ಕುಮಟಳ್ಳಿಯನ್ನು ಗೆಲ್ಲಿಸಿ ಅಥಣಿ ಮತದಾರರು ಗಂಡಸರು ಎಂದು ತೋರಿಸಿ: ಲಕ್ಷ್ಮಿ ಹೆಬ್ಬಾಳ್ಕರ್​​ಗೆ ಯತ್ನಾಳ ತಿರುಗೇಟು

ನನ್ನ ಕಾರ್ಯಕ್ರಮಕ್ಕೂ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಸೇರುವಷ್ಟು ಜನ ಸೇರಿದ್ದರು. ನನ್ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸಚಿವನಾಗುವುದಿಲ್ಲ ಎನ್ನುವುದು ಬೇರೆ ಮಾತು. ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ಪರವಾಗಿ ನಿಂತು ಹೋರಾಡುತ್ತೇನೆ

news18-kannada
Updated:December 2, 2019, 4:58 PM IST
ಕುಮಟಳ್ಳಿಯನ್ನು ಗೆಲ್ಲಿಸಿ ಅಥಣಿ ಮತದಾರರು ಗಂಡಸರು ಎಂದು ತೋರಿಸಿ: ಲಕ್ಷ್ಮಿ ಹೆಬ್ಬಾಳ್ಕರ್​​ಗೆ ಯತ್ನಾಳ ತಿರುಗೇಟು
ಶಾಸಕ ಬಸನಗೌಡ ಪಾಟೀಲ್ ಯತ್ನಾಳ
  • Share this:
ಬೆಳಗಾವಿ(ಡಿ.02): ಕಾಗವಾಡ ಮತಕ್ಷೇತ್ರದಲ್ಲಿ ಲಿಂಗಾಯಿತರು ಜಾತಿಭೇದ ಮಾಡದೇ ಮರಾಠಾ ಸಮಾಜದ ಶ್ರೀಮಂತ ಪಾಟೀಲ್ ಅವರನ್ನು ಗೆಲ್ಲಿಸಿ. ಮಹೇಶ್ ಕುಮಟಳ್ಳಿಯನ್ನು ಗೆಲ್ಲಿಸಿ ಅಥಣಿ ಮತದಾರರು ಗಂಡಸರು ಎಂದು ತೋರಿಸಿ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಅವರಿಗೆ ಯತ್ಳಾಳ ಪರೋಕ್ಷವಾಗಿ ತಿರುಗೇಟು ನೀಡಿದರು.

ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಮತ ಕೇಳುವ ಬದಲು ಗಂಡಸತನದ ಬಗ್ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡುತ್ತಾರೆ ಎಂದು ಟೀಕಿಸಿದರು.

ನಿನ್ನೆ ಜೋಡಿ ಎತ್ತು ಬಂದು ಹೋಗಿತ್ತು. ಲಕ್ಷ್ಮಿ ಪಟಾಕಿ ಠುಸ್ ಆದ ಮೇಲೆ ಒಂದು ಎತ್ತು ನಿನ್ನೆ ರಾತ್ರಿ ಓಡಿ ಹೋಗಿದೆ. ಎರಡು ದಿನಗಳಿಂದ ಕುಮಟಳ್ಳಿ ಫುಲ್ ಚಾರ್ಜ್ ಆಗಿದ್ಧಾರೆ. ಮತ್ತೊಂದೆಡೆ ಇನ್ನೊಬ್ಬರು ಡಿಸ್​ಚಾರ್ಜ್ ಆಗಿದ್ಧಾರೆ ಎಂದು ಯತ್ನಾಳ ವ್ಯಂಗ್ಯ ಮಾಡಿದರು.

ನಿನ್ನೆ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅಥಣಿಗೆ ಬಂದು ಚುನಾವಣಾ ಪ್ರಚಾರ ಮಾಡಿದ ವಿಚಾರವನ್ನು ಉಲ್ಲೇಖಿಸಿ ಯತ್ನಾಳ ಕುಟುಕಿದರು.

ನಾನೂ ಪ್ರಬಲ‌ ನಾಯಕ

ನಿನ್ನೆ ತೆಲಸಂಗದಲ್ಲಿ ನನ್ನ ಕಾರ್ಯಕ್ರಮಕ್ಕೆ ಮೂರ್ನಾಲ್ಕು ಸಾವಿರ ಜನ ಸೇರಿದ್ದರು. ನನ್ನ ಕಾರ್ಯಕ್ರಮಕ್ಕೂ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಸೇರುವಷ್ಟು ಜನ ಸೇರಿದ್ದರು. ನನ್ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸಚಿವನಾಗುವುದಿಲ್ಲ ಎನ್ನುವುದು ಬೇರೆ ಮಾತು. ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ಪರವಾಗಿ ನಿಂತು ಹೋರಾಡುತ್ತೇನೆ ಎಂದು ತಿಳಿಸಿದ ಅವರು, ಸಿಎಂ ಯಡಿಯೂರಪ್ಪನವರನ್ನು ಮುಂದಿನ ಮೂರೂವರೆ ವರ್ಷದವರೆಗೂ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಕುದುರೆ ವ್ಯಾಪಾರ ಮಾಡಿದ್ದೇ ಸಿಎಂ ಯಡಿಯೂರಪ್ಪನವರ ದೊಡ್ಡ ಸಾಧನೆ ; ಹೆಚ್​.ಡಿ. ದೇವೇಗೌಡ ಲೇವಡಿಸಿದ್ದರಾಮಯ್ಯ ಜಯಮ್ಮನ ಜಯಂತಿ ಅಂತಾರೆ, ನಿದ್ದೆಯಿಂದ ಎದ್ದು ಭಾಷಣ ಮಾಡುತ್ತಾರೆ ಎಂದು ಸಿದ್ಧರಾಮಯ್ಯ ವಿರುದ್ಧ ಬಸನಗೌಡ ಪಾಟೀಲ್ ವಾಗ್ದಾಳಿ ನಡೆಸಿದರು.

ಲಿಂಗಾಯಿತರು ನಿರಂತರವಾಗಿ ಐದು ವರ್ಷ ಎಂದೂ ಅಧಿಕಾರ ನಡೆಸಿಲ್ಲ. ವೀರೇಂದ್ರ ಪಾಟೀಲರನ್ನು ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಜೆ. ಹೆಚ್. ಪಟೇಲ್ ಅವರನ್ನು ಮಣ್ಣಿನ ಮಗ ಸರಿಯಾಗಿ ಅಧಿಕಾರ ನಡೆಸಲು ಬಿಡಲಿಲ್ಲ ಎಂದರು.

First published: December 2, 2019, 4:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading