ಕುಂದಾ ನಗರಿಗೆ ಹಲವು ಭಾರಿ ಭೇಟಿ ನೀಡಿದ್ದ ಅಜಾತ ಶತ್ರು ವಾಜಪೇಯಿ...!

G Hareeshkumar | news18
Updated:August 16, 2018, 8:17 PM IST
ಕುಂದಾ ನಗರಿಗೆ ಹಲವು ಭಾರಿ ಭೇಟಿ ನೀಡಿದ್ದ ಅಜಾತ ಶತ್ರು ವಾಜಪೇಯಿ...!
  • Advertorial
  • Last Updated: August 16, 2018, 8:17 PM IST
  • Share this:
ನ್ಯೂಸ್ 18 ಕನ್ನಡ 

ಬೆಳಗಾವಿ ( ಆಗಸ್ಟ್ 16) :  ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಂದು ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಾಜಪೇಯಿ ಕುಂದಾ ನಗರಿ ಬೆಳಗಾವಿ ಜಿಲ್ಲೆಗೆ ಹಲವು ಭಾರಿ ಭೇಟಿ ನೀಡಿದ್ದರು. ಜನಸಂಘ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕೆ ಆಗಮಿಸಿದ್ದರು.

1980ರಲ್ಲಿ ಪ್ರಥಮ ಭಾರಿಗೆ ಬೆಳಗಾವಿಗೆ ಭೇಟಿ ನೀಡಿದ್ದ ವಾಜಪೇಯಿ ಇಲ್ಲಿನ ಕೆಎಲ್ಇ ಲಿಂಗರಾಜ್ ಕಾಲೇಜಿನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. 1982ರಲ್ಲಿ ಜನಸಂಘ ಬಿಜೆಪಿಯಾಗಿ ಬದಲಾವಣೆಗೊಂಡು ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಅನೇಕ ಕಡೆಗಳಲ್ಲಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಈ ಪೈಕಿ ಬೆಳಗಾವಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

1982ರಲ್ಲಿ ರಾಮದುರ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾರುತಿ ಚಂದರಗಿ ಪರ ಸ್ವತಃ ವಾಜಪೇಯಿ ಪ್ರಚಾರ ನಡೆಸಿದರು. ಈ ವೇಳೆಯಲ್ಲಿ ಸಜ್ಜಿರೊಟ್ಟಿ, ಗಟ್ಟಿ ಮೊಸರು ಸವಿದು ಸಂತಸಗೊಂಡಿದ್ದರು. ಆದರೇ ಆ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆಗೆಯುವಲ್ಲಿ ವಿಫಲವಾಗಿತ್ತು. 8 ಕ್ಷೇತ್ರಗಳ ಪೈಕಿ ಮಾರುತಿ ಚಂದರಗಿ ಅವರೇ ಅತಿ ಹೆಚ್ಚು ಮತ ಪಡೆದಿದ್ದರು.

ನಂತರ ಬೆಳಗಾವಿ-ಪುಣೆ ರಾಷ್ಟ್ರೀಯ ಮೆಲ್ದರ್ಜೆಗೆ ಏರಿಸುವ ಮೂಲಕ ಈ ಭಾಗದ ಜನರ ಮನಸ್ಸಿನಲ್ಲಿ ಉಳಿಯುವಂತ ಕೆಲಸ ಮಾಡಿದ್ದರು. ಇನ್ನೂ 2004ರಲ್ಲಿ ಬೆಳಗಾವಿ ಲೋಕಸಭೆಯಿಂದ ಪ್ರಥಮ ಭಾರಿಗೆ ಸ್ಪರ್ಧಿಸಿ ಸುರೇಶ ಅಂಗಡಿ ಪರ ಪ್ರಚಾರಕ್ಕೆ ವಾಜಪೇಯಿ ಆಗಮಿಸಿದ್ದರು. ಈ ಚುನಾವಣೆಯಲ್ಲಿ ಸುರೇಶ ಅಂಗಡಿ ಗೆದ್ದು ಸಂಭ್ರಮಿಸಿದ್ದರು.

 
First published:August 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ