜ


ಇದನ್ನೂ ಓದಿ: Midday Meal: ಟೀಚರ್ ಇವತ್ತು ನಮಗೆ ಮೊಟ್ಟೆ ಬೇಡ, ಬಾಳೆಹಣ್ಣು ಕೊಡಿ; ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು

ಆ ಪೀಳಿಗೆಯನ್ನು ಕಳೆದುಕೊಳ್ತಿದ್ದೀವಿ

ಗಾಂಧೀ ಮೌಲ್ಯಗಳ ಮಾರ್ಗದಲ್ಲಿ ನಮ್ಮನ್ನು ಮುನ್ನಡೆಸಬಲ್ಲ ಪೀಳಿಗೆಯನ್ನು ಕಳೆದುಕೊಂಡಿರುವುದು ದುಃಖಕರವಾಗಿದೆ. ಬೆಂಗಳೂರಿನಲ್ಲಿ ಮಾತ್ರ ಒಬ್ಬರು ಅಥವಾ ಇಬ್ಬರು ಅಂತಹ ಹೋರಾಟಗಾರಿದ್ದಾರೆ. ಆದರೆ ನಾವು ಮುಂದುವರೆದಂತೆ, ಕೆಲವೇ ವರ್ಷಗಳಲ್ಲಿ, ಇಡೀ ಪೀಳಿಗೆಯು ಕಣ್ಮರೆಯಾಗುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವರೆಲ್ಲರೂ ಅನುಸರಿಸಿದ ಗಾಂಧಿ ತತ್ವಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವುಡೆ ಪಿ ಕೃಷ್ಣ ಹೇಳುತ್ತಾರೆ.
Published by:Mahmadrafik K
First published: