ಬೆಂಗಳೂರಿನ ಎಟಿಎಂಗಳಲ್ಲಿ ಹಣ ಡ್ರಾ ಮಾಡುವ ಮುನ್ನ ಎಚ್ಚರ; ನಿಮ್ಮ ಕಾರ್ಡ್ ಹ್ಯಾಕ್ ಮಾಡಿ ಹಣ ಎಗರಿಸ್ತಾರೆ
ನೈಜೀರಿಯಾ ಪ್ರಜೆಗಳು ನ.13 ರಂದು ಎಸ್ಬಿಐ ಎಟಿಎಂಗೆ ಸ್ಕಿಮ್ಮರ್ ಅಳವಡಿಸಿದ್ಧಾಗಿ ತಿಳಿದು ಬಂದಿದೆ. ಸದ್ಯ ಜಾಲಹಳ್ಳಿ ಪೊಲೀಸರು ಎಸ್ಬಿಐ ಬ್ಯಾಂಕ್ ಅಧಿಕಾರಿಗಳಿಗೆ ನೋಟೀಸ್ ನೀಡಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ಶುರು ಮಾಡಿರುವ ಜಾಲಹಳ್ಳಿ ಪೊಲೀಸರು, ನೈಜೀರಿಯಾ ಪ್ರಜೆಗಳಿಗಾಗಿ ಹುಡುಕಾಟ ನಡೆಸಿದ್ಧಾರೆ.

ATM card
- News18 Kannada
- Last Updated: December 3, 2019, 3:34 PM IST
ಬೆಂಗಳೂರು(ಡಿ.03): ಎಟಿಎಂನಲ್ಲಿ ಹಣ ಡ್ರಾ ಮಾಡುವ ಮುನ್ನ ಈ ಸುದ್ದಿಯನ್ನು ಓದಲೇಬೇಕು. ಯಾಕೆಂದರೆ, ಸಿಲಿಕಾನ್ ಸಿಟಿಯಲ್ಲಿ ಎಟಿಎಂ ಸ್ಕಿಮ್ಮಿಂಗ್ ಮೋಸ ಹೆಚ್ಚಾಗುತ್ತಿದೆ. ಸೈಬರ್ ಕ್ರಿಮಿನಲ್ಗಳು ಎಟಿಎಂ ಕೀ ಪ್ಯಾಡ್ಗೆ ಸ್ಕಿಮ್ಮರ್ ಎಂದು ಕರೆಯಲಾಗುವ ಡಿವೈಸ್ ಅಳವಡಿಸುತ್ತಾರೆ. ನೀವು ಹಣ ಡ್ರಾ ಮಾಡಲು ಎಟಿಎಂ ಯಂತ್ರಕ್ಕೆ ಕಾರ್ಡ್ ಪಂಚ್ ಮಾಡಿದಾಗ ನಿಮ್ಮ ಎಟಿಎಂ ಕಾರ್ಡ್ ಡೇಟಾ ಆ ಡಿವೈಸ್ಗೆ ರವಾನೆಯಾಗುತ್ತದೆ. ಬಳಿಕ ಕ್ರಿಮಿನಲ್ಗಳು ಆ ಡೇಟಾ ಪಡೆದು ಬೇರೊಂದು ಎಟಿಎಂನಲ್ಲಿ ನಿಮ್ಮ ಹಣ ಎಗರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಎಟಿಎಂನಲ್ಲಿ ಹಣ ತೆಗೆದುಕೊಳ್ಳುವ ಮುನ್ನ ಜಾಗರೂಕವಾಗಿರಬೇಕು. ಇಂತಹ ಘಟನೆ ಬೆಂಗಳೂರಿನಲ್ಲಿ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ.
ಬೆಂಗಳೂರಿನ ನ್ಯೂಬಿಎಲ್ ಬಳಿ ಇರುವ ಎಂಇಎಸ್ ರಸ್ತೆಯ ಎಸ್ಬಿಐ ಎಟಿಎಂನಲ್ಲಿ ಸ್ಕಿಮ್ಮರ್ ಡಿವೈಸ್ ಪತ್ತೆಯಾಗಿದೆ. ಇಬ್ಬರು ನೈಜೀರಿಯಾ ಪ್ರಜೆಗಳು ಎಸ್ಬಿಐ ಎಂಟಿಎಂನಲ್ಲಿ ಸ್ಕಿಮ್ಮರ್ ಡಿವೈಸ್ ಅಳವಡಿಸುತ್ತಿರುವ ದೃಸ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಟಿಎಂ ಡೇಟಾವನ್ನು ಕದಿಯಲು ಸ್ಕಿಮ್ಮರ್ ಡಿವೈಸ್ ಅಳವಡಿಸಿದ್ಧಾರೆ ಎಂದು ಪೊಲೀಸರು ತಿಳಿಸಿದ್ಧಾರೆ.
ಸ್ಕಿಮ್ಮರ್ ಡಿವೈಸ್ ಹಿಡಿದು ಎಟಿಎಂ ಒಳಗೆ ಬರುವ ನೈಜೀರಿಯನ್ ಪ್ರಜೆಗಳ ದೃಶ್ಯ ಇದೆ. ಸಾರ್ವಜನಿಕರು ಹಣ ತೆಗೆದುಕೊಳ್ಳಲು ಎಂಟಿಎಂಗೆ ಹೋದಾಗ ಸ್ಕಿಮ್ಮರ್ ಡಿವೈಸ್ ಅಳವಡಿಸಿರುವುದು ಬೆಳಕಿಗೆ ಬಂದಿದೆ. ಕೂಡಲೇ ಎಚ್ಚೆತ್ತುಕೊಂಡ ಗ್ರಾಹಕರು ಜಾಲಹಳ್ಳಿ ಪೊಲೀಸರಿಗೆ ದೂರು ನೀಡಿದ್ಧಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸ್ಕಿಮ್ಮರ್ ಡಿವೈಸ್ ಮತ್ತು ಸಿಸಿಟಿವಿ ಕ್ಯಾಮೆರಾವನ್ನು ವಶಪಡಿಸಿಕೊಂಡಿದ್ಧಾರೆ.15 ಕ್ಷೇತ್ರಗಳಲ್ಲಿ ಅನರ್ಹರ ಸೋಲು ಖಚಿತ, ಕಾಂಗ್ರೆಸ್ ಗೆಲುವು ನಿಶ್ಚಿತ; ಡಿಕೆ ಶಿವಕುಮಾರ್
ನೈಜೀರಿಯಾ ಪ್ರಜೆಗಳು ನ.13 ರಂದು ಎಸ್ಬಿಐ ಎಟಿಎಂಗೆ ಸ್ಕಿಮ್ಮರ್ ಅಳವಡಿಸಿದ್ಧಾಗಿ ತಿಳಿದು ಬಂದಿದೆ. ಸದ್ಯ ಜಾಲಹಳ್ಳಿ ಪೊಲೀಸರು ಎಸ್ಬಿಐ ಬ್ಯಾಂಕ್ ಅಧಿಕಾರಿಗಳಿಗೆ ನೋಟೀಸ್ ನೀಡಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ಶುರು ಮಾಡಿರುವ ಜಾಲಹಳ್ಳಿ ಪೊಲೀಸರು, ನೈಜೀರಿಯಾ ಪ್ರಜೆಗಳಿಗಾಗಿ ಹುಡುಕಾಟ ನಡೆಸಿದ್ಧಾರೆ.
ಎಟಿಎಂ ಸ್ಕಿಮ್ಮಿಂಗ್ ಇತ್ತೀಚೆಗೆ ನಡೆಯುತ್ತಿರುವ ಎಟಿಎಂ ಮೋಸವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಂಟಿಎಂಗಳಿಗೆ ಸ್ಕಿಮ್ಮರ್ ಡಿವೈಸ್ ಅಳವಡಿಸುವ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ವಿದೇಶಿಗರೇ ಈ ಕೃತ್ಯಗಳನ್ನು ಹೆಚ್ಚಾಗಿ ಎಸಗುತ್ತಿದ್ಧಾರೆ. ಎಟಿಎಂ ಡೇಟಾ ಕದಿಯಲು ಸ್ಕಿಮ್ಮರ್ ಡಿವೈಸ್ ಅಳವಡಿಸುತ್ತಾರೆ. ಈ ಸಾಧನಗಳನ್ನು ಬಳಸಿ ಎಟಿಎಂನಲ್ಲಿ ಹಣ ಕದಿಯುತ್ತಾರೆ ಎಂದು ಪೊಲೀಸರು ಹೇಳುತ್ತಾರೆ.
ಸಮುದ್ರದ ದಡಕ್ಕೆ ತೇಲಿಬಂದ ಸೂಟ್ಕೇಸ್ನಲ್ಲಿತ್ತು ಕೈ, ಕಾಲು, ಗುಪ್ತಾಂಗ!

Loading...
Loading...