ಕಲ್ಯಾಣ ಕರ್ನಾಟಕದ ಶೇ.80ರಷ್ಟು ಮಕ್ಕಳಿಗೆ ಬಿಸಿಯೂಟದಲ್ಲಿ ಬೇಕು ಮೊಟ್ಟೆ: ಸಮೀಕ್ಷೆಯಲ್ಲಿ ಬಹಿರಂಗ

ಮೊಟ್ಟೆಗಳನ್ನು ಸೇವಿಸುವುದರಿಂದ ಶಾಲಾ ಮಕ್ಕಳ ಬೆಳವಣಿಗೆ ಅಂದ್ರೆ ತೂಕ ಮತ್ತು ಎತ್ತರದ ಸಂಪೂರ್ಣ ಮಾಹಿತಿಯನ್ನು ಜನವರಿಯಲ್ಲಿ ವಿಶ್ಲೇಷನೆಗೆ ಒಳಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಎರಡು ದಿನ ನಡೆದ ಸಮೀಕ್ಷೆಯಲ್ಲಿ ಸುಮಾರು 15 ಲಕ್ಷ ಮಕ್ಕಳಲ್ಲಿ 12.5 ಲಕ್ಷಕ್ಕೂ ಹೆಚ್ಚು ಮಕ್ಕಳು ಮೊಟ್ಟೆಗಳ ಪರವಾಗಿ ಮತ ಚಲಾಯಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಲ್ಯಾಣ-ಕರ್ನಾಟಕ (Kalyana Karnataka) ಮತ್ತು ವಿಜಯಪುರ (Vijayapura) ಸೇರಿದಂತೆ ಏಳು ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕನಿಷ್ಠ ಶೇ.80ರಷ್ಟು ವಿದ್ಯಾರ್ಥಿಗಳು (Student) ಮಧ್ಯಾಹ್ನದ ಊಟದಲ್ಲಿ (Midday Meal) ಬೇಯಿಸಿದ ಮೊಟ್ಟೆಗೆ (Boiled Egg) ಆದ್ಯತೆ ನೀಡಿದ್ದಾರೆ. ನವೆಂಬರ್ 26 ಮತ್ತು 27 ರಂದು ಮಧ್ಯಾಹ್ನದ ಊಟದ ಸಮಯದಲ್ಲಿ ಆಹಾರದ ಆಯ್ಕೆಯ ಬಗ್ಗೆ ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಲು ಶಾಲಾ ಮುಖ್ಯಸ್ಥರು, ಮುಖ್ಯೋಪಾದ್ಯಯರು ಸಮೀಕ್ಷೆ (Survey) ನಡೆಸಿದ್ದರು, ಮೊಟ್ಟೆಗಳನ್ನು ಸೇವಿಸುವುದರಿಂದ ಶಾಲಾ ಮಕ್ಕಳ ಬೆಳವಣಿಗೆ ಅಂದ್ರೆ ತೂಕ ಮತ್ತು ಎತ್ತರದ ಸಂಪೂರ್ಣ ಮಾಹಿತಿಯನ್ನು ಜನವರಿಯಲ್ಲಿ ವಿಶ್ಲೇಷನೆಗೆ ಒಳಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಎರಡು ದಿನ ನಡೆದ ಸಮೀಕ್ಷೆಯಲ್ಲಿ ಸುಮಾರು 15 ಲಕ್ಷ ಮಕ್ಕಳಲ್ಲಿ 12.5 ಲಕ್ಷಕ್ಕೂ ಹೆಚ್ಚು ಮಕ್ಕಳು ಮೊಟ್ಟೆಗಳ ಪರವಾಗಿ ಮತ ಚಲಾಯಿಸಿದ್ದಾರೆ.

ಮಕ್ಕಳಲ್ಲಿ ಪೌಷ್ಠಿಕಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರವು ಇತ್ತೀಚೆಗೆ ಕಲ್ಯಾಣ-ಕರ್ನಾಟಕ ಮತ್ತು ವಿಜಯಪುರ ಜಿಲ್ಲೆಯ ಏಳು ಹಿಂದುಳಿದ ಜಿಲ್ಲೆಗಳಲ್ಲಿ ಮಧ್ಯಾಹ್ನದ ಊಟದ ಭಾಗವಾಗಿ ಮೊಟ್ಟೆ ಅಥವಾ ಬಾಳೆಹಣ್ಣುಗಳನ್ನು ಪರಿಚಯಿಸಿತು. ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳು ಆಡಳಿತಕ್ಕೆ ಬೇಡಿಕೆ ಸಲ್ಲಿಸಿದ ನಂತರ ರಾಜ್ಯವು ಈಗ 9 ಮತ್ತು 10 ನೇ ತರಗತಿಯ ಮಕ್ಕಳಿಗೆ ಕಾರ್ಯಕ್ರಮವನ್ನು ವಿಸ್ತರಿಸಲು ಯೋಜಿಸುತ್ತಿದೆ.

ಪ್ರತಿ ಮಗುವಿಗೆ 46 ಮೊಟ್ಟೆ

ಕಲಬುರಗಿ ವಿಭಾಗದ ಸಾರ್ವಜನಿಕ ಸೂಚನಾ ವಿಭಾಗದ ಹೆಚ್ಚುವರಿ ಆಯುಕ್ತೆ ನಳಿನಿ ಅತುಲ್, ಯೋಜನಾ ಅನುಮೋದನೆ ಮಂಡಳಿಯು ಹಿಂದಿನ ವರ್ಷದ ಒಟ್ಟು ಮಕ್ಕಳ ಅಂಕಿಅಂಶಗಳ ಆಧಾರದ ಮೇಲೆ ನಿಗದಿಯಾಗಿದೆ. ಈ ಪ್ರದೇಶದ ಉಳಿದ ಶೈಕ್ಷಣಿಕ ವರ್ಷದಲ್ಲಿ ಪ್ರತಿ ಮಗುವಿಗೆ 46 ಮೊಟ್ಟೆಗಳನ್ನು ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಹೇಳಿದರು.

ಇದನ್ನೂ ಓದಿ: ಓಮೈಕ್ರಾನ್ ಬರದಂತೆ ಯಾದಗಿರಿ ಜಿಲ್ಲೆಯ ಗ್ರಾಮಗಳಲ್ಲಿ ಬೇವಿನ ಮರಕ್ಕೆ ವಿಶೇಷ ಪೂಜೆ

ಮೊಟ್ಟೆ ಅಥವಾ ಬಾಳೆಹಣ್ಣು ಆಯ್ಕೆ

ಪ್ರಸಕ್ತ ವರ್ಷ ದಾಖಲಾತಿಯಲ್ಲಿ ಶೇ.2ರಷ್ಟು ಏರಿಕೆ ಕಂಡಿದೆ. ನಮ್ಮ ಸಮೀಕ್ಷೆಯಲ್ಲಿ ಸುಮಾರು 13 ಲಕ್ಷ ಮಕ್ಕಳು ಮೊಟ್ಟೆ ತಿನ್ನಲು ಸಿದ್ಧರಿದ್ದಾರೆ ಎಂದು ನಳಿನಿ ಅತುಲ್ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸುತ್ತೋಲೆಯ ಪ್ರಕಾರ, 14.4 ಲಕ್ಷ ವಿದ್ಯಾರ್ಥಿಗಳು ಈ ವರ್ಷದ ಡಿಸೆಂಬರ್ 1 ರಿಂದ ಮುಂದಿನ ವರ್ಷ ಮಾರ್ಚ್ 30 ರವರೆಗೆ ಮಧ್ಯಾಹ್ನದ ಊಟದ ಸಮಯದಲ್ಲಿ ಮೊಟ್ಟೆ ಅಥವಾ ಬಾಳೆಹಣ್ಣುಗಳ ಆಯ್ಕೆಯನ್ನು ಹೊಂದಿದ್ದಾರೆ.

135ರಲ್ಲಿ 125 ಮಕ್ಕಳಿಗೆ ಬೇಕು ಮೊಟ್ಟೆ

1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳು ಶಾಲಾ ದಿನಗಳಲ್ಲಿ ಒಂದು ತಿಂಗಳಲ್ಲಿ 12 ಮೊಟ್ಟೆಗಳು ಅಥವಾ ಬಾಳೆಹಣ್ಣುಗಳನ್ನು ಸ್ವೀಕರಿಸುತ್ತಾರೆ" ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ರಾಯಚೂರಿನ ಮಟಮರಾರಿ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿಯ 135 ಮಕ್ಕಳಲ್ಲಿ 125 ಮಕ್ಕಳು ಮೊಟ್ಟೆಗೆ ಆದ್ಯತೆ ನೀಡಿದ್ದಾರೆ. ಪ್ರಸ್ತುತ 125 ಮೊಟ್ಟೆಗಳನ್ನು ನೀಡಲಾಗುತ್ತಿದೆ ಎಂದು ಮುಖ್ಯಶಿಕ್ಷಕ ವಿಶ್ವನಾಥರೆಡ್ಡಿ ತಿಳಿಸಿದರು.

ಇದನ್ನೂ ಓದಿ:  ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಬಾರಿಯೂ ಎಡೆಸ್ನಾನಕ್ಕೆ ಅವಕಾಶವಿಲ್ಲ

ಬಳ್ಳಾರಿಯ ಸಂಜೀವ ರಾಯನ ಕೋಟೆ ಸರ್ಕಾರಿ ಶಾಲೆಯಲ್ಲಿ 437 ವಿದ್ಯಾರ್ಥಿಗಳಿದ್ದು, ಕೇವಲ 5-10 ಮಂದಿ ಮಾತ್ರ ಬಾಳೆಗೆ ಆದ್ಯತೆ ನೀಡಿದ್ದಾರೆ. ವಿಜಯನಗರ ಜಿಲ್ಲೆಯ ಬಾವಿಹಳ್ಳಿ ಸರ್ಕಾರಿ ಶಾಲೆಯಲ್ಲಿ 155 ಮಕ್ಕಳಲ್ಲಿ 140 ಮಕ್ಕಳು ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ತಿನ್ನಲು ಬಯಸುತ್ತಾರೆ.

ಜನಮತ ಸಂಗ್ರಹ

ಬೀದರ್‌ನ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಶಂಕರ್ ಚೌಹಾಣ್, ಭಾಲ್ಕಿ ತಾಲೂಕಿನ ತಮ್ಮ ಶಾಲೆಯಲ್ಲಿ 170 ಮಕ್ಕಳಲ್ಲಿ 120 ಮಕ್ಕಳು ಬೇಯಿಸಿದ ಮೊಟ್ಟೆಗಳನ್ನು ಸೇವಿಸುಲು ಇಷ್ಟಪಡುತ್ತಾರೆ. ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿಪಿ ಅವರು ಸಂಗ್ರಹಿಸಿದ ಮಾಹಿತಿಯು ಮೊಟ್ಟೆಗಳ ಅನುಷ್ಠಾನದ ಕುರಿತು "ಜನಮತಸಂಗ್ರಹ" ಎಂದು ಹೇಳಿದರು.

“ಸರ್ಕಾರವು ರಾಜ್ಯಾದ್ಯಂತ ಯೋಜನೆಯನ್ನು ವಿಸ್ತರಿಸಬೇಕು. ಅದನ್ನು ಹಾಳುಮಾಡುವ ಯಾವುದೇ ಪ್ರಯತ್ನವು ಮೊಟ್ಟೆಗಳನ್ನು ತಿನ್ನಲು ಬಯಸುವ ಮಕ್ಕಳ ಹಕ್ಕುಗಳನ್ನು ನಿರಾಕರಿಸುತ್ತದೆ, ”ಎಂದು ಅವರು ಹೇಳಿದರು.
Published by:Mahmadrafik K
First published: