• Home
  • »
  • News
  • »
  • state
  • »
  • Autorickshaw Explodes: ಆಟೋ ಸ್ಫೋಟದ ಹಿಂದೆ ಉಗ್ರರ ಕೈವಾಡ; ಉದ್ದೇಶಪೂರ್ವಕ ಕೃತ್ಯ ಎಂದ ಡಿಜಿಪಿ

Autorickshaw Explodes: ಆಟೋ ಸ್ಫೋಟದ ಹಿಂದೆ ಉಗ್ರರ ಕೈವಾಡ; ಉದ್ದೇಶಪೂರ್ವಕ ಕೃತ್ಯ ಎಂದ ಡಿಜಿಪಿ

ಆಟೋ ಸ್ಪೋಟ ಪ್ರಕರಣ

ಆಟೋ ಸ್ಪೋಟ ಪ್ರಕರಣ

ಕರ್ನಾಟಕ ಪೊಲೀಸರಿಂದ ಸೂಕ್ಷ್ಮವಾಗಿ, ಆಳವಾಗಿ ತನಿಖೆ ನಡೆಸಲಾಗ್ತಿದೆ‌. ಕೇಂದ್ರದ ತನಿಖಾ ಸಂಸ್ಥೆಗಳ ಜೊತೆ ತನಿಖೆ ನಡೆಸಲಾಗ್ತಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.

  • News18 Kannada
  • Last Updated :
  • Dakshina Kannada, India
  • Share this:

ಮಂಗಳೂರಿನ ನಾಗುರಿಯಲ್ಲಿ (Naguri, Mangaluru_ ನಡೆದ ಆಟೋ ಸ್ಫೋಟದ (Auto Blast) ಹಿಂದೆ ಉಗ್ರರ ಕೈವಾಡ ಇರೋದು ದೃಢವಾಗಿದೆ. ಇದು ಅನಿರೀಕ್ಷಿತವಾಗಿ ಸ್ಪೋಟಗೊಂಡಿದ್ದಲ್ಲ. ಇದೊಂದು ಉಗ್ರ ಕೃತ್ಯ ಎಂದು ಡಿಜಿಪಿ ಪ್ರವೀಣ್ ಸೂದ್ (DGP Praveen Sood) ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ಸಾವು- ನೋವು ಹಾನಿ ಉಂಟು ಮಾಡಲು ಈ ಸಂಚು ಮಾಡಲಾಗಿತ್ತು. ಕರ್ನಾಟಕ ಪೊಲೀಸರಿಂದ ಸೂಕ್ಷ್ಮವಾಗಿ, ಆಳವಾಗಿ ತನಿಖೆ ನಡೆಸಲಾಗ್ತಿದೆ‌. ಕೇಂದ್ರದ ತನಿಖಾ ಸಂಸ್ಥೆಗಳ ಜೊತೆ ತನಿಖೆ ನಡೆಸಲಾಗ್ತಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ. ಪ್ರವೀಣ್ ಸೂದ್​ ಅವರ ಟ್ವೀಟ್​​ನ್ನು ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ರೀಟ್ವೀಟ್ ಮಾಡಿದ್ದಾರೆ.


ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ ಪ್ರಕರಣ ಭೇದಿಸಲು ಪೊಲೀಸ್ ಕಮಿಷನರ್ ಮೂರು ತಂಡಗಳ ರಚನೆ ಮಾಡಿದ್ದಾರೆ. ಕಳೆದ ರಾತ್ರಿಯೇ ರಾಜ್ಯದ ವಿವಿಧ ಭಾಗಗಳಿಗೆ ಪೊಲೀಸರ ತಂಡ ತೆರಳಿದೆ. ಸ್ಫೋಟದ ಜಾಡು ಹಿಡಿದು ಮಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಪ್ರಯಾಣಿಕನಿಂದ ಅಸ್ಪಷ್ಟ ಮಾಹಿತಿ


ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪ್ರಯಾಣಿಕ ಪ್ರೇಮ್ ರಾಜ್​ ಪೊಲೀಸರ ಎದುರು ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾನೆ ಎನ್ನಲಾಗಿದೆ. ಒಮ್ಮೆ ತಾನು ಮೈಸೂರಿನಿಂದ ಬಂದಿದ್ದಾಗಿ ಹೇಳಿದ್ದು, ತನ್ನ ಸೋದರ ಬಾಬುರಾವ್​ಗೆ ಕರೆ ಮಾಡಿ ಅಂತ ನಂಬರ್ ನೀಡಿದ್ದಾನೆ. ಆದರೆ ಕರೆ ಮಾಡಿದ್ರೆ ಆ ವ್ಯಕ್ತಿ ಸಂಬಂಧಿಕನೇ ಅಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.


mangaluru auto blast case injured passenger given different statement mrq
ಆಟೋ ಬ್ಲಾಸ್ಟ್​


ತನಿಖೆಗೆ NIA ಟೀಂ?


ಆಟೋ ಸ್ಫೋಟ ಹಿನ್ನೆಲೆ ಇಂದು ಬೆಂಗಳೂರಿನಿಂದ ಮಂಗಳೂರಿಗೆ ಎನ್​​​ಐಎ ತಂಡ ಆಗಮಿಸುವ ಸಾಧ್ಯತೆಗಳಿವೆ. ಸಿಎಂ ಬೊಮ್ಮಾಯಿ ಮಂಗಳೂರು ಭೇಟಿ ಬೆನ್ನಲ್ಲೇ ಸ್ಫೋಟವಾಗಿರುವ ಹಿನ್ನೆಲೆ ಪ್ರಕರಣವನ್ನು ರಾಜ್ಯ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.



ಈ ಹಿನ್ನೆಲೆ ಇಂದು ಬೆಂಗಳೂರಿನಿಂದ ಮತ್ತಷ್ಟು ಬಾಂಬ್ ತಜ್ಞರ ತಂಡ ಆಗಮಿಸಲಿದೆ ಎನ್ನಲಾಗಿದೆ. ಉಗ್ರ ಕೃತ್ಯದ ಆಯಾಮದಲ್ಲಿ ಎನ್​​ಐಎ ತನಿಖೆ ನಡೆಸುವ ಸಾಧ್ಯತೆಗಳಿವೆ. ಮತ್ತೊಂದು ಕಡೆ ಶ್ವಾನದಳದಿಂದ ಸ್ಥಳದ ಪರಿಶೀಲನೆ ನಡೆಸಲಾಗುತ್ತಿದೆ.


ಇದನ್ನೂ ಓದಿ:  Dharawada: ರೈತರ ಖಾತೆಗಳಿಗೆ ಬ್ಯಾಂಕ್​ಗಳ ಬ್ಲಾಕ್ ಬರೆ; ಪರಿಹಾರ ಬಂದ್ರೂ ಡ್ರಾ ಮಾಡಲಾರದ ಸ್ಥಿತಿ!


ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ


ಆಟೋ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಗಾಯಗೊಂಡವನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳು ಮಾತನಾಡುವ ಸ್ಥಿತಿಯಲ್ಲಿಲ್ಲ. ನಮ್ಮ ಮಂಗಳೂರು ಪೊಲೀಸರು ಇದರ ಹಿನ್ನೆಲೆಯನ್ನು ಬೇಧಿಸುತ್ತಿದ್ದಾರೆ. ಮಾಹಿತಿ ಪ್ರಕಾರ ಇದರ ಹಿನ್ನೆಲೆ ಬಹಳ ದೊಡ್ಡದಿದೆ. ಭಯೋತ್ಪಾದನಾ ಸಂಘಟನೆಗಳ ಲಿಂಕ್ ಇದರ ಹಿಂದೆ ಇತ್ತಾ ಅನ್ನೋ ಸೂಚನೆ ಕಂಡು ಬರುತ್ತಿದೆ ಎಂದು ಹೇಳಿದರು.


ಈ ಸಂಬಂಧ ಕೇಂದ್ರ ಭದ್ರತಾ ಪಡೆ ಜೊತೆಗೆ ಮಾತುಕತೆ ನಡೆದಿದೆ. ಅವರು ಸಹ ಬಂದಿದ್ದು, ಜಂಟಿಯಾಗಿ ಕಾರ್ಯಾಚರಣೆ, ತನಿಖೆ ನಡೆಸಲಾಗುತ್ತಿದೆ. ಒಂದೆರೆಡು ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಹೊರಬೀಳಲಿದೆ ಎಂದರು.


mangaluru auto blast case injured passenger given different statement mrq
ಆಟೋ


ಇದನ್ನೂ ಓದಿ:  Autorickshaw Explodes: ಪ್ರಯಾಣಿಕನಿಂದ ಅಸ್ಪಷ್ಟ ಮಾಹಿತಿ, ಕುಕ್ಕರ್ ಬಾಂಬ್ ಸ್ಫೋಟದ ಸಾಧ್ಯತೆ


ಕರಾವಳಿ ಭಾಗದಲ್ಲಿ ಈ ರೀತಿಯ ಚಟುವಟಿಕೆಗಳು ಹಲವಾರು ವರ್ಷಗಳಿಂದ ನಡೆಯುತ್ತಿವೆ. ಈ ಬಗ್ಗೆಯೂ ತನಿಖೆ ನಡೆದಿದೆ. ಬಹಳ ಬೇಗ ಈ ಬಗ್ಗೆ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ತಿಳಿಯುತ್ತದೆ ಎಂದು ತಿಳಿಸಿದರು.

Published by:Mahmadrafik K
First published: