ಮೈತ್ರಿಪಾಳಯಕ್ಕೆ ಆಡಿಯೋ ಶಾಕ್..! ಪಕ್ಷ ನಿಷ್ಠೆಗಿಂತ ಸ್ವಾಮಿ ನಿಷ್ಠೆ ಮುಖ್ಯ ಎಂದ ಅತೃಪ್ತ ಶಾಸಕ ಮಹೇಶ್ ಕುಮಟಳ್ಳಿ

ಶಾಸಕ ಸ್ಥಾನ ಹೋದರೂ ಪರವಾಗಿಲ್ಲ, ರಮೇಶ್ ಜಾರಕಿಹೊಳಿ ಅವರಿಗೆ ಮೋಸ ಮಾಡುವುದಿಲ್ಲ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.

Vijayasarthy SN | news18
Updated:February 9, 2019, 9:35 AM IST
ಮೈತ್ರಿಪಾಳಯಕ್ಕೆ ಆಡಿಯೋ ಶಾಕ್..! ಪಕ್ಷ ನಿಷ್ಠೆಗಿಂತ ಸ್ವಾಮಿ ನಿಷ್ಠೆ ಮುಖ್ಯ ಎಂದ ಅತೃಪ್ತ ಶಾಸಕ ಮಹೇಶ್ ಕುಮಟಳ್ಳಿ
ಮಹೇಶ್ ಕುಮಟಳ್ಳಿ
Vijayasarthy SN | news18
Updated: February 9, 2019, 9:35 AM IST
ಬೆಂಗಳೂರು(ಫೆ. 09): ನಿನ್ನೆ ಹೆಚ್.ಡಿ. ಕುಮಾರಸ್ವಾಮಿ ಅವರು ಆಪರೇಷನ್ ಕಮಲದ ಆಡಿಯೋವೊಂದನ್ನು ಬಜೆಟ್​ಗೆ ಮುಂಚೆ ಬಿಡುಗಡೆ ಮಾಡಿ ಬಿಜೆಪಿಯನ್ನು ಬೇಸ್ತು ಬೀಳಿಸಿದ್ದನ್ನು ನೋಡಿದ್ದೇವೆ. ಇವತ್ತು ಮಾಧ್ಯಮಗಳಿಗೆ ಹೊಸ ಆಡಿಯೋವೊಂದು ಸಿಕ್ಕಿದೆ. ಇದರಲ್ಲಿ ಅತೃಪ್ತ ಶಾಸಕ ಮಹೇಶ್ ಕುಮಟಳ್ಳಿ ಅವರು ಮಾತನಾಡಿರುವ ಈ ಆಡಿಯೋ ಮೈತ್ರಿ ಸರಕಾರಕ್ಕೆ ಶಾಕ್ ಕೊಟ್ಟಿದೆ. ಅಥಣಿ ಕ್ಷೇತ್ರದ ಶಾಸಕರಾದ ಮಹೇಶ್ ಅವರು ತಮ್ಮ ಆಪ್ತರೊಂದಿಗೆ ನಡೆಸಿದ ಈ ದೂರವಾಣಿ ಸಂಭಾಷಣೆಯಲ್ಲಿ ಅವರು ಪಕ್ಷ ನಿಷ್ಠೆಗಿಂತ ಸ್ವಾಮಿ ನಿಷ್ಠೆ ದೊಡ್ಡದು ಎಂದಿದ್ದಾರೆ.

ತಾನು ಶಾಸಕನಾಗಲು ರಮೇಶ್ ಜಾರಕಿಹೊಳಿ ಅವರೇ ಕಾರಣ. ಅವರು ತುಂಬ ಒಳ್ಳೆಯರು. ತಾನು ಕೇವಲ 8 ತಿಂಗಳು ಶಾಸಕನಾಗಿದ್ದರೂ ಪರವಾಗಿಲ್ಲ. ಏನು ಬೇಕಾದರೂ ಆಗಲಿ. ಅವರಿಗೆ ಮೋಸ ಮಾಡಲು ಸಾಧ್ಯವಿಲ್ಲ. ಜನರು ನನ್ನನ್ನು ನಂಬೊಲ್ಲ ಎಂದೆಲ್ಲಾ ಮಹೇಶ್ ಕುಮಟಳ್ಳಿ ಅವರು ತಮ್ಮ ಆಪ್ತರೊಂದಿಗೆ ಹೇಳಿದ್ದಾರೆ.

ಏನಿದೆ ಈ ಆಡಿಯೋದಲ್ಲಿ..?

'ನಾನು ಮೋಸ ಮಾಡಲ್ಲ'
ಮಹೇಶ್ ಕಮಟಳ್ಳಿ:  ಮತ್ತೊಂದು ಕಾಲ್ ಬಂದ್ರೆ ಕಟ್ ಆಗುತ್ತೀರಿ
ಕಮಟಳ್ಳಿ ಆಪ್ತ:  ಆ..ಆ..
Loading...

ಕಮಟಳ್ಳಿ: ಅವರ ಕಾಲ್ ಬಂದ್ರೆ ನಿಂದು ಕಟ್ ಆಗುತ್ತೆ..
ಕಮಟಳ್ಳಿ ಆಪ್ತ : ಹೌದು.. ಹೌದು..
ಮಹೇಶ್ ಕಮಟಳ್ಳಿ: ಬಂದು ವಿಚಾರ ಮಾಡ್ತೀನಿ.
ಕಮಟಳ್ಳಿ ಆಪ್ತ: ಆ..ಆ..
ಮಹೇಶ್ ಕಮಟಳ್ಳಿ: ಫ್ಲೈಟ್ ಬುಕ್ ಮಾಡಿದ್ದೀನಿ..ನಮ್ಮ ಕಡೆ ಎಂಪಿ ಅವರು ಇದ್ದಾರೆ.
ಕಮಟಳ್ಳಿ ಆಪ್ತ: ಆ..ಆ
ಮಹೇಶ್ ಕಮಟಳ್ಳಿ: ಎಲೆಕ್ಷನ್ ನಿಂತ್ರೆ ಖರ್ಚು ಮಾಡ್ತಾರೆ..ಮೋಸ ಮಾಡಲ್ಲ. ಅವರಿಗೆ ಬೇಕಾದವರು ಮಾಡ್ತಾರೆ ಅಂತ ಹೇಳ್ತಾರೆ.. ಅಂಥವರಿಗೆ ಕೈಕೊಟ್ರೆ ಸರಿಯಾಗಲ್ಲ.. ಜನರು ನನ್ನ ನಂಬಲ್ಲ.

ಕಮಟಳ್ಳಿ ಆಪ್ತ:  ಅಲ್ಲಿ ಒಂದು ಹಂತಕ್ಕೆ ಬಂದಿದೆಯೇನ್ರೀ..
ಮಹೇಶ್ ಕಮಟಳ್ಳಿ: ಏನು ಗೊತ್ತಿಲ್ಲ ರೀ..ನಮಗೆ ಗೊತ್ತಿಲ್ಲ
ಕಮಟಳ್ಳಿ ಆಪ್ತ: ನೀವು ಅಣ್ಣನ ಜೊತೆ ಇದ್ದೀರಾ..?
ಮಹೇಶ್ ಕಮಟಳ್ಳಿ: ಇಲ್ಲ ನಾನು ಬೇರೆ ಇರ್ತೀನಿ..
ಕಮಟಳ್ಳಿ ಆಪ್ತ: ಆ..ಆ..
ಮಹೇಶ್ ಕಮಟಳ್ಳಿ: ಅವರು ಮಾಡ್ತಾ ಇದ್ದಾರಾ, ಒಳ್ಳೆಯದ್ದೇ ಆಗುತ್ತೆ..
ಕಮಟಳ್ಳಿ ಆಪ್ತ: ಆ..ಆ..
ಕಮಟಳ್ಳಿ: ಅಣ್ಣಾ ಬಂದು ಪ್ರಚಾರ ಮಾಡಿ ನನ್ನ ಗೆಲ್ಲಿಸಿದ್ದಾರೆ. ಅವರು ಒಳ್ಳೆಯವರು..
ಕಮಟಳ್ಳಿ ಆಪ್ತ:  ಹೌದು.. ಹೌದು...
ಮಹೇಶ್ ಕಮಟಳ್ಳಿ: ಅಥಣಿ ಕ್ಷೇತ್ರಕ್ಕೆ ತಂದು ನನ್ನನ್ನು ಗೆಲ್ಲಿಸಿದ್ದಾರೆ. ಸಪೋರ್ಟ್ ಮಾಡಿದ್ದಾರೆ.
ಕಮಟಳ್ಳಿ ಆಪ್ತ: ಹೌದು..ಹೌದು... 
ಮಹೇಶ್ ಕಮಟಳ್ಳಿ: ನಾನು ಮುಂಬೈ ಬಿಟ್ಟು ಬಂದ್ರೆ ಸರಿ ಇರಲ್ಲ...

ರಮೇಶ್ ಜಾರಕಿಹೊಳಿ, ಬಿ. ನಾಗೇಂದ್ರ, ಮಹೇಶ್ ಕಮಟಳ್ಳಿ ಹಾಗೂ ಉಮೇಶ್ ಜಾಧವ್ ಅವರು ಅತೃಪ್ತರ ಅಗ್ರಸಾಲಿನಲ್ಲಿದ್ದಾರೆ. ಕಾಂಗ್ರೆಸ್​ನ ಎರಡು ಶಾಸಕಾಂಗ ಸಭೆಗಳಿಗೂ ಇವರು ಗೈರಾಗಿದ್ದು, ಇವರು ಬಹುತೇಕ ರಾಜೀನಾಮೆ ನೀಡುವ ಹಂತಕ್ಕೆ ಬಂದಿದ್ದಾರೆನ್ನಲಾಗಿದೆ. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಈ ಅತೃಪ್ತ ಶಾಸಕರ ಪಟ್ಟಿಯಲ್ಲಿ 10-12 ಶಾಸಕರು ಇರಬಹುದೆಂಬ ಅನುಮಾನವಿದೆ. ಜಾರಕಿಹೊಳಿ, ಕುಮಟಳ್ಳಿ ಸೇರಿದಂತೆ ನಾಲ್ವರು ಶಾಸಕರ ಅನರ್ಹತೆಗೆ ಕಾಂಗ್ರೆಸ್ ಪಕ್ಷವು ಪ್ರಯತ್ನಿಸುವ ಸಾಧ್ಯತೆಯೂ ಇದೆ.
First published:February 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626