• Home
  • »
  • News
  • »
  • state
  • »
  • Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ; ಮೈಸೂರು ಅರಮನೆಯಲ್ಲಿ ಶಸ್ತ್ರಾಸ್ತ್ರಗಳಿಗೆ ಪೂಜೆ ಪುನಸ್ಕಾರ

Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ; ಮೈಸೂರು ಅರಮನೆಯಲ್ಲಿ ಶಸ್ತ್ರಾಸ್ತ್ರಗಳಿಗೆ ಪೂಜೆ ಪುನಸ್ಕಾರ

ಆಯುಧ ಪೂಜೆ

ಆಯುಧ ಪೂಜೆ

11.02 ರಿಂದ 11.25ರ ಶುಭ ಮುಹೂರ್ತದಲ್ಲಿ ಆಯುಧಗಳಿಗೆ ಯದುವೀರ ಕೃಷದತ್ತ ಚಾಮರಾಜ ಒಡೆಯರ್‌ರಿಂದ ಪೂಜೆ ಮಾಡಲಿದ್ದಾರೆ.

  • Share this:

ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ (Ayudha Puja Celebration) ಮನೆ ಮಾಡಿದೆ. ಜನರು ತಮ್ಮ ವಾಹನ, ಕೆಲಸ ಮಾಡುವ ವಸ್ತುಗಳು, ಕಂಪ್ಯೂಟರ್ ಸೇರಿದಂತೆ ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು ದೇವಸ್ಥಾನಗಳಲ್ಲಿ (Temples) ವಿಶೇಷ ಪೂಜೆಗಳು ನಡೆಯುತ್ತಿವೆ. ದೇವಸ್ಥಾನಗಳ ಮುಂಭಾಗ ವಾಹನಗಳನ್ನು ತಂದಿರುವ ಜನರು ಪೂಜೆ ಸಲ್ಲಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇತ್ತ ಮೈಸೂರು ಅರಮನೆಯಲ್ಲಿಯೂ (Mysuru Palace) ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ. ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಉತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಜನರು, ಭಕ್ತರು, ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಇಂದು ಅರಮನೆಯಲ್ಲಿ ಯದುವೀರ್ ಕೃಷದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar)‌ ಆಯುಧ ಪೂಜೆ ನೆರವೇರಿಸಲಿದ್ದಾರೆ.


ಬೆಳಗ್ಗೆ ಚಂಡಿಕಾ ಹೋಮ ಪೂಜಾ ವಿಧಿ ವಿಧಾನ ಆರಂಭವಾಗಲಿದ್ದು,  ಬೆಳಗ್ಗೆ 7.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮನವಾಗುತ್ತದೆ. 8.10ಕ್ಕೆ ರಾಜರ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ ಮಾಡಲಾಗುವುದು.


9.25ಕ್ಕೆ ಪೂಜೆ ಸಲ್ಲಿಸಿ ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆ ಕಲ್ಯಾಣಮಂಟಪಕ್ಕೆ ಆಗಮನ ಆಗಲಿದೆ. 11.02 ರಿಂದ 11.25ರ ಶುಭ ಮುಹೂರ್ತದಲ್ಲಿ ಆಯುಧಗಳಿಗೆ ಯದುವೀರ ಕೃಷದತ್ತ ಚಾಮರಾಜ ಒಡೆಯರ್‌ರಿಂದ ಪೂಜೆ ಮಾಡಲಿದ್ದಾರೆ.


ಗಗನಕ್ಕೇರಿದೆ ಹೂವಿನ ಬೆಲೆ; ದುಪ್ಪಟ್ಟಾಯ್ತು ಕುಂಬಳಕಾಯಿ ರೇಟ್


ಹಬ್ಬ ಬಂತಂದ್ರೆ ಸಾಕು ಹೂ, ಹಣ್ಣು, ತರಕಾರಿ ರೇಟು (Price) ಗಗನಕ್ಕೇರುತ್ತೆ. ಈ ವರುಷ ದಸರಾ ಹಬ್ಬಕ್ಕೆ (Dasara Festival) ಹೂವಿನ ದರ ತುಂಬಾ ಏರಿಕೆಯಾಗಿದೆ. ಕುಂಬಳಕಾಯಿ (Pumpkin) ದರ ಡಬಲ್‌ ಆಗಿದೆ. ಸಮಾಧಾನ ಸಂಗತಿ ಎಂದ್ರೆ ತರಕಾರಿ, ಹಣ್ಣಿನ ದರ (Vegetables And Fruits) ತುಂಬ ಏರಿಕೆಯಾಗಿಲ್ಲ.


Ayudha puja celebration today mrqAyudha puja celebration today mrq
ಸಾಂದರ್ಭಿಕ ಚಿತ್ರ


ಸಾಮಾನ್ಯವಾಗಿ ಹಬ್ಬದ ದಿನಗಳು ಹತ್ತಿರ ಬಂದ್ರೆ ಸಾಕು ಜನಸಾಮಾನ್ಯನ ಜೇಬಿಗೆ ಹೊರೆ ಬೀಳೋದು ಕಾಮನ್. ಕಾರಣ ಅಗತ್ಯ ವಸ್ತುಗಳ ಖರೀದಿ ಹೆಚ್ಚಾಗುವ ಕಾರಣ ಇತರೆ ದಿನಗಳಿಗೆ ಹೋಲಿಕೆ ಮಾಡಿದ್ರೆ ಹಬ್ಬದ ದಿನಗಳಲ್ಲಿ ಬೆಲೆ ಹೆಚ್ಚಾಗೇ ಇರುತ್ತೆ. ಅದರಂತೆ ಈ ಬಾರಿಯ ಆಯುಧಪೂಜೆ ದಸರಾಗೂ ದರ ಏರಿಕೆಯಾಗಿದ್ದು, ಹಬ್ಬಕ್ಕೆ ಒಂದು ದಿನ ಮುನ್ನವೆ ಖರೀದಿ ಕೂಡ ಜೋರಾಗಿದೆ.


ಇದನ್ನೂ ಓದಿ: Madikeri Dasara: ಮಡಿಕೇರಿಯಲ್ಲಿ ಮಕ್ಕಳ ದಸರಾ; ದಶಮಂಟಪ ತಯಾರಿಸಿದ ಪುಟಾಣಿಗಳು


ಹಬ್ಬದ ದಿನಗಳಲ್ಲಿ ಗಗನಕ್ಕೇರಿದೆ ಹೂವಿನ ಬೆಲೆ


ಸಾಮಾನ್ಯವಾಗಿ ಆಯುಧಪೂಜೆ ಸಂಧರ್ಭದಲ್ಲಿ ವಾಹನಗಳು, ಯಂತ್ರಗಳಿಗೆ ಹೂವಿನ ಅಲಂಕಾರದ ಜೊತೆ ಪೂಜೆ ಪುನಾಸ್ಕಾರಗಳು ಜೋರಾಗಿಯೇ ಮಾಡುವುದರಿಂದ ಹೂ ಸೇರಿದಂತೆ ಕೆಲ ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ.


ಯಾವ ಹೂವಿನ ಬೆಲೆ ಎಷ್ಟಿದೆ?


ಮಲ್ಲಿಗೆ ಹೂ 1000 ಸಾವಿರ. ಕೆಜಿ.
ಸೇವಂತಿಗೆ 300-500 ಕೆಜಿ.
ಚೆಂಡು ಹೂ 150 ರೂ ಕೆಜಿ.
ಕನಕಾಂಬರ 3 ಸಾವಿರ. ಕೆಜಿ.
ಸುಗಂಧರಾಜ 400 ಕೆಜಿ.
ಕಾಕಡ 700-800 ರೂ. ಕೆಜಿ.


Ayudha puja celebration today mrq
ಸಾಂದರ್ಭಿಕ ಚಿತ್ರ


ಬಾಳೆದಿಂಡುಗಳು ಸಹ ದುಬಾರಿ


ಇನ್ನೂ ಕೇವಲ ಹೂ ಮಾತ್ರ ಅಲ್ಲ. ಬಾಳೆ‌ದಿಂಡು ಸಹ ದರ ಹೆಚ್ಚಳವಾಗಿದೆ. ಮಳೆಯಾಗಿರುವ ಕಾರಣಕ್ಕೆ ಸಮರ್ಪಕವಾಗಿ ಬಾಳೆ, ಬಾಳೆದಿಂಡು, ಬಾಳೆಕಂಬ ಮಾರುಕಟ್ಟೆಗೆ ಬರುತ್ತಿಲ್ಲ.


ಇದನ್ನೂ ಓದಿ:  Mohammed Nalapad: ಏಯ್, ಇದು ಬೆಂಗ್ಳೂರು ಅಲ್ಲ; ನಲಪಾಡ್​ಗೆ ಮಂಡ್ಯ ಕಾರ್ಯಕರ್ತನ ಅವಾಜ್; ವಿಡಿಯೋ ಫುಲ್ ವೈರಲ್


ಕುಂಬಳಕಾಯಿ ದರ ಏರಿಕೆ


ಇನ್ನು ಹಬ್ಬಕ್ಕೆ ಬೇಕಾದ ಮತ್ತೊಂದು ಅಗತ್ಯ ವಸ್ತು ಅಂದ್ರೆ ಕುಂಬಳಕಾಯಿ. ಇದರ ಬೆಲೆ ಕೂಡ ಡಬಲ್ ಆಗಿದೆ. ತಮಿಳುನಾಡು, ಆಂಧ್ರದಿಂದ ನಗರಕ್ಕೆ ಆಗಮಿಸಿರುವ ಕುಂಬಳಕಾಯಿ ಕೆ.ಜಿಗೆ 35 ರಿಂದ 40 ರೂಗೆ ಏರಿಕೆ ಆಗಿದೆ. ಕಳೆದ ವಾರ 15 ರೂ ಇದ್ದ ಕುಂಬಳಕಾಯಿ ದರ ಈ ವಾರ ಎರಡು ಪಟ್ಟು ಏರಿಕೆಯಾಗಿದೆ.

Published by:Mahmadrafik K
First published: