ATMನ್ನೇ ದೋಚಿದ ಖತರ್ನಾಕ್ ಲವರ್ಸ್: ಯಾವ ಸಿನಿಮಾಗೂ ಕಮ್ಮಿ ಇಲ್ಲ ಈ ಪ್ರಕರಣ

ಈ ಎಟಿಎಂ ಲೂಟಿಯ ವೇಳೆ ಬರೋಬ್ಬರಿ 16 ಲಕ್ಷ ರೂಪಾಯಿ ದೋಚಿದ್ದ ಖದೀಮರು ಇದೀಗ ಖಾಕಿ ಬಲೆಗೆ ಬಿದ್ದಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಬ್ಯಾಂಕ್ ಕ್ಯಾಶಿಯರ್ ಹಾಗೂ ಸಿಪಾಯಿ ಪಾಲುದಾರರಾಗುವ ಮೂಲಕ ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಬೆಳಕಿಗೆ ಬಂದಿತ್ತು.

ಎಟಿಎಂಗೆ ಕನ್ನ ಹಾಕಿದ ಆರೋಪಿಗಳು ಮತ್ತು ಪ್ರಕರಣ ಭೇದಿಸಿದ ಪೊಲೀಸ್ ತಂಡ

ಎಟಿಎಂಗೆ ಕನ್ನ ಹಾಕಿದ ಆರೋಪಿಗಳು ಮತ್ತು ಪ್ರಕರಣ ಭೇದಿಸಿದ ಪೊಲೀಸ್ ತಂಡ

  • Share this:
ಅದಾಗಷ್ಟೆ ಸೆಕ್ಯೂರಿಟಿ ಸಿಬ್ಬಂದಿ (Security Staff) ಎಟಿಎಂ ಮಶೀನ್ (ATM Machine) ಗೆ ಲಕ್ಷ ಲಕ್ಷ ಹಣ ತುಂಬಿಸಿ ಹೋಗಿದ್ರು, ಸಾಕಷ್ಟು ಬಿಗಿ ಭದ್ರತೆಯಿಂದ ಲಾಕ್ (Lock) ಮಾಡಿದ್ರೂ ಸಹ ನಕಲಿ ಕೀ ಬಳಸಿ, ಕೊನೆಗೆ ಎಟಿಎಂ ಮಶೀನ್ ಪಾಸವರ್ಡ್ (Password) ಬಳಸಿ ಯಾವುದೇ ಸುಳಿವು ಸಹ ಬಿಡದೇ ಅತ್ಯಂತ ಚಾಣಾಕ್ಷತೆಯಿಂದ ಕಳ್ಳತನ (theft) ಮಾಡಲಾಗಿತ್ತು. ಪಕ್ಕಾ ಪ್ಲಾನ್ ಪ್ರಕಾರ ನಡೆದ ಈ ಎಟಿಎಂ ಲೂಟಿಯ ವೇಳೆ ಬರೋಬ್ಬರಿ 16 ಲಕ್ಷ ರೂಪಾಯಿ ದೋಚಿದ್ದ ಖದೀಮರು ಇದೀಗ ಖಾಕಿ ಬಲೆಗೆ ಬಿದ್ದಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಬ್ಯಾಂಕ್ ಕ್ಯಾಶಿಯರ್ ಹಾಗೂ ಸಿಪಾಯಿ ಪಾಲುದಾರರಾಗುವ ಮೂಲಕ ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಬೆಳಕಿಗೆ ಬಂದಿತ್ತು.

ಹೌದು ನವ್ಹೆಂಬರ್ 18ರ ರಾತ್ರಿ ಮುದ್ದೇಬಿಹಾಳದ ಹುಡ್ಕೋ ಕಾಲೋನಿಯಲ್ಲಿನ ಯೂನಿಯನ್ ಬ್ಯಾಂಕ್ ಎಟಿಎಂ ಕಳ್ಳತನ ಮಾಡಲಾಗಿತ್ತು. ರಾತ್ರಿ ವೇಳೆ ಬಂದ್ ಇರುತ್ತಿದ್ದ ಎಟಿಎಂ ಮಶೀನ್ ಬೀಗ ಮುರಿದು ಪಾಸವರ್ಡ್ ಹಾಕಿ 16 ಲಕ್ಷ ರೂಪಾಯಿ ಹಣ ದೋಚಲಾಗಿತ್ತು.

ಚುರಕಿನ ತನಿಖೆ, ಏಳು ಆರೋಪಿಗಳು ಅಂದರ್

ಈ ಕುರಿತು ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಮುದ್ದೇಬಿಹಾಳ ಠಾಣೆಗೆ ದೂರು ನೀಡಿದ್ರು. ಸಿಸಿಟಿವಿ ವಿಡಿಯೋ ಆಗಲಿ ಅಥವಾ ಯಾವುದೇ ಸಾಕ್ಷಿ ಇಲ್ಲದಿದ್ರೂ ಪ್ರಕರಣದ ಹಿಂದೆ ಬಿದ್ದ ಪೊಲೀಸರು ಚುರುಕಿನ ತನಿಖೆ ನಡೆಸಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Vijayanagara: ತಂದೆ- ತಾಯಿಯನ್ನು ನೋಡಿಕೊಳ್ಳದೇ ಬೀದಿಗೆ ತಳ್ಳಿದ ಹೆತ್ತ ಮಕ್ಕಳು!

ಇಡೀ ಮುದ್ದೇಬಿಹಾಳದಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಅಂದು ರಾತ್ರಿ ಒಂದು ಸ್ವಿಫ್ಟ್ ಕಾರು ಹಾಗೂ ಕೆಲವು ವ್ಯಕ್ತಿಗಳು ಅನುಮಾನಾಸ್ಪದವಾಗಿ ತಿರುಗಾಡಿರುವುದು ಕೆಲವು ಸಿಸಿ ಕ್ಯಾಮೆರಾಗಳಲ್ಲಿ ಕಂಡು ಬಂದಿತ್ತು. ಪೊಲೀಸರ ತನಿಖೆ ವೇಳೆ ಯೂನಿಯನ್ ಬ್ಯಾಂಕ್ ಕ್ಯಾಶಿಯರ್ ಮಿಸ್ಮಿತಾ ಶರಾಭಿ ಹಾಗೂ ಸಿಪಾಯಿ ವಿಠ್ಠಲ್ ಮಂಗಳೂರ ಭಾಗಿಯಾಗಿರುವುದು ಗೊತ್ತಾಗಿತ್ತು.

ಎಟಿಎಂ ಮಶೀನ್ ಪಾಸವರ್ಡ್ ನೀಡಿದ್ದಳು

ಅವರನ್ನು ಹಿಡಿದು ವಿಚಾರಿಸಿದ ಪೊಲೀಸರಿಗೆ ಭಯಾನಕ ಸತ್ಯ ಗೊತ್ತಾಗಿತ್ತು. ಕ್ಯಾಶಿಯರ್ ಆಗಿದ್ದ ಮಿಸ್ಮಿತಾ ತನ್ನ ಬಾಯ್ ಫ್ರೆಂಡ್ ಮಂಜುನಾಥ್ ಬಿನ್ನಾಳಮಠ ಎಂಬಾತನಿಗೆ ಎಟಿಎಂ ಮಶೀನ್ ಪಾಸವರ್ಡ್ ನೀಡಿದ್ದಳು, ಇತ್ತ ಸಿಪಾಯಿ ವಿಠ್ಠಲ್ ಎಟಿಎಂ ಮಶೀನ್ ನ ನಕಲಿ ಕೀ ಕೊಟ್ಟಿದ್ದ. ಇವರಿಬ್ಬರ ಸಹಾಯ ಪಡೆದು ಮಂಜುನಾಥ್ ತನ್ನ ನಾಲ್ವರು ಸಹಚರರೊಂದಿಗೆ ಕಾರಿನಲ್ಲಿ ಬಂದು ಎಟಿಎಂ ಲೂಟಿ ಮಾಡಿದ್ದ.

 ATM robbery case solved in Muddebihal, Vijayapura Seven held
ವಶಪಡಿಸಿಕೊಂಡು ನಗದು ಮತ್ತು ವಸ್ತುಗಳು


ಕ್ಯಾಶಿಯರ್ ಮಿಸ್ಮಿತಾಳ ಬಾಯ್ ಫ್ರೇಂಡ್ ಆಗಿದ್ದ ಮುದ್ದೇಬಿಹಾಳದ ಮಂಜುನಾಥ್ ಬಿನ್ನಾಳಮಠ ಸುಲಭವಾಗಿ ಹಣ ಮಾಡುವ ಯೋಚನೆ ಮಾಡಿದ್ದ. ಇದಕ್ಕೆ ಸಾಥ್ ನೀಡಿದ ಮಿಸ್ಮಿತಾ ತಮ್ಮದೇ ಬ್ಯಾಂಕ್ ಎಟಿಎಂ ಮಶೀನ್ ಲೂಟಿ ಮಾಡುವ ಪ್ಲಾನ್ ಕೊಟ್ಟಿದ್ದಳು. ಅದರಂತೆ ಯಶಸ್ವಿಯಾಗಿ ಎಟಿಎಂ ಲೂಟಿ ಮಾಡಿದ್ದ ಮಂಜುನಾಥ್, ಬಸವರಾಜ್, ಸುರೇಶ್, ಮುತ್ತು, ನಾಗರಾಜ್, ವಿಠ್ಠಲ್, ಮಿಸ್ಮಿತಾ ಈ ಏಳು ಆರೋಪಿಗಳು ಇದೀಗ ಅಂದರ್ ಆಗಿದ್ದಾರೆ.

ಇದನ್ನೂ ಓದಿ:  Bengaluru Crime: ಓಮಿಕ್ರಾನ್​​ಗೆ ಹೊಸ ಲಸಿಕೆ ಹಾಕ್ತಿವಿ ಅಂತ ಮನೆಗೆ ನುಗ್ಗಿದವರು ಮಾಡಿದ್ದೇ ಬೇರೆ!

18 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ

ಬಂಧಿತರಿಂದ 13 ಲಕ್ಷ ರೂ. ಹಣ, ಎಟಿಎಂ ಮಶೀನ್ ನಿಂದ ದೋಚಲಾಗಿದ್ದ, ಯಂತ್ರದ ಸಲಕರಣೆಗಳು, ಒಂದು ಸ್ವಿಫ್ಟ್ ಕಾರು, 5ಸ್ಮಾರ್ಟ್ ಫೋನ್ ಗಳು ಸೇರಿ ಒಟ್ಟು 18ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕ್ಯಾಶಿಯರ್ ಮಿಸ್ಮಿತಾ ಕ್ರಿಮಿನಲ್ ಪ್ಲಾನ್ ಮಾಡಿ ತನ್ನ ಪ್ರಿಯಕರನಿಂದಲೇ ಇಷ್ಟೆಲ್ಲ ಕುಕೃತ್ಯ ಮಾಡಿಸಿದ್ದು, ಬ್ಯಾಂಕ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಾಕ್ಷಿಗಳು ಇಲ್ಲದಿದ್ರೂ ತ್ವರಿತಗತಿಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ, ಕಳುವಾಗಿದ್ದ ಸಾರ್ವಜನಿಕರ ಹಣವನ್ನು ವಶಕ್ಕೆ ಪಡೆದ ಮುದ್ದೇಬಿಹಾಳ ಠಾಣೆ ಪೊಲೀಸರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಅಧಿಕಾರಿ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿದ ಎಸ್ ಪಿ ಅವರು ಸಹ ಪ್ರಶಂಸೆಯನ್ನು ನೀಡಿದ್ದಾರೆ.

ವರದಿ:  ಗುರುರಾಜ್ ಗದ್ದನಕೇರಿ
Published by:Mahmadrafik K
First published: