ಹುಬ್ಬಳ್ಳಿ: ಮಕರ ಸಂಕ್ರಾಂತಿ (Makara Santranti) ಸಮೀಪಿಸುತ್ತಿರುವಂತೆಯೇ ಅಯ್ಯಪ್ಪ ಭಕ್ತರ (Swamy Ayyappa Devotees) ವ್ರತವೂ ಜೋರಾಗಿದೆ. ಧಾರವಾಡ (Dharwad) ಜಿಲ್ಲೆಯಲ್ಲಿಯಂತೂ ಅಯ್ಯಪ್ಪ ಮಾಲಾಧಾರಿಗಳ ಭಕ್ತಿ ಪರಾಕಾಷ್ಟೆಗೆ ಮುಟ್ಟಿದೆ. ಭಕ್ತಿ ಪರವಶರಾದ ಅಯ್ಯಪ್ಪ ಮಾಲಾಧಾರಿ ಕೊತ ಕೊತ ಕುದಿಯುವ ಎಣ್ಣೆಯಲ್ಲಿ (Hot Oil) ಕೈ ಹಾಕಿ ಮಿರ್ಚಿ (ಬಜ್ಜಿ) ತೆಗೆದು ದೇವರಿಗೆ ಅರ್ಪಣೆ ಮಾಡುವ ದೃಶ್ಯಗಳನ್ನು (Video) ಕಂಡು ಜನತೆ ಅವಾಕ್ಕಾಗಿದೆ. ಈ ಮೈನವಿರೇಳಿಸೋ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕುದಿಯುವ ಎಣ್ಣೆಯಲ್ಲಿ ಅಯ್ಯಪ್ಪ ಮಾಲಾಧಾರಿಯೊಬ್ಬರು ಕೈ ಹಾಕಿ ಮಿರ್ಚಿ ತೆಗೆದ ನೆರದವರ ಮೈ ಜುಮ್ ಎನ್ನುವಂತೆ ಮಾಡಿದ ಘಟನೆ ಹುಬ್ಬಳ್ಳಿ ತಾಲೂಕಿನ ಕೋಳಿವಾಡ (Koliwada, Hubballi) ಗ್ರಾಮದಲ್ಲಿ ನಡೆದಿದೆ.
ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಿಂದ ಕೋಳಿವಾಡ ಗ್ರಾಮದಲ್ಲಿ ಶೋಭಾಯಾತ್ರೆ ಆಯೋಜಿಸಲಾಗಿತ್ತು. ನಂತರ ಅಯ್ಯಪ್ಪ ಪೂಜೆಗೆ ಕುಳಿತಾಗ ಮಾಲಾಧಾರಿಯೊಬ್ಬರು ಕೊತ ಕೊತ ಕುದಿಯುವ ಎಣ್ಣೆಯಲ್ಲಿ ಕೈ ಹಾಕಿದ್ದಾರೆ. ಕುದಿಯುವ ಎಣ್ಣೆಯಲ್ಲಿ ಮಿರ್ಚಿ (ಬಜ್ಜಿ) ತೆಗೆಯುವ ದೃಶ್ಯಕ್ಕೆ ಜನ ಬೆಚ್ಚಿದ್ದಾರೆ.
ಅಯ್ಯಪ್ಪ ಸ್ವಾಮಿಯ ಸ್ಮರಣೆ
ಈ ದೃಶ್ಯಗಳು ಮೈ ಜುಮ್ ಎನ್ನುವಂತೆ ಮಾಡಿವೆ. ಪ್ರಭು ಗುರುಸ್ವಾಮಿಗಳ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಅಯ್ಯಪ್ಪ ಮಾಲಾಧಾರಿಗಳಿಗೆ ಕ್ಷೀರಾಭೀಷೆಕ ಹಾಗೂ ತುಲಾಭಾರ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಯ್ಯಪ್ಪ ಭಕ್ತ ಕುದಿಯುವ ಎಣ್ಣೆಗೆ ಕೈ ಹಾಕಿ ಮಿರ್ಚಿ ತೆಗೆದರು.
ಕುದಿಯುವ ಎಣ್ಣೆಯನ್ನು ಮೈ ಮೇಲೆ ಚಿಮುಕಿಸಿಕೊಂಡು ನೆರದವರಲ್ಲಿ ಭೀತಿ ಹುಟ್ಟುವಂತೆ ಮಾಡಿದರು. ಬೆಟ್ಟದ ದೊರೆ ಅಯ್ಯಪ್ಪ ಸ್ವಾಮಿಯನ್ನು ಮಾಲಾಧಾರಿಗಳು ಸ್ಮರಿಸಿದರು.
ಬಾಣಲೆಯಿಂದ ಮಿರ್ಜಿ ತೆಗೆಯುವ ದೃಶ್ಯಗಳು
ತಮ್ಮ ಬೆರಳುಗಳನ್ನು ಬಿಸಿ ಎಣ್ಣೆಯಲ್ಲಿ ಮುಳುಗಿಸಿ ನೆರದವರಲ್ಲಿ ಮಾಲಾಧಾರಿಗಳು ಅಚ್ಚರಿ ಮೂಡಿಸಿದರು. ಎಣ್ಣೆಯಲ್ಲಿ ತೇಲುತ್ತಿರುವ ಮಿರ್ಚಿಗಳನ್ನು ಹೊರತೆಗೆದು ಅಯ್ಯಪ್ಪನ ಸನ್ನಿಧಿಗೆ ಸಮರ್ಪಣೆ ಮಾಡಲಾಯಿತು. ಅಯ್ಯಪ್ಪನ ಮಹಿಮೆಯಿಂದ ಇದೆಲ್ಲ ನಡೆಯಿತು ಅಂತ ಭಕ್ತರು ಕೊಂಡಾಡಿದು. ಬಾಣಲೆಯಿಂದ ಮಿರ್ಚಿ ತೆಗೆಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ನಾಲಾದಲ್ಲಿ ಸಿಲುಕಿದ ಹಸುವಿನ ರಕ್ಷಣೆ
ಚರಂಡಿ ನಾಲಾದಲ್ಲಿ ಸಿಲುಕಿದ ಹಸುವನ್ನು ಸಾರ್ವಜನಿಕರು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಹುಬ್ಬಳ್ಳಿಯ ಕಮರೀಪೇಟೆಯಲ್ಲಿ ನಡೆದಿದೆ. ಕಮರೀಪೇಟೆ ನಾಲಾಕ್ಕೆ ಅಚಾನಕ್ಕಾಗಿ ಹಸು ಬಿದ್ದು ಸಿಲುಕಿಕೊಂಡಿದೆ.
ಮೇಲಕ್ಕೆ ಬರಲಾಗದೆ ಹಸು ನಾಲದಲ್ಲಿಯೇ ಒದ್ದಾಡುತ್ತಿದ್ದುದನ್ನು ಗಮನಿಸಿದ ನಾಗರಿಕರು, ಹಸುವನ್ನು ಮೇಲಕ್ಕೆತ್ತಿ ಮಾನವೀಯತೆ ಮೆರೆದಿದ್ದಾರೆ. ಹಗ್ಗ ಕಟ್ಟಿ ಹಸುವನ್ನು ಮೇಲಕ್ಕೆತ್ತಿ ಸ್ಥಳೀಯರು ಪ್ರಾಣ ಉಳಿಸಿದ್ದಾರೆ. ಮೇಲಕ್ಕೆ ಬಂದ ಕೂಡಲೇ ಹಸು ನಿಟ್ಟುಸಿರುಬಿಟ್ಟಿದೆ.
ಉತ್ತರ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹ
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ, ಉತ್ತರ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಉತ್ತರ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಹುಬ್ಬಳ್ಳಿಯ ಮಿನಿ ವಿಧಾನಸೌಧದ ಎದರು ಪ್ರತಿಭಟನೆ ಮಾಡಲಾಯಿತು. ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯದಲ್ಲಿ ಪದೇ ಪದೇ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಲಾಯಿತು. ಕೃಷ್ಣಾ, ಮಹಾದಾಯಿ ಮೊದಲಾದ ನೀರಾವರಿ ಯೋಜನೆಗಳ ನಿರ್ಲಕ್ಷ್ಯ ತಾಳಲಾಗಿದೆ.
ಇದನ್ನೂ ಓದಿ: Sabarimala: 300km ವೀಲ್ ಚೇರ್ನಲ್ಲೇ ಶಬರಿಮಲೆಗೆ ತೆರಳಿದ ವ್ಯಕ್ತಿ! ಇಷ್ಟೆಲ್ಲಾ ಮಾಡಿದ್ದು ಆ ಟೀಚರ್ಗಾಗಿ ಅಂತೆ!
ಶೈಕ್ಷಣಿಕ, ಕೈಗಾರಿಕೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಉತ್ತರ ಕರ್ನಾಟಕದ ಜನತೆಗೆ ಪದೇ ಪದೇ ಅನ್ಯಾಯ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಸೌಲಭ್ಯವನ್ನು ಒದಗಿಸಬೇಕು. ಇಲ್ಲದಿದ್ದರೆ ಪ್ರತ್ಯೇಕ ರಾಜ್ಯ ಕೊಡಿ ಎಂದು ಆಗ್ರಹಿಸಲಾಯಿತು. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ