• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Veerappa Moily: ಅಯೋಧ್ಯ ರಥಯಾತ್ರೆ ನಡೆಯೋವರೆಗೂ ದೇಶದೊಳಗೆ ಉಗ್ರಗಾಮಿಗಳು ಇರಲಿಲ್ಲ; ಮೊಯ್ಲಿ ವಿವಾದಾತ್ಮಕ ಹೇಳಿಕೆ

Veerappa Moily: ಅಯೋಧ್ಯ ರಥಯಾತ್ರೆ ನಡೆಯೋವರೆಗೂ ದೇಶದೊಳಗೆ ಉಗ್ರಗಾಮಿಗಳು ಇರಲಿಲ್ಲ; ಮೊಯ್ಲಿ ವಿವಾದಾತ್ಮಕ ಹೇಳಿಕೆ

ವೀರಪ್ಪ ಮೊಯ್ಲಿ

ವೀರಪ್ಪ ಮೊಯ್ಲಿ

ಯುಪಿಎ ಸರ್ಕಾರ ಇದ್ದಾಗ ಹೀಗೆ ಇರಲಿಲ್ಲ. ಸರ್ದಾರ್ ಪಟೇಲರು RSS ಬ್ಯಾನ್ ಮಾಡಬೇಕೆಂದು ಹೊರಟಾಗ ನೆಹರೂ ಅವರು ತಡೆದರು. ಇಂದು ಆ ಸಂಘಟನೆ ಆರಾಧ್ಯ ದೈವ ಪಟೇಲರಾಗಿದ್ದಾರೆ.

  • Share this:

ರಾಜಸ್ಥಾನ ಶಿರಚ್ಚೇಧ ಹತ್ಯೆ (Udaipur Case) ಪ್ರಕರಣದ ಕುರಿತು ಹೇಳಿಕೆ ನೀಡುವಾಗ ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ (Former CM Veerappa Moily) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಯೋಧ್ಯ ರಥ ಯಾತ್ರೆ (Ayodya Ratha Yatre) ನಡೆಯುವವರೆಗೆ ದೇಶದಲ್ಲಿ ಒಳಗೆ ಉಗ್ರಗಾಮಿಗಳು ಇರಲಿಲ್ಲ. ದೇಶದಲ್ಲಿ ಅಯೋಧ್ಯ ರಥ ಯಾತ್ರೆ ನಡೆಯುವವರೆಗೆ ‘ಡೊಮೆಸ್ಟಿಕ್ ಟೆರರಿಸಂ’ (Domestic Terrorism) ಇರಲಿಲ್ಲ. ಅನಂತರ ದೇಶದಲ್ಲಿ ಉಗ್ರಗಾಮಿ ವ್ಯವಸ್ಥೆ ಹುಟ್ಟಿಕೊಂಡಿದೆ. ಮೊದಲು ದೇಶಿಯ ಉಗ್ರಗಾಮಿ ವ್ಯವಸ್ಥೆಯನ್ನ ಹತ್ತಿಕ್ಕಬೇಕು. ಹತ್ತಿಕ್ಕುವ ಕೆಲಸ ಮೊದಲು ಆಗಬೇಕು. ತರಬೇತಿ ಕೊಡುವುದನ್ನು ಹತ್ತಿಕ್ಕಬೇಕು ಎಂದು ಆಗ್ರಹಿಸಿದರು.


ಸಮಾಜದ ನೆಮ್ಮದಿ‌ ಕದಡಲು ಎಲ್ಲರೂ ಕಾರಣ. ಪ್ರಚೋದನೆ ಎರಡೂ ಕಡೆಯಿಂದ ಬಂದಾಗ ಸಮಸ್ಯೆ ಆಗುತ್ತದೆ.  ಪ್ರಚೋದನೆ ಹತ್ತಿಕ್ಕುವ ಕೆಲಸ ಮಾಡಬೇಕು. ಹ್ಯಾಪಿಸೆನ್ ಇಂಡೆಕ್ಸ್ ಪಟ್ಟಿಯಲ್ಲಿ ಭಾರತ ಕುಸಿತ ಆಗುತ್ತಿದೆ. SDPI ಮತ್ತು ಹಿಂದೂ ಸಂಘಟನೆಗಳ ಜನರ ನೆಮ್ಮದಿ ಕದಡುತ್ತಿದೆ ಎಂದು ಆರೋಪಿಸಿದರು.


ಹಿಂದೂ ಪ್ರಚೋದನೆ ತಡೆಯಬೇಕು


ಯುಪಿಎ ಸರ್ಕಾರ ಇದ್ದಾಗ ಹೀಗೆ ಇರಲಿಲ್ಲ. ಸರ್ದಾರ್ ಪಟೇಲರು RSS ಬ್ಯಾನ್ ಮಾಡಬೇಕೆಂದು ಹೊರಟಾಗ ನೆಹರೂ ಅವರು ತಡೆದರು. ಇಂದು ಆ ಸಂಘಟನೆ ಆರಾಧ್ಯ ದೈವ ಪಟೇಲರಾಗಿದ್ದಾರೆ. SDPI ತರಹದ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಹಿಂದೂ ಪ್ರಚೋದನೆಯನ್ನೂ ತಡೆಯಬೇಕು ಎಂದರು.


ಇದನ್ನೂ ಓದಿ: ಎಲ್ಲಾ ಮಾಡ್ಬಿಟ್ಟು ನೂಪುರ್ ಶರ್ಮಾ ಮನೆಯಲ್ಲಿ ಚಿಲ್ ಮಾಡ್ತಿದ್ದಾರೆ! TMC ಸಂಸದೆಯ ವಾಗ್ದಾಳಿ


ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ


ರಾಜಸ್ಥಾನದಲ್ಲಿ ಹತ್ಯೆ ಪ್ರಕರಣ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್, ಉದಯಪುರ ಘಟನೆಯನ್ನು ಎಲ್ಲರೂ ಖಂಡಿಸುತ್ತೇವೆ. ದೇಶದ ಎಲ್ಲ ಕಡೆ ಅಶಾಂತಿ ಮೂಡುತ್ತಿದೆ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಿಂದೂಗಳಾಗಲಿ, ಯಾರೇ ಆಗಲಿ ಯಾರೇ ಈ ರೀತಿ ಮಾಡಿದರೂ ಸೂಕ್ತ ಕ್ರಮ ಆಗಬೇಕು ಎಂದು ಹೇಳಿದರು.

ದೇಶದಲ್ಲಿ ಶಾಂತಿ ತರುವ ಕೆಲಸ ಆಗಬೇಕು. ಇದು ಕುಮ್ಮಕ್ಕಲ್ಲ, ಎಲ್ಲೋ ಒಂದು ಕಡೆ ಕೆರಳಿಸುವ ಕೆಲಸ ಆಗ್ತಿದೆ. ಬುಲ್ಡೋಜರ್ ಪದ ಕೇಳಿರಲಿಲ್ಲ, ಈಗ ಬುಲ್ಡೋಜರ್ ಕೇಳ್ತಿದ್ದೀವಿ. ಹಿಜಾಬ್ ಪದ ಕೇಳಿರಲಿಲ್ಲ. ವ್ಯಾಪಾರ ವ್ಯವಹಾರ ನಿರ್ಬಂಧ ಹೇರಲಾಗ್ತಿದೆ ಸಮಾಜದಲ್ಲಿ ಎಲ್ಲರೂ ಕೂಡ ಸರ್ಕಾರನೇ ಬೆದರಿಸುವ ಕೆಲಸ ಇಂಡೈರೆಕ್ಟ್ ಆಗಿ ಮಾಡುತ್ತಿದೆ.

ಸರ್ಕಾರವೇ ಜನರನ್ನು ದಾರಿ ತಪ್ಪಿಸುತ್ತಿದೆ


ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ನೋಡಿದ್ದೀರಿ. ಜನರ ದಿಕ್ಕನ್ನು ಬೇರೆ ಕಡೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗುತ್ತಿದೆ. ಆನ್ ಲೈನ್ ನಲ್ಲಿ ಒಂದು, ವಿದ್ಯಾರ್ಥಿಗಳಿಗೆ ನೀಡಿದ ಪುಸ್ತಕದಲ್ಲಿ ಒಂದು ಪಾಠ ಮಾಡಲಾಗ್ತಿದೆ. ಸರ್ಕಾರವೇ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು.


ಟೈಲರ್ ಕನ್ಹಯ್ಯಾ ಲಾಲ್ ಕುಟುಂಬಕ್ಕೆ 31 ಲಕ್ಷ ಪರಿಹಾರ


ಇಬ್ಬರು ವ್ಯಕ್ತಿಗಳಿಂದ ಶಿರಚ್ಛೇದ ಮಾಡಿ ಕೊಲ್ಲಲ್ಪಟ್ಟ ಟೈಲರ್ ಕನ್ಹಯ್ಯಾ ಲಾಲ್ ಕುಟುಂಬಕ್ಕೆ ₹31 ಲಕ್ಷ ಆರ್ಥಿಕ ಪರಿಹಾರ (Compensation) ನೀಡಲಾಗುವುದು ಎಂದು ರಾಜಸ್ಥಾನದ (Rajastan) ಉದಯಪುರ (Udaipur) ವಿಭಾಗೀಯ ಆಯುಕ್ತ ರಾಜೇಂದ್ರ ಭಟ್ ತಿಳಿಸಿದ್ದಾರೆ.


ಆರೋಪಿಗಳ ಬಂಧನ


ಅಮಾನತುಗೊಂಡಿರುವ ಬಿಜೆಪಿ (BJP) ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮದ ಪೋಸ್ಟ್ ಅನ್ನು ಹಂಚಿಕೊಂಡ ಕೆಲವು ದಿನಗಳ ನಂತರ ಉದಯಪುರದ ಮಾಲ್ದಾಸ್ ರಸ್ತೆಯಲ್ಲಿ ಲಾಲ್ ಅವರ ಶಿರಚ್ಛೇದ ಮಾಡಲಾಗಿದೆ. ಶಿರಚ್ಛೇದದಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳನ್ನು ರಾಜ್‌ಸಮಂದ್‌ನಿಂದ ಬಂಧಿಸಲಾಗಿದೆ.


ಇದನ್ನೂ ಓದಿ:  Credit Politics: ಮೈಸೂರಿನಲ್ಲಿ ಕಾಂಗ್ರೆಸ್, ಬಿಜೆಪಿಯಿಂದ ಪಾದಯಾತ್ರೆ; ನೀವು ಯಾಕೆ ಹಂದಿ ಏರಿ ಬರೋದಕ್ಕೆ ಮುಂದಾದ್ರಿ? ಪ್ರತಾಪ್ ಸಿಂಹ ಪ್ರಶ್ನೆ


ಅಮಾನತುಗೊಂಡಿರುವ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಇಂದು ಉದಯ್‌ಪುರದ (Udaipur) ಮಾಲ್ದಾಸ್ ಪ್ರದೇಶದಲ್ಲಿ ಟೇಲರ್ ಓರ್ವನ ಶಿರಚ್ಛೇದ ಮಾಡಿದ್ದಾರೆ.

top videos
    First published: