ಸಿಬಿಐ ಚೋರ್​ ಬಚಾವೋ ಸಂಸ್ಥೆ ಎಂದವರಿಗೆ ಈಗ ಅದರ ಮೇಲೆ ನಂಬಿಕೆ ಬಂದಿದೆಯೇ; ಸದನದಲ್ಲಿ ಸಿದ್ದರಾಮಯ್ಯ ಪ್ರಶ್ನೆ

ಬಿಜೆಪಿ ಶಾಸಕ ಮಾದುಸ್ವಾಮಿ ನಿಮಗೆ ಇದರ ಬಗ್ಗೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಕಾನೂನು ಪಾಠ ಮುಂದಾದರು. ಆಗ ಧ್ವನಿ ಎತ್ತಿದ ಕಾಂಗ್ರೆಸ್ ಇತರೆ ಶಾಸಕರು ಮಾದುಸ್ವಾಮಿ ವಿರುದ್ಧ ಹರಿಹಾಯ್ದರು.

HR Ramesh | news18
Updated:February 12, 2019, 5:45 PM IST
ಸಿಬಿಐ ಚೋರ್​ ಬಚಾವೋ ಸಂಸ್ಥೆ ಎಂದವರಿಗೆ ಈಗ ಅದರ ಮೇಲೆ ನಂಬಿಕೆ ಬಂದಿದೆಯೇ; ಸದನದಲ್ಲಿ ಸಿದ್ದರಾಮಯ್ಯ ಪ್ರಶ್ನೆ
ಸಿದ್ದರಾಮಯ್ಯ
HR Ramesh | news18
Updated: February 12, 2019, 5:45 PM IST
ಬೆಂಗಳೂರು: ಆಡಿಯೋ ಬಗ್ಗೆ ಸಮಗ್ರ ತನಿಖೆಯಾಗಲೇಬೇಕು. ಅದಕ್ಕಾಗಿ ಪ್ರಕರಣದ ತನಿಖೆಯನ್ನು ಎಸ್​ಐಟಿಗೆ ವಹಿಸಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಇಂದು ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸಿದರು.

ಬಜೆಟ್​ ಅಧಿವೇಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯವರು ಆಡಿಯೊ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೇಳುತ್ತಾರೆ. ಅಂದು ಅಧಿಕಾರದಲ್ಲಿ ಇಲ್ಲದಿದ್ದಾಗ ಸಿಬಿಐ ಅನ್ನು ಚೋರ್​ ಬಚಾವೋ ಸಂಸ್ಥೆ ಎಂದು ಜರಿದಿದ್ದವರಿಗೆ ಈಗ ಸಿಬಿಐ ಬಗ್ಗೆ ನಂಬಿಕೆ ಬಂತಾ. ನಮಗೆ ಸಿಬಿಐ, ಎಸ್​ಐಟಿ ಎರಡರ ಬಗ್ಗೆಯೂ ನಂಬಿಕೆ ಗೌರವ ಇದೆ ಎಂದು ಹೇಳಿದರು.

ಇದನ್ನು ಓದಿ: ಆಡಿಯೋ ಪ್ರಕರಣ; ಎಸ್​ಐಟಿಗೆ ಆಕ್ಷೇಪ, ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಬಿಜೆಪಿ ಪಟ್ಟು

ಆಡಿಯೋ ಪ್ರಕರಣವನ್ನು ಸದನ ಸಮಿತಿ, ನ್ಯಾಯಾಂಗ ತನಿಖೆಗೆ ವಹಿಸಲು ಬರುವುದಿಲ್ಲ. ಅಲ್ಲಿ ಪ್ರಾಸಿಕ್ಯೂಷನ್​ಗೆ ಅವಕಾಶವಿಲ್ಲ. ಹೀಗಾಗಿ ಇದನ್ನು ಎಸ್​ಐಟಿ ಮೂಲಕವೇ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಬಿಜೆಪಿ ಶಾಸಕ ಮಾದುಸ್ವಾಮಿ ನಿಮಗೆ ಇದರ ಬಗ್ಗೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಕಾನೂನು ಪಾಠ ಮುಂದಾದರು. ಆಗ ಧ್ವನಿ ಎತ್ತಿದ ಕಾಂಗ್ರೆಸ್ ಇತರೆ ಶಾಸಕರು ಮಾದುಸ್ವಾಮಿ ವಿರುದ್ಧ ಹರಿಹಾಯ್ದರು.

ಆಪರೇಷನ್ ಆಡಿಯೋ  ಪ್ರಕರಣವನ್ನು ಎಸ್​ಐಟಿ ತನಿಖೆ ವಹಿಸುವ ಸಂಬಂಧ ಇಂದು ಸಂಜೆಯೊಳಗೆ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ಎಡಿಜಿಪಿ ಗ್ರೇಡ್ ಅಧಿಕಾರಿ ನೇತೃತ್ವದಲ್ಲಿ ತನಿಖಾ ತಂಡ ರಚನೆಯಾಗಲಿದೆ. ಅಧಿಸೂಚನೆ ಇಂದೇ ಹೊರಬಿದ್ದಲ್ಲಿ ನಾಳೆಯಿಂದಲೇ ತನಿಖೆ ಆರಂಭವಾಗಲಿದೆ. ತನಿಖಾ ತಂಡಕ್ಕೆ ಮಾರ್ಗದರ್ಶನ ನೀಡಲು ನಿವೃತ್ತ ನ್ಯಾಯಾಧೀಶರ ನೇಮಕಕ್ಕೂ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...