2 ವರ್ಷ ಕೋವಿಡ್ನ ಸಂಕಷ್ಟದಿಂದ ಕೆಎಸ್ಆರ್ಟಿಸಿ (KSRTC) ಹಾಗೂ ಬಿಎಂಟಿಸಿ (BMTC) ನಷ್ಟದಲ್ಲಿತ್ತು. ಹೀಗಾಗಿ ಆಯುಧ ಪೂಜೆಯನ್ನು (Ayudha Pooja) ಅದ್ಧೂರಿಯಾಗಿ ಆಚರಣೆ (Celebration) ಮಾಡಲು ಸಾಧ್ಯವಾಗಲಿಲ್ಲ. ಆದ್ರೆ ಈ ಬಾರಿಯಾದ್ರೂ ಅದ್ಧೂರಿಯಾಗಿ ಆಯುಧ ಪೂಜೆಯ ದಿನ ಹಬ್ಬ ಆಚರಣೆ ಮಾಡಬೇಕು ಅಂತಿದ್ದ ಸಾರಿಗೆ ಸಿಬ್ಬಂದಿ (Transport Staff) ಆಸೆಗೆ ಸಾರಿಗೆ ನಿಗಮವು ತಣ್ಣೀರೆರೆಚಿದೆ.
ಆಯುಧ ಪೂಜೆ ಮಾಡಲು ಸಿಬ್ಬಂದಿಗೆ 100 ರೂ
ಹಬ್ಬಗಳು ಬಂತು ಅಂದ್ರೆ ಹೂವು, ಹಣ್ಣುಗಳ ರೇಟ್ ಕೇಳೋಕೆ ಆಗೋದಿಲ್ಲ. ಅಷ್ಟರ ಮಟ್ಟಿಗೆ ಬೆಲೆಯ ಏರಿಕೆ ಆಗಿರುತ್ತೆ. ಹೀಗಾಗಿ ಅನೇಕ ಜನಸಾಮಾನ್ಯರು ಕೂಡಾ ಒಂದು ಸಾವಿರ ರೂಪಾಯಿಯಲ್ಲಿ ಕಡಿಮೆ ಸಾಮಾಗ್ರಿ ಖರೀದಿ ಮಾಡೋದಕ್ಕೆ ಮಾತ್ರ ಸಾಧ್ಯವಾಗುತ್ತೆ. ಹೀಗಿರುವಾಗ ಆಯುಧಪೂಜೆಗೆ ಹೂವು, ಹಣ್ಣು, ಬಾಳೆಕಂಬ ಹಾಗೂ ಕುಂಬಳಕಾಯಿ ತಂದು ಪೂಜೆ ಮಾಡಿ ಅಂತ ಸಾರಿಗೆ ನಿಗಮದಿಂದ ಪ್ರತಿ ಬಸ್ನ ಸಿಬ್ಬಂದಿಗೆ 100 ರೂಪಾಯಿ ಕೊಡಲಾಗಿದೆ.
100 ರೂಗೆ ಹೂವು, ಗಂಧದ ಕಡ್ಡಿನೂ ಬರಲ್ಲ
ಇವತ್ತಿನ ದುಬಾರಿ ದುನಿಯಾದಲ್ಲಿ 100 ರೂಪಾಯಿಗೆ ಬೆಲೆನೇ ಇಲ್ಲ. 100 ರೂ ಕ್ಷಣ ಮಾತ್ರದಲ್ಲಿ ಖರ್ಚಾಗಿ ಕೈಯಲ್ಲಿ ಚಿಲ್ಲರೆನೂ ಉಳಿಯೋದಿಲ್ಲ. ಅಂತದ್ದರಲ್ಲಿ 100 ರೂಗೆ ಒಂದು ಬಸ್ ಸ್ವಚ್ಚಗೊಳಿಸಿ ಪೂಜೆ ಮಾಡಿ ಡೆಕೋರೇಟ್ ಮಾಡಿ ಸಂಭ್ರಮಿಸಿ ಅಂತ ಸಾರಿಗೆ ನಿಗಮಗಳು ಹೇಳಿರೋದು ನೌಕರರಿಗೆ ಬೇಸರ ತಂದಿದೆ.
ಹಬ್ಬಕ್ಕೆ ಕೊಟ್ಟ ಹಣ ಕಂಡು ಸಿಬ್ಬಂದಿ ಬೇಸರ
ಪ್ರತಿ ವರ್ಷ ಬೇರೆ ಎಲ್ಲಾ ಹಬ್ಬಕ್ಕಿಂತಲೂ ಆಯುಧ ಪೂಜೆಯಲ್ಲಿ ಬಸ್ಗಳನ್ನು ಸುಂದರವಾಗಿ ಸಿಂಗರಿಸಿ ಪೂಜೆ ಮಾಡಿ, ಬಸ್ಗಳನ್ನು ರಸ್ತೆಗಿಳಿಸೋದೆ ಬಸ್ ಸಿಬ್ಬಂದಿಗೆ ಒಂದು ರೀತಿಯ ಖುಷಿ. ಆದ್ರೆ ಈಗಿನ ದುಬಾರಿ ದುನಿಯಾಗೆ 100 ರೂಪಾಯಿಗೆ ಒಂದು ಜೋಡಿ ಬಾಳೆಕಂಬ ಕೂಡಾ ಕೊಡೋದಿಲ್ಲ. ಹೀಗಿರುವಾಗ 100 ರೂಪಾಯಿಯಲ್ಲಿ ಹೇಗೆ ತಾನೆ ಹಬ್ಬ ಮಾಡ್ತಾರೆ. ಹೀಗಾಗಿ ಇವತ್ತು ಶಾಂತಿ ನಗರ, ಮೆಜೆಸ್ಟಿಕ್, ಸೇರಿದಂತೆ ಎಲ್ಲಾ ಕಡೆಗಳಲ್ಲಿ KSRTC ಹಾಗೂ BMTC ಬಸ್ಗಳು ಪೂಜೆಯಿಲ್ಲದೆ, ಹಾಗೇ ಉಳಿದಿದ್ವು.
ಇದನ್ನೂ ಓದಿ: Mangaluru: ಚಡ್ಡಿಗಳೇ ಎಚ್ಚರ, ನಾವು ಮರಳಿ ಬರುತ್ತೇವೆ; PFI ಎಚ್ಚರಿಕೆಯ ಬರಹ
ಆಯುಧ ಪೂಜೆ ಮಾಡಲು ನಿಗಮದ ಬಳಿ ಹಣವಿಲ್ವಂತೆ
ಹಿಂದೆಯೆಲ್ಲಾ ನಿಗಮದಲ್ಲಿ ಅದ್ಧೂರಿಯಾಗಿ ಆಯುಧ ಪೂಜೆ ಮಾಡೋದು ಸಂಪ್ರದಾಯವಾಗಿತ್ತು. ಆದ್ರೆ ಕೆಲ ವರ್ಷಗಳಿಂದ ಸರಿಯಾಗಿ ಹಬ್ಬ ಮಾಡೋಕೆ ಸಾಧ್ಯವಾಗ್ತಿಲ್ಲ. ಇದಕ್ಕೆಲ್ಲ ಏನು ಕಾರಣ ಅಂತ ನೋಡೊದಕ್ಕೆ ಹೋದ್ರೆ, ಬರೋ ಮೊದಲ ಮಾತು ನಿಗಮದಲ್ಲಿ ಹಣ ಇಲ್ಲ ಅನ್ನೋದು. ವರ್ಷಕ್ಕೊಮ್ಮೆ ಬರೋ ಆಯುಧ ಪೂಜೆ ಮಾಡೋಕು ದುಡ್ಡಿಲ್ಲ ಅಂತಿದ್ದಾರೆ.
ಹಬ್ಬ ಮಾಡಲು ಬಿಡಿಗಾಸು ಕೊಟ್ಟ ಇಲಾಖೆ
ಪ್ರತೀ ವರ್ಷ ಆಯುಧ ಪೂಜೆಯಂದು ಹೂವು, ಬಾಳೆ ಕಂದು-ತೋರಣಗಳನ್ನು ಖರೀದಿಸಿ ಬಸ್ ಗಳನ್ನು ಚೆನ್ನಾಗಿ ತೊಳೆದು ಮದುವಣಗಿತ್ತಿಯಂತೆ ಸಿಂಗರಿಸಿ ಸಂಭ್ರಮಿಸುವುದು ಅವರ ವಾಡಿಕೆ. ಬಸ್ ಗಳನ್ನು ತೇರಿನಂತೆ ಆಲಂಕರಿಸಿ ದೊಡ್ಡದಾದ ಧ್ವನಿಯಲ್ಲಿ ಹಾಡನ್ನು ಹಾಕಿ, ಒಂದು ಸುತ್ತು ಹಾಕಿದರೇನೇ ಆಯುಧ ಪೂಜೆಗೆ ಸಾರ್ಥಕತೆ. ಆದ್ರೆ ಸಾರಿಗೆ ನಿಗಮದ ಚಾಲಕ ಹಾಗೂ ನಿರ್ವಾಹಕರಿಗೆ ಆಯುಧ ಪೂಜೆ ಮಾಡಿ ಎಂದು ಬಿಡಿಗಾಸು ನೀಡಿದೆ.
ಇದನ್ನೂ ಓದಿ: PFIಗೆ ಶಾಕ್ ಮೇಲೆ ಶಾಕ್; ಕೇರಳ, ತಮಿಳುನಾಡು ಸರ್ಕಾರದಿಂದಲೂ ಬ್ಯಾನ್
ಕಾರು ಜೀಪಿಗೆ 40 ರೂಪಾಯಿ
ಇಲಾಖೆಯ ಕಾರು, ಜೀಪುಗಳಿಗೆ 40 ರೂಪಾಯಿ, ಬಸ್ ಹಾಗೂ ವೋಲ್ವೋ ಬಸ್ಗೆ ಕೇವಲ 100 ರೂಪಾಯಿ ಬಿಡುಗಡೆ ಮಾಡಿದೆ. ಹೀಗಾಗಿ ಈ ಬಾರಿ ಸಾರಿಗೆ ಸಿಬ್ಬಂದಿ ಹಬ್ಬ ಆಚರಣೆ ಮಾಡದೆ ಇರೋ ರೀತಿ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ