• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • 2.6 ಲಕ್ಷ ಹಣವಿದ್ದ ಬ್ಯಾಗ್​ನ್ನು ಪ್ರಯಾಣಿಕರಿಗೆ ಹಿಂದಿರುಗಿಸಿದ ಆಟೋ ಚಾಲಕ: ಪ್ರಾಮಾಣಿಕತೆ ಸಿಕ್ತು ಸೂಕ್ತ ಬಹುಮಾನ..!

2.6 ಲಕ್ಷ ಹಣವಿದ್ದ ಬ್ಯಾಗ್​ನ್ನು ಪ್ರಯಾಣಿಕರಿಗೆ ಹಿಂದಿರುಗಿಸಿದ ಆಟೋ ಚಾಲಕ: ಪ್ರಾಮಾಣಿಕತೆ ಸಿಕ್ತು ಸೂಕ್ತ ಬಹುಮಾನ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಟೋ ಚಾಲಕನ ಪ್ರಾಮಾಣಿಕತೆ ಮೆಚ್ಚಿ  ಪಾಂಡೆ, 3,000 ರೂ. ಬಹುಮಾನ ನೀಡಿದರು. ನಂತರ, ಡಿಸಿಪಿ ಪಾಟೀಲ್  8,000 ರೂ. ಬಹುಮಾನ ನೀಡಿ ಪುರಸ್ಕರಿಸಿದರು. 

 • Share this:

  ಬೆಂಗಳೂರು (ಫೇ. 6):  ದಯೆ ಮತ್ತು ಪ್ರಾಮಾಣಿಕತೆಯ ಕೆಲವು ಘಟನೆಗಳು ಮಾನವೀಯತೆಯ ಮೇಲಿನ  ನಂಬಿಕೆಯನ್ನು ಪುನರುಜ್ಜೀವನಗೊಳಿಸುತ್ತವೆ. ಈ ಕೆಟ್ಟ ಪ್ರಪಂಚದಲ್ಲಿ ಇನ್ನೂ ಪ್ರಾಮಾಣಿಕರು ಇದ್ದಾರೆ ಎಂಬ ಹಲವರ ಮಾತಂತೆ ಅಲ್ಲೊಮ್ಮೆ ಇಲ್ಲೊಮ್ಮೆ ಪ್ರಾಮಾಣಿಕರು ಕಾಣಸಿಗುತ್ತಾರೆ. ರಾಜ್ಯ ರಾಜಧಾನಿ ಬೆಂಗಳೂರಲ್ಲೂ ಇಂತಹ ಘಟನೆ ನಡೆದಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಅಮಿತ್​ ಕುಮಾರ್​ ಪಾಂಡೆ  2.6 ಲಕ್ಷ ರೂ ಹಣದ ಬ್ಯಾಗ್​ ನ್ನು ಆಟೋದಲ್ಲಿಯೇ ಮರೆತಿದ್ದಾರೆ. ಇದನ್ನು ಗಮನಿಸಿದ ಕುಮಾರ್​ ಎಂಬ ಆಟೋ ಚಾಲಕ ಅವರ ಹಣದ ಬ್ಯಾಗ್​ ಅನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇಂತಹ ಕಾಲದಲ್ಲಿಯೂ ಅಷ್ಟು ದೊಡ್ಡ ಮೊತ್ತದ ಹಣವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಅವರ ಈ ಪ್ರಾಮಾಣಿಕತೆಗೆ ಮೆಚ್ಚಿ ಪಶ್ಚಿಮ ವಿಭಾಗದ ಡಿಸಿಪಿ ಪೊಲೀಸ್ ಆಯುಕ್ತ  ಸಂಜೀವ್ ಎಂ ಪಾಟೀಲ್ ಬಹುಮಾನ ನೀಡಿ ಸನ್ಮಾನಿಸಿದ್ದಾರೆ. 


  ಕೆ.ಆರ್.ಪುರಂ ಬಳಿಯ ಆನಂದಪುರ ಮೂಲದ ಚಾಲಕ ಕುಮಾರ್​, ಮುಂಬೈ ಮೂಲದ ಪಾಂಡೆಯನ್ನು ಕಾಟನ್ಮೇಂಟ್​ನಿಂದ ಹತ್ತಿಸಿಕೊಂಡು  ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಇಳಿಸಿದ್ದಾರೆ. ನಂತರ ಶ್ರೀನಗರಕ್ಕೆ ಹೋಗಬೇಕಿದ್ದ ಮತ್ತೊಬ್ಬರು ಮಹಿಳಾ ಪ್ರಯಾಣಿಕರನ್ನು ಆಟೋದಲ್ಲಿ ಹತ್ತಿಸಿಕೊಂಡಿದ್ದಾರೆ. ಈ ವೇಳೆ, ಪ್ರಯಾಣಿಕರು ಮರೆತುಹೋಗಿರುವ ಬ್ಯಾಗ್ ಬಗ್ಗೆ ಆ ಮಹಿಳೆ ಆಟೋ ಚಾಲಕನಿಗೆ ತಿಳಿಸಿದ್ದಾರೆ.


  ಪ್ರಯಾಣಿಕರು ಅವಸರದಿಂದ ತನ್ನ ಬ್ಯಾಗ್ ಮರೆತು ಹೊರಟು ಹೋಗಿರಬೇಕು ಎಂದು ತಾನು ಅರಿತುಕೊಂಡೆ. ತಕ್ಷಣಕ್ಕೆ ಮೊದಲು ಮಹಿಳಾ ಪ್ರಯಾಣಿಕರನ್ನು ಶ್ರೀನಗರದಲ್ಲಿ ಇಳಿಸಿ ನಂತರ ಪಾಂಡೆಯನ್ನು ಇಳಿಸಿದ ಸ್ಥಳಕ್ಕೆ ವಾಪಸ್ಸು ಹೋದೆ. ಅಲ್ಲಿ ಪಾಂಡೆ ಆಟೋದಿಂದ ಇಳಿದಾಗ ಅಂಗಡಿಯೊಂದಕ್ಕೆ ಹೋಗಿದ್ದನ್ನು ಗಮನಿಸಿದ ಹಿನ್ನಲೆ ಅಲ್ಲಿಗೆ ಹೋಗಿ ವಿಚಾರಿಸಿದೆ. ಆ ಅಂಗಡಿಯವರು ಪಾಂಡೆಗೆ ಕರೆ ಮಾಡಿದರು.  ಕೆಲವು ನಿಮಿಷಗಳ ನಂತರ, ಪಾಂಡೆ ಪೊಲೀಸರೊಂದಿಗೆ ಬಂದಾಗ ಅವರ ಬ್ಯಾಗನ್ನು ಹಿಂದಿರುಗಿಸಿದೆ ಎಂದು ಅವರು ತಿಳಿಸಿದರು.


  ಇದನ್ನು ಓದಿ: ರೈತ ಮುಖಂಡರೊಂದಿಗೆ ಪ್ರಧಾನಿ ಚರ್ಚಿಸುವುದು ಸೂಕ್ತ; ಎಚ್​ಡಿ ಕುಮಾರಸ್ವಾಮಿ


  ಪಾಂಡೆ ಮುಂಬೈ ಮೂಲದ ಫೋಟೋ ಫ್ರೇಮ್ ವರ್ಕ್ಸ್ ಚೈನ್ ಹೊಂದಿರುವ ಮ್ಯಾನೇಜರ್ ಆಗಿದ್ದಾರೆ. ಇದೇ ಹಿನ್ನಲೆ ಗ್ರಾಹಕರಿಂದ ಹಣ ಸಂಗ್ರಹಿಸಲು ಬೆಂಗಳೂರಿಗೆ ಭೇಟಿ ನೀಡಿದ್ದಾರೆ ವಿವಿಧ ಅಂಗಡಿಗಳಿಂದ ಹಣವನ್ನು ಸಂಗ್ರಹಿಸಿದ ನಂತರ ಪಾಂಡೆ ಹಣವನ್ನು ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದರು.  ಪಾಂಡೆ ತನ್ನ ವಸ್ತುಗಳನ್ನು ಒಂದು ಬ್ಯಾಗ್ನಲ್ಲಿ ಮತ್ತು ಇನ್ನೊಂದು ಬ್ಯಾಗ್ನಲ್ಲಿ ಹಣವನ್ನು ಇಟ್ಟುಕೊಂಡಿದ್ದರು. ಆಟೋದಿಂದ ಇಳಿಯುವಾಗ ಹಣವಿದ್ದ ಬ್ಯಾಗ್ ಮರೆತು ಇಳಿದಿದ್ದಾರೆ. ನಂತರ ಅದನ್ನು ನೆನಪಿಸಿಕೊಂಡು ಚಾಮರಾಜಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.


  ಅಂಗಡಿಯವರು ಕರೆ ಮಾಡಿದಾಗ ಪಾಂಡಎ ಪೊಲೀಸ್​ ಠಾಣೆಯಲ್ಲಿದ್ದರು. ಈ ವೇಳೆ ನಾವು ಅವರೊಟ್ಟಿಗೆ ಹೋದೆವು. ಈ ಸಂದರ್ಭದಲ್ಲಿ ಕುಮಾರ್​ ಬ್ಯಾಗ್​ ಹಿಡಿದು ಕಾದು ನಿಂತಿದ್ದರು. ಆಗ ಬ್ಯಾಗ್​ ಚೆಕ್​ ಮಾಡಲು ನಾವು ತಿಳಿಸಿದೆವು. ಬ್ಯಾಗ್​ನಲ್ಲಿ ಇದ್ದ ಹಣ ಸರಿಯಾಗಿತ್ತು ಎಂದು ಪಾಂಡೆ ತಿಳಿಸಿದರು. ಆಟೋ ಚಾಲಕನ ಪ್ರಾಮಾಣಿಕತೆ ಮೆಚ್ಚಿ  ಪಾಂಡೆ, 3,000 ರೂ. ಬಹುಮಾನ ನೀಡಿದರು. ನಂತರ, ಡಿಸಿಪಿ ಪಾಟೀಲ್  8,000 ರೂ. ಬಹುಮಾನ ನೀಡಿ ಪುರಸ್ಕರಿಸಿದರು.

  Published by:Seema R
  First published: