ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ: ಶಿವಮೊಗ್ಗದಲ್ಲಿ ಉದ್ವಿಗ್ನ ವಾತಾವರಣ; ನಿಷೇಧಾಜ್ಞೆ ಜಾರಿ

ನಗರದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಇಂದು ಮಧ್ಯಾಹ್ನದಿಂದ ಶನಿವಾರ ಬೆಳಗ್ಗೆ 10ಗಂಟೆವರೆಗೆ ಸೆಕ್ಷನ್​ 144ನ್ನು ಜಾರಿಗೊಳಿಸಲಾಗಿದೆ. 

ನಗರದಲ್ಲಿ ಪರಿಸ್ಥಿತಿ ಪರಿಶೀಲಿಸುತ್ತಿರುವ ಪೊಲೀಸ್​ ಅಧಿಕಾರಿಗಳು

ನಗರದಲ್ಲಿ ಪರಿಸ್ಥಿತಿ ಪರಿಶೀಲಿಸುತ್ತಿರುವ ಪೊಲೀಸ್​ ಅಧಿಕಾರಿಗಳು

 • Share this:
  ಶಿವಮೊಗ್ಗ (ಡಿ .3): ಬಂಜರಂಗದಳ ಸಹ ಸಂಚಾಲಕ ನಾಗೇಶ್​ ಎಂಬಾತನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಇದರಿಂದ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಘಟನೆ ಬಳಿಕ ನಗರದ ಐದಾರು ಕಡೆ ಅಹಿತಕರ ಘಟನೆಗಳು ದಾಖಲಾದ ಹಿನ್ನಲೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್​ ಆದೇಶ ಹೊರಡಿಸಿದೆ. ಇಂದು ಮುಂಜಾನೆ ವಾಕಿಂಗ್​ನಿಂದ ಹಿಂದಿರುಗುವ ವೇಳೆ ನಾಗೇಶ್​ ಮೇಲೆ ಹಲ್ಲೆಯಾಗಿದೆ. ನಗರದ ಲಷ್ಕರ್​ ಮೊಹಲ್ಲಾದಲ್ಲಿ ಆಟೋ, ಬೈಕ್​ನಲ್ಲಿ ಬಂದ ಐವರು ದುಷ್ಕರ್ಮಿಗಳು ಅವರ​ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಾಯಗೊಂಡ ನಾಗೇಶ್​ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಬಂಜರಂಗದಳ ಸಂಘಟನೆ ಮುಖಂಡರು ಆಸ್ಪತ್ರೆ ಮುಂದೆ ಜಮಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಯಿತು. ತಕ್ಷಣಕ್ಕೆ ಪೊಲೀಸರು ಬಿಗಿ ಬಂದೋಬಸ್ತ್​ ನಡೆಸಿದ್ದಾರೆ.  ಈ ಘಟನೆ  ಎರಡು ಕೋಮುಗಳ ನಡವಿನ ಉದ್ವಿಗ್ನತೆಗೆ ಕಾರಣವಾಗುವ ಸಾಧ್ಯತೆ ಹಿನ್ನಲೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ.

  Attack on Bajrang Dal activist Tense atmosphere in Shimoga
  ಹಲ್ಲೆಗೊಂಡ ಬಂಜರಂಗದಳ ಕಾರ್ಯಕರ್ತ


  ಇನ್ನು ಈ ಘಟನೆ ನಡೆಯುತ್ತಿದ್ದಂತೆ ನಗರದದಲ್ಲಿ ಕಿಡಿಗೇಡಿಗಳು ಕಸ್ತೂರಿ ಬಾ ರಸ್ತೆಯಲ್ಲಿ ನಿಂತಿದ್ದ ಮಾರುತಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಘಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಗಾಂಧಿ ಬಜಾರ್​ನ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಚ್ಚಿದ್ದಾರೆ. ನಗರದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಇಂದು ಮಧ್ಯಾಹ್ನದಿಂದ ಶನಿವಾರ ಬೆಳಗ್ಗೆ 10ಗಂಟೆವರೆಗೆ ಸೆಕ್ಷನ್​ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

  ಇದನ್ನು ಓದಿ: ನಿಜವಾದ ಹೇಡಿಗಳು ಯಾರು? ಕೃಷಿ ಸಚಿವ ಬಿಸಿ ಪಾಟೀಲ್​ಗೆ ಕಾಂಗ್ರೆಸ್​ ಪ್ರಶ್ನೆ; ಕ್ಷಮೆಗೆ ಎಚ್​ಡಿಕೆ ಆಗ್ರಹ

  ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೂರ್ವ ವಲಯದ ಐಜಿಪಿ ರವಿ, ನಗರದಲ್ಲಿ ಬೆಳಗ್ಗೆಯಿಂದ ಐದಾರು ಅಹಿತರಕ ಘಟನೆಗಳು ನಡೆದಿವೆ. ಹಿಂದು, ಮುಸ್ಲಿಂ  ಸಮುದಾಯದ ನಡುವೆ ಸಾಮರಸ್ಯದ ವಿಷಯ ಇದೆ. ಈ ಹಿನ್ನಲೆ ಸಾರ್ವಜನಿಕರು ಸಹಕಾರ ನೀಡಬೇಕು. ಯಾರು ಕೂಡ ಹತಾಶರಾಗುವುದು ಬೇಡ. ಪೊಲೀಸ್ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಜನರು ಭಯ ಪಡುವುದು ಬೇಡ. ವದಂತಿಗಳಿಗೆ ಕಿವಿಗೂಡಬೇಡಿ, ಪರಿಸ್ಥಿತಿ ಶಾಂತವಾಗಿದೆ ಎಂದಿದ್ದಾರೆ

  ಸಂಸದ ಬಿವೈ ರಾಘವೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ನಾಗೇಶ್​ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ನಿನ್ನೆ ರಾತ್ರಿ ಶಿವಮೊಗ್ಗದ ಗೋಪಾಳದಲ್ಲಿ ಮಂಜುನಾಯ್ಕ, ಸುಧೀರ್ ಹಾಗೂ ನವೀನ್ ಎಂಬುವರ ಮೇಲೆ ಹಲ್ಲೆ ನಡೆದಿದೆ. ಮುಂಜಾನೆ ಸಹ ಬಜರಂಗದಳ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ನಡೆದಿದೆ. ಈ ಎರಡು ಕಡೆಗಳಲ್ಲಿ ಎರಡು ಮೂರು ಜನ ಸೇರಿ ಹಲ್ಲೆ ನಡೆಸಿದ್ದಾರೆ. ಈ ಹಿಂದೆ ಕಳೆದ ತಿಂಗಳ ಸಹ ಎರಡು ಮೂರು ಕಡೆ ಈ ರೀತಿ ಘಟನೆ ನಡೆದಿದೆ. ಪೊಲೀಸರು ಸಹ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ ಹಾಗೂ ಇಂದು ಬೆಳಗ್ಗೆ ನಡೆದ ಘಟನೆ ಬಗ್ಗೆ ಎಸ್ ಪಿ ಜೊತೆ ಚರ್ಚಿಸಿದ್ದೇನೆ. ಈ ಘಟನೆ ಗಮನಿಸಿದರೆ ಕಳೆದ ಒಂದು ವಾರದಿಂದ ಗಮನಿಸಿ ಮಾಡಿದ್ದಂತಿದೆ. ತಪ್ಪಿತಸ್ಥರ ಪತ್ತೆ ಹಚ್ಚಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಉದ್ದೇಶ ಏನೇ ಇದ್ದರೂ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದರು
  Published by:Seema R
  First published: