ಬೆಂಗಳೂರು: ಱಪಿಡೋ ಬೈಕ್(Rapido Bike), ಟ್ಯಾಕ್ಸಿ ಬ್ಯಾನ್ ಮಾಡಿ, ಬೌನ್ಸ್ ಎಲೆಕ್ಟ್ರಿಕ್ ಬೈಕ್ಗೆ (Bounce Bike) ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಒತ್ತಾಯಿಸಿ ಆಟೋ ಚಾಲಕರು ಮುಷ್ಕರ (Auto Driver Strike) ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ (Bengaluru Freedom Park) ಪ್ರತಿಭಟನೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಫ್ರೀಡಂಪಾರ್ಕ್ನಲ್ಲಿ ಆಟೋ ಚಾಲಕರು ಹೈಡ್ರಾಮಾ ಮಾಡಿದ್ದು, ವಿಧಾನಸೌಧಕ್ಕೆ (Vidhana Soudha) ಮುತ್ತಿ ಹಾಕಲು ಹೊರಟ ಮುಂದಾಗಿದ್ದರು. ಆದರೆ ಆಟೋ ಚಾಲಕರ ರ್ಯಾಲಿಗೆ ಪೊಲೀಸರು ಸರ್ಪಗಾವಲು ಹಾಕಿ ತಡೆದರು. ವಿಧಾನಸೌಧ ಮುತ್ತಿಗೆಗೆ ಹೊರಟ ಚಾಲಕರನ್ನ ವಶಕ್ಕೆ ಪಡೆದು, ಆಟೋ ಚಾಲಕರನ್ನ ಬಿಎಂಟಿಸಿ ಬಸ್ನಲ್ಲಿ (BMTC Bus) ಕರೆದ್ಯೊದರು. ಆದರೆ ಈ ವೇಳೆ ಬಸ್ನಿಂದ ಕೆಳಗೆ ಇಳಿದ ಆಟೋ ಚಾಲಕರು ಮತ್ತೆ ಹೈಡ್ರಾಮಾ ಮಾಡಿದರು. ಆಗ ಆಟೋ ಚಾಲಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಗಲಾಟೆ ಕೈ- ಕೈ ಮಿಲಾಯಿಸಿ ಹಂತಕ್ಕೆ ತಲುಪಿದ ಗಲಾಟೆ
ಫ್ರೀಡಂ ಪಾರ್ಕ್ಗೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಆಟೋ ಚಾಲಕರು ಸರ್ಕಾರ ಹಾಗೂ ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಅಲ್ಲದೇ ವಿಧಾನಸೌಧಕ್ಕೆ ಮುತ್ತಿ ಹಾಕಲು ನಿರ್ಧಾರ ಮಾಡಿ ಅಲ್ಲಿಂದ ಹೊರಟರು. ಆದರೆ ಇದಕ್ಕೂ ಮುನ್ನವೇ ಪ್ರತಿಭಟನೆಯನ್ನು ತಡೆಯಲು ಮುಂದಾಗಿದ್ದ ಪೊಲೀಸರು ಬ್ಯಾರಿಕೇಟ್ ಅಳವಡಿಸಿದರು.
ವಿಧಾನಸೌಧ ಮುತ್ತಿಗೆಗೆ ಹೊರಟ ಚಾಲಕರನ್ನು ವಶಕ್ಕೆ ಪಡೆದು ಬಸ್ ನಲ್ಲಿ ಕರೆದುಕೊಂಡು ಹೋದರು. ಈ ನಡುವೆ ಆಕ್ರೋಶಗೊಂಡ ಆಟೋ ಚಾಲಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಅಲ್ಲದೇ ಗಲಾಟೆ ಕೈ- ಕೈ ಮಿಲಾಯಿಸಿ ಹಂತಕ್ಕೆ ತಲುಪಿತ್ತು. ಪ್ರತಿಭಟನಾಕಾರರನ್ನು ಕರೆಕೊಂಡು ಹೋಗಲು ಬಂದಿದ್ದ ಬಸ್ಗೆ ಆಟೋಗಳನ್ನು ಅಡ್ಡವಿಟ್ಟು ಪ್ರತಿಭಟನೆ ಮುಂದುವರಿಸಿದ್ದರು.
ಆರ್.ಟಿ.ಓ. ಅಡಿಷನಲ್ ಕಮಿಷನರ್ಗೆ ಆಟೋ ಸಂಘಟನೆಗಳ ಮನವಿ
ಇನ್ನು, ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಆರ್.ಟಿ.ಓ. ಅಡಿಷನಲ್ ಕಮಿಷನರ್ ಅವರಿಗೆ ಆಟೋ ಸಂಘಟನೆಗಳು ಮನವಿ ಸಲ್ಲಿಕೆ ಮಾಡಿದರು. ನಗರದಲ್ಲಿ ಬಿಎಂಟಿಸಿ ಬಸ್ಗಳನ್ನು ಹೊರತು ಪಡಿಸಿದರೆ ದೊಡ್ಡ ಮಟ್ಟದಲ್ಲಿ ಆಟೋ ಚಾಲಕರು ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಅಲ್ಲದೇ ಸರ್ಕಾರಕ್ಕೆ 5 ಲಕ್ಷ ರೂಪಾಯಿ ಟ್ಯಾಕ್ಸ್ ಕಟ್ಟುತ್ತಿದ್ದೇವೆ. ಇದರಿಂದ ಇಲಾಖೆಗೆ ಬಹುಪಾಲು ನಮ್ಮ ಕಡೆಯಿಂದಲೇ ಹೆಚ್ಚಿನ ಆದಾಯ ಬರುತ್ತಿದೆ.
ಇದನ್ನೂ ಓದಿ: E-Bike Taxi: ರಾಜಧಾನಿಯಲ್ಲಿ ರಸ್ತೆಗೆ ಇಳಿಯಲಿವೆ ಇ-ಬೈಕ್ ಟ್ಯಾಕ್ಸಿ; ಆಟೋ ದರಕ್ಕಿಂತ ಕಡಿಮೆ ಇರುತ್ತಾ?
ಆದರೆ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕುತ್ತಿದೆ. ಅದು ಸರಿಯಲ್ಲ, ಈ ಕೂಡಲೇ ಇ- ಟ್ಯಾಕ್ಸಿ ಬೈಕ್, ವೈಟ್ ಬೋರ್ಡ್ ಟ್ಯಾಕ್ಸಿ ಬೈಕ್ಗಳಿಗೆ ಅನುಮತಿ ರದ್ದು ಮಾಡಬೇಕು. ಇದರಿಂದ ವಿದ್ಯಾರ್ಥಿಗಳು, ಮಕ್ಕಳು ಬಾರ್ ಅಲ್ಲಿ ಕೂತು ಕುಡಿಯುತ್ತಿದ್ದಾರೆ. ಇದೆಲ್ಲವನ್ನು ತಪ್ಪಿಸಬೇಕು ಎಂದರೇ ವೈಟ್ ಬೋರ್ಡ್ ಟ್ಯಾಕ್ಸಿಗಳಿಗೆ ನೀಡಿರುವ ಅನುಮತಿಯನ್ನ ರದ್ದು ಬೇಕು ಎಂದು ಸಾರಿಗೆ ಇಲಾಖೆ ಅಡಿಷನಲ್ ಕಮಿಷನರ್ ಅವರಿಗೆ ಮನವಿ ಸಲ್ಲಿಕೆ ಮಾಡಿದರು.
ಕೋರ್ಟ್ ಅನುಮತಿ ಪಡೆದು ಕ್ರಮಕೈಗೊಳ್ಳುತ್ತೇವೆ
ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಆರ್.ಟಿ.ಓ ಅಡಿಷನಲ್ ಕಮಿಷನರ್ ಹೇಮಂತ್ ಕುಮಾರ್, ಆಟೋ ಚಾಲಕರು ನೀಡಿರುವ ಬೇಡಿಕೆಗೆ ಸರ್ಕಾರ ಹಾಗೂ ಇಲಾಖೆಗೆ ಸಮ್ಮತಿ ಇದೆ. ಆದರೆ ಈ ಬಗ್ಗೆ ಹೈಕೋರ್ಟಿನಲ್ಲಿ ಪ್ರಕರಣ ನಡೆಯುತ್ತಿದೆ. ಕಾನೂನು ಪ್ರಕಾರ ಆಕ್ಷನ್ ತೆಗೆದುಕೊಳ್ಳಲು ಮುಂದಾದರೇ, ನನ್ನ ಮೇಲೆ ಕೇಸ್ ದಾಖಲಿಸಿದ್ದಾರೆ. ಈ ಕುರಿತು ಕೂಡ ಕೇಸ್ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ವೈಟ್ ಬೋರ್ಡ್ ಟ್ಯಾಕ್ಸಿ ಗಳನ್ನು ಹೈಕೋರ್ಟ್ ಅನುಮತಿ ಪಡೆದು ರದ್ದು ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.
ಇದನ್ನೂ ಓದಿ: Uttarpradesh: ಕುಡುಕ ಆಫೀಸರ್ನ ಮದ್ವೆ ಆಗೋದಕ್ಕಿಂತ ಆಟೋ ಚಾಲಕ, ಕೂಲಿಯವ್ರನ್ನ ಮದ್ವೆಯಾಗಿ!
ಆದರೆ ಅಧಿಕಾರಿಯ ಮಾತಿಗೆ ಸಮಾಧಾನಗೊಳ್ಳದ ಪ್ರತಿಭಟನಾಕಾರರ ಹೇಮಂತ್ ಕುಮಾರ್ ಕಾರಿಗೆ ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು, ಸರ್ಕಾರಿ ಅಧಿಕಾರಿಗೆ ರಕ್ಷಣೆಯನ್ನು ನೀಡಿ ಸ್ಥಳದಿಂದ ಕಳುಹಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ