• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Facebookನಲ್ಲಿ ಫೇಸ್ ನೋಡದೇ ಲವ್ ಮಾಡಿದ! ಮದುವೆ ವೇಳೆ ಗೊತ್ತಾಯ್ತು ಆಕೆ ಹುಡುಗಿಯಲ್ಲ, ಆಂಟಿ!

Facebookನಲ್ಲಿ ಫೇಸ್ ನೋಡದೇ ಲವ್ ಮಾಡಿದ! ಮದುವೆ ವೇಳೆ ಗೊತ್ತಾಯ್ತು ಆಕೆ ಹುಡುಗಿಯಲ್ಲ, ಆಂಟಿ!

 ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಈತ ಫೇಸ್‌ಬುಕ್‌ ಹುಡುಗಿಯ ಫೇಸ್ ನೋಡದೇ ಲವ್ ಮಾಡೋಕೆ ಶುರು ಮಾಡಿದ. ಕೊನೆಗೆ ಆತನ ಪ್ರೀತಿ ಮದುವೆವರೆಗೂ ಹೋಯ್ತು. ಆಗ ಗೊತ್ತಾಯ್ತು ನೋಡಿ ಭಯಾನಕ ಸತ್ಯ. ಇದೀಗ ಹುಡುಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೂ ಆಗಿದೆ.

  • Share this:

ಆ ಯುವಕ ಸದಾ ಸೋಶಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟೀವ್ (Active) ಆಗಿರುತ್ತಾ ಇದ್ದ. ಫೇಸ್‌ಬುಕ್‌ನಲ್ಲಿ (Facebook) ಸಿಕ್ಕ ಸಿಕ್ಕವರ ಜೊತೆ ಚಾಟ್ (Chat) ಮಾಡ್ತಾ ಟೈಮ್ ಪಾಸ್ (Time Pass) ಮಾಡ್ತಿದ್ದ. ಆ ಯುವಕನಿಗೆ ಒಂದಿನ ಫೇಸ್‌ಬುಕ್‌ನಲ್ಲಿ ಹುಡುಗಿಯೊಬ್ಬಳ ಫ್ರೆಂಡ್‌ ರಿಕ್ವೆಸ್ಟ್ (Friend Request) ಬಂತು. ‘ಕಮಲಾ’ ಎಂಬ ಹೆಸರಿನ ಆ ಪ್ರೊಫೈಲ್ (Profile), ಆ ಹುಡುಗಿ ಪಿಕ್ಚರ್ (Picture) ನೋಡಿ ಹುಡುಗ ಕಳೆದೇ ಹೋದ. ಆಕೆ ರಿಕ್ವೆಸ್ಟ್ ಅಕ್ಸೆಪ್ಟ್ (Accept) ಮಾಡಿದವನೇ ಚಾಟಿಂಗ್‌ಗೆ ಶುರು ಮಾಡಿದ. ಆ ಕಡೆಯಿಂದಲೂ ಸಖತ್ ರೆಸ್ಪಾನ್ಸ್ ಸಿಗುತ್ತಾ ಹೋಯ್ತು. ದಿನ ಕಳೆದಂತೆ ಆ ಫೇಸ್‌ಬುಕ್‌ ಹುಡುಗಿಯ ಫೇಸ್ ನೋಡದೇ ಲವ್ (Love) ಮಾಡೋಕೆ ಶುರು ಮಾಡಿದ. ಕೊನೆಗೆ ಆತನ ಪ್ರೀತಿ ಮದುವೆವರೆಗೂ (Marriage) ಹೋಯ್ತು. ಆಗ ಗೊತ್ತಾಯ್ತು ನೋಡಿ ಭಯಾನಕ ಸತ್ಯ. ಇದೀಗ ಹುಡುಗ ಪೊಲೀಸ್ ಠಾಣೆ (Police Station) ಮೆಟ್ಟಿಲೇರಿದ್ದೂ ಆಗಿದೆ. ಹಾಗಾದ್ರೆ ಯಾರು ಆ ಹುಡುಗ? ಏನಿದು ಘಟನೆ, ನಡೆದಿದ್ದು ಎಲ್ಲಿ? ಮೋಸ ಮಾಡಿದ ಆ ಫೇಸ್‌ಬುಕ್ ಸುಂದರಿ ಯಾರು? ಕೊನೆಗೆ ಏನಾಯ್ತು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…


ಫೇಸ್‌ಬುಕ್‌ನಲ್ಲೇ ಹುಡುಗನಿಗೆ ಬಲೆ ಬೀಸಿದ ಲೇಡಿ!


3 ತಿಂಗಳ ಹಿಂದೆ ಕಮಲಾ ಎಂಬ ಫೇಸ್‌ಬುಕ್‌ ಪ್ರೊಫೈಲ್‌ನ ಅಪರಿಚಿತ ಮಹಿಳೆ ಜೊತೆ ಮಂಡ್ಯ ಮೂಲದ ಹುಡುಗನೊಬ್ಬ ಚಾಟಿಂಗ್‌ಗೆ ಶುರು ಮಾಡಿಕೊಂಡಿದ್ದಾನೆ. ಅದು ಸ್ನೇಹಕ್ಕೆ ತಿರುಗಿ, ಪ್ರೀತಿವರೆಗೂ ಬಂದು ನಿಂತಿತ್ತು. 3 ತಿಂಗಳ ಬಳಿಕ ಆಕೆ ಮೇಲೆ ಆತನಿಗೆ ಲವ್ ಆಗಿ, ಅದನ್ನು ಆಕೆ ಹತ್ತಿರ ಹೇಳಿಕೊಂಡಿದ್ದಾನೆ.


ಕಷ್ಟ ಅಂತ ಹೇಳಿ 3 ಲಕ್ಷ ಪಡೆದ ಮಹಿಳೆ


ಫೇಸ್‌ಬುಕ್‌ ಹುಡುಗಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಹುಡುಗ, ಆಕೆಯ ಕಷ್ಟ ಸುಖಕ್ಕೆ ಸ್ಪಂದಿಸೋಕೆ ಶುರು ಮಾಡಿದ್ದಾನೆ. ಇದನ್ನು ಎನ್‌ಕ್ಯಾಶ್ ಮಾಡಿಕೊಂಡ ಆಕೆ, ಟೈಮ್ ಸಿಕ್ಕಾಗೆಲ್ಲ ದುಡ್ಡು ವಸೂಲಿ ಮಾಡೋಕೆ ಶುರು ಮಾಡಿದ್ದಾಳೆ. ಯುವತಿ ತನ್ನ ಕಷ್ಟಹೇಳಿಕೊಂಡು ಯುವಕನಿಂದ  3.5 ಲಕ್ಷ ಪಡೆದಿದ್ದಾಳೆ. 30 ಸಾವಿರ ಮೌಲ್ಯದ ದಿನಸಿ ಸಾಮಗ್ರಿಯನ್ನೂ ತರಿಸಿಕೊಂಡಿದ್ದಾಳಂತೆ.


ಇದನ್ನೂ ಓದಿ: Datta Peetha: ದತ್ತಪೀಠದಲ್ಲಿ ಮತ್ತೊಂದು ವಿವಾದ; ಮಾಂಸದೂಟ ಆಯ್ತು, ಈಗ ವಿವಾದಿತ ಸ್ಥಳದ ಆವರಣದಲ್ಲೇ ನಡೆಯಿತಾ ನಮಾಜ್?


ಮದುವೆ ಪ್ರಸ್ತಾಪವನ್ನೂ ಇರಿಸಿದ ಯುವಕ


ಫೇಸ್‌ ಬುಕ್‌ ಸುಂದರಿ ಮೇಲೆ ಶ್ಯಾನೆ ಲವ್ ಮಾಡಿಕೊಂಡ ಮಂಡ್ಯದ ಹೈದ ಕೊನೆಗೊಂದು ದಿನ ಆಕೆ ಮುಂದೆ ಮದುವೆ ಪ್ರಸ್ತಾಪ ಇಟ್ಟಿದ್ದಾನೆ. ಆಗ ನಾನು ಆಕೆಯ ದೊಡ್ಡಮ್ಮ ಅಂತ ಹೇಳಿದ್ದಾಳೆ. ಆಕೆಯ ತಂದೆ ಹಾಗೂ ತಾಯಿ ಇಬ್ಬರೂ ತೀರಿಕೊಂಡಿದ್ದಾರೆ. ಹಾಗಾಗಿ ಅವಳ ಮದುವೆಯನ್ನು ನಾನೇ ಮಾಡಿಸಬೇಕಿದೆ ಎಂದಿದ್ದಾಳೆ. ಬಳಿಕ ಯುವಕನ ಮನೆಗೆ ಹೋಗಿ ಮದುವೆ ಮಾತುಕತೆ ನಡೆಸಿದ್ದಾಳೆ. ನಿಶ್ಚಿತಾರ್ಥ ಮಾಡುವ ಬಗ್ಗೆ ಪ್ರಸ್ತಾಪಿಸಿದಾಗ ಆಕೆ ಮನೆಯಲ್ಲಿ ಸಾವಾಗಿದೆ. ಚಪ್ಪರ ಶಾಸ್ತ್ರದ ದಿನ ನಿಶ್ಚಿತಾರ್ಥ ಮಾಡುವ ಪ್ರಸ್ತಾಪ ಇಟ್ಟಿದ್ದಾಳೆ.


ಮದುವೆ ಸಿದ್ಧತೆ ಮಾಡಿಕೊಂಡ ಯುವಕನ ಮನೆಯವರು


ಇತ್ತ ಯುವಕನ ಮನೆಯಲ್ಲಿ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಇದರಂತೆ ಯುವಕನ ಮನೆಯವರು ಲಗ್ನ ಪತ್ರಿಕೆ ಹಂಚಿ, ಮದುವೆ ಸಿದ್ಧತೆ ನಡೆಸಿದ್ದಾರೆ. ಇದೇ ಮೇ 20ರಂದು ಪ್ರಸಿದ್ಧ ಕ್ಷೇತ್ರವೊಂದರಲ್ಲಿ ಮದುವೆ ಮೂಹೂರ್ತ ಫಿಕ್ಸ್ ಆಗಿತ್ತು ಎನ್ನಲಾಗಿದೆ.


ಮದುವೆ ಮನೆಯಲ್ಲಿ ನಾಟಕ ಮಾಡಿದ ಮಹಿಳೆ


ಅಷ್ಟರಲ್ಲಿ ಅಲ್ಲಿಗೆ ಬಂದ ಮಹಿಳೆ ಕಥೆ ಕಟ್ಟಿ ಹೇಳಿದ್ದಾಳೆ. ನನಗೆ ಹುಷಾರಿಲ್ಲದಿದ್ದಾಗ ಯುವತಿಯ ಮಾವ ಬಂದು, ಆಕೆಯನ್ನು ಎಳೆದುಕೊಂಡು ಹೋದರು ಎಂದಿದ್ದಾಳೆ. ಇದರಿಂದ ಅನುಮಾನಗೊಂಡ ಯುವಕನ ಮನೆಯವರು ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.


ಇದನ್ನೂ ಓದಿ: Suicide: ವೀಕೆಂಡ್‌ ಶಾಪಿಂಗ್ ಬಂದಿದ್ದಾಗ ದುರಂತ! ಕಟ್ಟಡದಿಂದ ಬಿದ್ದು ಯುವತಿ ಸಾವು, ಯುವಕನ ಸ್ಥಿತಿ ಗಂಭೀರ


ಬಯಲಾಯ್ತು ಮಹಿಳೆಯ ನಾಟಕ


ಈ ವೇಳೆ ಆಕೆಯ ನಾಟಕ ಬಯಲಾಗಿದೆ. ಸುಮಾರು 50 ವರ್ಷದ ಈಕೆಯೇ ಯುವತಿ ಹೆಸರಲ್ಲಿ ನಾಟಕವಾಡಿದ್ದು ತಿಳಿದಿದೆ. ಆಕೆಯಿಂದ ಮುಚ್ಚಳಿಕೆ ಬರೆಸಿಕೊಂಡು ಬಿಡಲಾಗಿದೆ ಅಂತ ವರದಿಯಾಗಿದೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು