Evening Digest : ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು


Updated:August 14, 2019, 6:03 PM IST
Evening Digest : ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂರ್ಭಿಕ ಚಿತ್ರ
  • Share this:
1.ವಿವಾದಕ್ಕೆ ಗುರಿಯಾದ ಬಿಎಸ್​ವೈ ಮಾತು

ಪ್ರವಾಹ ಹಾನಿ ಕುರಿತು ಕೇಳಿದಷ್ಟು ಹಣ ಕೊಡಲು ಇಲ್ಲಿ ನೋಟ್​ ಪ್ರಿಂಟ್​ ಮಾಡಲಾಗುವುದಿಲ್ಲ ಎಂಬ ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿಕೆಗೆ ಕಿಡಿಕಾರಿರುವ ಜೆಡಿಎಸ್​, ಅನರ್ಹ ಶಾಸಕರಿಗೆ ವಿಶೇಷ ವಿಮಾನ, ಸ್ಟಾರ್ ಹೋಟೆಲ್ ವಾಸ್ತವ್ಯ ಕಲ್ಪಿಸಲು ನೋಟ್ ಪ್ರಿಂಟ್ ಮಾಡಿಕೊಟ್ಟವರು ಯಾರು? ಎಂದು ಪ್ರಶ್ನಿಸಿದೆ. ಶಿವಮೊಗ್ಗದಲ್ಲಿ ಪ್ರವಾಹ ಪರಿಶೀಲನೆ ಬಳಿಕ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಬಿಎಸ್​ ಯಡಿಯೂರಪ್ಪ, ಬೆಳೆ ಹಾನಿ ಕುರಿತು ಕೂಲಂಕುಷ ಅಧ್ಯಯನ ನಡೆಸಿ. ಅವಸರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವುದು ಬೇಡ. 8-10ದಿನ ಆದರೂ ಪರವಾಗಿಲ್ಲ. ಕೇಳಿದಷ್ಟು ಹಣ ನೀಡಲು ನೋಟ್​ ಪ್ರಿಂಟ್​ ಮಾಡುವ ಯಂತ್ರ ವಿಲ್ಲ ಎಂಬ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಬೆಳೆ ಹಾನಿಯನ್ನು ನಿಖರವಾಗಿ ಅಂದಾಜು ಮಾಡಿ ನೀಡಿ. ಸುಖಾಸುಮ್ಮನೆ ಬೆಳೆ ಹಾನಿ ಕುರಿತು ವರದಿ ನೀಡಬೇಡಿ ಎನ್ನುವುದ ಅವರ ಮಾತಿನ ಒಳಅರ್ಥವಾಗಿತ್ತು. ಆದರೆ, ಮಾತಿನ ಭರದಲ್ಲಿ ಅವರು ಆಡಿದ ಮಾತು ಈಗ ವಿವಾದಕ್ಕೆ ಗುರಿಯಾಗಿದೆ.

2.ಎಸ್​ಎಲ್​ ಭೈರಪ್ಪ ಅವರಿಂದ ಈ ಬಾರಿ ದಸರಾ ಉದ್ಘಾಟನೆ

ಪ್ರತಿವರ್ಷದಂತೆಯೇ ಈ ವರ್ಷವೂ ನಡೆಯಲಿರುವ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಖ್ಯಾತ ಸಾಹಿತಿ ಎಸ್.ಎಲ್​​ ಭೈರಪ್ಪ ಅವರನ್ನು ಆಹ್ವಾನಿಸಲಾಗಿದೆ ಎಂದು ಸಿಎಂ ಬಿ.ಎಸ್​​ ಯಡಿಯೂರಪ್ಪ ತಿಳಿಸಿದ್ದಾರೆ. ಮೈಸೂರು ದಸರಾ ನಮ್ಮ ನಾಡಹಬ್ಬ. ಈ ಹಬ್ಬದ ಸಿದ್ಧತೆ ಕುರಿತು ಚರ್ಚಿಸಲು ಸಿಎಂ ಬಿ.ಎಸ್​​ ಯಡಿಯೂರಪ್ಪನವರೇ ಇಂದು ಸಭೆ ಕರೆದಿದ್ದರು. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಗರದಲ್ಲಿ ನಡೆದ ಸಭೆಯಲ್ಲಿ ಮೈಸೂರು ಭಾಗದ ಬಿಜೆಪಿ ಸಂಸದರು ಮತ್ತು ಶಾಸಕರು ಭಾಗಿಯಾಗಿದ್ದರು. ಈ ವೇಳೆ ಸಭೆಯಲ್ಲಿ ಭೈರಪ್ಪನವರ ಹೆಸರು ಪ್ರಸ್ತಾಪವಾದ ಕಾರಣ, ಅವರನ್ನೇ ಆಯ್ಕೆ ಮಾಡಲಾಗಿದೆ ಎನ್ನುತ್ತಿವೆ ಮೂಲಗಳು.

3.ಫೋನ್​ ಕದ್ಧಾಲಿಸಿ ಅಧಿಕಾರ ಉಳಿಸಿಕೊಳ್ಳವ ಅವಶ್ಯಕತೆ ನನಗೆ ಇಲ್ಲ; ಎಚ್​ಡಿಕೆ

ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಮೂರು ಪಕ್ಷಗಳ ಕೆಲ ಮುಖಂಡರು, ಪತ್ರಕರ್ತರು ಹಾಗೂ ಅಧಿಕಾರಿಗಳು ಸೇರಿ 300 ಜನರ ಫೋನ್​ ಟ್ಯಾಪ್​ ಮಾಡಿಸಿದ್ದರು ಎಂಬ ಗಂಭೀರ ಆರೋಪ ಕೇಳಬಂದಿದೆ. ಈ ಆರೋಪ ಸಂಬಂಧ ಇಂದು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್​ಡಿಕೆ, ಇದು ಸತ್ಯಕ್ಕೆ ದೂರವಾದ ಆರೋಪ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವಾಗಿ ಇಂದು ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಅಧಿಕಾರ ಶಾಶ್ವತವಲ್ಲ ಎಂದು ಪದೇ ಪದೇ ಹೇಳುತ್ತಿದ್ದವನು ನಾನು. ಈ ಕುರ್ಚಿಗಾಗಿ ಟೆಲಿಫೋನ್ ಕದ್ದಾಲಿಕೆ ಮಾಡಿ ಅಧಿಕಾರ ಉಳಿಸಿಕೊಳ್ಳುವ ಅವಶ್ಯಕತೆ ನನಗಿರಲಿಲ್ಲ. ಈ ವಿಚಾರದಲ್ಲಿ ಕೆಲವರು ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.

4.ವಿಂಗ್​ ಕಮಾಂಡರ್​ ಅಭಿನಂದನ್​ಗೆ ವೀರಚಕ್ರ ಪ್ರಶಸ್ತಿಪುಲ್ವಾಮ ದಾಳಿ ಬಳಿಕ ಪಾಕಿಸ್ತಾನ ವಶದಲ್ಲಿ ಸಿಲುಕಿ ಸುರಕ್ಷಿತವಾಗಿ ದೇಶಕ್ಕೆ ಮರಳಿದ ವಾಯುಪಡೆ ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್​​ ಅವರಿಗೆ  ವೀರ ಚಕ್ರ ಗೌರವ ಸಿಕ್ಕಿದೆ. ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್, ​ ಪೈಲಟ್​ ಅಭಿನಂದನ್​ಗೆ ವೀರ ಚಕ್ರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಪುಲ್ವಾಮ ದಾಳಿ ಬಳಿಕ ಭಾರತದ ವಾಯುಗಡಿ ಉಲ್ಲಂಘಿಸಿ ನುಗ್ಗಲು ಯತ್ನಿಸಿದ್ದ ಪಾಕ್​ ಯುದ್ಧ ವಿಮಾನವನ್ನು ವಿಂಗ್​ ಕಮಾಂಡರ್​ ಅಭಿನಂದನ್​ ಹೊಡೆದುರುಳಿಸಿದ್ದರು. ಈ ವೇಳೆ ಪಾಕ್​ ವಿಮಾನ ಬೆನ್ನತ್ತಿ ಹೋದ ಅವರನ್ನು ಪಾಕಿಸ್ತಾನ ಸೇನೆ ಸೆರೆ ಹಿಡಿದಿತ್ತು. ಎರಡು ದಿನಗಳ ಬಳಿಕ ಅವರು ಬಿಡುಗಡೆಯಾಗಿದ್ದರು. ಇವರ ಸಾಹಸಕ್ಕೆ ಮೆಚ್ಚಿ ಕೇಂದ್ರ ಸರ್ಕಾರ ಇವರಿಗೆ ಈಗ ಈ ಗೌರವ ನೀಡುತ್ತಿದೆ.

5.ಕಾಶ್ಮೀರಿ ರಾಜಕಾರಣಿ ಶಾ ಫೈಸಲ್​ ಬಂಧನ

ಜಮ್ಮು ಮತ್ತು ಕಾಶ್ಮೀರದ ರಾಜಕಾರಣಿ ಫೈಸಲ್ ಶಾ ಅವರನ್ನು ಬಂಧನಕ್ಕೊಳಪಡಿಸಲಾಗಿದೆ. ವಿದೇಶಕ್ಕೆ ಹೋಗಲು ಬಂದಿದ್ದ ಅವರನ್ನ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ತಡೆದು ಬಂಧಿಸಲಾಗಿದೆ. ಅವರನ್ನು ಗೃಹ ಬಂಧನಕ್ಕೆ ಒಳಪಡಿಸಿ ಸ್ವಲ್ಪ ಹೊತ್ತಿನ ಬಳಿಕ ಕಾಶ್ಮೀರಕ್ಕೆ ವಾಪಸ್ ಕಳುಹಿಸಲಾಗಿದೆ. ಮಾಜಿ ಐಎಎಸ್ ಅಧಿಕಾರಿಯಾದ ಶಾ ಫೈಸಲ್ ಅವರು ಪಕ್ಷೇತರ ರಾಜಕಾರಣಿಯಾಗಿದ್ದಾರೆ. 370ನೇ ವಿಧಿಯನ್ನು ರದ್ದು ಮಾಡಿದ ಕೇಂದ್ರದ ಕ್ರಮದ ಬಗ್ಗೆ ಅವರು ನಿನ್ನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. 370ನೇ ವಿಧಿ ರದ್ದಾಗುವ ಮೂಲಕ ಕಾಶ್ಮೀರದ ಮುಖ್ಯವಾಹಿನಿಯೇ ಮುಕ್ತಾಯವಾದಂತಾಗಿದೆ. ಇಲ್ಲಿ ನೀವು ಗುಮಾಸ್ತರಾಗಿರಬೇಕು ಅಥವಾ ಪ್ರತ್ಯೇಕತಾವಾದಿ ಈ ಎರಡೇ ಆಯ್ಕೆ ಇರುವುದು ಎಂದು ಹೇಳಿ ಅವರು ನಿನ್ನೆ ಟ್ವೀಟ್ ಮಾಡಿದ್ದರು.

6.ಜೈಷ್ ಉಗ್ರ ಕ್ಯಾಂಪ್​ ಉಡಾಯಿಸಿದ ಪಂಚ ಭಾರತೀಯ ಯೋದರಿಗೆ ವಾಯುಸೇನಾ ಪದಕ

ಪಾಕಿಸ್ತಾನದ ಬಾಲಾಕೋಟ್​ನಲ್ಲಿ ಜೈಷ್ ಉಗ್ರರ ಕ್ಯಾಂಪ್ ಮೇಲೆ ಬಾಂಬ್ ದಾಳಿ ಮಾಡಿದ್ದ ಭಾರತದ ವಾಯುಸೇನೆ ಪೈಲಟ್​ಗಳಿಗೆ ಮೆಡಲ್​ಗಳನ್ನ ನೀಡಿ ಗೌರವಿಸಲಾಗಿದೆ. ಬಾಲಾಕೋಟ್ ವಾಯುದಾಳಿ ಕಾರ್ಯಾಚರಣೆಯಲ್ಲಿದ್ದ ವಿಂಗ್ ಕಮಾಂಡರ್ ಅಮಿತ್ ರಂಜನ್ ಮತ್ತು ಸ್ಕ್ವಾಡ್ರನ್ ಲೀಡರ್​ಗಳಾದ ರಾಹುಲ್ ಬಸೋಯಾ, ಪಂಕಜ್ ಭುಜಾಡೆ, ಬಿಕೆಎನ್ ರೆಡ್ಡಿ ಮತ್ತು ಶಶಾಂಕ್ ಸಿಂಗ್ ಅವರಿಗೆ ವಾಯು ಸೇನಾ ಮೆಡಲ್ ಕೊಡಲಾಗಿದೆ. ಈ ಐವರೂ ಕೂಡ ಆ ಕಾರ್ಯಾಚರಣೆಯಲ್ಲಿ ಮಿರೇಜ್ 2000 ಫೈಟರ್ ವಿಮಾನದ ಪೈಲಟ್​ಗಳಾಗಿ ಕಾರ್ಯನಿರ್ವಹಿಸಿದ್ದರು. ಕ್ಷಿಪ್ರಗತಿಯಲ್ಲಿ, ಶರವೇಗದಲ್ಲಿ ತಮ್ಮ ಕಾರ್ಯಾಚರಣೆಯನ್ನು ನಿಖರವಾಗಿ ಮಾಡಿ ಮುಗಿಸಿ ಇವರು ವಾಪಸ್ ಬಂದಿದ್ದರು. 40 ಭಾರತೀಯ ಯೋಧರನ್ನು ಬಲಿತೆಗೆದುಕೊಂಡ ಪುಲ್ವಾಮ ಉಗ್ರ ದಾಳಿ ಘಟನೆಗೆ ಪ್ರತೀಕಾರವಾಗಿ ಭಾರತೀಯ ಸೇನೆಯು 2016ರ ಫೆಬ್ರವರಿಯಲ್ಲಿ ಬಾಲಾಕೋಟ್​ನಲ್ಲಿ ಏರ್​ಸ್ಟ್ರೈಕ್ ಮಾಡಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ಒಳಗಿರುವ ಪಖ್ತುಂಕ್ವ ಪ್ರಾಂತ್ಯದೊಳಗಿರುವ ಬಾಲಾಕೋಟ್​ನಲ್ಲಿ ಜೈಷ್ ಉಗ್ರರ ಶಿಬಿರವನ್ನು ಟಾರ್ಗೆಟ್ ಮಾಡಲಾಯಿತು. ಈ ಐವರು ಏರ್​ಫೋರ್ಸ್ ಪೈಲಟ್​ಗಳು ತಮ್ಮ ಕಾರ್ಯಾಚರಣೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದರು.

7.ಜಮ್ಮು ಕಾಶ್ಮೀರ ಕುರಿತು ಚರ್ಚೆಗೆ ಸಭೆ ಆಯೋಜಿಸುವಂತೆ ವಿಶ್ವಸಂಸ್ಥೆಗೆ ಪತ್ರ ಬರೆದ ಪಾಕ್​

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯವನ್ನು ತೆಗೆದುಹಾಕಿದ ಭಾರತದ ನಿರ್ಧಾರ ಸಂಬಂಧ ತುರ್ತು ಸಭೆ ನಡೆಸುವಂತೆ ಪಾಕಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಹೇಳಿದೆ. ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್​ ಖುರೇಷಿ ಅವರು ಮಾತನಾಡಿ, ನಾವು ಸಂಘರ್ಷಕ್ಕೆ ಪ್ರಚೋದನೆ ನೀಡುವುದಿಲ್ಲ. ಆದರೆ, ನಮ್ಮ ಸಂಯಮವನ್ನು ನಮ್ಮ ದೌರ್ಬಲ್ಯ ಎಂದು ಭಾರತ ತಿಳಿದರೆ ಅದು ಅವರ ತಪ್ಪು ಎಂದು ಹೇಳಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಸಮಿತಿಗೆ ಪತ್ರ ಬರೆದಿರುವ ಖುರೇಷಿ, ಒಂದು ವೇಳೆ ಭಾರತ ಸೇನೆಯನ್ನು ಬಳಸಿದರೆ, ಪಾಕಿಸ್ತಾನ ಸ್ವ ರಕ್ಷಣೆಗಾಗಿ ಎಲ್ಲ ಸಾಮರ್ಥ್ಯದೊಂದಿಗೆ ತಕ್ಕ ಪ್ರತಿಕ್ರಿಯೆ ನೀಡಲಿದೆ ಎಂದು ಹೇಳಿದ್ದಾರೆ. ಜೊತೆಗೆ ಅಪಾಯಕಾರಿ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ತುರ್ತು ಸಭೆ ಕರೆಯುವಂತೆ ಮನವಿ ಮಾಡಿದ್ದಾರೆ.

8.ಮೈಮುಲ್​ ಅಧ್ಯಕ್ಷರಾಗಿ ಮಾವಿನಹಳ್ಳಿ ಸಿದ್ದೇಗೌಡ ಆಯ್ಕೆ

ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಜಿ.ಟಿ. ದೇವೇಗೌಡ ಅವರ ಆಪ್ತ ಮಾವಿನಹಳ್ಳಿ ಸಿದ್ದೇಗೌಡ ಅವರು ಮೈಸೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಇವತ್ತು ನಡೆದ ಕೊನೆಯ ಕ್ಷಣದ ನಾಟಕೀಯ ತಿರುವಿನಲ್ಲಿ ಯಡಿಯೂರಪ್ಪ ಅವರ ತಂಗಿ ಮಗ ಎಸ್.ಸಿ. ಅಶೋಕ್ ಅವರು ನಾಮಪತ್ರ ವಾಪಸ್ ಪಡೆದರು. ಈ ಹಿನ್ನೆಲೆಯಲ್ಲಿ ಮೈಮುಲ್ ಅಧ್ಯಕ್ಷರಾಗಿ ಸಿದ್ದೇಗೌಡರ ಆಯ್ಕೆ ಅವಿರೋಧವಾಗಿ ಆಯಿತು. ಎನ್.ಸಿ. ಅಶೋಕ್ ಅವರು ಆಗಸ್ಟ್ 5ರಂದು ಮೈಮುಲ್ ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದರು. ತಮ್ಮ ಸಂಬಂಧಿಕರಿಗೆ ಮಣೆ ಹಾಕುತ್ತಿದ್ದಾರೆಂದು ವಿಪಕ್ಷಗಳು ಯಡಿಯೂರಪ್ಪ ವಿರುದ್ಧ ಆರೋಪ ಮಾಡಿದ್ದವು. ಕುತೂಹಲಕಾರಿ ಬೆಳವಣಿಗೆಯಲ್ಲಿ ಇವತ್ತು ಬೆಳಗ್ಗೆ ಜಿ.ಟಿ. ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಮೈಸೂರು ಹಾಲು ಒಕ್ಕೂಟಕ್ಕೆ ಇವತ್ತೇ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಇದೇ ವಿಚಾರವಾಗಿ ಇವರಿಬ್ಬರ ಭೇಟಿಯಾಗಿರುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಈ ಭೇಟಿ ನಡೆದ ಬೆನ್ನಲ್ಲೇ ಬಿಎಸ್​ವೈ ಅವರ ತಂಗಿ ಮಗ ಎಸ್.ಸಿ. ಅಶೋಕ್ ಅವರು ನಾಮಪತ್ರ ವಾಪಸ್ ಪಡೆದರು

9. ಸಂಪ್ರದಾಯ ಮುರಿದ ಪಾಕ್​

ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಜಿ.ಟಿ. ದೇವೇಗೌಡ ಅವರ ಆಪ್ತ ಮಾವಿನಹಳ್ಳಿ ಸಿದ್ದೇಗೌಡ ಅವರು ಮೈಸೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಇವತ್ತು ನಡೆದ ಕೊನೆಯ ಕ್ಷಣದ ನಾಟಕೀಯ ತಿರುವಿನಲ್ಲಿ ಯಡಿಯೂರಪ್ಪ ಅವರ ತಂಗಿ ಮಗ ಎಸ್.ಸಿ. ಅಶೋಕ್ ಅವರು ನಾಮಪತ್ರ ವಾಪಸ್ ಪಡೆದರು. ಈ ಹಿನ್ನೆಲೆಯಲ್ಲಿ ಮೈಮುಲ್ ಅಧ್ಯಕ್ಷರಾಗಿ ಸಿದ್ದೇಗೌಡರ ಆಯ್ಕೆ ಅವಿರೋಧವಾಗಿ ಆಯಿತು. ಎನ್.ಸಿ. ಅಶೋಕ್ ಅವರು ಆಗಸ್ಟ್ 5ರಂದು ಮೈಮುಲ್ ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದರು. ತಮ್ಮ ಸಂಬಂಧಿಕರಿಗೆ ಮಣೆ ಹಾಕುತ್ತಿದ್ದಾರೆಂದು ವಿಪಕ್ಷಗಳು ಯಡಿಯೂರಪ್ಪ ವಿರುದ್ಧ ಆರೋಪ ಮಾಡಿದ್ದವು. ಕುತೂಹಲಕಾರಿ ಬೆಳವಣಿಗೆಯಲ್ಲಿ ಇವತ್ತು ಬೆಳಗ್ಗೆ ಜಿ.ಟಿ. ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಮೈಸೂರು ಹಾಲು ಒಕ್ಕೂಟಕ್ಕೆ ಇವತ್ತೇ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಇದೇ ವಿಚಾರವಾಗಿ ಇವರಿಬ್ಬರ ಭೇಟಿಯಾಗಿರುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಈ ಭೇಟಿ ನಡೆದ ಬೆನ್ನಲ್ಲೇ ಬಿಎಸ್​ವೈ ಅವರ ತಂಗಿ ಮಗ ಎಸ್.ಸಿ. ಅಶೋಕ್ ಅವರು ನಾಮಪತ್ರ ವಾಪಸ್ ಪಡೆದರು

10.ಕೋಟಿ ಬಾಚಿಕೊಂಡ ಕುರುಕ್ಷೇತ್ರ

ಕೌರವೇಶ್ವರ' ಬಾಕ್ಸಾಫಿಸ್‍ನಲ್ಲಿ ಅಬ್ಬರಿಸಿ, ಬೊಬ್ಬಿರಿಯುತ್ತಿದ್ದಾನೆ. 'ಕುರುಕ್ಷೇತ್ರ' ಸಿನಿಮಾ ಮೊದಲ ನಾಲ್ಕು ದಿನಗಳಲ್ಲಿ ಅದ್ಭುತ ಗಳಿಕೆ ಕಂಡಿದೆ ಎನ್ನಲಾಗ್ತಿದೆ. ಬಿಡುಗಡೆಯಾದ ದಿನ ವರಮಹಾಲಕ್ಷ್ಮಿ ಹಬ್ಬದ ರಜೆ, ಶನಿವಾರ, ಭಾನುವಾರದ ವೀಕೆಂಡ್ ಬಳಿಕ ಸೋಮವಾರ ಬಕ್ರೀದ್... ಹೀಗೆ ಸತತ ನಾಲ್ಕು ರಜಾ ದಿನಗಳು 'ಕುರುಕ್ಷೇತ್ರ'ದ ಅಮೋಘ ಗಳಿಕೆಗೆ ಸಹಕಾರವಾಗಿವೆ. ಗಾಂಧಿನಗರದ ಮೂಲಗಳ ಪ್ರಕಾರ ದರ್ಶನ್ ನಟನೆಯ ಚಿತ್ರಗಳಲ್ಲೇ ಅತಿಹೆಚ್ಚು ಹಣವನ್ನ ಗಳಿಸೋ ಸಿನಿಮಾವಾಗಿ 'ಕುರುಕ್ಷೇತ್ರ' ನಿಲ್ಲಲಿದೆ ಎನ್ನಲಾಗುತ್ತಿದೆ. ಅದರ ಸೂಚನೆ ಮೊದಲ ನಾಲ್ಕು ದಿನಗಳ ಕಲೆಕ್ಷನ್ ಕೊಡುತ್ತಿದೆ. ಈಗಾಗಲೇ 'ಕುರುಕ್ಷೇತ್ರ' ನಾಲ್ಕು ದಿನಗಳಲ್ಲಿ 35 ಕೋಟಿ ದಾಟಿದೆ ಅನ್ನೋದು ಚಿತ್ರೋದ್ಯಮದ ಮೂಲಗಳಿಂದ ತಿಳಿದ ಮಾಹಿತಿಯಾಗಿದೆ
First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ