ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿಂದು ಆಟೋ ಮತ್ತು ಕ್ಯಾಬ್ ಚಾಲಕರ ಪ್ರತಿಭಟನೆ

ಲಾಕ್​ಡೌನ್​​ನಿಂದ ಆರ್ಥಿಕವಾಗಿ ಕುಸಿದಿರುವ ಈ ಸಂದರ್ಭದಲ್ಲಿ ಆಟೋ ಮತ್ತು ಕ್ಯಾಬ್​ ಚಾಲಕರಿಗೆ ಇಎಂಐ ಕಟ್ಟಲು ತುಂಬಾ ಕಷ್ಟ ಆಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಸಹ ಫೈನಾನ್ಸ್​​ನವರು ಕಂಡಕಂಡಲ್ಲಿ ವಾಹನಗಳನ್ನು ಸೀಜ್ ಮಾಡಿದರೆ ನಮ್ಮ ಪಾಡೇನು? ಎಂದು ಚಾಲಕರು ಪ್ರಶ್ನಿಸಿದ್ದಾರೆ. 

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಬೆಂಗಳೂರು(ನ.26): ಒಂದೆಡೆ ನೂತನ ವಿದ್ಯುತ್ ಮತ್ತು ಕೃಷಿ ಕಾಯ್ದೆ ವಿರೋಧಿಸಿ ಇಂದಿನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ಅನಿರ್ದಿಷ್ಟಾವಧಿ ಧರಣಿ ಶುರುವಾಗಲಿದೆ. ಇನ್ನೊಂದೆಡೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಟೋ ಮತ್ತು ಕ್ಯಾಬ್​ ಚಾಲಕರ ಮಾಲೀಕರ ಸಂಘವು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಲಿದ್ದಾರೆ. ನಗರದ ಫ್ರೀಡಂ ಪಾರ್ಕ್​ನಲ್ಲಿ ಆಟೋ ಹಾಗೂ ಕ್ಯಾಬ್​ ಚಾಲಕರು ಇಂದು ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಪ್ರಮುಖವಾಗಿ ಮೋಟಾರ್ ವೈಹಿಕಲ್ ಆ್ಯಕ್ಟ್​ ತಿದ್ದುಪಡಿ ಮಾಡಿದ್ದಕ್ಕೆ ಆಟೋ ಹಾಗೂ ಕ್ಯಾಬ್ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಮೋಟಾರು ವಾಹನಗಳ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಇಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. 

  ಕಳೆದ ಆರೇಳು ತಿಂಗಳಿನಿಂದ ಕೊರೋನಾ ಮಹಾಮಾರಿ ಹಾಗೂ ಲಾಕ್​ಡೌನ್​ನಿಂದ ಕಾರ್ಮಿಕರ ಜೀವನ ಜರ್ಝರಿತವಾಗಿದೆ. ಆರ್ಥಿಕ ಪರಿಸ್ಥಿತಿ ತೀರಾ ಕುಸಿದಿದೆ. ಲಾಕ್​ಡೌನ್​ನಿಂದಾಗಿ ಆರ್ಥಿಕ ಹೊಡೆತಕ್ಕೆ ಸಿಕ್ಕಿ ನಲುಗಿರುವ ಆಟೋ ಹಾಗೂ ಕ್ಯಾಬ್​ ಚಾಲಕರ ಮೇಲೆ ಸರ್ಕಾರ ಹೊರೆ ಹೊರಿಸುತ್ತಿದೆ ಎಂದು ಚಾಲಕರ ಮಾಲೀಕರ ಸಂಘವು ಬೇಸರ ವ್ಯಕ್ತಪಡಿಸಿದೆ.

  ಇಂದು ಜೆ.ಪಿ. ನಡ್ಡಾ-ರಮೇಶ್ ಜಾರಕಿಹೊಳಿ ಭೇಟಿ; ಕುತೂಹಲ ಮೂಡಿಸಿದ ಬಿಜೆಪಿ ಹೈಕಮಾಂಡ್ ನಡೆ

  ಅದರಲ್ಲೂ ಮುಖ್ಯವಾಗಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಹೆಚ್ಚು ಹಣ ವಸೂಲಿ ಮಾಡುತ್ತಿರುವುದಕ್ಕೆ ಇಂದು ಈ ಪ್ರತಿಭಟನೆ ನಡೆಸಲಾಗುತ್ತಿದೆ.  ಇದೇ ನೆಪ ಹೇಳಿಕೊಂಡು ಎಲ್ಲೆಂದರಲ್ಲಿ ಆಟೋಗಳನ್ನು‌ ಹಾಗೂ ಕ್ಯಾಬ್ ಗಳನ್ನು ಸೀಜ್ ಮಾಡಲಾಗ್ತಿದೆ ಎಂದು ಆಟೋ ಮತ್ತು ಕ್ಯಾಬ್ ಚಾಲಕರು ಆಕ್ರೋಶ ಹೊರಹಾಕಿದ್ದಾರೆ.

  ಲಾಕ್​ಡೌನ್​​ನಿಂದ ಆರ್ಥಿಕವಾಗಿ ಕುಸಿದಿರುವ ಈ ಸಂದರ್ಭದಲ್ಲಿ ಆಟೋ ಮತ್ತು ಕ್ಯಾಬ್​ ಚಾಲಕರಿಗೆ ಇಎಂಐ ಕಟ್ಟಲು ತುಂಬಾ ಕಷ್ಟ ಆಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಸಹ ಫೈನಾನ್ಸ್​​ನವರು ಕಂಡಕಂಡಲ್ಲಿ ವಾಹನಗಳನ್ನು ಸೀಜ್ ಮಾಡಿದರೆ ನಮ್ಮ ಪಾಡೇನು? ಎಂದು ಚಾಲಕರು ಪ್ರಶ್ನಿಸಿದ್ದಾರೆ.

  ಹೀಗೆ ಆಟೋ  ಮತ್ತು ಕ್ಯಾಬ್ ಚಾಲಕರು ಇಂತಹ ಹತ್ತು-ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದು ಬೆಳಗ್ಗೆ 10 ಗಂಟೆಗೆ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಪೀಸ್ ಆಟೋ ಹಾಗೂ ಕ್ಯಾಬ್ ಡ್ರೈವರ್ಸ್ ಅಸೋಸಿಯೇಷನ್ ವತಿಯಿಂದ ಈ ಪ್ರತಿಭಟನೆ ನಡೆಯಲಿದೆ.

  ಪ್ರತಿಭಟನೆ ನಡೆಯುವ ಹಿನ್ನೆಲೆ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಕ್ರಮ ವಹಿಸಿದ್ದಾರೆ. ಇಂದು ಪ್ರತಿಭಟನೆ ಹಿನ್ನೆಲೆ, ಪ್ರಯಾಣಿಕರಿಗೆ ಆಟೋ ಮತ್ತು ಕ್ಯಾಬ್​ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
  Published by:Latha CG
  First published: