• Home
  • »
  • News
  • »
  • state
  • »
  • Bengaluru-Mysuru Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಆಟೋ, ಬೈಕ್​​ಗಳಿಗೆ ನೋ ಎಂಟ್ರಿ

Bengaluru-Mysuru Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಆಟೋ, ಬೈಕ್​​ಗಳಿಗೆ ನೋ ಎಂಟ್ರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪರಿಶೀಲನೆಯ ನಂತರ ಮಾತನಾಡಿದ ಸಚಿವರು, "ನೀವು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಯ ಮೇಲೆ ಪ್ರಯಾಣಿಸಿದರೆ, ನೀವು ನನ್ನನ್ನು ನೆನಪಿಸಿಕೊಳ್ಳುತ್ತೀರಿ" ಎಂದು ಹೇಳಿದರು.

  • Trending Desk
  • 3-MIN READ
  • Last Updated :
  • Share this:

ಬೆಂಗಳೂರು: ಮೊನ್ನೆ ತಾನೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Union Minister Nitin Gadkari) ಅವರು ವೈಮಾನಿಕ ಸಮೀಕ್ಷೆಯ ಮೂಲಕ 10 ಪಥದ ಮೈಸೂರು-ಬೆಂಗಳೂರು (Bengaluru-Mysuru 10 Lane Way) ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್ ವೇ (ಎನ್ಎಚ್ 275) ಪ್ರಗತಿಯ ಪರಿಶೀಲನೆ ಮಾಡಿದ್ದು ನಮಗೆಲ್ಲಾ ಗೊತ್ತೇ ಇದೆ. ಗಡ್ಕರಿ ಅವರ ಜೊತೆಯಲ್ಲಿ ರಾಜ್ಯದ ಪಿಡಬ್ಲ್ಯೂಡಿ ಸಚಿವ ಸಿ.ಸಿ.ಪಾಟೀಲ್ (Minister CC Patil) ಮತ್ತು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (MP Pratap Simha) ಸಹ ಇದ್ದರು. 118 ಕಿಲೋ ಮೀಟರ್ ಉದ್ದದ ಈ ಹೆದ್ದಾರಿಯನ್ನು ಕರ್ನಾಟಕ ವಿಧಾನಸಭಾ ಚುನಾವಣೆಗೂ (Karnataka Assembly Election 2023) ಮುನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.


ಇದೇ ಫೆಬ್ರುವರಿ ಅಂತ್ಯದ ವೇಳೆಗೆ ಉದ್ಘಾಟನೆಯಾಗಲಿದೆಯಂತೆ ಈ ಎಕ್ಸ್‌ಪ್ರೆಸ್ ವೇ


ಗ್ರೀನ್‌ಫೀಲ್ಡ್ ಕಾರಿಡಾರ್ ಯೋಜನೆಯ ಭಾಗವಾಗಿರುವ 10 ಪಥದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ 2023 ರ ಫೆಬ್ರುವರಿ ಅಂತ್ಯದ ವೇಳೆಗೆ ಉದ್ಘಾಟನೆಯಾಗಲಿದೆ. ಆದರೆ ಇದೀಗ ಬಂದಿರುವ ಹೊಸ ಸುದ್ದಿ ಏನೆಂದರೆ, ಈ ಎಕ್ಸ್‌ಪ್ರೆಸ್ ವೇ ನಲ್ಲಿ ಯಾವುದೇ ರೀತಿಯ ಬೈಕ್ ಗಳು, ಸ್ಕೂಟರ್ ಗಳು, ಆಟೋ ರಿಕ್ಷಾಗಳು ಮತ್ತು ನಿಧಾನವಾಗಿ ಚಲಿಸುವ ವಾಹನಗಳನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.


ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು?


ಶುಕ್ರವಾರ, ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಈ ಎಕ್ಸ್‌ಪ್ರೆಸ್ ವೇ ನಲ್ಲಿ ಯಾವುದೇ ಆಟೋ ರಿಕ್ಷಾಗಳು ಮತ್ತು ಬೈಕುಗಳಿಗೆ ಚಲಿಸಲು ಅನುಮತಿ ನೀಡುವುದಿಲ್ಲ ಎಂದು ಖಚಿತಪಡಿಸಿದ್ದಾರೆ.


ಈ ಎಕ್ಸ್‌ಪ್ರೆಸ್ ವೇ ಕೇವಲ ನಾಲ್ಕು ಚಕ್ರದ ವಾಹನಗಳು ಮತ್ತು ಭಾರೀ ವಾಹನಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಸಂಸದರು ಹೇಳಿದರು.


Autos bikes will not be allowed on Bengaluru Mysuru expressway says mp pratap simha stg mrq
ಬೆಂಗಳೂರು ಮೈಸೂರು ಹೆದ್ದಾರಿ


ಬೈಕ್ ಗಳು ಮತ್ತು ಆಟೋಗಳು ಎಕ್ಸ್‌ಪ್ರೆಸ್ ವೇ ಗೆ ಸಮಾನಾಂತರವಾಗಿ ನಿರ್ಮಿಸಿದ ಸರ್ವಿಸ್ ರಸ್ತೆಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.


ಎಕ್ಸ್‌ಪ್ರೆಸ್ ವೇ ಯಲ್ಲಿ ದ್ವಿಚಕ್ರ ವಾಹನ ಸವಾರರ ಪ್ರವೇಶವನ್ನು ತಡೆಯಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಈಗಾಗಲೇ ಅಧಿಸೂಚನೆ ಹೊರಡಿಸಿತ್ತು.


ಒಮ್ಮೆ ಎಕ್ಸ್‌ಪ್ರೆಸ್ ವೇ ಕಾರ್ಯಾರಂಭ ಮಾಡಿದ ನಂತರ, ರಾಷ್ಟ್ರೀಯ ಹೆದ್ದಾರಿ 275 ಬೆಂಗಳೂರು ಮತ್ತು ಮೈಸೂರು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 90 ನಿಮಿಷಗಳಿಗೆ ಇಳಿಸುವ ನಿರೀಕ್ಷೆಯಿದೆ, ಇದು ಪ್ರಸ್ತುತ ಮೂರು ಗಂಟೆಗಳಿಗಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ.


ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ


9000 ಕೋಟಿ ರೂಪಾಯಿಗಳ ಒಟ್ಟು ಯೋಜನಾ ವೆಚ್ಚದಲ್ಲಿ ನಿರ್ಮಿಸಲಾದ 118 ಕಿಲೋ ಮೀಟರ್ ಕಾರಿಡಾರ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.


ಒಂದು ಬೆಂಗಳೂರಿನಿಂದ ನಿಡಘಟ್ಟ ಮತ್ತು ಇನ್ನೊಂದು ನಿಡಘಟ್ಟದಿಂದ ಮೈಸೂರಿಗೆ ಅಂತ ಹೇಳಬಹುದು. ಈ ವಿಸ್ತರಣೆಯಲ್ಲಿ, 52 ಕಿಲೋ ಮೀಟರ್ ಐದು ಬೈಪಾಸ್ ಗಳನ್ನು ಒಳಗೊಂಡಿದೆ.


Autos bikes will not be allowed on Bengaluru Mysuru expressway says mp pratap simha stg mrq
ದಶಪಥ ಹೆದ್ದಾರಿ


ಇದು ಬೆಂಗಳೂರಿನ ಸಂಚಾರ ತಡೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಎಲ್ಲಾ ಪ್ರಯಾಣಿಕರಿಗೆ ತೊಂದರೆಯಿಲ್ಲದ ಪ್ರಯಾಣವನ್ನು ಸೃಷ್ಟಿಸುತ್ತದೆ.


ಇದನ್ನೂ ಓದಿ: Bengaluru Traffic: ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡಲು ನಿತಿನ್ ಗಡ್ಕರಿ ಪ್ಲಾನ್ ಹೀಗಿದೆ


ಒಟ್ಟು 10 ಪಥಗಳ ಪೈಕಿ, ಎರಡೂ ಬದಿಗಳಲ್ಲಿ ಎರಡು ಪಥಗಳು ಹಳ್ಳಿಗಳಿಗೆ ಮತ್ತು 6 ಪಥದ ಮುಖ್ಯ ಕ್ಯಾರೇಜ್ ವೇಯನ್ನು ನೇರ ಹೆದ್ದಾರಿ ಸಂಚಾರಕ್ಕೆ ಸಮರ್ಪಿಸಲಾಗುವುದು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಎಕ್ಸ್‌ಪ್ರೆಸ್ ವೇ ಯನ್ನು ಪರಿಶೀಲಿಸಿದರು ಮತ್ತು ಇದು ಫೆಬ್ರವರಿ 2023 ರಲ್ಲಿ ಪ್ರಯಾಣಿಕರಿಗೆ ಮುಕ್ತವಾಗಲಿದೆ ಎಂದು ಘೋಷಿಸಿದರು.


ಪರಿಶೀಲನೆಯ ನಂತರ ಮಾತನಾಡಿದ ಸಚಿವರು, "ನೀವು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಯ ಮೇಲೆ ಪ್ರಯಾಣಿಸಿದರೆ, ನೀವು ನನ್ನನ್ನು ನೆನಪಿಸಿಕೊಳ್ಳುತ್ತೀರಿ" ಎಂದು ಹೇಳಿದರು.


ಇದು ಹೊಸ ಹೂಡಿಕೆಗಳಿಗೆ ಮಾರ್ಗ


"ತುಲನಾತ್ಮಕವಾಗಿ ಅಗ್ಗದ ಜೀವನ ವೆಚ್ಚದ ನಗರಕ್ಕೆ ಜನಸಂದಣಿಯನ್ನು ವರ್ಗಾಯಿಸುವ ಮೂಲಕ ಬೆಂಗಳೂರಿನ ಜನ ದಟ್ಟಣೆಯನ್ನು ಕಡಿಮೆ ಮಾಡುವುದು ಇದರ ಒಂದು ಉದ್ದೇಶವಾಗಿದೆ. ಈ ಯೋಜನೆಯು ಮೈಸೂರಿನ ಕೈಗಾರಿಕೆಗಳು, ರಿಯಲ್ ಎಸ್ಟೇಟ್ ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ ಹೊಸ ಹೂಡಿಕೆಗಳಿಗೆ ಮಾರ್ಗಗಳನ್ನು ವಿಸ್ತರಿಸುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

Published by:Mahmadrafik K
First published: