ಪ್ಯಾಂಟ್​ ಬಿಚ್ತೀನಿ ಎಂದು ಮಹಿಳೆಯರಿಗೆ ಅವಾಜ್: ಬೆಂಗಳೂರಿನಲ್ಲಿ ಮಿತಿ ಮೀರಿದೆ ಚಾಲಕರ ದುರ್ವರ್ತನೆ..!!

news18
Updated:October 1, 2018, 11:32 AM IST
ಪ್ಯಾಂಟ್​ ಬಿಚ್ತೀನಿ ಎಂದು ಮಹಿಳೆಯರಿಗೆ ಅವಾಜ್: ಬೆಂಗಳೂರಿನಲ್ಲಿ ಮಿತಿ ಮೀರಿದೆ ಚಾಲಕರ ದುರ್ವರ್ತನೆ..!!
  • Advertorial
  • Last Updated: October 1, 2018, 11:32 AM IST
  • Share this:
ನ್ಯೂಸ್​ 18 ಕನ್ನಡ

ಬೆಂಗಳೂರು(ಅ.01): ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಚಾಲಕರ ದುರ್ವರ್ತನೆ ದಿನೇ ದಿನೇ ಮಿತಿ ಮೀರುತ್ತಿದೆ. ಕಳೆದೆರಡು ದಿನಗಳ ಹಿಂದಷ್ಟೇ ಟ್ರಾಫಿಕ್​ ಸಿಗ್ನಲ್​ ಮಾಡುವಂತೆ ವ್ಯಕ್ತಿಯೊಬ್ಬ ಮಹಿಳೆಯನ್ನು ಬೆದರಿಸಿದ್ದ ಘಟನೆ ವರದಿಯಾಗಿಯತ್ತು. ಆದರೀಗ ಇದರ ಬೆನ್ನಲ್ಲೇ ಆಟೋ ಚಾಲಕನೊಬ್ಬ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ.

ಹೌದು ನಿನ್ನೆ ಸಂಜೆ ಸುಮಾರು 5 ಗಂಟೆಗೆ ಎಂ. ಜಿ. ರೋಡ್​ನ ಗರುಡಾ ಮಾಲ್​ ಬಳಿ ಮಹಿಳೆಯರಿಬ್ಬರು ಕಾಫಿ ಕುಡಿಯುತ್ತಿದ್ದರು. ಈ ವೇಳೆ ಅಲ್ಲಿಗಾಗಮಿಸಿದ ಆಟೋ ಚಾಲಕ, ಆಟೋವನ್ನು ಮಹಿಳೆಯರಿಗೆ ಗುರಿಯಾಗಿಸಿ ನಿಲ್ಲಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಸಾಲದು ಎಂಬಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಿನತಿ ಎಂಬ ಹೆಸರಿನ ಮಹಿಳೆ  ಆಟೋ ಚಾಲಕನಿಗೆ ಬೈದಿದ್ದಾಳೆ.

ಮಹಿಳೆ ಆತನ ವರ್ತನೆಯನ್ನು ಪ್ರಶ್ನಿಸಿ "ಯಾಕೆ ಗುರಾಯಿಸುತ್ತಿದ್ದೀರಿ? ನಿಮ್ಮ ಕೆಲಸ ನೋಡಿಕೊಳ್ಳಿ" ಎಂದಿದ್ದಕ್ಕೆ ಆಟೋ ಚಾಲಕ "ನನ್ನಿಷ್ಟ ನಾನು ಗುರಾಯಿಸುತ್ತೇನೆ. ಪ್ಯಾಂಟ್ ಆದ್ರೂ ಬಿಚ್ತೀನಿ" ಎಂದು ಮರುತ್ತರ ನೀಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ವಿಡಿಯೋ ಮಾಡಲು ಮುಂದಾದಾಗ ಚಾಲಕ ಸುಮ್ಮನಾಗಿದ್ದಾನೆ.

ಇಲ್ಲಿ ಕ್ಲಿಕ್ ಮಾಡಿ​:  ವಿನತಿ ತ್ಯಾಗಿ ಪೋಸ್ಟ್​ ಮಾಡಿರುವ ಫೇಸ್​ಬುಕ್ ಪೋಸ್ಟ್

ಸದ್ಯ ಮಹಿಳೆ ಬೆಂಗಳೂರು ಸಿಟಿ ಪೊಲೀಸ್ ಅಫೀಶಿಯಲ್ ಫೇಸ್​ಬುಕ್​ ಪೇಜ್​ಗೆ ಮಹಿಳೆಯು ಈ ವಿಡಿಯೋ ಟ್ಯಾಗ್​ ಮಾಡಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್​ ಆಗಿದೆ. ಅಲಲ್ದೇ ಪ್ರೇಕ್ಷಕರೂ ಈ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡು ಸರಿಯಾದ ಕ್ರಮ ತೆಗೆದುಕೊಳ್ಳುವಂತೆ ಮಹಿಳೆ ಮನವಿ ಮಾಡಿಕೊಂಡಿದ್ದಾರೆ.
First published:October 1, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ