ಬಿಜೆಪಿ ಶಾಸಕ ಮಸಾಲೆ ಜಯರಾಮ್, ಮಗ ತೇಜು ಮೇಲೆ ಕೊಲೆ ಯತ್ನ ಪ್ರಕರಣ ದಾಖಲು

ನನ್ನ ಕೊಲೆ ಮಾಡುವುದಕ್ಕೆ ಬಂದಿದ್ದರು ಎಂದು ಆರೋಪಿಸಿದ್ದ ಶಾಸಕ ಜಯರಾಮ್ ಪುತ್ರ ತೇಜು ಮೇಲೆಯೇ ಈಗ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ನನ್ನ ಕೊಲೆ ಮಾಡುವುದಕ್ಕೆ ಬಂದಿದ್ದರು ಎಂದು ಆರೋಪಿಸಿದ್ದ ಶಾಸಕ ಜಯರಾಮ್ ಪುತ್ರ ತೇಜು ಮೇಲೆಯೇ ಈಗ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ನನ್ನ ಕೊಲೆ ಮಾಡುವುದಕ್ಕೆ ಬಂದಿದ್ದರು ಎಂದು ಆರೋಪಿಸಿದ್ದ ಶಾಸಕ ಜಯರಾಮ್ ಪುತ್ರ ತೇಜು ಮೇಲೆಯೇ ಈಗ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

  • Share this:
ತುಮಕೂರು (ಏ. 8) :  ಜಿಲ್ಲೆಯ ತುರುವೇಕೆರೆ ತಾಲೂಕು ಸಿಎಸ್ ಪುರದಲ್ಲಿ ರಾಜಕೀಯ ಹೈಡ್ರಾಮ ತಾರಕಕ್ಕೇರಿದೆ.  ಮಾಜಿ ಶಾಸಕ ಎಂಟಿ ಕೃಷ್ಣಪ್ಪ ಮತ್ತು ಹಾಲಿ ಶಾಸಕ ಮಸಾಲ ಜಯರಾಮ್ ನಡುವಿನ ರಾಜಕೀಯ ಗುದ್ದಾಟಕ್ಕೆ ಸಾರ್ವಜನಿಕರು ಹೈರಾಣಾಗಿದ್ದಾರೆ. ಮೊನ್ನೆ ರಾತ್ರಿ ನಡೆದ ಘಟನೆ ಖಂಡಿಸಿ ಇಂದು ಬಿಜೆಪಿ ಪ್ರತಿಭಟನೆ ಮಾಡಿದರೆ, ಇತ್ತ ಏಪ್ರಿಲ್ ಎರಡರಂದು ನಡೆದ ಘಟನೆ ಖಂಡಿಸಿ ಜೆಡಿಎಸ್ ಪ್ರತಿಭಟನೆ ನಡೆಸಿದೆ. ಇದೆಲ್ಲದರ ನಡುವೆ ಹಾಲಿಶಾಸಕ ಹಾಗೂ ಅವರ ಪುತ್ರನ ಮೇಲೆಯೇ ಕೊಲೆ ಯತ್ನ ಕೇಸ್ ದಾಖಲಾಗಿದೆ. ಮಾಜಿ ಶಾಸಕ ಎಂ.ಟಿ ಕೃಷ್ಣಪ್ಪ  ಹಾಗೂ ಹಾಲಿ ಶಾಸಕ ಮಸಾಲೆ ಜಯರಾಂ ನಡುವೆ ರಾಜಕೀಯ ದ್ವೇಷಕ್ಕೆ ಕ್ಷೇತ್ರದ ಜನರಿಗೆ ಹೊಸತಲ್ಲ.  ಕ್ಷೇತ್ರದಲ್ಲಿ ನಡೆದಿರುವ ಎರಡು ಘಟನೆಗಳಿಂದ ಜನರು ಬಳಲುವಂತೆ ಆಗಿದೆ. ಕ್ಷೇತ್ರದಲ್ಲಿ ಏಪ್ರಿಲ್ 2 ರಂದು  ಆನಂದ ಎಂಬ ಜೆಡಿಎಸ್ ಬೆಂಬಲಿತ ಯುವಕನಿಗೆ ಬಿಜೆಪಿ ಬೆಂಬಲಿತ ಯತೀಶ್ ಎಂಬ ವ್ಯಕ್ತಿ ಚಾಕು ಇರಿದಿದ್ದ. ಈ ಘಟನೆ ಮಾಸುವ ಮುನ್ನವೇ ಮೊನ್ನೆ ರಾತ್ರಿ ಮಸಾಲೆ ಜಯರಾಮ್ ಪುತ್ರ ತೇಜು ಚಲಿಸುತ್ತಿದ್ದ ಕಾರನ್ನ ಅಡ್ಡಗಟ್ಟಿದ್ದ ಕೃಷ್ಣ, ಧನಂಜಯ ಎಂಬುವರು ನೆಟ್ಟೆಕೆರೆ ಗೇಟ್ ಬಳಿ ಹಲ್ಲೆ ನಡೆಸಿದ್ದರು. ಈ ವೇಳೆ ಕೃಷ್ಣ ಹಾಗೂ ಧನಂಜಯ್ಯನ ಮೇಲೂ ಹಲ್ಲೆಯಾಗಿತ್ತು. ಈ ಎರಡೂ ಪ್ರಕರಣಗಳೂ ಈಗ ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾಗಿದೆ.ಈ ಎರಡು ಘಟನೆ ಖಂಡಿಸಿ ಎರಡೂ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಕ್ಷೇತ್ರದಲ್ಲಿನ ಈ ಪರಿಸ್ಥಿತಿ ಮನಗಂಡ ಪೊಲೀಸರು  ಸಿಎಸ್ ಪುರ ಗ್ರಾಮದಲ್ಲಿ ಪಹರೆ ನಿಂತಿದ್ದಾರೆ. ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಎಂಟಿ ಕೃಷ್ಣಪ್ಪ ಶಾಸಕ ಮಸಾಲೆ ಜಯರಾಮ್ ಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು. ಕಳೆದ 70 ವರ್ಷದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾವ ವರ್ಷವೂ ಹೀಗೆ ಆಗಿರ್ಲಿಲ್ಲ ನಾನು ಹಿರಿಯ ಮನುಷ್ಯ ಇದ್ದಿನಿ ಮೊದಲು ಶಾಂತಿ ಕಾಪಾಡಿ ಎಂದು ಒತ್ತಾಯಮಾಡಿದರು.

ಇನ್ನು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿರುವ ಪೊಲೀಸರು ಶಾಸಕ ಮಸಾಲ ಜಯರಾಮ್ ಹಾಗೂ ಅವರ ಪುತ್ರ ತೇಜುವಿನ ಮೇಲೆ ಕೊಲೆ ಯತ್ನ ಆರೋಪದ ಪ್ರಕರಣ ದಾಖಲಿಸಿದ್ದಾರೆ.  ಸೆಕ್ಷನ್ 307 ರ ಅಡಿಯಲ್ಲಿ ಎ3, ಎ4 ಆರೋಪಿಗಳನ್ನಾಗಿಸಿದ್ದಾರೆ.  ಜೊತೆಗೆ ಜೆಡಿಎಸ್ ನವರ ಮೇಲೂ ಪ್ರಕರಣ ದಾಖಲಿಸಿರುವ ಪೊಲೀಸರು ಕೃಷ್ಣ, ಧನಂಜಯ್ಯನ ಮೇಲೆ ಎಫ್ಐಆರ್ ಮಾಡಿದ್ದಾರೆ.

ಒಟ್ಟಾರೆ ನನ್ನ ಕೊಲೆ ಮಾಡುವುದಕ್ಕೆ ಬಂದಿದ್ದರು ಎಂದು ಆರೋಪಿಸಿದ್ದ ಶಾಸಕ ಜಯರಾಮ್ ಪುತ್ರ ತೇಜು ಮೇಲೆಯೇ ಈಗ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಇತ್ತ ಎಂಟಿ ಕೃಷ್ಣಪ್ಪರ ಮೇಲೆ ನೇರಾ ನೇರಾ ಆರೋಪ ಮಾಡಿದ್ದ  ಶಾಸಕ ಮಸಾಲೆ ಜಯರಾಮ್ ಮೇಲೂ ಕೂಡಾ ಈಗ ಅದೇ 307 ಕೇಸ ದಾಖಲಾಗಿದೆ. ಸದ್ಯ ಶಿರಾ, ತಿಪಟೂರು ಡಿವೈಎಸ್ಪಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು ಮುಂದೆ ಈ ಪ್ರಕರಣ ಯಾವತಿರುವು ಪಡೆಯಲಿದೆ ಕಾದು ನೋಡಬೇಕಿದೆ
Published by:Seema R
First published: