ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ವಾಜಪೇಯಿ ಚಿತಾಭಸ್ಮ ವಿಸರ್ಜನೆ

ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಚಿತಾಭಸ್ಮವನ್ನು ಮಂಡ್ಯದ ಶ್ರೀರಂಗಪಟ್ಟಣದ ಪಶ್ವಿಮವಾಹಿನಿಯ ಬಳಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.

news18
Updated:August 23, 2018, 6:26 PM IST
ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ವಾಜಪೇಯಿ ಚಿತಾಭಸ್ಮ ವಿಸರ್ಜನೆ
ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಚಿತಾಭಸ್ಮವನ್ನು ಮಂಡ್ಯದ ಶ್ರೀರಂಗಪಟ್ಟಣದ ಪಶ್ವಿಮವಾಹಿನಿಯ ಬಳಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.
  • News18
  • Last Updated: August 23, 2018, 6:26 PM IST
  • Share this:
- ರಾಘವೇಂದ್ರ ಗಂಜಾಮ್ / ಚಿದಾನಂದ ಪಟೇಲ್, ನ್ಯೂಸ್18 ಕನ್ನಡ

ಮಂಡ್ಯ ,(ಆ.23): ಇತ್ತೀಚೆಗಷ್ಟೇ ಅನಾರೋಗ್ಯದಿಂದ ಮಾಜಿ ಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ನಾಯಕ ಅಜಾತ ಶತ್ರು ಅಟಲ್ ಬಿಹಾರಿ ನಿಧನರಾಗಿದ್ದರು. ವಾಜಪೇಯಿ ನಿಧನ ಬಳಿಕ ಅವರ  ಚಿತಾಭಸ್ಮವನ್ಮು ರಾಷ್ಟ್ರದ ಎಲ್ಲಾ ನದಿಗಳಲ್ಲಿ ಬಿಡುವ ಬಗ್ಗೆ ಪ್ರಧಾನಿ ಮೋದಿ ಸೇರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆದೇಶದಂತೆ ಎಲ್ಲಾ ರಾಜ್ಯ ನಾಯಕರಿಗೆ ಅಟಲ್ ಜೀ ಯ ಚಿತಾಭಸ್ಮ ನೀಡಲಾಗಿತ್ತು. ಪಕ್ಷದ ಹಿರಿಯರ ಆದೇಶದಂತೆ ಇಂದು ಮಂಡ್ಯದ ಪಶ್ವಿಮವಾಹಿನಿಯಲ್ಲಿ ಅಟಲ್ ಜೀ ಚಿತಾಭಸ್ಮ ವಿಸರ್ಜಿಸಲು ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಪಶ್ವಿಮವಾಹಿನಿಗೆ‌ ವಾಜಪೇಯಿ ಚಿತಾಭಸ್ಮ ತರಲಾಯಿತು. ಮಂಡ್ಯ ಜಿಲ್ಲೆಯ ಗಡಿಭಾಗ ನಿಡಘಟ್ಟದಿಂದಲೇ ಚಿತಾಭಸ್ಮದ ಕಳಸ ಹೊತ್ತ ವಾಹನಕ್ಕೆ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಗಡಿಭಾಗದಿಂದ ಪಶ್ವಿಮವಾಹಿನಿವರೆಗೆ ಮೆರವಣಿಗೆ ಮೂಲಕ ಚಿತಾಭಸ್ಮ ತಂದು ಕಾವೇರಿ ನದಿ ದಂಡೆಯ ಮೇಲೆ ಅರ್ಚಕ ಡಾ.ಭಾನು ಪ್ರಕಾಶ್ ನೇತೃತ್ವದಲ್ಲಿ ಶ್ರಾದ್ದಕಾರ್ಯದ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಇದಕ್ಕೂ ಮುನ್ನ ಇಂದು ಬೆಳಗ್ಗೆ 9:45ಕ್ಕೆ ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂದೆ ಅಟಲ್ ಚಿತಾಭಸ್ಮಕ್ಕೆ ಪುಷ್ಪಾರ್ಪಣೆ ನೆರವೇರಿಸಲಾಯಿತು. ಬಿಎಸ್​ವೈ ಜೊತೆ ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಡಿಸಿಎಂ ಆರ್. ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ ಮೊದಲಾದವರು ಈ ಸಂದರ್ಭದಲ್ಲಿದ್ದರು. ಬಳಿಕ ಪಕ್ಷದ ಕಚೇರಿಯಿಂದ ಚಿತಾಭಸ್ಮದ ಕಳಶ ಹೊತ್ತ ವಾಹನವು ಕಾಡುಮಲ್ಲೇಶ್ವರ ದೇವಸ್ಥಾನ, ಮಾರ್ಗೋಸಾ ರಸ್ತೆ, ನವರಂಗ್ ಸರ್ಕಲ್, ರಾಜಕುಮಾರ್ ರಸ್ತೆ, ಗಾಳಿ ಆಂಜನೇಯ ದೇವಸ್ಥಾನ, ರಾಜರಾಜೇಶ್ವರಿ ನಗರ ಪ್ರವೇಶ ಧ್ವಾರ, ಕೆಂಗೇರಿ ಮೂಲಕ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಅಲ್ಲಲ್ಲಿ ಸೇರಿದ್ದ ಜನರು ಅಟಲ್​ಜೀ ಅಸ್ಥಿ ಕಲಶಕ್ಕೆ ಪುಷ್ಪಾರ್ಚನೆ ಮಾಡಿದರು. ಆ ನಂತರ ಅಸ್ಥಿಯನ್ನು ಮಂಡ್ಯಕ್ಕೆ ತೆಗೆದುಕೊಂಡುಹೋಗಲಾಯಿತು.

ಇನ್ನು, ಶ್ರೀರಂಗಪಟ್ಟಣದಲ್ಲಿರುವ ಪಶ್ವಿಮವಾಹಿನಿ(ತ್ರಿವೇಣಿ ಸಂಗಮ)ಯಲ್ಲಿ ವಾಜಪೇಯಿ ಚಿತಾಭಸ್ಮ ವಿಸರ್ಜನೆಗಾಗಿ ಸ್ಥಳೀಯ ಬಿಜೆಪಿ ನಾಯಕರು ಸಕಲ ಸಿದ್ದತ ಮಾಡಿಕೊಂಡಿದ್ದರು. ಅರ್ಚಕ ಡಾ.ಭಾನುಪ್ರಕಾಶ್ ನೇತೃತ್ವದಲ್ಲಿ ಶ್ರದ್ದಾ ಕಾರ್ಯದ ಪೂಜಾ ವಿಧಿವಿಧಾನಗಳು ನಡೆದು ಪಕ್ಷದ ರಾಜ್ಯಧ್ಯಕ್ಷ ಯಡಿಯೂರಪ್ಪ , ಕೇಂದ್ರ ಸಚಿವ ಅನಂತ್ ಕುಮಾರ್ ಸಂಸದ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಶಾಸಕ ಆರ್. ಅಶೋಕ್ ಅಸ್ಥಿಗೆ ಪೂಜೆ ಸಲ್ಲಿಸಿದರು. ಬಳಿಕ ನದಿಗಿಳಿದ ಯಡಿಯೂರಪ್ಪ ಕಳಸದಲ್ಲಿದ್ದ ವಾಜಪೇಯಿ ಅಸ್ಥಿಯನ್ನು ಕಾವೇರಿ ನದಿಗೆ ವಿಸರ್ಜಿಸಿ ಅಗಲಿದ ಪಕ್ಷದ ಹಿರಿಯ ನಾಯಕನಿಗೆ ಅಂತಿಮ ನಮನ‌ ಸಲ್ಲಿಸಿ ಅವರ ಸಾಧನೆ ಕೊಂಡಾಡಿದರು.ಇನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಕೂಡ ಅಗಲಿದ ನಾಯಕಗೆ ಅಂತಿಮ ನಮನ ಸಲ್ಲಿಸಿ ಮಾಜಿ ಪ್ರಧಾನಿ ಸಾವಿನಿಂದ ಪಕ್ಷಕ್ಕೆ ಅಪಾರ ನಷ್ಟವಾಗಿದೆ. ರಾಜ್ಯದ 8 ಕಡೆ ಅಟಲ್ ಜೀ ಚಿತಾಭಸ್ಮ ವಿಸರ್ಜಿಸಲಾಗುವುದು. ಅಜಾತಶತ್ರು ನಾಯಕ ಗಂಗಾ ಕಾವೇರಿ ಜೋಡಣೆ ಕನಸಿನ ನಾಯಕ ಇನ್ನಿಲ್ಲ ಅಂತಾ ಬಣ್ಣಿಸಿದರು.

ಒಟ್ಟಾರೆ ದೇಶಕಂಡ ಅಪರೂಪದ ರಾಜಕಾರಣಿ, ಅಜಾತ ಶತ್ರು ಎಂದೇ ಪ್ರಸಿದ್ದ ಪಡೆದ ಅಟಲ್ ಬಿಹಾರಿ ವಾಜಪೇಯಿಯ ಚಿತಾಭಸ್ಮವನ್ಮು ದಕ್ಷಿಣಗಂಗೆ ಕಾವೇರಿಯಲ್ಲಿ ವಿಸರ್ಜಿಸಲಾಯಿತು. ಪಶ್ವಿಮವಾಹಿನಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ಇಂದಿರಾಗಾಂಧಿ, ತಮಿಳು ನಾಡಿ ಮಾಜಿ ಸಿಎಂ ಜಯಲಲಿತಾ ಸೇರಿ ಹಲವು ರಾಷ್ಟ್ರ ನಾಯಕರ ಚಿತಾಭಸ್ಮ ವಿಸರ್ಜನೆಯಾಗಿದೆ.
First published:August 23, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading