• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime News: ಬೆಂಗಳೂರಿಗರೇ ಹುಷಾರ್! ಓದಿದ್ದು 10ನೇ ಕ್ಲಾಸ್, ವಂಚನೆ ಮಾಡುವುದರಲ್ಲಿ ಐನಾತಿ; ATMಗೆ ಬರುವ ವೃದ್ಧರೇ ಇವನ ಟಾರ್ಗೆಟ್​!

Crime News: ಬೆಂಗಳೂರಿಗರೇ ಹುಷಾರ್! ಓದಿದ್ದು 10ನೇ ಕ್ಲಾಸ್, ವಂಚನೆ ಮಾಡುವುದರಲ್ಲಿ ಐನಾತಿ; ATMಗೆ ಬರುವ ವೃದ್ಧರೇ ಇವನ ಟಾರ್ಗೆಟ್​!

ಬಂಧಿತ ಆರೋಪಿ ಶಶಿಕುಮಾರ್

ಬಂಧಿತ ಆರೋಪಿ ಶಶಿಕುಮಾರ್

ಆರೋಪಿ ಶಶಿಕುಮಾರ್ ಕಾರ್ಡ್ ಎಕ್ಸ್​ಚೇಂಜ್​ ಮಾಡಿದ ಬಳಿಕ ನೇರವಾಗಿ ಜ್ಯುವೆಲ್ಲರಿ ಶಾಪ್​ಗೆ ಹೋಗಿ ಬಗೆಬಗೆಯ ಚಿನ್ನಾಭರಣ ಖರೀದಿ ಮಾಡುತ್ತಿದ್ದ. ಕದ್ದ ಕಾರ್ಡ್​ನಲ್ಲೇ ಪೇಮೆಂಟ್​ ಮಾಡುತ್ತಿದ್ದ.

  • Share this:

ಬೆಂಗಳೂರು: ಈತ ಓದಿದ್ದು ಮಾತ್ರ ಹತ್ತನೇ ತರಗತಿ (SSLC). ಹೊಟ್ಟೆಪಾಡಿಗಾಗಿ ಆಟೋ ಓಡಿಸುತ್ತಿದ್ದ ಈತ (Auto Driver), ಆನ್‌ಲೈನ್ ಜೂಜು, ಕುದುರೆ ರೇಸ್ (Horse Race) ಹುಚ್ಚು ತಲೆಗೆ ಹತ್ತಿತ್ತು. ಜೂಜು, ಮೋಜಿಗಾಗಿ ಈತ ಟಾರ್ಗೆಟ್​ ಮಾಡಿದ್ದು ವಯೋ ವೃದ್ಧರನ್ನು (Elder Person). ಈತನ ಕೃತ್ಯ ನೋಡಿದರೆ ನೀವು ನೀವು ಶಾಕ್​ ಆಗೋದು ಪಕ್ಕಾ. ಎಟಿಎಂ (ATM) ಬಳಿ ವಯಸ್ಸಾದ ವ್ಯಕ್ತಿಗಳು, ಹಣ ತೆಗೆದುಕೊಳ್ಳಲು ಸಹಾಯ ಕೇಳುವುದು ಸಾಮಾನ್ಯ. ಆದರೆ ಇದನ್ನೇ ದುರ್ಬಳಕೆ ಮಾಡಿಕೊಂಡ ಶಶಿಕುಮಾರ್​ ಎಂಬಾತ ಎಟಿಎಂನಲ್ಲಿ ಹಣ ತೆಗೆಯಲು ಬರುವ ವಯಸ್ಸಾದ ವ್ಯಕ್ತಿಗಳಿಗೆ ಸಹಾಯ (Help) ಮಾಡುವ ನೆಪದಲ್ಲಿ ವಂಚಿಸಿದ್ದಾನೆ. ಎಟಿಎಂ ಕಾರ್ಡ್ (ATM Card) ಪಡೆದುಕೊಂಡು ಕ್ಯಾಶ್​ ತೆಗೆದುಕೊಡುವ ನೆಪದಲ್ಲಿ, ಸೀಕ್ರೆಟ್​ ಪಿನ್ ಕೇಳಿಕೊಂಡು, ಕಾರ್ಡ್ ಅದಲಿ ಬದಲಿ ಮಾಡಿ ಕೊಡುತ್ತಿದ್ದ. ಇದೀಗ ಐನಾತಿ ವಂಚಕ ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರ ಬಲೆಗೆ ಸಿಲುಕಿದ್ದಾನೆ.


ಕದ್ದ ಕಾರ್ಡ್​ ಮೂಲಕ ಚಿನ್ನಾಭರಣ ಖರೀದಿಸುತ್ತಿದ್ದ


ಆರೋಪಿ ಶಶಿಕುಮಾರ್ ವೃತ್ತಿಯಲ್ಲಿ ಆಟೋ ಚಾಲಕ. ಹಣ ಮಾಡುವ ಉದ್ದೇಶದಿಂದ ಈ ರೀತಿ ವಂಚನೆ ಕೆಲಸಕ್ಕಿಳಿದ್ದ ಶಶಿಕುಮಾರ್​, ಎಟಿಎಂನಲ್ಲಿ ದೋಖಾ ಮಾಡುತ್ತಿದ್ದ. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ.


ಇದನ್ನೂ ಓದಿ: HD Kumaraswamy: ಹಾಸನ JDS ಟಿಕೆಟ್​ ದಂಗಲ್​ಗೆ ಬಿಗ್​​ಟ್ವಿಸ್ಟ್​; HDD ಎಂಟ್ರಿ ಆಗುತ್ತಿದ್ದಂತೆ ಸಭೆ ರದ್ದು! HDK ಶಾಕಿಂಗ್ ರಿಯಾಕ್ಷನ್


ಬಂಧಿತ ಆರೋಪಿ ಶಶಿಕುಮಾರ್


ಇನ್ನೂ ಆರೋಪಿ ಶಶಿಕುಮಾರ್ ಕಾರ್ಡ್ ಎಕ್ಸ್​ಚೇಂಜ್​ ಮಾಡಿದ ಬಳಿಕ ನೇರವಾಗಿ ಜ್ಯುವೆಲ್ಲರಿ ಶಾಪ್​ಗೆ ಹೋಗಿ ಬಗೆಬಗೆಯ ಚಿನ್ನಾಭರಣ ಖರೀದಿ ಮಾಡುತ್ತಿದ್ದ. ಕದ್ದ ಕಾರ್ಡ್​ನಲ್ಲೇ ಪೇಮೆಂಟ್​ ಮಾಡುತ್ತಿದ್ದ. ಜ್ಯುವೆಲ್ಲರಿ ಶಾಪ್​ನ ಸಿಸಿಟಿವಿಯಲ್ಲೂ ಕೃತ್ಯ ಸೆರೆಯಾಗಿತ್ತು. ಹೀಗೆ ಸುಮಾರು 16 ಲಕ್ಷ ರೂಪಾಯಿಯಷ್ಟ ಹಣವನ್ನು ಎಟಿಎಂ ಕಾರ್ಡ್ ಮೂಲಕ ವಂಚನೆ ಮಾಡುತ್ತಿದ್ದ.


ಆರೋಪಿಯನ್ನು ಬಂಧಿಸಿದ ಪೊಲೀಸರು


ಈ ಕುರಿತು ಮಾಹಿತಿ ನೀಡಿರುವ ಈಶಾನ್ಯ ವಿಭಾಗದ ಡಿಸಿಪಿ ಅನೂಪ್​ ಶೆಟ್ಟಿ ಅವರು, ಈಶಾನ್ಯ ವಿಭಾಗದ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಅದರಲ್ಲಿ ಓರ್ವ ವ್ಯಕ್ತಿ ಎಟಿಎಂಗೆ ಹೋದ ಸಂದರ್ಭದಲ್ಲಿ ಸಹಾಯ ಮಾಡುವ ನೆಪದಲ್ಲಿ ಅವರ ಪಿನ್ ತಿಳಿದುಕೊಂಡು ಬಳಿಕ ಕಾರ್ಡ್​ ಎಕ್ಸ್​ಚೇಂಜ್ ಮಾಡಿ ಆದರಿಂದ ಆರೋಪಿ ಸುಮಾರು 16 ಲಕ್ಷ ರೂಪಾಯಿ ಹಣ ಡ್ರಾ ಮಾಡಿಕೊಂಡಿದ್ದಾನೆ. ಪ್ರಕರಣ ಸಂಬಂಧ ಶಶಿಕುಮಾರ್ ಎಂಬಾತನನ್ನು ಅರೆಸ್ಟ್​ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Bengaluru: ಅಕ್ರಮ 'A' ಖಾತಾದಾರರಿಗೆ ಬಿಬಿಎಂಪಿ ಶಾಕ್; 'B' ಖಾತಾ ಬದಲು 'A' ಖಾತಾ ಪಡೆದಿದ್ರೆ ಗುನ್ನಾ!


ಆರೋಪಿ ಶಶಿಕುಮಾರ್ ಜ್ಯುವೆಲ್ಲರಿ ಶಾಪ್​ನಲ್ಲಿ ಖರೀದಿ ಮಾಡಿದ ಬಳಿಕ ಆಭರಣವನ್ನ ಬೇರೆ ಕಡೆ ಅಡವಿಟ್ಟು ಹಣ ಪಡೆಯುತ್ತಿದ್ದ. ಬಂದ ಹಣದಲ್ಲಿ ಆನ್‌ಲೈನ್ ಗೇಮ್, ಕುದುರೆ ರೇಸ್, ಜೂಜು, ಮೋಜು ಅಂತಾ ಎಂಜಾಯ್ ಮಾಡ್ತಿದ್ದನಂತೆ. ಬೆಂಗಳೂರಿನ ವಿದ್ಯಾರಣ್ಯಪುರ ಸೇರಿ ಹಲವೆಡೆ ಇದೇ ರೀತಿ ಕೃತ್ಯ ಎಸಗಿದ್ದಾನೆ ಅನ್ನೋದು ತನಿಖೆಯಿಂದ ಹೊರ ಬಂದಿದೆ.




ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ


ಫೆಬ್ರವರಿ 26ರಂದು ಇಡೀ ದಿನ ಕಾವೇರಿ ನೀರು ಬಂದ್ ಮಾಡಿದೆ ಬೆಂಗಳೂರು ಜಲಮಂಡಳಿ. ಕಾವೇರಿ 1, 2 ಮತ್ತು 3ನೇ ಹಂತದಿಂದ ಸರಬರಾಜು ಆಗುವ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.


ಜಲಮಂಡಳಿಯಿಂದ ಪಂಪಿಂಗ್ ಸ್ಟೇಷನ್ ಗಳ ತುರ್ತು ದುರಸ್ಥಿ ಹಾಗೂ ಕೆಪಿಟಿಸಿಎಲ್ ವತಿಯಿಂದ ವಿದ್ಯುತ್ ಸ್ಥಾವರಗಳ ತುರ್ತು ನಿರ್ವಹಣೆ ಕಾರ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ಅರ್ಧ ಭಾಗದಲ್ಲಿ ಕಾವೇರಿ ನೀರು ಪೂರೈಕೆ ಬಂದ್ ಆಗಲಿದೆ. ನಾಳೆ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರಿಗೆ ಕಾವೇರಿ ನೀರು ಪೂರೈಕೆ ಬಂದ್ ಆಗಲಿದೆ ಸಹಕರಿಸಬೆಕೆಂದು ಜಲಮಂಡಳಿ ಮನವಿ ಮಾಡಿದೆ.

Published by:Sumanth SN
First published: