ಬೆಂಗಳೂರು: ಕೆಲ ದಿನಗಳ ಹಿಂದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಆಟೋ ಚಾಲಕರು (Auto Drivers) ರಾಪಿಡೋ ಬೈಕ್‌ಗಳಿಗೆ (Rapido Taxi) ಕಡಿವಾಣ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಒಂದು ದಿನ ಆಟೋ ರಿಕ್ಷಾ ಸೇವೆ ಬಂದ್ ಮಾಡಿದ್ದವು. ಅದಾಗ್ಯೂ ರಾಜ್ಯ ಸರ್ಕಾರ ಆಟೋ ಚಾಲಕರ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಆಟೋ ಚಾಲಕರು ಮತ್ತೊಂದು ಅಭಿಯಾನದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಬೆಂಗಳೂರಿನ 21 ಆಟೋ ಚಾಲಕರ ಸಂಘಟನೆಗಳು ಕಳೆದ ಮಾರ್ಚ್ 20ರಂದು ಒಂದು ದಿನ ಆಟೋ ಮುಷ್ಕರಕ್ಕೆ ಮುಂದಾಗಿದ್ದವು. ಅದಕ್ಕೂ ಹಿಂದೆಯೇ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಆಟೋ ಸಂಘಟನೆ ಮುಖಂಡರು ಮೂರು ದಿನಗಳ ಗಡುವು ನೀಡಿದ್ದರು. ಆದರೆ ನೀಡಿದ್ದ ಗಡುವು ಮುಗಿದ ಕಾರಣ ಮತ್ತು ಸರ್ಕಾರ ತಮ್ಮ ಬೇಡಿಕೆಗೆ ಯಾವ ರೀತಿಯಲ್ಲೂ ಸ್ಪಂದಿಸದ ಹಿನ್ನೆಲೆ ಆಟೋ ಚಾಲಕರು ಮಾರ್ಚ್ 20ಕ್ಕೆ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು.
ಇದನ್ನೂ ಓದಿ: Electric Car: ಕೈಗೆಟಕುವ ದರದಲ್ಲಿ ಸೂಪರ್ ಎಲೆಕ್ಟ್ರಿಕ್ ಕಾರ್ ತಯಾರು! ಆಟೋ ಚಾಲಕನ ಅದ್ಭುತ ಸೃಷ್ಟಿಗೆ ಕಂಪನಿಗಳೇ ಶಾಕ್!
ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ!
ಆಟೋ ಚಾಲಕರ ಈ ಪ್ರತಿಭಟನೆಗೂ ಸರ್ಕಾರ ಬಗ್ಗದೇ ಇರುವ ಕಾರಣ ರೊಚ್ಚಿಗೆದ್ದರುವ ಆಟೋ ಚಾಲಕರು ಕಠಿಣ ನಿರ್ಧಾರಕ್ಕೆ ಮುಂದಾಗಿದ್ದು, ಇದೀಗ ಮತ್ತೊಂದು ಅಭಿಯಾನಕ್ಕೆ ನಿರ್ಧಾರ ಮಾಡಿದ್ದಾರೆ. ಇದೀಗ ಆಟೋ ಚಾಲಕರು ತಮ್ಮ ಹೆಂಡತಿ ಮತ್ತು ಮಕ್ಕಳ ಜೊತೆ ವಿಡಿಯೋ ಮಾಡಿ ನಾವು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡೋದಿಲ್ಲ. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದನೆ ಮಾಡಿಲ್ಲ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಆಟೋ ಚಾಲಕರು ತಮ್ಮ ಕುಟುಂಬದ ಸದಸ್ಯರ ಜೊತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್, ಸ್ಟೇಟಸ್ ಹಾಕುತ್ತಿದ್ದಾರೆ.
ಇದನ್ನೂ ಓದಿ: Auto Drivers Strike: ಆಟೋ ಚಾಲಕರ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಪ್ರಯಾಣಿಕರಿಂದ ದುಪ್ಪಟ್ಟು ಸುಲಿಗೆಗೆ ಇಳಿದ ಡ್ರೈವರ್ಸ್!
ಆಟೋ ಚಾಲಕರು ತಮ್ಮ ಕುಟುಂಬ ಸದಸ್ಯರ ಜೊತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದು, ಈ ವಿಡಿಯೋದಲ್ಲಿ, ರಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಲಿಲ್ಲ ಅಂದರೆ ಈ ಬಾರಿಯ ಚುನಾವಣಾ ಬಹಿಷ್ಕಾರ ಮಾಡುತ್ತೇವೆ. ರಾಪಿಡೋ ಬೈಕ್ ಟ್ಯಾಕ್ಸಿಯಿಂದ ಮಕ್ಕಳಿಗೆ ಸ್ಕೂಲ್ ಫೀಸ್ ಕಟ್ಟಲು ಆಗ್ತಿಲ್ಲ. ತಂದೆ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಮೆಡಿಸಿನ್ ಕೊಡಿಸಲು ಆಗ್ತಿಲ್ಲ. ರಾಪಿಡೋ ಬೈಕ್ ಟ್ಯಾಕ್ಸಿ ನಾವು ಜೀವನ ನಡೆಸಲು ಪರದಾಡ್ತಿದ್ದೇವೆ ಎಂದು ಆಟೋ ಚಾಲಕರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಇದೇ ವಿಡಿಯೋದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ದಯವಿಟ್ಟು ರಾಪಿಡೋ ಬೈಕ್ ಟ್ಯಾಕ್ಸಿ ಅನ್ನು ಬ್ಯಾನ್ ಮಾಡಿ ಎಂದು ಮನವಿ ಮಾಡಿರುವ ಆಟೋ ಚಾಲಕರು, ಈಗಾಗಲೇ ಸಾರಿಗೆ ಸಚಿವ ಶ್ರೀ ರಾಮುಲು ಕಳೆದ ವಾರ ಬಳ್ಳಾರಿಯಲ್ಲಿ ಎಲೆಕ್ಷನ್ ಒಳಗೆ ಆಟೋ ಚಾಲಕರಿಗೆ ಸಿಹಿಸುದ್ದಿ ನೀಡ್ತೀನಿ ಎಂದಿದ್ದಾರೆ. ರಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಲು ಸಾರಿಗೆ ಇಲಾಖೆಯ ಕಾರ್ಯದರ್ಶಿ ಮತ್ತು ಆರ್‌ಟಿಓ ಕಮೀಷನರ್‌ಗೆ ಹೇಳಿದ್ದೀನಿ ಎಂದು ಹೇಳಿಕೆ ನೀಡಿದ್ದರು. ಆದರೆ ಒಂದು ವಾರ ಕಳೆದರೂ ಯಾವುದೇ ರಾಪಿಡೋ ಬ್ಯಾನ್ ಮಾಡುವ ಆದೇಶ ಹೊರಡಿಸಿಲ್ಲ. ಹಾಗಾಗಿ ಶ್ರೀ ರಾಮುಲು ಮಾತು ತಪ್ಪಿದ್ದಾರೆ ಎಂದು ಆಟೋ ಚಾಲಕರು ತಮ್ಮ ಹೆಂಡತಿ ಮಕ್ಕಳೊಂದಿಗೆ ವಿಡಿಯೋ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ