Siddaganga Mutt: ಸಿದ್ಧಗಂಗಾ ಮಠದ 20 ಮಕ್ಕಳಲ್ಲಿ ಲಕ್ಷಣ ರಹಿತ ಸೋಂಕು ಪತ್ತೆ

ಸೋಂಕು ಕಂಡು ಬಂದ ಮಕ್ಕಳಲ್ಲಿ ಯಾವುದೇ ನೆಗಡಿ, ಕೆಮ್ಮಿನಂತಹ ಲಕ್ಷಣಗಳಿಲ್ಲ. ಎಲ್ಲರೂ ದೈಹಿಕವಾಗಿ ಚೆನ್ನಾಗಿದ್ದರು ಎಂದು ತಿಳಿದುಬಂದಿದೆ. ಸೋಂಕಿಗೆ ತುತ್ತಾಗಿರುವ ಮಕ್ಕಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ

ಸೋಂಕು ಕಂಡು ಬಂದ ಮಕ್ಕಳಲ್ಲಿ ಯಾವುದೇ ನೆಗಡಿ, ಕೆಮ್ಮಿನಂತಹ ಲಕ್ಷಣಗಳಿಲ್ಲ. ಎಲ್ಲರೂ ದೈಹಿಕವಾಗಿ ಚೆನ್ನಾಗಿದ್ದರು ಎಂದು ತಿಳಿದುಬಂದಿದೆ. ಸೋಂಕಿಗೆ ತುತ್ತಾಗಿರುವ ಮಕ್ಕಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ

ಸೋಂಕು ಕಂಡು ಬಂದ ಮಕ್ಕಳಲ್ಲಿ ಯಾವುದೇ ನೆಗಡಿ, ಕೆಮ್ಮಿನಂತಹ ಲಕ್ಷಣಗಳಿಲ್ಲ. ಎಲ್ಲರೂ ದೈಹಿಕವಾಗಿ ಚೆನ್ನಾಗಿದ್ದರು ಎಂದು ತಿಳಿದುಬಂದಿದೆ. ಸೋಂಕಿಗೆ ತುತ್ತಾಗಿರುವ ಮಕ್ಕಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ

 • Share this:
  ತುಮಕೂರು (ಏ. 19): ಎರಡನೇ ಅಲೆ ಕೊರೋನಾ ಸೋಂಕು ಮಕ್ಕಳು ಮತ್ತು ವಯಸ್ಕರಲ್ಲಿ ಅತಿ ಹೆಚ್ಚಾಗಿ ಕಂಡು ಬರುತ್ತಿದ್ದು, ಆತಂಕ ಮೂಡಿಸಿದೆ. ಸಿದ್ದಗಂಗಾ ಮಠದ 20 ರಿಂದ 30 ಮಕ್ಕಳಲ್ಲಿ ಕೊರೋನಾ ಸೋಂಕು ಕಂಡು ಬಂದಿದ್ದು, ಮಠದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ. ಮಕ್ಕಳಲ್ಲಿ ಲಕ್ಷಣ ರಹಿತ ಸೋಂಕು ದೃಢಪಟ್ಟಿದೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಸ್ಪಷ್ಟನೆ ನೀಡಿದ್ದಾರೆ. ಕೊರೋನಾ ಉಲ್ಬಣವಾಗುತ್ತಿರುವ ಹಿನ್ನಲೆ ಮುನ್ನೆಚ್ಚರಿಕ ಕ್ರಮವಾಗಿ ಮಕ್ಕಳನ್ನು ಕೋವಿಡ್​ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ಕೆಲವು ಮಕ್ಕಳಲ್ಲಿ ಸೋಂಕು ಕಂಡು ಬಂದಿದೆ. ಸೋಂಕು ಕಂಡ ಬಂದ ಮಕ್ಕಳಲ್ಲಿ ಯಾವುದೇ ನೆಗಡಿ, ಕೆಮ್ಮಿನಂತಹ ಲಕ್ಷಣಗಳಿಲ್ಲ. ಎಲ್ಲರೂ ದೈಹಿಕವಾಗಿ ಚೆನ್ನಾಗಿದ್ದರು ಎಂದು ತಿಳಿದುಬಂದಿದೆ. ಸೋಂಕಿಗೆ ತುತ್ತಾಗಿರುವ ಮಕ್ಕಳನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಚಿಕಿತ್ಸೆ ನಡೆಸಲಾಗಿದೆ.

  ಮಠದ ಮಕ್ಕಳಲ್ಲಿ ಸೋಂಕು ಕಂಡು ಬಂದ ಹಿನ್ನಲೆ ಮಠದ ಎರಡು ಸಾವಿರ ಮಕ್ಕಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಸರ್ಕಾರದಿಂದ ಅಧಿಕಾರಿಗಳು ಬಂದು ಪರೀಕ್ಷೆ‌ ಮಾಡುತ್ತಿದ್ದಾರೆ. ಪ್ರತಿನಿತ್ಯ ಮಠದಲ್ಲಿ ಸಾಮಾಜಿಕ ಅಂತರ, ಶುಚಿತ್ವ ಕಾಪಾಡಿಕೊಳ್ಳುವ ಕ್ರಮ ನಡೆಸಲಾಗಿದೆ. ಮಕ್ಕಳಿಗೆ ಮಾಸ್ಕ್​ ಕಡ್ಡಾಯ ಮಾಡಲಾಗಿದೆ.

  ಇನ್ನು ಸೋಂಕಿನ ಮುನ್ನೆಚ್ಚರಿಕೆ ಕ್ರಮವಾಗಿ ಮಠಕ್ಕೆ ಬರುವ ಭಕ್ತರಿಗೂ ಕೂಡ ನಿರ್ಬಂಧ ವಿಧಿಸುವ ಕುರಿತು ಚಿಂತನೆ ನಡೆಸಲಾಗಿದೆ. ಸದ್ಯಕ್ಕೆ ಮಠಕ್ಕೆ ಭೇಟಿ ನೀಡಲು ಯಾವುದೇ ಅಡ್ಡಿಯಿಲ್ಲ. ಆದರೆ, ಮಾಸ್ಕ್​ ಧಾರಣೆ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

  ಕೊರೊನಾ ಎರಡನೇ ಅಲೆ ನೆನೆದು ಭಾವುಕರಾದ ಸಿದ್ಧಲಿಂಗ ಶ್ರೀ ಗಳು, ಸೋಕಿಗೆ ಮಕ್ಕಳು, ವಯಸ್ಕರು, ವೃದ್ದರು ಬಲಿಯಾಗುವ ಪರಿಸ್ಥಿತಿ ಇದೆ. ಬಹಳ ದುಃಖಕರ ಹಾಗೂ ನೋವಿನ ಸಂಗತಿಯಿದು. ಈ ಸಂದರ್ಭದಲ್ಲಿ ಎಲ್ಲರೂ ಜಾಗರೂಕರಾಬೇಕು. ಕೋವಿಡ್​ ಮಾರ್ಗಸೂಚಿ ಪಾಲಿಸುವ ಮೂಲಕ ನಮ್ಮ ಕರ್ತವ್ಯ ನಾವು ನಿರ್ವಹಿಸಬೇಕು. ಇದು ನನ್ನ ಕರ್ತವ್ಯ ಕೂಡ. ದೇಶಕ್ಕೆ ನಾವು ಸಲ್ಲಿಸುತ್ತಿರುವ ಕೊಡುಗೆ ಇದು. ನಮ್ಮ ಜೀವವನ್ನ ಉಳಿಸಿಕೊಳ್ಳುವ ಸಂಕಲ್ಪ ತೊಡಬೇಕು ಎಂದು ತಿಳಿಸಿದರು.

  ಸೋಂಕು ನಿಯಂತ್ರಣಕ್ಕೆ ಸರ್ಕಾರ ಅನೇಕ ನಿಯಮಗಳನ್ನ ಜಾರಿಗೊಳಿಸುತ್ತಿದೆ. ಹಿಂದಿನಂತೆ ಲಾಕ್ ಡೌನ್ ಮಾಡೋದೆಲ್ಲಾ ಕಷ್ಟವಾಗಲಿದೆ. ಜನಜೀವನ ಮತ್ತು ವ್ಯವಸ್ಥೆ ಗಳು ನಡೆಯಬೇಕಿದೆ. ವ್ಯರ್ಥವಾಗಿ ಅನವಶ್ಯಕ ವಾಗಿ ಓಡಾಡುವುದನ್ನ ನಿಲ್ಲಿಸಬೇಕು. ವ್ಯಾಪಾರ ಹಾಗೂ ಇತರೆ ಸಂದರ್ಭದಲ್ಲಿ ಗುಂಪುಗೂಡಬಾರದು. ಜನರು ಕೊರೋನಾ ಇಲ್ವಾವೇನೋ ಅನ್ನೋ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಸರಿಯಾಗಿ ಮಾಸ್ಕ್ ಧರಿಸುತ್ತಿಲ್ಲ. ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು ಎಂದು ಸಲಹೆ ನೀಡಿದರು.

  ಇದನ್ನು ಓದಿ: ಬಾರ್​ಗಳ ಎದುರು ಮದ್ಯಕ್ಕಾಗಿ ಮುಗಿಬಿದ್ದ ದೆಹಲಿಯ ಜನ; ಔಷಧಿ ಬೇಡ ಮದ್ಯವೇ ಬೇಕು ಎಂದ ಮಹಿಳೆ!

  ಔಷಧಿ ಬಂದಿದಿಯೋ, ಜನರಿಗೆ ಸಿಕ್ಕಿದೆಯೋ, ಸಿಗದವರಿಗೆ ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಎರಡು ಡೋಸ್ ಪಡೆದ ಬಳಿಕ ಯುಮಿನಿಟಿ ಪವರ್ ಹೆಚ್ಚಾಗುತ್ತೋ ಇಲ್ವೋ ? ಇದಕ್ಕೆ ಸಂಜೀವಿನಿಯಾದಂತಹ ಔಷಧ ಇದೆಯೋ ಹೇಗೋ ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

  ಪತ್ರಿಕೆಗಳಲ್ಲಿ ವಿಚಾರಗಳನ್ನು ಓದಿತ್ತಿದ್ದರೇ ದುಃಖವಾಗುತ್ತಿದೆ. ತಂದೆ ತೀರಿಕೊಂಡರು ಅಂತಾ ತಾಯಿ ಮಗು ಆತ್ಮಹತ್ಯೆ ಮಾಡಿಕೊಂಡಿದೆ. ಇದನ್ನ ನೋಡಿದರೇ ಕಣ್ಣೀರು ಬರುತ್ತೆ. ಬೆಂಗಳೂರಿನಲ್ಲಿ ಶವಗಾರರ ಹತ್ತಿರ ಬಂದು ಸಂಬಂಧಿಕರು ಕಣ್ಣಿರು ಹಾಕುತ್ತಿದ್ದಾರೆ. ಇದನ್ನ ನೋಡಿದರೆ ನಮ್ಮ ನಮ್ಮ ಜೀವಗಳನ್ನ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಜನರು ಈ ನಿಟ್ಟಿನಲ್ಲಿ ಕಾಳಜಿವಹಿಸಬೇಕು ಎಂದು ಮನವಿ ಮಾಡಿದರು.
  Published by:Seema R
  First published: