ಡಿಸಿ ಮನೆ ಎದುರು ಶೌಚಾಲಯ ಹೋಮ: ಅರಿವು ಮೂಡಿಸುವ ಭರದಲ್ಲಿ ಮಹಿಳಾ ಟಾಯ್ಲೆಟ್​ಗೆ ನುಗ್ಗಿದ ಕರವೇ ಕಾರ್ಯಕರ್ತರು

news18
Updated:October 1, 2018, 2:46 PM IST
ಡಿಸಿ ಮನೆ ಎದುರು ಶೌಚಾಲಯ ಹೋಮ: ಅರಿವು ಮೂಡಿಸುವ ಭರದಲ್ಲಿ ಮಹಿಳಾ ಟಾಯ್ಲೆಟ್​ಗೆ ನುಗ್ಗಿದ ಕರವೇ ಕಾರ್ಯಕರ್ತರು
  • Advertorial
  • Last Updated: October 1, 2018, 2:46 PM IST
  • Share this:
ಮಹೇಶ ವಿ. ಶಟಗಾರ, ನ್ಯೂಸ್​ 18 ಕನ್ನಡ

ವಿಜಯಪುರ(ಅ. 01): ಜಿಲ್ಲಾಧಿಕಾರಿ ನಿವಾಸದ ಎದುರು ಶೌಚಾಲಯ ಹೋಮ ನಡೆಸಿದಿದ್ದು, ಬಯಲು ಮುಕ್ತ ಶೌಚಾಲಯದ ಬಗ್ಗೆ ವಿನೂತನ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿತ್ತು. ಆದರೆ ಕರವೇ ಕಾರ್ಯಕರ್ತರು ಹಾಸ್ಯದ ಮೂಲಕ ಅರಿವು ಮೂಡಿಸುವ ಭರದಲ್ಲಿ ತಾವೇ ಅಪಹಾಸ್ಯಕ್ಕೀಡಾಗಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು? ಇಲ್ಲಿದೆ ವಿವರ.

ವಿಜಯಪುರದಲ್ಲಿ ಬಯಲು ಮುಕ್ತ ಶೌಚಾಲಯದ ಬಗ್ಗೆ ಅರಿವು ಮೂಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್​ ಶೆಟ್ಟಿ ಬಣದ ಕಾರ್ಯಕರ್ತರು ವಿನೂತನ ಕಾರ್ಯಕ್ರಮ ರೂಪಿಸಿದ್ದರು. ವಿಜಯಪುರ ಜಿಲ್ಲಾಧಿಕಾರಿ ನಿವಾಸದ ಎದುರು ಮಹಾನಗರ ಪಾಲಿಕೆಗೆ ಸೇರಿದ ಮೊಬೈಲ್ ಟಾಯ್ಲೆಟ್ ತಂದು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯಕರ್ತನೊಬ್ಬ ಬಯಲು ಶೌಚಾಲಯದಲ್ಲಿ ಕುಳಿತಿದ್ದರು. ಆತನ ಬಳಿಗೆ ತೆರಳಿದ ಬ್ರಹ್ಮಾಂಡ ಗುರೂಜಿ ವೇಶದ ಕಲಾವಿದ ಮತ್ತು ಜ್ಯೂನಿಯರ್ ಗಣೇಶ ಖ್ಯಾತಿಯ ಶಕ್ತಿಕುಮಾರ ಇಲ್ಲೇನು ಮಾಡ್ತಿದ್ದೀಯಾ ಏಳಪ್ಪ ಏಳು. ಹೀಗೆ ಬಯಲು ಶೌಚಾಲಯದಲ್ಲಿ ಕುಳಿತುಕೊಳ್ಳಬೇಡ. ಇದರಿಂದ ಕಾಲರಾ ಸೇರಿದಂತೆ ನಾನಾ ಸಾಂಕ್ರಾಮಿಕ ರೋಗಗಳು ಬರುತ್ತವೆ. ಸರಕಾರ ಶೌಚಾಲಯ ನಿರ್ಮಿಸಿಕೊಳ್ಳರು ಧನಸಹಾಯ ಮಾಡುತ್ತದೆ ಎಂದು ಅರಿವು ಮೂಡಿಸಿದರು.ಇದರ ಮುಂದಿನ ಭಾಗವಾಗಿ ಕಲಾವಿದ ಆಗಲೇ ನಿರ್ಮಿಸಿದ್ದ ಮಾದರಿಯಲ್ಲಿದ್ದ ಶೌಚಾಲಯದಿಂದ ಹೊರ ಬಂದು ಇದು ಚೆನ್ನಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಆ ಯುವಕ  ಮಹಿಳಾ ಶೌಚಾಲಯದಿಂದ ಹೊರಗೆ ಬಂದಿದ್ದು, ಇದೇ ಯಡವಟ್ಟಿಗೆ ಕಾರಣವಾಯಿತು. ಆದರೆ, ಇದನ್ನು ಸಮರ್ಥಿಸಿಕೊಂಡ ಕಲಾವಿದರು, ಆ ಹಳ್ಳಿಯ ಹೈದ ಅನಕ್ಷರಸ್ಥ ಆತನಿಗೆ ಓದಲುಬಾರದು ಎಂದು ಸಮಜಾಯಿಸಿ ನೀಡಿದರು.ಅಷ್ಟೇ ಅಲ್ಲ, ನಂತರ ಈ ಕಾರ್ಯಕರ್ತರು ಜಿಲ್ಲಾಧಿಕಾರಿ ನಿವಾಸದ ಎದುರೇ ಶೌಚಾಲಯ ಹೋಮ ನಡೆಸುವ ಮೂಲಕ ಗಮನ ಸೆಳೆದರು. ಶೌಚಾಲಯ ಇರುವ ಮನೆಗೆ ಮಾತ್ರ ಹೆಣ್ಣು ಕೊಡಿ ಎಂದು ನೆರೆದ ಜನರಿಗೆ ಸಂದೇಶ ನೀಡಿದರು. ಅಲ್ಲದೇ, ಶೌಚಾಲಯ ಮಾದರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿನೂತನವಾಗಿ ಬಯಲು ಮುಕ್ತ ಶೌಚಾಲಯ ಕುರಿತು ಅರಿವು ಮೂಡಿಸಿದರು.
First published:October 1, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ